ಸೋನುವಿನ ನಿರಂತರ ಸಿನಿಯಾನ


Team Udayavani, Oct 21, 2018, 6:00 AM IST

1.jpg

ದುನಿಯಾ ಸೂರಿ ನಿರ್ದೇಶನದ ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಲುವೆ ನಟಿ ಸೋನು ಮೊದಲ ಚಿತ್ರದಲ್ಲೇ ತನ್ನ ಅಭಿನಯದ ಮೂಲದ ಗಮನ ಸೆಳೆದ ಚೆಲುವೆ. ಮೊದಲ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣದೇ ಹೋದರೂ ಸೋನು ಅಭಿನಯದ ಬಗ್ಗೆ ಚಿತ್ರರಂಗದಿಂದ, ಪ್ರೇಕ್ಷಕ ವರ್ಗದಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಸೋನು ಗೌಡ ಕನ್ನಡ ಚಿತ್ರರಂಗದಲ್ಲಿ ಇನ್ನೇನು ಬೇಡಿಕೆಯ ನಟಿಯಾಗುತ್ತಾರೆ ಎಂದು ಹಲವರು ಭಾವಿಸಿದ್ದರೂ, ಅದೇಕೊ ನಿರೀಕ್ಷೆ ಯಂತೆ ಅವಕಾಶಗಳು, ಸಿನಿಮಾಗಳು ಈ ನಟಿಗೆ ಸಿಗಲಿಲ್ಲ. ಹಾಗಂತ ಸೋನು ಸುಮ್ಮನೆ ಕೂರಲಿಲ್ಲ. ತಮಗೆ ಇಷ್ಟವಾದ ಸಿನಿಮಾಗಳನ್ನು ಮಾಡುತ್ತ ಬಿಝಿಯಾಗುತ್ತಲೇ ಹೋದರು. ಈ ವರ್ಷ ತೆರೆಗೆ ಬಂದ ಗುಳ್ಟು ಮತ್ತು ಕಾನೂರಾಯಣ ಎರಡೂ ಚಿತ್ರಗಳಲ್ಲೂ ಸೋನು ಅವರ ಪ್ರತಿಭಾ ಪ್ರದರ್ಶನಕ್ಕೆ ಸಾಕಷ್ಟು ಅವಕಾಶವಿದ್ದರಿಂದ, ಸೋನು ಎರಡೂ ಚಿತ್ರಗಳಲ್ಲೂ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಈ ಎರಡೂ ಚಿತ್ರಗಳೂ ಪ್ರೇಕ್ಷಕರು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡವು. ಸೋನು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಅದಾದ ಬಳಿಕ ಸೋನುವಿಗೆ ಕನ್ನಡದಲ್ಲಿ ಒಂದರ ಹಿಂದೊಂದು ಚಿತ್ರಗಳು ಸಿಗುತ್ತಿವೆ. 

ಸದ್ಯ ಸೋನು ಗೌಡ ಮತ್ತು ನಟ ದಿಗಂತ್‌ ಜೋಡಿಯಾಗಿ ಅಭಿನಯಿಸಿರುವ ಫಾರ್ಚೂನರ್‌ ಚಿತ್ರ ಪ್ರಮೋಷನ್‌ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ತಯಾರಿಯಲ್ಲಿದೆ. ಇನ್ನು ಸೋನು ಅಭಿನಯಿಸುತ್ತಿರುವ ಶಾಲಿನಿ ಐಪಿಎಸ್‌, ನೀನಾಸಂ ಸತೀಶ್‌ ಜೊತೆ ಚಂಬಲ್‌, ಉಪೇಂದ್ರ ಅವರೊಂದಿಗಿನ ಐ ಲವ್‌ ಯು ಚಿತ್ರಗಳು ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿವೆ. ಅಲ್ಲದೆ ಸೋನು ಗೌಡ ಅಭಿನಯಿಸಿರುವ ತಮಿಳಿನ ಎಂಗಾ ಕಾಟ್ಟುಲ ಮಾಝೈ ಆಲ್ಲುಕ್ಕು ಪಾತಿ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಇವುಗಳ ನಡುವೆ ಕಾಲೇಜ್‌, ರೆಡ್‌, ರಾಮನ ಸವಾರಿ  ಸೇರಿದಂತೆ  ಇನ್ನೂ ಹೆಸರು ಅಂತಿಮಗೊಳ್ಳದ ಎರಡು-ಮೂರು ಚಿತ್ರಗಳಲ್ಲೂ  ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಹತ್ತು ವರ್ಷಗಳ ಸಿನಿಯಾನದ ಹಾದಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಸೋನು ಗೌಡ ಸಿಕ್ಕ ಪಾತ್ರಗಳಲ್ಲಿ ತಮ್ಮ ಟ್ಯಾಲೆಂಟ್‌ ತೋರಿಸಿದ್ದಾರೆ. 

ಸೋನು ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ನಟಿಸಿದ್ದಾರೆ. ಮಲಯಾಳ ಮತ್ತು ತಮಿಳು ಚಿತ್ರರಂಗಗಳತ್ತ ಮುಖ ಮಾಡಿದ್ದ ಸೋನು ಮುಮ್ಮುಟ್ಟಿ ಅಭಿನಯದ ಬೆಸ್ಟ್‌ ಆ್ಯಕ್ಟರ್‌ ಡಬ್ಬಲ್ಸ್‌, ಒನ್‌ ಬೈ ಟು ಮತ್ತು ತಮಿಳಿನ  ಆನಮೈ ತಾವರೈಲ್‌ ಅಮರ, ನರತನ್‌, ಕಾವಾಲೈ ವೇಂದಂ ಹೀಗೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.