ಮಾರ್ಜಾಲ ಮತ್ಸ್ಯ!

ಒಂದು ಮೀನಿನ ಕತೆ !

Team Udayavani, Oct 27, 2019, 5:00 AM IST

ಕ್ಯಾಟ್‌ಫಿಶ್‌ ಎಂದಾಕ್ಷಣ ಎಲ್ಲರೂ ಯೋಚಿಸುವುದು, ಇದೇನಿದು ಬೆಕ್ಕಿನಂತೆ ಇರುವ ಮೀನೇ? ಈ ಮೀನಿಗೆ ಬೆಕ್ಕಿನಂತಹ ವಿಶಿಷ್ಟವಾದ ಮೀಸೆ ಇರುವುದರಿಂದಲೇ ಇದಕ್ಕೆ ಕ್ಯಾಟ್‌ಫಿಶ್‌ ಎಂಬ ಹೆಸರು ಬಂದಿದೆ.ಸೈಲ್ಲೂರಿ ಫಾರ್ಮೀಸ್‌ ಪ್ರಬೇಧದ ಸೈಲ್ಯೂರಿಡೀ ಕುಟುಂಬಕ್ಕೆ ಸೇರಿದ ಈ ಮೀನುಗಳು ಸಿಹಿನೀರಿನಲ್ಲಿ ಹೆಚ್ಚಾಗಿ ಬದುಕುತ್ತವೆ. ಓಂಪಾಕ್‌ ಬೈಮ್ಯಾಕ್ಯುಲೇಟಸ್‌ಎಂಬುದು ಇದರ ವೈಜ್ಞಾನಿಕ ಹೆಸರಾಗಿದ್ದು, ಮೀಸೆಮೀನು, ಗೊಡ್ಲೆ, ದೊಮ್ಮೆ ಮೀನು ಎಂದೂ ಇದನ್ನು ಕರೆಯಲಾಗುತ್ತದೆ. ಏಷ್ಯಾದ ಅಫ್ಘಾನಿಸ್ತಾನ, ಚೀನ, ಭಾರತ, ಥಾಯ್ಲೆಂಡ್‌ ದೇಶಗಳಲ್ಲಿ ಕಂಡುಬರುವುದರೊಂದಿಗೆ ಕರ್ನಾಟಕದ ಕಾವೇರಿ ನದೀಪಾತ್ರ ಮತ್ತು ಒಳನಾಡಿನ ಅನೇಕ ಕೆರೆಗಳಲ್ಲಿ ಇದು ಕಂಡುಬರುತ್ತದೆ.

ಕ್ಯಾಟ್‌ಫಿಶ್‌ ಗರಿಷ್ಠ 30 ಸೆಂ. ಮೀ. ಉದ್ದ ಬೆಳೆಯುವ ಮಧ್ಯಮಗಾತ್ರದ ಮೀನು. ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹವನ್ನು ಹೊಂದಿರುವುದರೊಂದಿಗೆ ಬಾಯಿಯ ಬಳಿ ಎರಡು ಜೊತೆ ಮೀಸೆಗಳು. ಇವುಗಳಲ್ಲಿ ಒಂದು ಜೊತೆ ಮೀಸೆ ಯು ಮೀನಿನ ಗುದದ್ವಾರದ ಈಜುರೆಕ್ಕೆಯವರೆಗೂ ಚಾಚುವಂತೆ ಇರುತ್ತದೆ. ಎದೆಯ ಈಜುರೆಕ್ಕೆಯ ಮೇಲ್ಭಾಗದಲ್ಲಿರುವ ಕಪ್ಪು ಮಚ್ಚೆ, ಕಪ್ಪು ಬಣ್ಣದ ಪಟ್ಟೆಗಳು ಮತ್ತು ಕಪ್ಪು ಅಂಚುಳ್ಳ ಈಜು ರೆಕ್ಕೆ, ಕವಲೊಡೆದ ಬಾಲದ ಈಜುರೆಕ್ಕೆ, ಕ್ಯಾಟ್‌ಫಿಶ್‌ ಮೀನಿನ ಪ್ರಮುಖ ಗುಣಲಕ್ಷಣಗಳು. ಕ್ಯಾಟ್‌ ಫಿಶ್‌ ಭಾರತದೇಶದ ತಳಿ ಅಲ್ಲ. ಇದರ ಮೂಲ ಆಫ್ರಿಕಾದೇಶ. ಈ ಮೀನನ್ನು 1980ರ ದಶಕದಲ್ಲಿ ಜಲಚರ ಸಾಗಾಣಿಕಾ ನೆಪದಲ್ಲಿ ಭಾರತಕ್ಕೆ ತರಲಾಯಿತು. ಈ ಮೀನು ನೀರಿನಲ್ಲಿರುವ ಅಮ್ಲಜನಕವನ್ನು ಬಳಸಿಕೊಳ್ಳುವುದರೊಂದಿಗೆ ವಾತಾವರಣದ ಅಮ್ಲಜನಕವನ್ನೂ ತನ್ನ ಉಸಿರಾಟಕ್ಕಾಗಿ ಬಳಸಿಕೊಳ್ಳುವುದರಿಂದ ವಾತಾವರಣದಲ್ಲಿನ ಆಮ್ಲಜನಕದ ಕೊರತೆಗೂ ಕಾರಣವಾಗುತ್ತದೆ.

ಸಿಹಿನೀರಿನ ಪರಿಸರದಲ್ಲಿ ಅವು ವಾಸಿಸುತ್ತವಾದರೂ ಆಳವಿಲ್ಲದ, ಹರಿಯುವ ನೀರಿನಲ್ಲಿ ಹೆಚ್ಚಾಗಿ ಬದುಕುತ್ತವೆ. ಇವುಗಳು ಕೇವಲ ನೀರಿನ‌ಲ್ಲಷ್ಟೇ ಅಲ್ಲದೆ ಅತ್ಯಂತ ಕಡಿಮೆ ತೇವಾಂಶವಿರುವ ಹಸಿ ಮಣ್ಣಿನಲ್ಲೂ ಹಲವು ತಿಂಗಳು ಗಳ ಕಾಲ ಜೀವಂತವಾಗಿದ್ದು ಮತ್ತೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ನೀರಿರುವೆಡೆಗೆ ಚಲಿಸುವ ವಿಶೇಷ ಗುಣಗಳನ್ನು ಹೊಂದಿವೆ. ಇವು ನೀರಿನ ಸೆಲೆಯಿರುವೆಡೆಗಳಲಿ, ಗುಹೆಗಳ ಒಳಗೂ ವಾಸಿಸಬಲ್ಲವಾದ್ದರಿಂದ ಕೆಸರಿನಲ್ಲಿ ಹೆಚ್ಚಾಗಿ ಜೀವಿಸುತ್ತವೆ. ದಕ್ಷಿಣ ಯುನೈಟೆಡ್‌ ಸೇrಟ್‌ನಲ್ಲಿ ಕ್ಯಾಟ್‌ ಫಿಶ್‌ ಪ್ರಭೇದಗಳನ್ನು ಮಣ್ಣಿನ ಬೆಕ್ಕು, ಪೊಲಿವಾಗ್ಸ್‌ ಅಥವಾ ಚಕ್ಲೆಹೆಡ್ಸ್‌ನಂತಹ ವಿವಿಧ ಪ್ರಾದೇಶಿಕ ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣಕನ್ನಡದ ಕರಾವಳಿಯಲ್ಲಿ ಇದರ ಹೆಸ ರು ಮೊರಂಟೆ ಮೀನು!

ನಿಷೇಧಿತ ಉದ್ಯಮ
ಕ್ಯಾಟ್‌ಫಿಶ್‌ ಬೆಳೆಸಲು ಸಾಕಾಣಿಕೆದಾರರು ಅನೇಕ ಬಗೆಯತ್ಯಾಜ್ಯ ವಸ್ತುಗಳನ್ನು ಸಾಕುವ ಕೆರೆಅಥವಾ ಹೊಂಡಗಳಿಗೆ ತಂದು ಸುರಿಯಲಾಗುತ್ತದೆ. ಕಸಾಯಿಖಾನೆ, ಚಿಕನ್‌ ಮತ್ತು ಮಟನ್‌ ಅಂಗಡಿಗಳ ತ್ಯಾಜ್ಯಗಳನ್ನು ಮತ್ತು ರೇಷ್ಮೆ ಹುಳುಗಳನ್ನು ಬೇಯಿಸಿ ಈ ಮೀನುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಹೀಗಾಗಿ, ಹೊಂಡಗಳ ಸುತ್ತಲಿನ ಪರಿಸರ ಸದಾ ಕೆಟ್ಟ ವಾಸನೆಯಿಂದ ಕೂಡಿರುತ್ತ ದೆ. ಈ ಕಾರಣದಿಂದಾಗಿ ಈ ಮೀನುಗಳ ಸಾಕಣೆ ಮತ್ತು ಮಾರಾಟವನ್ನು 2000 ರಲ್ಲಿ ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ.ಕೃಷಿಕರೇನಾದರೂ ಈ ಮೀನನ್ನು ಸೂಕ್ತ ನಿಯಮಾನುಸಾರ ಸಾಕುವುದಿದ್ದಲ್ಲಿ ವಿಶೇಷ ಕಾಳಜಿಯೊಂದಿಗೆ ಅದರಲ್ಲೂ ಭಾರತೀಯ ಮೂಲದ ಕ್ಯಾಟ್‌ಫಿಶ್‌ ತಳಿಯ ಮರಿಗಳನ್ನು ಕೇವಲ ಮೀನುಗಾರಿಕಾ ಇಲಾಖೆಯ ಅಧಿಕೃತ ಕೇಂದ್ರಗಳಿಂದ ಪಡೆದುಕೊಂಡು ಸಾಕಬಹುದಾಗಿದೆ.

ಸಂತೋಷ್‌ ರಾವ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • „ಡಿ.ಎಸ್‌. ಕೊಪ್ಪದ ಸವದತ್ತಿ: ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಏಕಮುಖೀ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಸಾರಿಗೆ ಬಸ್‌ಗಳು...

  • ಜಮಖಂಡಿ: ನಗರದಲ್ಲಿ ಮಾವಾ ಮಾರಾಟ ದಂಧೆ ಜೋರಾಗಿದೆ. ತಂಬಾಕು, ಅಡಿಕೆ ಉಪಯೋಗಿಸಿ ಮನೆಯಲ್ಲಿ ಮಾವಾ ಸಿದ್ಧಗೊಳಿಸಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು,...

  • ಬಸವರಾಜ ಹೊಂಗಲ್‌ ಧಾರವಾಡ: ಈ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ದೇಶವಷ್ಟೇ ಅಲ್ಲ ಏಷಿಯಾ ಖಂಡವೇ ಸ್ಮರಿಸುತ್ತದೆ. ಇಲ್ಲಿ ಸರ್ಕಾರಕ್ಕೂ ಮೊದಲೇ...

  • ಇಂಧೋರ್: ಭಾರತದ ವೇಗಿಗಳ ಬಿಗು ದಾಳಿಗೆ ನಲುಗಿದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಮುಶ್ಫಿಕರ್...

  • ಚಿಕ್ಕಮಗಳೂರು: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಂತ್ವನ ಹೇಳುವುದರೊಂದಿಗೆ ಅವರಿಗೆ ಅಗತ್ಯ ಕಾನೂನಡಿ ನೆರವು, ಚಿಕಿತ್ಸೆ ಹಾಗೂ ಪರಿಹಾರ ಕಲ್ಪಿಸಲು...