ಒಂದು ಗ್ರೀಕ್‌ ಕತೆ: ಯುದ್ಧ ತಂದಿತ್ತ ಸುಂದರಿಯರು


Team Udayavani, Jan 26, 2020, 4:12 AM IST

ras-5

ರಾಜ ಪೀಲಿಯಸ್‌ ಎಂಬಾತ ಥೆಟಿಸ್‌ ಎಂಬ ಅಪ್ಸರೆಯನ್ನು ಮದುವೆಯಾಗಲು ನಿರ್ಧರಿಸಿದ. ಈ ಸಂದರ್ಭದಲ್ಲಿ ಏರಿಸ್‌ ಎಂಬ ಒಬ್ಬ ಒಲಿಂಪಿಯನ್‌ ದೇವತೆಯನ್ನು ಹೊರತುಪಡಿಸಿ ಉಳಿದೆಲ್ಲ ದೇವತೆಗಳನ್ನು ಆತ ಈ ಮದುವೆಗೆ ಆಹ್ವಾನಿಸಿದ.  ಗ್ರೀಕ್‌ ಪುರಾಣದ ಪ್ರಕಾರ 12 ಮಂದಿ ಪ್ರಾಚೀನ ದೇವತೆಗಳಿದ್ದಾರೆ. ಇವರೆಲ್ಲ ಗ್ರೀಸ್‌ನ ಒಲಿಂಪಸ್‌ ಪರ್ವತದಲ್ಲಿ ವಾಸಿಸುವುದರಿಂದ ಅವರನ್ನು ಒಲಿಂಪಿಯನ್ಸ್‌ ಎಂದು ಕರೆಯುವುದು ರೂಢಿ.

ಹೇಳಿಕೇಳಿ ಈ ಏರಿಸ್‌ ಎಂಬಾಕೆ ಅಪಶ್ರುತಿಯ ದೇವತೆ. ಆಕೆ ಸುಮ್ಮನೆ ಬಿಡುತ್ತಾಳೆಯೆ! ಆಕೆಗೆ ಬಹಳ ಸಿಟ್ಟು ಬಂದು ಈ ಒಲಿಂಪಿಯನ್‌ ದೇವತೆಗಳ ಅಹಂಕಾರಕ್ಕೆ ಮದ್ದು ಅರೆಯಲು ನಿರ್ಧರಿಸಿದಳು. ಚಿನ್ನದ ಸೇಬೊಂದರ ಮೇಲೆ “ಅಮೋಘ ಸೌಂದರ್ಯವತಿಗೆ ಈ ಹಣ್ಣು ಸಲ್ಲುವುದು’ ಎಂದು ಬರೆದು ದೇವತೆಗಳತ್ತ ಎಸೆದಳು.

ಒಲಿಂಪಿಯನ್‌ಗಳ ಪೈಕಿ ಗೃಹಕೃತ್ಯದ ದೇವತೆಯಾದ ಹೀರಾ, ಕೌಶಲಗಳ ದೇವತೆ ಅಥೆನಾ ಮತ್ತು ಸೌಂದರ್ಯ ದೇವತೆ ಅಫೊಡೈಟ್‌ ನಡುವೆ ಈ ಸೇಬಿಗಾಗಿ ಭಾರೀ ಸ್ಪರ್ಧೆ ಏರ್ಪಟ್ಟಿತು. ಈ ಸ್ಪರ್ಧೆ ಜಗಳವಾಗಿ ಪರಿಣಮಿಸಿತು. ಇವರ ಜಗಳವನ್ನು ಯಾರಿಂದಲೂ ಬಗೆಹರಿಸಲು ಸಾಧ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ಟ್ರಾಯ್‌ ದೇಶದ ರಾಜಕುಮಾರ ಪ್ರಿನ್ಸ್‌ ಪ್ಯಾರಿಸ್‌ ಎಂಬಾತ ಸ್ತ್ರೀಯರ ಸೌಂದರ್ಯ ಗ್ರಹಿಸಿ ಸರಿಯಾದ ತೀರ್ಪು ನೀಡುತ್ತಾನೆ ಎಂದು ಪ್ರಸಿದ್ಧನಾಗಿದ್ದ. ಈ ಮೂವರು ಜಗಳಗಂಟಿ ದೇವತೆಯರನ್ನು ಈ ರಾಜಕುಮಾರನ ಬಳಿ ಕಳುಹಿಸಲಾಯಿತು. ಮೂವರೂ ಆತನ ಮುಂದೆ ತಮ್ಮ ಸೌಂದರ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸಿದರು. ಅವನಿಗೂ ಬಹಳ ಗೊಂದಲವಾದಾಗ ಮೂವರೂ ಆಮಿಷಗಳನ್ನು ಒಡ್ಡಿದರು. “”ನಿನ್ನನ್ನು ಜಗತ್ತಿನ ಅತೀ ದೊಡ್ಡ ಸಾಮ್ರಾಜ್ಯದ ಒಡೆಯನನ್ನಾಗಿ ಮಾಡುವೆ” ಎಂದು ಹೀರಾ ಆಮಿಷವೊಡ್ಡಿದರೆ, “”ನಿನ್ನನ್ನು ಜಗತ್ತಿನಲ್ಲಿಯೇ ಅತ್ಯಂತ ಶೂರನನ್ನಾಗಿ ಮಾಡುವೆ” ಎಂದು ಅಥೆನಾ ಆಸೆ ಹುಟ್ಟಿಸಿದಳು. ಅಫೊಡೈಟ್‌ ಹೇಳಿ ಕೇಳಿ ಸೌಂದರ್ಯದ ಒಡತಿ. “”ಜಗದೇಕ ಸುಂದರಿ ಹೆಲೆನ್‌ಳನ್ನೇ ನಿನಗೆ ತಂದುಕೊಡುವೆ” ಎಂದು ಆಫೊಡೈಟ್‌ ಆಮಿಷವೊಡ್ಡುತ್ತಾಳೆ.

ಕೊನೆಯ ಆಮಿಷವೇ ಪ್ಯಾರಿಸ್‌ಗೆ ಇಷ್ಟವಾಗುತ್ತದೆ. ಅಫೊಡೈಟ್‌ಗೆ ಚಿನ್ನದ ಸೇಬು ದೊರೆಯುತ್ತದೆ. ಹೀರಾ ಮತ್ತು ಅಥೆನಾ ಇಬ್ಬರೂ ರಾಜಕುಮಾರ ಪ್ಯಾರಿಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾರೆ.
ಆದ್ದರಿಂದ ಟ್ರೋಜನ್‌ ಯುದ್ಧಕ್ಕೆ ಈ ಇಬ್ಬರು ದೇವತೆಯರೇ ಪ್ರೇರಣೆ ಎಂಬುದು ಗ್ರೀಕ್‌ ಪುರಾಣಗಳ ನಂಬಿಕೆ. ರಾಜಕುಮಾರ ಪ್ಯಾರಿಸ್‌, ಹೆಲೆನ್‌ಳನ್ನು ಅಪಹರಿಸಿದ ಪ್ರಕರಣವೇ ಯುದ್ಧಕ್ಕೆ ಕಾರಣ.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.