Udayavni Special

ಚಂದನವನಕ್ಕೆ ಮತ್ತೂಬ್ಬಳು ಮೋಕ್ಷಾ

Team Udayavani, Nov 3, 2019, 4:42 AM IST

nn-3

ಈಗಂತೂ ಕನ್ನಡ ಚಿತ್ರರಂಗದಲ್ಲಿ ಎಲ್ಲಿ ನೋಡಿದ್ರೂ ಹೊಸ ಪ್ರತಿಭೆಗಳದ್ದೇ ಕಾರುಬಾರು. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಹೀಗೆ ಎಲ್ಲಾ ಕಡೆ ಹೊಸಗಾಳಿ ಜೋರಾಗಿ ಬೀಸುತ್ತಿದೆ. ಅದರಲ್ಲೂ ಅಚ್ಚ ಕನ್ನಡದ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ನಾಯಕಿಯರಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವುದು ಚಂದನವನದ ಮಟ್ಟಿಗೂ ಆಶಾದಾಯಕ ಬೆಳವಣಿಗೆ. ಹಾಗೆ ಇತ್ತೀಚೆಗೆ ಚಿತ್ರರಂಗದಲ್ಲಿ ತನ್ನ ಅಭಿನಯ ಮತ್ತು ಅಂದ ಎರಡರ ಮೂಲಕವೂ ನಿಧಾನವಾಗಿ ಗುರುತಿಸಿಕೊಳ್ಳುತ್ತಿರುವ ನಟಿ ಮೋಕ್ಷಾ ಕುಶಾಲ್‌. ಮೋಕ್ಷಾ ಕುಶಾಲ್‌ ತಂದೆ-ತಾಯಿ ಮೂಲತಃ ಕೊಡಗಿನವರು. ಮೋಕ್ಷಾ ಕೂಡ ಹುಟ್ಟಿದ್ದು ಕೊಡಗಿನಲ್ಲಿ. ಬಳಿಕ ಅವರ ಕುಟುಂಬ ಕೊಡಗಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರಿಂದ, ಮೋಕ್ಷಾ ಅವರ ಬಾಲ್ಯ, ಓದು, ಸ್ಕೂಲ್‌-ಕಾಲೇಜು ಎಲ್ಲವೂ ಬೆಂಗಳೂರಿನಲ್ಲೇ ನಡೆಯಿತು. ತಂದೆ ಕುಶಾಲಪ್ಪ ಟೆಕ್ಸ್‌ಟೈಲ್ಸ್‌ ಉದ್ಯಮಿ, ತಾಯಿ ಗೃಹಿಣಿ, ತಂಗಿ ಪ್ರೇಕ್ಷಾ ಫ್ಯಾಷನ್‌ ಡಿಸೈನಿಂಗ್‌ ಓದುತ್ತಿದ್ದಾರೆ.

ಶಾಲಾ ದಿನಗಳಲ್ಲೇ ಡ್ಯಾನ್ಸ್‌, ಡ್ರಾಮಾ ಅಂತ ಒಂದಷ್ಟು ಕಲ್ಚರಲ್‌ ಆ್ಯಕ್ಟಿವಿಟೀಸ್‌ನಲ್ಲಿ ತೊಡಗಿಕೊಳ್ಳುತ್ತಿದ್ದ ಮೋಕ್ಷಾ ಕುಶಾಲ್‌, ತಮ್ಮ ಇಂಜಿನಿಯರಿಂಗ್‌ ಶಿಕ್ಷಣ ಮುಗಿಯುತ್ತಿದ್ದಂತೆ, ಬಣ್ಣದ ಲೋಕದತ್ತ ಮುಖ ಮಾಡಿದರು. ಆರಂಭದಲ್ಲಿ ಫ್ಯಾಷನ್‌ ಗುರು, ಪ್ರಸಾದ್‌ ಬಿದ್ದಪ್ಪ ಅವರ ಜೊತೆ ಕೆಲ ಕಾಲ ತರಬೇತಿ ಪಡೆದುಕೊಂಡು ಬಳಿಕ ಒಂದಷ್ಟು, ಪ್ರತಿಷ್ಠಿತ ಫ್ಯಾಷನ್‌ ಶೋಗಳಲ್ಲೂ ಭಾಗವಹಿಸಿ ಸೈ ಎನಿಸಿಕೊಂಡರು. ಸುಮಾರು ಎರಡು ವರ್ಷ ಮಾಡೆಲ್‌ ಆಗಿಯೂ ಕೆಲಸ ಮಾಡಿದರು.

ಅದಾದ ನಂತರ ಮೋಕ್ಷಾ, ಇನ್‌ಸೈಡ್‌ ಎ ಗರ್ಲ್ ಅನ್ನೋ ಶಾರ್ಟ್‌ ಫಿಲ್‌ ನಲ್ಲಿ ಅಭಿನಯಿಸುವ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟರು. ಈ ಶಾರ್ಟ್‌ ಫಿಲ್ಮ್ಗೆ ಪ್ರೇಕ್ಷಕರಿದ ಸಿಕ್ಕ ಉತ್ತಮ ಪ್ರತಿಕ್ರಿಯೆ ಮೋಕ್ಷಾಗೆ ನಂತರ ಅಯನ ಅನ್ನೋ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಅವಕಾಶ ತಂದುಕೊಟ್ಟಿತು.

ಸದ್ಯ ಮೋಕ್ಷಾ ಕುಶಾಲ್‌ ಚಿತ್ರರಂಗಕ್ಕೆ ಕಾಲಿಟ್ಟು ಎರಡು ವರ್ಷವಾಗುತ್ತ ಬಂದಿದೆ. ಈ ಎರಡು ವರ್ಷಗಳಲ್ಲಿ ಮೋಕ್ಷಾ ಅಭಿನಯಿಸಿರುವ ಅಯನ, ಆದಿಪುರಾಣ ಚಿತ್ರಗಳು ರಿಲೀಸ್‌ ಆಗಿವೆ. ಇನ್ನೊಂದು ಚಿತ್ರ ನವರತ್ನ ಇದೇ ತಿಂಗಳ ಕೊನೆಗೆ ತೆರೆಗೆ ಬರುತ್ತಿದೆ. ಇದರ ನಡುವೆ ಇನ್ನೂ ಎರಡು ಹೊಸಚಿತ್ರಗಳಲ್ಲಿ ಮೋಕ್ಷಾ ಕುಶಾಲ್‌ ಹೆಸರು ಕೇಳಿಬರುತ್ತಿದ್ದು, ಆ ಚಿತ್ರಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಮದುವೆಗೂ ಮುನ್ನ ಅಪ್ಪನಾಗುತ್ತಿರುವ ಹಾರ್ದಿಕ್‌ ಪಾಂಡ್ಯಾ  

ಮದುವೆಗೂ ಮುನ್ನ ಅಪ್ಪನಾಗುತ್ತಿರುವ ಹಾರ್ದಿಕ್‌ ಪಾಂಡ್ಯ

suresh-kumar

ಮಕ್ಕಳ ಸುರಕ್ಷತೆ, ಆತ್ಮವಿಶ್ವಾಸಕ್ಕೆ  ಮೊದಲ ಆದ್ಯತೆ: ಸುರೇಶ್‌ ಕುಮಾರ್‌

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ಪುತ್ರನ ಚಿತ್ರಕ್ಕೆ ರವಿಚಂದ್ರನ್ ಆ್ಯಕ್ಷನ್-ಕಟ್..! 

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಒಲಿಂಪಿಕ್‌ ತ್ರಿವಳಿ ಸ್ವರ್ಣ ವಿಜೇತ ಬಾಬಿ ಜೋ ಮೋರೊ ನಿಧನ

ಒಲಿಂಪಿಕ್‌ ತ್ರಿವಳಿ ಸ್ವರ್ಣ ವಿಜೇತ ಬಾಬಿ ಜೋ ಮೋರೊ ನಿಧನ

ಮದುವೆಗೂ ಮುನ್ನ ಅಪ್ಪನಾಗುತ್ತಿರುವ ಹಾರ್ದಿಕ್‌ ಪಾಂಡ್ಯಾ  

ಮದುವೆಗೂ ಮುನ್ನ ಅಪ್ಪನಾಗುತ್ತಿರುವ ಹಾರ್ದಿಕ್‌ ಪಾಂಡ್ಯ

suresh-kumar

ಮಕ್ಕಳ ಸುರಕ್ಷತೆ, ಆತ್ಮವಿಶ್ವಾಸಕ್ಕೆ  ಮೊದಲ ಆದ್ಯತೆ: ಸುರೇಶ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.