Udayavni Special

ಒಂದು ಝೆನ್‌ ಕತೆ


Team Udayavani, Jul 21, 2019, 5:03 AM IST

zen

ಒಬ್ಬ ಸಂತನಿದ್ದನಂತೆ. ಅವನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು- ಯಾವನೇ ವ್ಯಕ್ತಿಯನ್ನು ಮಾತನಾಡಿಸುವಾಗ ಅವರ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ. ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ ಅಸ್ತಿತ್ವದ ಕೇಂದ್ರವನ್ನಷ್ಟೇ ಗಮನಕ್ಕೆ ತೆಗೆದುಕೊಳ್ಳುತ್ತಿದ್ದ. ಹೀಗಾಗಿ, ತಾನು ಕಂಡ ಪ್ರತಿಯೊಬ್ಬನನ್ನೂ ಪ್ರೀತಿಸುತ್ತಿದ್ದ ಹಾಗೂ ಕ್ಷಮಿಸುತ್ತಿದ್ದ. ಇದನ್ನೆಲ್ಲ ಅವನು ಮಹಾಕಾರ್ಯವೆಂದು ಭಾವಿಸಿಯೂ ಇರಲಿಲ್ಲ. ಅವನಿದ್ದುದೇ ಹಾಗೆ !

ಒಂದು ದಿನ ಒಬ್ಬ ದೇವತೆ ಅವನ ಮುಂದೆ ಪ್ರತ್ಯಕ್ಷಳಾಗಿ ”ದೇವರು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ. ಯಾವುದಾದರೂ ವರ ಕೇಳಿಕೋ, ರೋಗ ಪರಿಹಾರದ ವರ ಕೊಡಲಾ?” ಎಂದು ಕೇಳಿದಳು.

”ಬೇಡ. ದೇವರೇ ಆ ಕೆಲಸ ಮಾಡಲಿ.”

”ಪಾಪಿಗಳನ್ನು ಸರಿದಾರಿಗೆ ತರುವ ಸಾಮರ್ಥ್ಯ ಕೊಡಲಾ?”

”ಬೇಡ. ಮಾನವ ಹೃದಯಗಳನ್ನು ಸ್ಪರ್ಶಿಸುವ ಕೆಲಸ ನನ್ನದಲ್ಲ, ದೇವತೆಗಳದು”.

”ಸದ್ಗುಣದ ಮಾದರಿ ಪುರುಷನಾಗಿ ಇತರರನ್ನು ಪ್ರೇರಿಸುವ ಚೈತನ್ಯ?”

”ಬೇಡ, ಹಾಗಾಗಿ ಬಿಟ್ಟರೆ ನಾನು ಆಕರ್ಷಣೆಯ ಕೇಂದ್ರವಾದೇನು?”

”ಮತ್ತೇನು ವರ ಕೊಡಲಿ?”

”ದೇವರ ದಯೆಯಿಂದ ನಾನು ಬಯಸಿದ್ದೆಲ್ಲ ನನಗೆ ಸಿಕ್ಕಿದೆ”.

”ಅದಾಗದು, ಏನಾದರೂ ಪವಾಡದ ಶಕ್ತಿಗಾಗಿ ಕೇಳಲೇಬೇಕು ನೀನು”- ದೇವತೆ ಒತ್ತಾಯಿಸಿದಳು.

”ಹಾಗಿದ್ದರೆ, ನನ್ನ ಅರಿವಿಗೆ ಬರದಂತೆಯೇ ಇತರರಿಗೆ ಒಳಿತನ್ನೆಸಗುವಂತಾಗಲಿ”.

ಒಪ್ಪಿದ ದೇವತೆ, ಅವನಿಗೆ ಕೊಟ್ಟ ವರ ಬಹಳ ವಿಚಿತ್ರವಾದುದು. ಅವನ ನೆರಳು, ಅದು ಬೆನ್ನ ಹಿಂದೆ ಇರುವಷ್ಟು ಹೊತ್ತು ಅದಕ್ಕೊಂದು ದಿವ್ಯ ಶಕ್ತಿ ಇರುತ್ತಿತ್ತು. ಆ ನೆರಳಿನ ವ್ಯಾಪ್ತಿಯಲ್ಲಿದ್ದ ನೆಲ ಫ‌ಲವತ್ತಾಗುತ್ತಿತ್ತು. ನೆರಳು ಯಾವ ರೋಗಿಗಳ ಮೇಲೆ ಬೀಳುತ್ತಿತ್ತೋ ಅವರು ಗುಣಮುಖರಾಗುತ್ತಿದ್ದರು. ನೆರಳು ಬಿದ್ದಲ್ಲೆಲ್ಲ ನೀರ ಚಿಲುಮೆಗಳು ಚಿಮ್ಮುತ್ತಿದ್ದವು. ದುಃಖೀಗಳ ಮುಖಕ್ಕೆ ಅವನ ನೆರಳು ಬಿದ್ದರೆ ಸಾಕು, ಅವರ ಮುಖದಲ್ಲಿ ಖುಷಿಯ ರಂಗು ಹಮ್ಮತೊಡಗುತ್ತಿತ್ತು. ಆದರೆ, ಈ ಯಾವ ಪವಾಡವೂ ಆ ಸಂತನ ಅರಿವಿಗೆ ಬರಲೇ ಇಲ್ಲ. ಕಾರಣ, ಜನರ ಗಮನ ಕೇವಲ ಅವನ ನೆರಳ ಮೇಲಿತ್ತು; ಅವನ ಮೇಲಲ್ಲ. ಅವರು ಅವನ ನೆರಳಿನಿಂದ ಉಪಕೃತರಾದರು. ಅವನನ್ನು ಮಾತ್ರ ಮರೆತೇ ಬಿಟ್ಟರು.

ಅವನು ಬಯಸಿದ್ದುದೂ ಅದೇ ತಾನೆ?

– ಪ್ರತಿಮಾ

ಟಾಪ್ ನ್ಯೂಸ್

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

Donated Covid Kits By Hukkery Mutt Swamiji to Belagavi DC

ಜಿಲ್ಲಾಧಿಕಾರಿಗಳಿಗೆ  ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ ಗಳ ಹಸ್ತಾಂತರ             

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

Hypertension in young people

ಯುವ ಜನತೆಯಲ್ಲಿ  ಅಧಿಕ ರಕ್ತದೊತ್ತಡ

Donated Covid Kits By Hukkery Mutt Swamiji to Belagavi DC

ಜಿಲ್ಲಾಧಿಕಾರಿಗಳಿಗೆ  ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ ಗಳ ಹಸ್ತಾಂತರ             

Types of medical examination of the kidneys

ಮೂತ್ರಪಿಂಡಗಳ ವೈದ್ಯಕೀಯ ಪರೀಕ್ಷಾ  ವಿಧಗಳು ಮತ್ತು ವಿಧಾನಗಳು

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.