ಕತಾರ್‌ ಕತೆ


Team Udayavani, Jul 16, 2017, 2:45 AM IST

katar.jpg

ಭಾರತಕ್ಕೂ, ಹೆಚ್ಚಿನವರು ಕಂಡು ಕೇಳರಿಯದ ಚಿಕ್ಕ ಕೊಲ್ಲಿ ರಾಷ್ಟ್ರ ಕತಾರ್‌ಗೂ ಏನು ಸಂಬಂಧ ? ಭಾರತವು ಅತೀ ಹೆಚ್ಚು “ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ವನ್ನು ಆಮದು ಮಾಡಿಕೊಳ್ಳುತ್ತಿರುವುದು ಕತಾರ್‌ ದೇಶದಿಂದಲೇ. ಕತಾರಿನಲ್ಲಿ ಅಧಿಕ ಸಂಖ್ಯೆಯಲ್ಲಿರುವವರು ಭಾರತೀಯರೇ. ಬೆಂಗಳೂರಿನಿಂದ ಕತಾರ್‌ಗೆ ನಾಲ್ಕು ಗಂಟೆಗಳ ವಿಮಾನ ಪ್ರಯಾಣ. ಸುಮಾರು ಹದಿನೆಂಟು ವರ್ಷ ಕತಾರ್‌ನಲ್ಲಿದ್ದು ಅಲ್ಲೆಲ್ಲ ಓಡಾಡಿದ ಅನುಭವ ನನ್ನದು.

ಒಂದು ಕಾಲದಲ್ಲಿ ಅತೀ ಬಡ ಕೊಲ್ಲಿ ರಾಷ್ಟ್ರವಾಗಿದ್ದ ಕತಾರ್‌ ಈಗ ಅತ್ಯಂತ ಜಾಸ್ತಿ ತಲಾ ಆದಾಯವಿರುವ (per capita income)  ರಾಷ್ಟ್ರಗಳÇÉೊಂದು ಎಂದು ಗುರುತಿಸಲ್ಪಟ್ಟಿದೆ. ಆವಾಗಲೆಲ್ಲ ಮುತ್ತುಗಳು ಮತ್ತು ಮೀನುಗಳ ವ್ಯಾಪಾರವೇ ಜೀವಾಳವಾಗಿದ್ದರೆ, 1939ರಲ್ಲಿ ನಡೆದ ಎಣ್ಣೆ ಮತ್ತು ಗ್ಯಾಸಿನ ಸಂಗ್ರಹಣೆಯ ಆವಿಷ್ಕಾರ ಕತಾರಿನ ದೆಸೆ ಬದಲಾಯಿಸಿತು. 

ಭೌಗೋಳಿಕ ಮತ್ತು ಹವಾಮಾನ
ಕತಾರ್‌ ಪಶ್ಚಿಮ ಏಷ್ಯಾದಲ್ಲಿರುವ ಚಿಕ್ಕ ಕೊಲ್ಲಿ ರಾಷ್ಟ್ರ, ಒಟ್ಟು ವಿಸ್ತೀರ್ಣ 11,586 ಚದರ ಕಿ. ಮೀ. ದೇಶವು ಚಪ್ಪಟೆ ಬಾದಾಮಿ ಆಕರದಲ್ಲಿದ್ದು, ಬೌಗೊಳಿಕವಾಗಿ ಕತಾರಿಗೆ ಸೌದಿ ಅರೆಬಿಯವು ದಕ್ಷಿಣ ದಿಕ್ಕಿನಲ್ಲಿ ಗಡಿಯಾಗಿದ್ದರೆ, ಪರ್ಷಿಯನ್‌ ಕೊಲ್ಲಿ ಇತರ ಭಾಗಗಳಲ್ಲಿ ಸುತ್ತುವರೆದಿದೆ, ಬೆಹರಿನ್‌, ಯುಎಇ, ಇರಾನ್‌  ನೆರೆ ರಾಷ್ಟ್ರಗಳು.  ಭೂಭಾಗದಲ್ಲಿ ಯಾವುದೇ ನದಿ, ಕೆರೆ, ತೊರೆಗಳಿಲ್ಲ, ಎÇÉೆಲ್ಲೂ ಸಮತಟ್ಟು ಮರುಭೂಮಿಯೇ, ಅತೀ ಸಣ್ಣ ಪ್ರಮಾಣದಲ್ಲಿ ಖರ್ಜೂರದ ಕೃಷಿ, ಕ್ಯಾರೆಟ್‌, ಬೀಟರೂಟ್‌, ಸಿಹಿಗುಂಬಳ ಕಾಯಿಯ ತೋಟಗಳು ಕಂಡುಬರುತ್ತದೆ, ಮೀನುಗಾರಿಕೆಯೂ ಸಣ್ಣ ಪ್ರಮಾಣದಲ್ಲಿದೆ.  ಇಷ್ಟು ಸಣ್ಣ ರಾಷ್ಟ್ರದ ಜನಸಂಖ್ಯೆ 22 ಲಕ್ಷ , ಸ್ಥಳಿಯರ ಸಂಖ್ಯೆ ಕೇವಲ 3 ಲಕ್ಷ , ಬಾಕಿ 19 ಲಕ್ಷ ಪರರಾಷ್ಟ್ರದವರಾಗಿ¨ªಾರೆ. ದೋಹ ರಾಜದಾನಿ, ಆಲ್‌ ರೆಯ್ನಾನ್‌, ಆಲ್‌ ವಕ್ರ, ಆಲ್‌ ಖೊರ್‌, ದುಖಾನ್‌, ಮಿಸೈದ್‌ ಉಳಿದ ನಗರಗಳು.

ರಾಜಕೀಯ, ಕಾನೂನು ಮತ್ತು ಆರ್ಥಿಕ ವ್ಯವಸ್ಥೆ
ಆಡಳಿತವು ಮೊದಲು ಕತಾರ್‌ ಬ್ರಿಟಿಷರ ಆಶ್ರಯ ರಾಷ್ಟ್ರವಾಗಿದ್ದು 1971ರಲ್ಲಿ ಸ್ವಾತಂತ್ರ್ಯ ದೊರಕಿತು, ಆಡಳಿತವು ಆನುವಂಶಿಕ ರಾಜಪ್ರಭುತ್ವವಾಗಿದ್ದು 19ನೇ ಶತಮಾನದಿಂದ “ಅಲ್‌ ಥಾನಿ’ ರಾಜಮನೆತನದ ಕೈಯಲ್ಲಿದೆ, ಸರ್ವೋಚ್ಚ ಮುಖ್ಯಾಧಿಕಾರಿ “ಎಮಿರ್‌’ ಎಂದು ಕರೆಯಲ್ಪಡುತ್ತಾರೆ. ಈಗ ‘ಶೇಖ್‌ ತಮೀಮ್‌ ಬಿನ್‌ ಹಮದ್‌ ಅಲ್‌ ಥಾನಿ’ ಕತಾರಿನ ಎಮಿರ್‌, “ಅಮೀರಿ ದಿವಾನ್‌’ ಆಡಳಿತ ಕಚೇರಿ. ಈಗ ಮಹಿಳೆಯರಿಗೂ ಓಟು ಮಾಡುವ ಹಕ್ಕಿದೆ, ಪರದೇಶದವರಿಗೆ ಪೌರತ್ವ ಹಾಗೂ ಓಟು ಮಾಡುವ ಹಕ್ಕಿಲ್ಲ.

ಕತಾರಿನ ಧ್ವ‌Ìಜದ ಬಣ್ಣ ಮೆರೂನ್‌ ಮತ್ತು ಬಿಳಿ. ಕೊಂಬಿರುವ ಜಿಂಕೆಯಂತೆ ಕಾಣುವ “ಅರೆಬಿಯನ್‌ ಓರಿಕ್ಸ್‌’ ಕತಾರಿನ ರಾಷ್ಟ್ರೀಯ ಪ್ರಾಣಿ, “ರಿಯಾಲ್ಸ…’ ಕತಾರಿನ ಚಲಾವಣೆಯ ನಾಣ್ಯ (currency),  ಈಗಿನ ವಿನಿಮಯ ದರ 1 ರಿಯಾಲ್ಸ… = 17. 60 ರುಪಾಯಿ. 

ಕತಾರಿನ ಕಾನೂನು ವ್ಯವಸ್ಥೆಯು “ಶರಿಯ ಕಾನೂನು’ ಮತ್ತು “ಸಿವಿಲ್‌ ಕಾನೂನು’ ಅನ್ನು  ಅನುಸರಿಸುತ್ತಿದೆ. 
ಕತಾರಿನಲ್ಲಿ ಒಂದು ಅಂದಾಜಿನಂತೆ ಸುಮಾರು 7 ಟ್ರಿಲಿಯನ್‌ ಕ್ಯುಬಿಕ್‌ ಮೀ. ನಷ್ಟು ಸಹಜ ಅನಿಲ (natural gas) ಸಂಪತ್ತಿದ್ದು, ಅಮೆರಿಕ ಮತ್ತು ರಷ್ಯದ ನಂತರ ವಿಶ್ವದÇÉೇ ಮೂರನೆಯ ಸ್ಥಾನವನ್ನು  ಸಹಜ ಅನಿಲ ಉತ್ಪಾದನೆಯಲ್ಲಿ ಪಡೆದಿದ್ದರೆ, ದ್ರವೀಕೃತ ಸಹಜ ಅನಿಲ (LNG)ದ ರಫ್ತಿನಲ್ಲಿ ವಿಶ್ವದ ಮೊದಲ ಸ್ಥಾನದಲ್ಲಿರುವ ಕತಾರಿನ ಕೊಡುಗೆ ಶೇಕಡ 31ರಷ್ಟು. ಕತಾರಿನ ಎಣ್ಣೆ ಮತ್ತು ಅನಿಲದ ಸಂಗ್ರಹ ಇನ್ನೂ 138 ವರ್ಷಗಳಿಗೆ ಸಾಕಾಗುವಷ್ಟು ಇದೆಯಂತೆ. 

ಕಚ್ಚಾ ಎಣ್ಣೆಯ ಬೆಲೆಯು ಜೂನ್‌ 2014 ರಿಂದ ಕುಸಿಯ ತೊಡಗಿತು. ಎÇÉಾ ಕೊಲ್ಲಿ ರಾಷŒಗಳಂತೆ ಕುಸಿದ ಎಣ್ಣೆ ಮತ್ತು ಅನಿಲ ಬೆಲೆಯಿಂದ ಕತಾರ್‌ ಕೂಡ ತತ್ತರಿಸಿತು. ಆದರೂ ಎಣ್ಣೆ ಮತ್ತು ಅನಿಲದ ಉತ್ಪಾದನೆಯನ್ನೇನು ಕಡಿಮೆ ಮಾಡಲಿಲ್ಲ. ಆದರೆ ಹೊಸ ದೀರ್ಘ‌ ಕಾಲದ ಯೊಜನೆಗಳನ್ನು ಕೈ ಬಿಟ್ಟಿದೆ, ಸರಕಾರಿ ಸ್ವಾಮ್ಯದ “ಕತಾರ್‌ ಪೆಟ್ರೊಲಿಯಂ ಮತ್ತು ಉಳಿದ ಸಂಸ್ಥೆಗಳು, ಖರ್ಚು ಕಡಿಮೆ ಮಾಡುವ ಯೋಜನೆಯಲ್ಲಿ ನೂರಾರು ಪರದೇಶದವರು ಕೆಲಸ ಕಳೆದುಕೊಂಡಿ¨ªಾರೆ.

ಅಂತರಾಷ್ಟ್ರೀಯ ಸಂಬಂಧಗಳು
ಕತಾರ್‌ ಪೆಟ್ರೋಲ್‌ ನಿರ್ಯಾತ ದೇಶಗಳ ಓಕ್ಕುಟದ ಸದಸ್ಯ (OPEC) ರಾಷ್ಟವಾಗಿದ್ದಲ್ಲದೆ, ಹಲವು ಅಂತರಾಷ್ಟ್ರೀಯ ಒಕ್ಕೂಟಗಳ ಸದಸ್ಯತ್ವವನ್ನೂ ಹೊಂದಿದ್ದು, ವಿಶ್ವದ ಹಲವು ರಾಷ್ಟ್ರಗಳೊಡನೆ ಉತ್ತಮ ದ್ವಿಪಕ್ಷೀಯ ಸಂಬಂಧವನ್ನೂ ಹೊಂದಿದೆ. ಲಂಡನ್‌, ಅಮೆರಿಕ ಮಾತ್ರವಲ್ಲದೆ ಕೆಲವು ಪಾಶ್ಚಾತ್ಯ ಕಂಪೆನಿಗಳಲ್ಲಿ ಬಂಡವಾಳ ಹೂಡಿ ಮತ್ತು ಉದಾರ ಕೊಡುಗೆಗಳ ಮೂಲಕ ಕತಾರ್‌ ಪ್ರಭಾವಿ ರಾಷ್ಟ್ರವೆಂದು ಗುರುತಿಸಲ್ಪಟ್ಟಿದೆ. ಅದೇ ಸಮಯದಲ್ಲಿ ಇರಾನ್‌, ಹಮಾಸ್‌, ಲಿಬಿಯಾದ “ನ್ಯಾಟೊ ಒಪರೇಶನ್‌’ ಮತ್ತು ಕೆಲವು ಮುಸ್ಲಿಮ್‌ ಸಂಘಟನೆ ಗಳೊಡನೆ ಉತ್ತಮ ಸಂಬಂಧವನ್ನು ಹೊಂದಿದೆ. 1991ರಲ್ಲಿ ನಡೆದ ಕೊಲ್ಲಿ ಯುದ್ಧ, 2001ರಲ್ಲಿ ನಡೆದ ಅಮೇರಿಕ, ಆಫ‌ಘಾನಿಸ್ತಾನ ಯುದ್ಧ, 2003ರಲ್ಲಿ ಸ¨ªಾಮ್‌ ಹುಸೇನ್‌ ವಿರುದ್ಧ ನಡೆದ ಇರಾಕ್‌ ಯುದ್ಧದಲ್ಲಿ ಕರ್ತಾ ಬಹಳ ಮಹತ್ವದ ಪಾತ್ರ ವಹಿಸಿದೆ,  ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳ ಯುದ್ಧ ವಿಮಾನಗಳಿಗೆ ಆಶ್ರಯ ಕೊಟ್ಟಿತ್ತು. 

ಅಮೆರಿಕಕ್ಕೆ  ಕತಾರಿನಲ್ಲಿ ಪೂರ್ವ ಮಧ್ಯ ದೇಶಗಳÇÉೇ ಅತ್ಯಂತ ದೊಡ್ಡದಾದ ಸೈನಿಕ ತಾಣವಿದೆ. ಸುಮಾರು 10,000 ಸೈನಿಕರು ಉಳಿದುಕೊಳ್ಳಲು ವ್ಯವಸ್ಥೆ ಇರುವ ಮತ್ತು ಹಲವು ಡಜನ್‌ ಯುದ್ಧ ವಿಮಾನಗಳನ್ನು ನಿಲ್ಲಿಸಬಹುದಾದ ಅಲ್‌ ಉದೇದ್‌ ವಾಯು ನೆಲೆಯನ್ನು ಅಮೆರಿಕದ ಮಿಲಿಟರಿಗೆ ಉಪಯೋಗಿಸಲು ಕತಾರ್‌ ಬಿಟ್ಟುಕೊಟ್ಟಿದೆ, ಅದೂ ಉಚಿತವಾಗಿ ಅಂತೆ. 

1996ರಲ್ಲಿ “ಆಲ್‌ ಜಝಿರ ವಾರ್ತಾ ಚಾನಲ್‌’ ಶುರು ಮಾಡಿದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಸಾರವಾಗುತ್ತಿದೆ.

ಅಂತರಾಷ್ಟ್ರೀಯ ಸಂಬಂಧದಲ್ಲಿ ಬಿರುಕು  
ಕತಾರಿನ ಪ್ರಗತಿ ಕಳೆದ ಐವತ್ತು ವರ್ಷಗಳಲ್ಲಿ ಅದ್ವಿತೀಯ ವಾದರೂ ಆಗಾಗ ನೆರೆ ರಾಜ್ಯಗಳೊಡಗಿನ ಬಿಕ್ಕಟ್ಟು ಅಷ್ಟೇ ಸಾಮಾನ್ಯವಾಗಿತ್ತು, ಆದರೆ ಈ ಸಲದ ಬಿಕ್ಕಟ್ಟು ಸ್ವಲ್ಪ ಜಾಸ್ತಿಯೇ ದೊಡ್ಡದೇನೊ. ನೆರೆ ರಾಜ್ಯಗಳಾದ ಬೆಹರಿನ್‌, ಯುಎಯಿ, ಸೌದಿ ಅರೇಬಿಯಾ, ಯೆಮೆನ್‌, ಮಾಲ್ದೀವ್ಸ್‌ ಮತ್ತು ಈಜಿಪ್ತ್ ಕತಾರಿನೊಂದಿಗೆ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಕಡಿದುಕೊಳ್ಳಲು ತೀರ್ಮಾನಿಸಿದ್ದು ಮಾತ್ರ ಅಲ್ಲ ವಾಯು, ಜಲ ಮತ್ತು ನೆಲ ಮಾರ್ಗದ ಸಂಬಂಧಗಳನ್ನು ಕಡಿದುಕೊಂಡವು, ರಾಯಭಾರಿಗಳನ್ನು ವಾಪಸು ಕರೆಸಿಕೊಳ್ಳಲಾಯಿತು. 

ನೆರೆಹೊರೆಯವರ ಸಂಬಂಧದ ಬಿರುಕಿಗೆ ಕಾರಣಗಳು ಹಲವು.  ಎಪ್ರಿಲ್‌ 2017ರಲ್ಲಿ ಇರಾಕಿನಲ್ಲಿ ಶಿಯಾ ಉಗ್ರಗಾಮಿಗಳಿಂದ ಕೈದಿಯಾದ 26 ಕತಾರ್‌ ರಾಜ ಪರಿವಾರದ ಒತ್ತೆಯಾಳುಗಳನ್ನು ಬಿಡಿಸಲು ಕತಾರ್‌ ದೊಡ್ಡ ಮೊತ್ತದ ಹಣವನ್ನು ಕೊಟ್ಟಿದ್ದು ನೆರೆಯ ಸೌಡಿ ಅರೆಬಿಯಾದ ಕಣ್ಣು ಕೆಂಪಗಾಯಿತು. ಮೇ 2017ರಲ್ಲಿ “ರಿಯಾದ್‌ ಸಮಿತಿ’ಗೆ ಭಾಗವಹಿಸಲು ಬಂದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡುವುದನ್ನು ಖಂಡಿಸಿ, ಭಯೋತ್ಪಾದನೆ ನಿಗ್ರಹಿಸುವಲ್ಲಿ ಸೌದಿ ಅರೇಬಿಯಾದ ಪ್ರಯತ್ನವನ್ನು ಹೊಗಳಿ, ಕತಾರಿನ ನಿಲುವನ್ನೂ ಪರೋಕ್ಷವಾಗಿ ಖಂಡಿಸಿದಾಗ ಸೌದಿ ಅರೇಬಿಯ ಮತ್ತು ನೆರೆಹೊರೆಯವರು ಕತಾರಿನೊಡನೆ ಸಂಬಂಧ ಕಡಿಯಲು ತೀರ್ಮಾನಿಸಿದವು. ಅಲ್ಲದೆ ಮೇ ತಿಂಗಳÇÉೇ ಕತಾರಿನ ಅಧಿಕೃತ ಸುದ್ದಿ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ  ಕತಾರ್‌ ಇರಾನ್‌, ಹಮಾಸ್‌, ಹೆಜೈಬೊÇÉಾ ಮತ್ತು ಇಸ್ರೇಲಿಗೆ ತನ್ನ ಬೆಂಬಲವನ್ನು ಪ್ರಕಟಿಸುವ ಸುದ್ದಿ ಪ್ರಸಾರವಾಯಿತು. ಇದು ಯಾರೋ ಕಳ್ಳತನದಿಂದ ಪ್ರಕಟಿಸಿದ ಸುಳ್ಳು ಸುದ್ದಿಯೆಂದು ಕತಾರ್‌ ಹೇಳಿಕೊಂಡಿತು. ಜೂನ್‌ 5 ಮತ್ತು 6 ರಂದು ಸೌದಿ ಅರೇಬಿಯಾ ಮತ್ತು ಹಲವು ರಾಷ್ಟ್ರಗಳು ಕತಾರಿನೊಂದಿಗೆ ಸಂಬಂಧ ಕಡಿದುಕೊಂಡವು.

ಇರಾನಿನೊಂದಿಗೆ ವ್ಯವಹಾರ, ಉಗ್ರವಾದಿಗಳೊಂದಿಗೆ ಸ್ನೇಹ ಮತ್ತು ರಾಜಕೀಯ ಅಲ್ಲದೇ ಪ್ರಾದೇಶಿಕ ನಾಯಕತ್ವವೇ ಬಿರುಕಿಗೆ ನಿಜವಾದ ಕಾರಣವೆಂಬುದು ಕೆಲವರ ಅಂಬೋಣ.  ಇತರ ಕೊಲ್ಲಿ ರಾಷ್ಟ್ರಗಳಾದ ಕುವೈಟ್‌ ಮತ್ತು ಒಮಾನ್‌ ಈ ಬೆಳವಣಿಗೆಯಲ್ಲಿ ತಟಸ್ಥವಾಗಿ ನಿಂತಿದ್ದಲ್ಲದೆ, ಕುವೈಟ್‌ ನೆರೆರಾಜ್ಯಗಳಲ್ಲಿನ ಬಿರುಕನ್ನು ಮುಚ್ಚಲು ಸಂಧಾನದಲ್ಲಿ ತೊಡಗಿದೆ. 

– ಗೀತಾ ಕುಂದಾಪುರ

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.