ಹಸಿರು ಹಿಮ ಮತ್ತು ಭಟ್ಟರ ಗಾಳಿಪಟ

ಕುದುರೆಮುಖದಲ್ಲಿ ಹುಡುಗರ ತರಲೆ ತಮಾಷೆ

Team Udayavani, Jan 17, 2020, 6:21 AM IST

“ಗಾಳಿಪಟ ಅಂದ ಕೂಡಲೇ ಮೊದಲು ನೆನಪಿಗೆ ಬರೋದು ಆ ಹಸಿರು, ಮಂಜು, ಪ್ರೀತಿ, ಒಂದಷ್ಟು ಹುಡುಕಾಟ, ಒಂದಷ್ಟು ತಮಾಷೆ, ಹೀಗೆ… ಇಲ್ಲೂ ಅದೆಲ್ಲವನ್ನೂ ನೋಡ­ಬಹುದು. ಈ ಬಾರಿ “ಗಾಳಿಪಟ-2’ನ್ನು ಕುದುರೆಮುಖದ ಸುಂದರ ಹಸಿರನ್ನು ಹಿನ್ನೆಲೆ ಯಾಗಿಟ್ಟುಕೊಂಡು ಹಾರಿಸುತ್ತಿದ್ದೇವೆ. ಬಹುಶಃ 70-80ರ ದಶಕದಲ್ಲಿ ಡಾ. ರಾಜಕುಮಾರ್‌ ಅವರ ಬಹುತೇಕ ಚಿತ್ರಗಳು ಕುದುರೆಮುಖದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಅದಾದ ನಂತರ ಕನ್ನಡ ಸಿನಿಮಾಗಳಲ್ಲಿ ಕುದುರೆಮುಖದ ಸೌಂದರ್ಯ ಕಾಣೋದು ಅಪರೂಪ ಆಯ್ತು. ಈಗ ಅದನ್ನ ಗೋಸ್ಟ್‌ ಸಿಟಿ ಅಂತಾನೇ ಕರೆಯುತ್ತಾರೆ. ಈ ಬಾರಿ ಕುದುರೆಮುಖದ ಅಂಥ ಅಪರೂಪವನ್ನ ಮತ್ತೆ ಪ್ರೇಕ್ಷಕರ ಮುಂದೆ ತರೋದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಯೋಗರಾಜ್‌ ಭಟ್‌.

“ಮೊದಲು ಮಾಡಿದ ಗಾಳಿಪಟ ಇಂದಿಗೂ ಅದೆಷ್ಟೋ ಜನರಿಗೆ ಫೇವರೆಟ್‌ ಸಿನಿಮಾ. ಇದು ಕೂಡ ಅಂಥದ್ದೇ ಸಿನಿಮಾ ಆಗಲಿದೆ ಅನ್ನೋದು ನಮ್ಮ ವಿಶ್ವಾಸ. ನಾವೆಲ್ಲರೂ ಅದೇ ನಿರೀಕ್ಷೆ ಇಟ್ಟುಕೊಂಡು ಕೆಲ್ಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ನಾವೇನು ಅಂದುಕೊಂಡಿದ್ದೇವೋ, ಹಾಗೆ ಸಿನಿಮಾ ಬರ್ತಿದೆ…’

– ಹೀಗೆ ಹೇಳುತ್ತ ಮಾತಿಗಿಳಿದವರು ನಿರ್ದೇಶಕ ಯೋಗರಾಜ್‌ ಭಟ್‌. ಸದ್ಯ ಭಟ್ಟರು ತಮ್ಮ ಬಹುನಿರೀಕ್ಷಿತ “ಗಾಳಿಪಟ-2′ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. ಸಂಕ್ರಾಂತಿಯ ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮಾತಿಗೆ ಸಿಕ್ಕ ಭಟ್ಟರು, “ಗಾಳಿಪಟ-2′ ಚಿತ್ರದ ಚಿತ್ರೀಕರಣದ ಒಂದಷ್ಟು ಅನುಭವಗಳನ್ನು ತೆರೆದಿಟ್ಟರು.

“ಗಾಳಿಪಟ ಅಂದ ಕೂಡಲೇ ಮೊದಲು ನೆನಪಿಗೆ ಬರೋದು ಆ ಹಸಿರು, ಮಂಜು, ಪ್ರೀತಿ, ಒಂದಷ್ಟು ಹುಡುಕಾಟ, ಒಂದಷ್ಟು ತಮಾಷೆ, ಹೀಗೆ… ಇಲ್ಲೂ ಅದೆಲ್ಲವನ್ನೂ ನೋಡಬಹುದು. ಈ ಬಾರಿ “ಗಾಳಿಪಟ-2’ನ್ನು ಕುದುರೆಮುಖದ ಸುಂದರ ಹಸಿರನ್ನು ಹಿನ್ನೆಲೆಯಾಗಿಟ್ಟುಕೊಂಡು ಹಾರಿಸುತ್ತಿದ್ದೇವೆ. ಬಹುಶಃ 70-80ರ ದಶಕದಲ್ಲಿ ಡಾ. ರಾಜಕುಮಾರ್‌ ಅವರ ಬಹುತೇಕ ಚಿತ್ರಗಳು ಕುದುರೆಮುಖದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಅದಾದ ನಂತರ ಕನ್ನಡ ಸಿನಿಮಾಗಳಲ್ಲಿ ಕುದುರೆಮುಖದ ಸೌಂದರ್ಯ ಕಾಣೋದು ಅಪರೂಪವಾಯ್ತು. ಈಗ ಅದನ್ನ ಗೋಸ್ಟ್‌ ಸಿಟಿ ಅಂತಾನೇ ಕರೆಯುತ್ತಾರೆ. ಈ ಬಾರಿ ಕುದುರೆಮುಖದ ಅಂಥ ಅಪರೂಪವನ್ನ ಮತ್ತೆ ಪ್ರೇಕ್ಷಕರ ಮುಂದೆ ತರೋದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಯೋಗರಾಜ್‌ ಭಟ್‌.

“ಇನ್ನು “ಗಾಳಿಪಟ-2′ ಚಿತ್ರೀಕರಣಕ್ಕಾಗಿ ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ನಕ್ಸಲ್‌ ನಿಗ್ರಹ ಪಡೆ, ಗಣಿ ಇಲಾಖೆ, ಸ್ಥಳೀಯ ಪ್ರಾಧಿಕಾರಗಳು ಹೀಗೆ ಎಂಟು-ಹತ್ತು ವಿವಿಧ ಇಲಾಖೆಗಳ ಅನುಮತಿ ಪಡೆದು­ಕೊಳ್ಳಬೇಕಾಗಿತ್ತು. ಅದೆಲ್ಲವನ್ನೂ ಪಡೆದುಕೊಂಡು ಶೂಟಿಂಗ್‌ ಮಾಡೋದೆ ದೊಡ್ಡ ಸಾಹಸ. ಕೊನೆಗೂ ಚಿತ್ರದ ಶೇಕಡಾ 50ರಷ್ಟು ಚಿತ್ರೀಕರಣವನ್ನು ಅಲ್ಲಿ ಮಾಡಿ ಮುಗಿಸಿದ್ದೇವೆ’ ಎಂದು ನಿಟ್ಟುಸಿರು ಬಿಟ್ಟರು ಭಟ್ಟರು.

ಅಂದಹಾಗೆ, ಸುಮಾರು 45 ದಿನಗಳ ಕಾಲ ನಡೆದ “ಗಾಳಿಪಟ-2′ ಚಿತ್ರದ ಮೊದಲ ಶೆಡ್ನೂಲ್‌ ಶೂಟಿಂಗ್‌ನಲ್ಲಿ ಚಿತ್ರದ ಮಾತಿನ ಭಾಗ ಸುಮಾರು 3-4 ಹಾಡುಗಳನ್ನು ಚಿತ್ರೀಕರಿಸಲಾಗಿದೆ­ಯಂತೆ. ನಟರಾದ ಗಣೇಶ್‌, ಅನಂತನಾಗ್‌, ದಿಗಂತ್‌, ಪವನ್‌, ರಂಗಾಯಣ ರಘು, ಪದ್ಮಜಾ ರಾವ್‌ ಹೀಗೆ ಅನೇಕ ಕಲಾವಿದರ ದಂಡೇ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಇದೆಲ್ಲದಕ್ಕೂ ಕಾರಣವಾಗಿದ್ದು, ಇದರ ಹಿಂದೆ ಶಕ್ತಿಯಾಗಿ ನಿಂತಿದ್ದು, ನಿರ್ಮಾಪಕ ರೆಡ್ಡಿ ಎನ್ನುವುದು ಭಟ್ಟರ ಮಾತು. “ಇಂಥದ್ದೊಂದು ಕಥೆ ಇಟ್ಟುಕೊಂಡು ಅದಕ್ಕೆ ಬೇಕಾದ ಲೊಕೇಶನ್‌ ಹುಡುಕಿಕೊಂಡು ಸಿನಿಮಾ ಮಾಡಲು ಹೊರಟಾಗ ನಿರ್ಮಾಪಕರಾದವರು ಸಾಕಷ್ಟು ಗಟ್ಟಿ ಇರಬೇಕು. ಇಲ್ಲದಿದ್ದರೆ, ಈ ಥರದ ಸಿನಿಮಾ ಮಾಡೋದಕ್ಕೆ ಕಷ್ಟ. ಆದರೆ ನಮ್ಮ ನಿರ್ಮಾಪಕರು ಅದೆಲ್ಲವನ್ನೂ ಭರಿಸಿ ನಮಗೆ ಹೆಗಲಾಗಿ ನಿಂತಿದ್ದಾರೆ. ಹಾಗಾಗಿ ಎಲ್ಲವೂ ಸರಾಗವಾಗಿ ಸಾಗುತ್ತಿದೆ’ ಎನ್ನುತ್ತಾರೆ ಭಟ್ಟರು.

“ನಿರ್ದೇಶಕನಾಗಿ ಅಲ್ಲದೆ ಪ್ರೇಕ್ಷಕನಾಗಿ ನನಗೂ ಈ ಸಿನಿಮಾದ ಮೇಲೆ ಸಾಕಷ್ಟು ಕುತೂಹಲವಿದೆ. ಒಂದು ಒಳ್ಳೆಯ ಸಿನಿಮಾ ತನಗೆ ಏನು ಬೇಕೋ ಅದೆಲ್ಲವನ್ನು ತಂತಾನೇ ಪಡೆದುಕೊಳ್ಳುತ್ತದೆ. ಹಾಗೆ, “ಗಾಳಿಪಟ-2′ ಕೂಡ ತನಗೇನು ಬೇಕೋ ಅದೆಲ್ಲವನ್ನು ಪಡೆದುಕೊಂಡು ಸಾಗುತ್ತಿದೆ. ಆದಷ್ಟು ಬೇಗ ಈ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಇಡಲು ಎಲ್ಲರೂ ಶ್ರಮಿಸುತ್ತಿದ್ದೇವೆ’ ಎನ್ನುತ್ತಾರೆ ಭಟ್ಟರು.

ಸದ್ಯ ಮೊದಲ ಹಂತದ ಶೂಟಿಂಗ್‌ ಮುಗಿಸಿರುವ “ಗಾಳಿಪಟ-2′ ಚಿತ್ರದ ಎರಡನೇ ಹಂತದ ಶೂಟಿಂಗ್‌ ಬಹುತೇಕ ವಿದೇಶಗಳಲ್ಲಿ ನಡೆಸಲು ಯೋಗರಾಜ್‌ ಭಟ್‌ ಆ್ಯಂಡ್‌ ಟೀಮ್‌ ಪ್ಲಾನ್‌ ಹಾಕಿಕೊಂಡಿದೆ. “ಚಿತ್ರಕಥೆ ಮತ್ತು ಸನ್ನಿವೇಶಗಳು ಮಂಜು, ಹಿಮವನ್ನು ಬಯಸುತ್ತಿರುವುದರಿಂದ, ಅದರಲ್ಲೂ ಸಾಕಷ್ಟು ಹಿಮ ಬೀಳುವ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲು ನಿರ್ಧರಿಸಲಾಗಿದೆ’ ಎಂಬ ವಿವರಣೆ ಕೊಡುತ್ತಾರೆ ಯೋಗರಾಜ್‌ ಭಟ್ಟರು.

ಒಬ್ಬ ಪ್ರೇಕ್ಷಕನಾಗಿ ನಾನು ಕೂಡಾ ಈ ಸಿನಿಮಾ ಬಗ್ಗೆ ಕುತೂಹಲ ಹೊಂದಿದ್ದೇನೆ -ಯೋಗರಾಜ್‌ ಭಟ್‌

ಜಿ.ಎಸ್‌ ಕಾರ್ತಿಕ ಸುಧನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ