ನೀಲಿಯಾಗಿರುವುದೆಲ್ಲ ಆಕಾಶವಲ್ಲ !


Team Udayavani, Jan 1, 2017, 3:45 AM IST

Boluvaru-11.jpg

ಕಾಲ ನಿಲ್ಲುವುದಿಲ್ಲ
ಹರಿವ ನದಿಯ ಎರಡು ಕಡೆಗಳಲ್ಲಿ ಒಡ್ಡು ಕಟ್ಟಿ , ನಡುವೆ ನಿರ್ಮಿಸಿದ ಸರೋವರದಂತೆ ಈ ಸಂವತ್ಸರ. ಹರಿವ ನೀರನ್ನೇ ಆಗಲಿ, ಹರಿವ ಕಾಲವನ್ನೇ ಆಗಲಿ, ಖಂಡಗಳಲ್ಲಿ ಕಟ್ಟಿಡಲು ಸಾಧ್ಯವೆ? ಮಾನಗಳಲ್ಲಿ ಅಳೆಯಲು ಸಾಧ್ಯವೆ? ಆದರೆ ಸಾಧ್ಯವೆಂದು ಭ್ರಮಿಸುತ್ತೇವೆ ಮತ್ತು ಸಂ-ಭ್ರಮಿಸುತ್ತೇವೆ. ಹೊಸ ವರ್ಷ ಹೊಸ ಹೊಸ ಸಂ-ಭ್ರಮಗಳಿಗೆ ಕಾರಣವಾಗಲಿ. 

ಸಕ್ಕರೆಯ ಬೆಲೆ ಆರಾಣೆಯಿಂದ ಹತ್ತಾಣೆಗೇರಿದಾಗ, ಪ್ಲೆಕಾರ್ಡ್‌ ಹಿಡಿದುಕೊಂಡು “ಇಳಿಸಲೇಬೇಕು ಬೇಕು, ಸಕ್ಕರೆ ಬೆಲೆ ಇಳಿಯಲೇಬೇಕು’ ಅನ್ನುತ್ತ ಕೆಂಪು ಬಾವುಟದವರು ಮೆರವಣಿಸುತ್ತಿದ್ದ ಬಾಲ್ಯದ ದಿನಗಳು ಅವು. 20 ಗಿ 18ರ ನಮ್ಮ ಮನೆಗೆ ಕಾಣಿಸುವಂತಿದ್ದ ಮನೆಯೊಂದರ ಜಗಲೀಕಟ್ಟೆಯಲ್ಲಿ ಆರಾಮವಾಗಿ ಕುಳಿತು, ಪ್ರತಿ ಮುಂಜಾನೆ ಕಾಫಿಗೆ ಸಕ್ಕರೆ ಕಲಸುತ್ತ¤, “ಸ್ವರ್ಗಲೋಕದಲ್ಲಿರುವ ತಂದೆಗೆ’ ಕೃತಜ್ಞತೆ ಸಲ್ಲಿಸುತ್ತಿದ್ದ ಚೆಂದದ ಕುಟುಂಬವೊಂದಿತ್ತು. ಪ್ರತಿ ಕ್ರಿಸ್‌ಮಸ್‌ ಹಬ್ಬದಂದು ಹಾಲು ಬೆಳ್ಳಗಿನ ಪಿಂಗಾಣಿಯ ಪಾತ್ರೆಯಲ್ಲಿ ಮಣ್ಣಿಯಂಥ ಒಂದು ಬಗೆಯ ಸಿಹಿಯನ್ನು ನಮ್ಮ ಮನೆಗೆ ಅವರು ಕಳುಹಿಸಿಕೊಡುತ್ತಿದ್ದುದರಿಂದ, ನನ್ನ ಬಾಲ್ಯಕ್ಕೆ ಕ್ರಿಸ್‌ಮಸ್‌ ಸಿಹಿ ನೆನಪುಗಳುಂಟು. ಆದರೆ, ಹೊಸವರ್ಷದ ದಾಖಲೆಗಳಿಲ್ಲ.  “ಜನವರಿ 1′ ಎಂಬುದು ನನ್ನ ಜೀವನದಲ್ಲಿ ಹೊಸ ವರ್ಷವಾಗಲಾರಂಭಿಸಿದ್ದು, ನಾನು ಉದ್ಯೋಗ ಮಾಡುತ್ತಿದ್ದ ಬ್ಯಾಂಕಿನ ಪ್ರಚಾರ ವಿಭಾಗದಲ್ಲಿ ಪ್ರತಿವರ್ಷವೂ ಹೊಸ ಕ್ಯಾಲೆಂಡರ್‌ ಮುದ್ರಣದ ಹಾಗೂ ಬ್ಯಾಂಕು ವರಿಷ್ಠರುಗಳ ಹೆಸರಲ್ಲಿ ಆಯ್ದ ಬಹುಮಾನ್ಯ ಗ್ರಾಹಕದೇವರುಗಳಿಗೆ “ಶುಭಾಶಯ ಕಾರ್ಡ್‌’ಗಳನ್ನು ರೂಪಿಸಿ ರವಾನಿಸುವ ಜವಾಬ್ದಾರಿಗಳನ್ನು ಹೊತ್ತ ಬಳಿಕವೇ. 

“ಭಾರತಭಾಗ್ಯವಿಧಾತ’ರಿಂದ ನಮಗೆ ಬಳುವಳಿಯಾಗಿ ಬಂದಿರುವ, ಈ ವಾರ್ಷಿಕ ಮಾಲು ನಮ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ ಎಂದು ವಾದಿಸುತ್ತಲೇ 

ಪ್ರತಿವರ್ಷವೂ ಕೋಟಿಗಟ್ಟಲೆ “ಜನವರಿ ಪತ್ರ’ಗಳನ್ನು ಖರೀದಿಸಿ ಸಹಿ ಹಾಕಿ ಅಭ್ಯಾಸವಾಗಿರುವವರು ನಾವು.  ಪ್ರೀತಿ-ಪ್ರೇಮಗಳನ್ನೂ ಮಾರುಕಟ್ಟೆಯ ವಸ್ತುವನ್ನಾಗಿ ಮುದ್ರಿಸಿ, ಬಿಕರಿಗಿಡುತ್ತಿರುವ ಜುಗಾರಿಕೋರರ ಆಟದ ಬಿಲ್ಲೆಗಳಾಗಿಬಿಟ್ಟವರು ನಾವು. ಆದ್ದರಿಂದಲೇ, ನಮ್ಮ ಸಂಸ್ಕೃತಿಗೆ ಸಲ್ಲುವ, “ಮೇಕ್‌ ಇನ್‌ ಕಾರ್ಡ್‌’ಗಳಿಗೆ ಇದುವರೆಗೂ ಆಕರ್ಷಕ ಮಾರುಕಟ್ಟೆ ಸೃಷ್ಟಿಯಾಗಿಲ್ಲ. ಇನ್ನು ಮುಂದೆ ಆಗುವ ಲಕ್ಷಣಗಳೂ ಇಲ್ಲ. ಇನ್ನೈವತ್ತು ದಿನಗಳಲ್ಲಿ ನಮ್ಮೆಲ್ಲರ ಬದುಕು “ಡಿಜಿಟಲೈಜ್‌’ ಆಗಲಿರುವುದರಿಂದ, ಮುಂದಿನ ದಿನಗಳಲ್ಲಿ ನಮಗೆ ಸ್ವದೇಶೀ ಯಾ ವಿದೇಶೀ ಮುದ್ರಿತ ಕಾರ್ಡ್‌ಗಳ ಅಗತ್ಯವೂ ಇಲ್ಲ. ಇನ್ನು ಮುಂದೆ ಎಲ್ಲವೂ ಬೆರಳ ತುದಿಯ ಬದುಕು. ಬದುಕಿ ಉಳಿದರೆ, ಮುಂದಿನ ಪ್ರತಿಯೊಂದು ಜನವರಿ ಎರಡನೆಯ ತಾರೀಕಿನ ದಿನಪತ್ರಿಕೆಗಳಲ್ಲಿ ವರದಿಯಾಗುವ ರಸ್ತೆ ಅಫ‌ಘಾತಗಳ ಸಂಖ್ಯೆಯನ್ನಾಧರಿಸಿ, ಹೊಸ ವರ್ಷಾಚರಣೆಯ ಸಂಭ್ರಮವನ್ನು ಅಳೆಯುವ ನಮ್ಮ ಹಳೆಯ ಚಾಳಿಯನ್ನು ಮುಂದುವರಿಸಬಹುದು. ಅಥವಾ ಅರುವತ್ತು-ಅರುವತ್ತೈದು ವರ್ಷಗಳಾಚೆಗಿನ ಬದುಕಲ್ಲಿ ಬೆಳಗಾಗುವ ಪ್ರತಿದಿನವನ್ನೂ ಹೊಸದೆಂದು ಆಚರಿಸಿ ಸಂಭ್ರಮಿಸುತ್ತಿರಬಹುದು. 
 
ಇಲ್ಲಿ ಕೊಟ್ಟಿರುವುದು- “ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ…’ ಎನ್ನುವ ವಿಶ್ವಮಾನವನ ಮಾತುಗಳನ್ನೇ ಸುಳ್ಳು ಮಾಡುತ್ತಿರುವ ಹೋಟೆಲೊಂದರ ಒಳಾಂಗಣ ದೃಶ್ಯ. ಚಿತ್ರದ ನೆತ್ತಿಯ ಮೇಲೆ ನೀಲವರ್ಣದಲ್ಲಿ ಕಾಣಿಸುತ್ತಿರುವುದು, “ದೇವರದಯೆ’ಯಾದ ಆಕಾಶವಲ್ಲ ,  ಹೋಟೆಲು ಯಜಮಾನರ ಕೃಪೆಯಿಂದ ನಿರ್ಮಾಣಗೊಂಡ ಮೈಲು ಮೀರುವ ಕೃತಕ ಹೊದಿಕೆ. ನೀಲಿಯಾಗಿರುವುದೆಲ್ಲವೂ ಆಕಾಶವಲ್ಲ ಎಂಬ ಎಚ್ಚರಿಕೆಯ ಸೂಚನೆ ಇದು. ಐದು ವರ್ಷಗಳ ಹಿಂದೊಮ್ಮೆ ನಾನು ಹೊಸ ವರ್ಷ ಆಚರಿಸಿದ್ದು,  ಅಮೆರಿಕದ ಲಾಸ್‌ವೇಗಸ್‌ನಲ್ಲಿರುವ ಭೂಮಂಡಲದ ಮಹಾ”ಜುಗಾರಿ’ಕೋರರ  ಈ “ಅಡ್ಡ’ದಲ್ಲಿ. 

– ಬೊಳುವಾರು ಮಹಮದ್‌ ಕುಂಞಿ

ಟಾಪ್ ನ್ಯೂಸ್

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

cm-b-bommai

ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ನಿರ್ಬಂಧ: ಸಿಎಂ ಬೊಮ್ಮಾಯಿ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

shivaraj-kumar

ಪುನೀತ್ ಡ್ರೀಮ್ ಪ್ರಾಜೆಕ್ಟ್ ಟೀಸರ್ ಬಿಡುಗಡೆಗೆ ಸಿಎಂಗೆ ಆಹ್ವಾನ ನೀಡಿದ ಶಿವಣ್ಣ

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

10bjp

ಬಿಜೆಪಿಗೆ ಪಾಠ ಕಲಿಸಿ: ಡಾ| ಅಜಯಸಿಂಗ್‌

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

10kannada

ಕನ್ನಡ-ತಮಿಳು ಪರಸ್ಪರ ಆಪ್ತ ಸಂಬಂಧ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.