ಅಪ್ಸರಾ


Team Udayavani, Dec 10, 2017, 7:30 AM IST

apsara.jpg

ಅಪ್ಸರಾ ಆಲೀ…
ಪಕ್ಯಾನ ದೃಷ್ಟಿ ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೈವೇಯ ಬಲಬದಿಗೆ ಉದ್ದಕ್ಕೂ ಒತ್ತೂತ್ತಾಗಿ ಹಬ್ಬಿದ್ದ ಆ ಚಾಲ್‌ಗ‌ಳ ಮೇಲೆ ನೆಟ್ಟಿತ್ತು. ಅಲ್ಲಿರುವ ನೂರಾರು ಖೋಲಿಗಳÇÉೊಂದರಲ್ಲಿ ಅವಳು ವಾಸ ಮಾಡುತ್ತಾಳೆ ಎನ್ನುವುದಷ್ಟೆ ಗೊತ್ತು ಅವನಿಗೆ. ಅದಕ್ಕಿಂತ ಹೆಚ್ಚು ತಿಳಿದುಕೊಳ್ಳುವ ಆವಶ್ಯಕತೆ ಯಾವತ್ತೂ ಪಕ್ಯಾನಿಗೆ ಉಂಟಾಗಿರಲಿಲ್ಲ. ಅವಳು ಎÇÉೇ ಇದ್ದರೂ ಸಾಧ್ಯವಾದಾಗಲೆಲ್ಲ ತನ್ನನ್ನು ಭೇಟಿಯಾಗುವುದು ಮಾತ್ರ ಇಲ್ಲಿಯೇ. ಇದೇ ಸಿಗ್ನಲ್‌ ಬಳಿ. ಬಸ್‌, ಅಷ್ಟು ಸಾಕು. ಖೂಬ್‌ ಝಾಲಾ. ಸಂಜೆ ಕೆಲಸಬಿಟ್ಟ ಮೇಲೆ ಅವಳು ಬರುವುದನ್ನು ಕಾಯುವುದು ಅವನ ದಿನನಿತ್ಯದ ಕಾಯಕ. ಅವಳು ಕಾಣಸಿಕ್ಕರೆ ಆ ದಿನ ವಸೂಲಾದ ಹಾಗೆ. ಎಂದಿಗಿಂತ ಸ್ವಲ್ಪ ಮುಂಚೆಯೇ ಬಂದು ಹೈವೇಯ ಎಡಪಕ್ಕದಲ್ಲಿ ಕೆಟ್ಟು ನಿಂತಿದ್ದ ಕಾರಿಗೆ ಒರಗಿ ಅವಳನ್ನು ಕಾಯುತ್ತಿದ್ದ ಪಕ್ಯಾ ಇಂದು ತುಸು ಅಸ್ವಸ್ಥನಾಗಿದ್ದ. ಮತ್ತೂಮ್ಮೆ ಕತ್ತು ಚಾಚಿ ದೂರದಲ್ಲಿದ್ದ ಸಾಲು ಸಾಲು ಚಾಲ್‌ಗ‌ಳತ್ತ ಕಣ್ಣು ಹಾಯಿಸಿದ. 

“ಇಚ್ಯಾ ಆಯಿಲಾ…’ ಎನ್ನುತ್ತ , ನೆಟ್ಟಗೆ ನಿಂತು ಸೆಟೆದಿದ್ದ ಎಡಗಾಲನ್ನು ಒಂದೆರಡು ಬಾರಿ ಝಾಡಿಸಿ ಬಲಗಾಲಿಗೆ ತನ್ನ ಭಾರವನ್ನು ಸ್ಥಾನಾಂತರಿಸಿದ. ಒಂದೇ ಕಡೆ ಚಾಚಿ ನೋಯುತ್ತಿದ್ದ ಕತ್ತನ್ನು ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿಸಿ ಸಡಿಲಿಸಿದ. ಕಳೆದರ್ಧ ಗಂಟೆಯಲ್ಲಿ ಆತ ಈ ತರಹದ ವ್ಯಾಯಾಮವನ್ನು ಲೆಕ್ಕವಿಲ್ಲದಷ್ಟು ಸಲ ಮಾಡಿಯಾಗಿತ್ತು. ತಲೆಕೂದಲ ಮೇಲೆ ಕೈಯಾಡಿಸಿ ಸರಿಯಾಗಿದೆ ಎನ್ನುವುದನ್ನು ಖಚಿತ ಪಡಿಸಿದ. ಮೊಬೈಲ್‌ನಲ್ಲಿ ತನ್ನ ಮುಖವನ್ನು ಒಮ್ಮೆ ಇಣುಕಿ ನೋಡಿ ಒಣಗಿದ ತುಟಿಗಳನ್ನು ನಾಲಿಗೆಯಿಂದ ತೇವಗೊಳಿಸಿ ಬಾಡಿದ ಮೊಗದಲ್ಲಿ ನಗು ಮೂಡಿಸುವ ಪ್ರಯತ್ನವನ್ನೂ ನಡೆಸಿ ಸೋತ. ಕ್ಷಣಗಳು ಉರುಳಿದಂತೆ ಅವನ ಕಂಗಳಲ್ಲಿದ್ದ ನಿರಾಶೆಯ ಛಾಯೆ ಮೆಲ್ಲಮೆಲ್ಲನೆ ದಟ್ಟವಾಗುತ್ತಾ ಬರುತ್ತಿತ್ತು. “”ಛೆ… ಇನ್ನೂ ಪತ್ತೆಯಿಲ್ಲ ಅವಳದ್ದು. ಬರುತ್ತಾಳ್ಳೋ ಇಲ್ಲವೋ…” ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೈವೇ ಮೇಲಿನ ಟ್ರಾಫಿಕ್‌ ಕೂಡ ಹೆಚ್ಚುತ್ತಾ ಬಂದದ್ದು ಗಮನಕ್ಕೆ ಬಂದ ಪಕ್ಯಾ ತನ್ನ ಮೊಬೈಲ್‌ ಚೆಕ್‌ ಮಾಡಿದ.

“”ಅರೆ… ಆಗಲೇ ಗಂಟೆ ಐದಾಗುತ್ತ ಬಂತು. ಇನ್ನು ಸ್ವಲ್ಪ ಹೊತ್ತಿನಲ್ಲಿ ತಾನು ಹೊರಡಲೇ ಬೇಕು. ಸಾಂತಾಕ್ರೂಝ್ ಸ್ಟೇಷನ್‌ ತನಕ ಬೇಗ ಬೇಗ ನಡೆದು, ಸಿಕ್ಕ ಟ್ರೇನ್‌ನಲ್ಲಿ ತೂರಿ, ಅಂಧೇರಿಗೆ ತಲುಪಿದರೆ, ಅಲ್ಲಿಂದ ಪ್ರಾರಂಭವಾಗುವ 5.47ರ ವಿರಾರ್‌ ಲೋಕಲ್‌ ಸಿಗಬಹುದು. ಆದರೆ, ಅವಳನ್ನು ನೋಡದೆ ಹೋಗುವುದೆಂತು? ಮನೆಯಲ್ಲಿ ಅಣ್ಣ ಬೇರೆ ಕಾಯುತ್ತಿ¨ªಾರೆ. ಅವರನ್ನು ಎದುರಿಸುವ ಮುನ್ನ ಅವಳೊಡನೆ ಮಾತನಾಡಲೇ ಬೇಕು. ಛೆ… ಎಂದೂ ಬಾರದ ಅವರೂ ಕೂಡ ಇವತ್ತೇ ಬರಬೇಕೇ. ಬೆಳ್ಳಂಬೆಳಗಿನ ಎಸ್‌.ಟಿ.ಯಲ್ಲಿ ಹೇಳದೆ ಕೇಳದೆ ಊರಿನಿಂದ ಹೊರಟು ಬಂದು ಬಿಟ್ಟಿ¨ªಾರೆ. ಛೆ… ತಾನು ಬಯಸುವುದು ಒಂದಾದರೆ, ಅಣ್ಣನ ರೂಪದಲ್ಲಿ ವಿಧಿ ಸಾಧಿಸ ಹೊರಟಿರುವುದು ಬೇರೆಯೇ”.
ಪ್ರಕಾಶ್‌ ಬಾಬುರಾವ್‌ ಜಗತಾಪ್‌ನನ್ನು ಸಣ್ಣಂದಿನಿಂದಲೂ ತಂದೆಯಿಂದ ಪ್ರಾರಂಭಿಸಿ ಇಂದಿನವರೆಗೆ ಯಾರೂ ಪೂರ್ಣ ಹೆಸರಿನಿಂದ ಕರೆಯಲೇ ಇಲ್ಲ. ಯಾರಾದರೂ ಪ್ರಕಾಶ್‌ ಎಂದು ಕರೆದರೆ ಪಕ್ಯಾನಿಗೆ ಕೂಡ ತನ್ನನ್ನೆ ಕರೆಯುವುದೆಂದು ತಿಳಿಯಲು ಸಮಯ ತಾಗುತ್ತಿತ್ತು. ಸದ್ಯ ಸಾಂತಾಕ್ರೂಝ್ ಪೂರ್ವದಲ್ಲಿರುವ ವಿಚಾರೆ ಕೊರಿಯರ್‌ನ ಶಾಖೆಯಲ್ಲಿ ಕೆಲಸಕ್ಕೆ ಸೇರಿ ಪಕ್ಯಾನಿಗೆ ಒಂದೂವರೆ ವರ್ಷವಾಗುತ್ತಾ ಬಂದಿದೆ. ಎಡಕಾಲು ಬಲಗಾಲಿಗಿಂತ ಉದ್ದವಾಗಿದ್ದ ಕಾರಣ ಕುಂಟುತ್ತ ನಡೆಯುವ ಪಕ್ಯಾನಿಗೆ ಈ ಕೆಲಸ ಸಿಕ್ಕಿದ್ದು ಭಾಗ್ಯವೇ ಸರಿ. ಕಾಲಿನ ಊನದ ಕಾರಣ ಪ್ರತಿ ಹೆಜ್ಜೆ ಎತ್ತಿ ಇಡುವಾಗ ನೋಡುವವರಿಗೆ ಆತನ ಇಡಿಯ ಶರೀರವು ಜೋಲಿ ಹೊಡೆದಂತಾಗಿ ಇನ್ನೇನು ಬಿದ್ದೇ ಬಿಡುತ್ತಾನೆ ಎನ್ನುವ ಭಾಸವಾಗದೆ ಇರದು. ಇದರಿಂದಾಗಿ ಬಾಲ್ಯದಿಂದಲೂ ಊರಲ್ಲಿ ಜನರ ನಗೆಪಾಟಲಿಗೆ ಗುರಿಯಾಗಿ ಅಭ್ಯಾಸವಾಗಿತ್ತು. ಆದರೆ ಮುಂಬಯಿಗೆ ಬಂದಾಗಿಂದ ಅವನಿಗೆ ನಿರಾಳವೆನಿಸಿತ್ತು. ಇಲ್ಲಿ ಜನರಿಗೆ ಅವನನ್ನು ಗಮನಿಸುವಷ್ಟು ವ್ಯವಧಾನವೇ ಇರಲಿಲ್ಲ. ಪಕ್ಯಾ ಆಫೀಸಿಗೆ ದಿನಾ ಎಲ್ಲರಿಗಿಂತ ಬೇಗ ಬರುತ್ತಿದ್ದ. ಕಾರಣ ಮನೆಯಿಂದ ಬೇಗ ಹೊರಟರೆ ಟ್ರೇನಿನಲ್ಲಿ ಹತ್ತಲಿಕ್ಕೆ ಸಾಧ್ಯವಾಗುತ್ತದೆ ಎಂದು. ವಿಕಲಾಂಗರಿಗಾಗಿಯೇ ಕಾದಿರಿಸಲಾಗಿದ್ದ ವಿಶೇಷ ಡಬ್ಬಿಯಲ್ಲಿಯೇ ಪ್ರಯಾಣಿಸುತ್ತಿದ್ದರೂ  ರೈಲಿನಲ್ಲಿ ಹತ್ತುವಾಗ ಇಳಿಯುವಾಗ ಸ್ವಲ್ಪ ಗಡಬಡಿಸಿದಂತಾಗುತ್ತಿತ್ತು. ಈಗಂತೂ ಅಭ್ಯಾಸವಾಗಿದೆ. ಒಮ್ಮೆ ಆಫೀಸಿಗೆ ಬಂದು ಮುಟ್ಟಿದನೆಂದರೆ ಅವನ ಕೆಲಸಕ್ಕೆ ಪ್ರಾರಂಭ. ಟೇಬಲ್‌ ಮೇಲೆ ರಾಶಿರಾಶಿ ಬಿದ್ದಿರುವ ಬಟವಾಡೆ ಮಾಡಲಿರುವ ಪತ್ರಗಳನ್ನು ವಿಳಾಸಕ್ಕೆ ತಕ್ಕಂತೆ ನೀಟಾಗಿ ಫ‌ಟಾಫ‌ಟ್‌ ವಿಂಗಡಿಸಿಡುವುದು; ಬಂದ ಗಿರಾಕಿಗಳ ಪತ್ರಗಳನ್ನು ಅಥವಾ ಪಾರ್ಸೆಲ್‌ಗ‌ಳನ್ನು ಸರಿಯಾಗಿ ತೂಕ ಮಾಡಿ ಹಣ ಪಡೆದು ರಸೀದಿ ಬರೆಯುವುದು ಮುಂತಾದ ಕೆಲಸಗಳನ್ನು ಬಹುಬೇಗ ಕಲಿತುಕೊಂಡಿದ್ದ. ನಗುಮುಖದಿಂದ ಒಂದು ಚೂರೂ ಗೊಣಗದೆ ಕೆಲಸ ಮಾಡುವ ಪಕ್ಯಾ ಎಂದರೆ ಬಾಸ್‌ಗೆ ಬಹಳ ಇಷ್ಟ. 

ಪಕ್ಯಾನಿಗೆ ತನ್ನ ಕೆಲಸಕ್ಕಿಂತ ಕೆಲಸ ಮಾಡುವ ಸ್ಥಳ ಬಹಳ ಹಿಡಿಸಿತ್ತು. ಯಾಕೆಂದರೆ ಇಲ್ಲಿ ಕೆಲಸಕ್ಕೆ ಸೇರಿದ ವಾರದಲ್ಲಿಯೇ ಅವಳ ಪರಿಚಯವಾಗಿ ಅವನ ಕನಸುಗಳಿಗೆ ರೆಕ್ಕೆ ಮೂಡಿತ್ತು. ಅಂದು ಸಂಜೆ ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೈವೇಯನ್ನು ದಾಟಲು ಹಿಂಜರಿಯುತ್ತಾ ಮೀನಮೇಷ ಎಣಿಸುತ್ತಾ ನಿಂತಿದ್ದ ಆತನ ಕೈಯನ್ನು ಎಲ್ಲಿಂದಲೋ ಬಂದ ಅವಳು ನಯವಾಗಿ ಹಿಡಿದು ಸಿಗ್ನಲ್‌ಗಾಗಿ ನಿಂತಿದ್ದ ವಾಹನಗಳ ನಡುವೆ ನಾಜೂಕಾಗಿ ನುಸುಳುತ್ತಾ ಮತ್ತೂಂದು ಬದಿಗೆ ತಲುಪಿಸಿ ಹಿಡಿದಷ್ಟೆ ಅಚಾನಕಾಗಿ ಕೈಬಿಟ್ಟು “ಬಾಯ್‌’ ಎಂದು ಮುಗುಳ್ನಕ್ಕು ವಾಹನಗಳ ನಡುವೆ ಮಾಯವಾಗಿದ್ದಳು.

ಪಕ್ಯಾ ಎಷ್ಟೋ ಹೊತ್ತು ಕಲ್ಲಿನಂತೆ ನಿಂತÇÉೆ ನಿಂತಿದ್ದ. ಅವಳ ಕೈಗಳ ಮೃದುತ್ವ, ಮೈಯಿಂದ ಹೊರಹೊಮ್ಮುತ್ತಿದ್ದ ಸುಮಧುರ ಸುಗಂಧ, ಒತ್ತೂತ್ತಾಗಿ ವಾಹನಗಳ ಪಕ್ಕದಿಂದ ನಡೆವಾಗ ಅವನನ್ನು ಸವರುತ್ತಿದ್ದ ಅವಳ ನಯವಾದ ಸೀರೆಯ ನವಿರಾದ ಸ್ಪರ್ಶ, ಪಕ್ಯಾನನ್ನು ಸ್ವರ್ಗಕ್ಕೆ ತಲುಪಿಸಿ ಬಿಟ್ಟಿತ್ತು. ಹಸಿರು ಸಿಗ್ನಲ್‌ ನೋಡಿ ತಾಮುಂದೆ ತಾಮುಂದೆ ಎಂದು ನುಗ್ಗಲಾರಂಭಿಸಿದ ವಾಹನಗಳ ಹಾರ್ನ್ನ ಶಬ್ದಕ್ಕೆ ಎಚ್ಚೆತ್ತ ಪಕ್ಯಾನ ಮನಸ್ಸನ್ನು ಆ ಒಂದೇ ಕ್ಷಣದಲ್ಲಿ ಆವರಿಸಿ ಬಿಟ್ಟಿದ್ದಳು  ಅವಳು! ಆ ದಿನ ಮಲಗಿದಾಗ ನಿ¨ªೆಯೇ ಅವನ ಬಳಿ ಸುಳಿಯಲಿಲ್ಲ. ಮುಂಜಾನೆಯ ಜಾವಕ್ಕೆ ಸ್ವಲ್ಪ ಮಲಗಿದರೂ ಕನಸಿನÇÉೆÇÉಾ ಅವಳೇ. ಆ ಅಪ್ಸರೆ! ಅಂದಿನಿಂದ ದಿನಾ ಅವಳ ದರ್ಶನಕ್ಕಾಗಿ ಹಾತೊರೆಯುವ ಪಕ್ಯಾ, ಅವಳನ್ನು ದೂರದಲ್ಲಿಯೇ ನಿಂತು ಗಮನಿಸುತ್ತಿದ್ದ. ಒಮ್ಮೊಮ್ಮೆ ಆತನನ್ನು ನೋಡಿ ಕೈಬೀಸಿದರೆ, ಕೆಲವೊಮ್ಮೆ ನಸುನಗೆಯನ್ನು ಸೂಸುತ್ತಿದ್ದಳು. ನಿಧಾನಕ್ಕೆ ಅವರ ಪರಿಚಯ ಬೆಳೆಯಿತು. ಅವನು ಕೆಲಸದಿಂದ ಹೊರಡುವುದು ಹಾಗೂ ಅವಳು ತನ್ನ ಕೆಲಸಕ್ಕೆ ಹೋಗುವುದು ಒಂದೇ ವೇಳೆಯಾದ ಕಾರಣ ಅವರ ಭೇಟಿಯೂ ಮೆಲ್ಲನೆ ಮಾಮೂಲಾಗುತ್ತ ಬಂದಿತ್ತು.  ಅವಳ ಭೇಟಿಯ ನಿಮಿತ್ತ ಪಕ್ಯಾ ಒಂದೇ ಒಂದು ದಿನ ರಜೆಯನ್ನೂ ಹಾಕಿರಲಿಲ್ಲ. ಪಕ್ಯಾ ಖುಷ್‌! ಅವನ ಬಾಸ್‌ ಕೂಡ ಖುಷ್‌!

ಕ್ಷೇಮ-ಕುಶಲ, ಸಿನೆಮಾ, ಟ್ರೇನು, ಟ್ರಾಫಿಕ್ಕಿನಲ್ಲಿ ಸಾಗುತ್ತಿರುವ ಕಾರಿನ ವೇಗ, ಬಣ್ಣ…. ಹೀಗೆ ಯಾವುದಾದರೂ ವಿಷಯ ಒಂದೆರಡು ನಿಮಿಷ ಮಾತನಾಡಿ ಅವರವರ ದಾರಿ ತುಳಿಯುತ್ತಿದ್ದರು. ಸಂದರ್ಭಕ್ಕನುಗುಣವಾಗಿ ಮಾತುಮಾತಿನಲ್ಲಿ ಅವಳು ಕೆಲವೊಮ್ಮೆ ತನ್ನೂರು, ತನ್ನ ಮನೆ ಹಾಗೂ ತನ್ನವರ ಕುರಿತು ಸ್ವಲ್ಪ ಸ್ವಲ್ಪ ಹೇಳಿಕೊಂಡದಿತ್ತು. ಮನೆ ಮುಂದಿನ ಸುಂದರ ಕೈದೋಟ, ಕಲಿಯುತ್ತಿದ್ದ ಶಾಲೆ-ಮೈದಾನು, ತನ್ನ ಒಡನಾಡಿಗಳನ್ನು ನೆನೆದು ಭಾವುಕಳಾಗುತ್ತಿದ್ದದ್ದೂ ಇತ್ತು.

ಆದರೆ, ಮರುಕ್ಷಣ ಮೊದಲಿನಂತಾಗುತ್ತಿದ್ದಳು. ಪಕ್ಯಾನಿಗಾದರೋ ತನ್ನವರೆನ್ನುವವರು ಈ ನಗರದಲ್ಲಿ ಯಾರೂ ಇರಲಿಲ್ಲ. ಊರಲ್ಲಿ ಅಣ್ಣ ಮಾತ್ರ ಇದ್ದರು. ತಂದೆಯವರನ್ನು ಅಣ್ಣಾ ಎಂದೇ ಕರೆಯುತ್ತಿದ್ದ ಪಕ್ಯಾ ತಾಯಿಯಿಲ್ಲದ ತಬ್ಬಲಿ. ಅಣ್ಣಾನಿಗೆ ಆತನೆಂದರೆ ಅತೀವ ಕಾಳಜಿ. ಎಂಟು ತಿಂಗಳಿನ ಮಗುವಿನ ಒಂದು ಕಾಲು ಪೋಲಿಯೋದಿಂದ ಊನವಾದ ನಂತರವಂತೂ ಅವನನ್ನು ಎದೆಗವಚಿಕೊಂಡೇ ಮುಚ್ಚಟೆಯಾಗಿ ಬೆಳೆಸಿದ್ದರು. ಶಾಲೆ ಮುಗಿಸಿದ ಪಕ್ಯಾ ನಾಲ್ಕು ಕಾಸು ಸಂಪಾದಿಸಲು ಮುಂಬೈಗೆ ಹೊರಟು ನಿಂತಾಗ ಅವರ ಕರುಳೇ ಕಿತ್ತು ಬಂದಂತಾಗಿತ್ತು. ಎರಡು ವರ್ಷದಿಂದ ಮಳೆಬೆಳೆಯಿಲ್ಲದೆ ಪಡಬಾರದ ಕಷ್ಟಪಡುತ್ತಿದ್ದ ಅಣ್ಣನ ಭಾರ ಕಡಿಮೆ ಮಾಡಲು ಮುಂಬೈಗೆ ಬಂದ ಪಕ್ಯಾ ದೂರದ ನಲ್ಲಸೋಪಾರದಲ್ಲಿ ತನ್ನಂಥ ಮೂವರೊಂದಿಗೆ ಕೂಡಿ ಒಂದು ಖೋಲಿಯಲ್ಲಿ ವಾಸಿಸತೊಡಗಿದ. ಅಲ್ಲಿ ಇಲ್ಲಿ ಕೈಗೆ ಸಿಕ್ಕ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಾ ಗಳಿಸಿದುದರಲ್ಲಿ ಹೆಚ್ಚಿನದನ್ನು ಅಣ್ಣನಿಗೆ ಕಳುಹಿಸುತ್ತಿದ್ದ. “ರಟ್ಟೆ ಮುರಿದು ದುಡಿಯುವವರಿಗೆ ಮುಂಬೈ ಎಂದೂ ಮೋಸ ಮಾಡುವುದಿಲ್ಲ’ ಎನ್ನುವ ಮಾತು ಎಷ್ಟು ನಿಜ ಅನ್ನುವುದು ಪಕ್ಯಾನಿಗೂ ಬಹುಬೇಗನೇ ಅರಿವಿಗೆ ಬಂದಿತ್ತು. ಯಾರದೋ ಶಿಫಾರಸಿನ ಮೇಲೆ ವಿಚಾರೆ ಕೊರಿಯರ್‌ನಲ್ಲಿ ಕೆಲಸ ಸಿಕ್ಕಿ ನಿಗದಿತ ಆದಾಯ ತಿಂಗಳು ತಿಂಗಳು ಕೈಗೆ ಬರಲಾರಂಭಿಸಿದ ಮೇಲೆ ಸ್ವಲ್ಪ ಹಾಯೆನಿಸಿತ್ತು. ಜೊತೆಗೆ ತನ್ನೆÇÉಾ ನ್ಯೂನತೆಗಳೊಂದಿಗೆ ಸ್ನೇಹಿಸುವ ಜೀವಿಯ ಸಹವಾಸ ಅವನಿಗೆ ಬದುಕಿನಲ್ಲಿ ಹೊಸ ದಿಗಂತವನ್ನು ಕಾಣಿಸಿತ್ತು.
ಕಳೆದ ತಿಂಗಳು ಅಣ್ಣನಿಂದ ಬಂದ ಪತ್ರಗಳಿಗೆ ತಾನು ಜವಾಬನ್ನೇ ಬರೆದಿಲ್ಲ. ತನಗೆ ಕೆಲಸ ಸಿಕ್ಕಿ ಪರ್ಮನೆಂಟ್‌ ಆದ ತಕ್ಷಣ ತನ್ನ ಮದುವೆಗೆ ಚಪ್ಪರ ಕಟ್ಟಿಸಲು ಹೊರಟ ಅಣ್ಣನ ಜಲ್ದಬಾಜಿ ಅವನಿಗೆ ಸುತರಾಂ ಇಷ್ಟ ಆಗಲಿಲ್ಲ. ಅದಕ್ಕಾಗಿಯೇ ಅವರಿಂದು ಮುಂಬೈಗೆ ಸಡನ್ನಾಗಿ ಬಂದದ್ದು. ಅವರಿಗೆ ಏನು ಹೇಳುವುದು? ಹೇಗೆ ಹೇಳುವುದು ಎನ್ನುವ ಗೊಂದಲದಲ್ಲಿ ಇಡೀ ದಿನ ಕಳೆದು ಹೋಯಿತು. ಇನ್ನು ಅವಳ ಸಾನಿಧ್ಯದಿಂದ ತನ್ನ ಮನಸ್ಸಿನಲ್ಲಿ ಭುಗಿಲೆದ್ದಿರುವ ಜ್ವಾಲಾಮುಖೀ ಸ್ವಲ್ಪವಾದರೂ ಶಾಂತವಾಗುವುದೇ ನೋಡಬೇಕು. ಪಕ್ಯಾ ಪುನಃ ದೂರದ ತನಕ ಕಣ್ಣು ಹಾಯಿಸಿ ಬಣ್ಣಬಣ್ಣದ ಉಡುಗೆ ತೊಟ್ಟು ಬರುತ್ತಿರುವವರನ್ನು ಗಮನಿಸಲಾರಂಭಿಸಿದ. ಅವಳಿರಬಹುದೇ…. ಉಹೂಂ.  ಅವಳಂತಹವರು ಅವರಲ್ಲಿ ಯಾರೂ ಇಲ್ಲ. ಅವಳ ನೆನಪೇ ಅವನಲ್ಲಿ ಪುಳಕವನ್ನುಂಟು ಮಾಡುತ್ತಿತ್ತು. ಓಹ್‌… ಎಂಥ ಸೌಂದರ್ಯ! ಐದಡಿ ನಾಲ್ಕಿಂಚು ಎತ್ತರವಿದ್ದರೂ ಹಿಮ್ಮಡಿ ಎತ್ತರದ  ಸ್ಯಾಂಡಲ್‌ ತೊಟ್ಟು ಬಳುಕುತ್ತ ಬರುವ ಅವಳ ವೈಖರಿ ಕಣ್ಣಿಗೆ ಹಬ್ಬವೇ ಸರಿ. ಇವತ್ತಾ$Âಕೆ ಲೇಟು? ಪಕ್ಯಾನ ಚಡಪಡಿಕೆ ಇನ್ನಷ್ಟು ಗಾಢವಾಯಿತು. 

ಅಗೋ ಅಲ್ಲಿ ದೂರದಲ್ಲಿ ಬಿಳಿ ಬಣ್ಣದ ಸೆರಗು ಬೀಸುತ್ತ ಬರುತ್ತಿರುವವಳು ಅವಳೇ ಎಂದು  ಕಣ್ಣು ಎಚ್ಚರಿಸುತ್ತಲೇ   ಅವನ ನರನರಗಳೆಲ್ಲವೂ ವೀಣೆಯ ತಂತಿಯಂತೆ ನಿಧಾನಕ್ಕೆ ಮಿಡಿಯಲಾರಂಭಿಸಿದವು. ಹೃದಯ ಹಾಡಲಾರಂಭಿಸಿತು. ಹೌದು ಅವಳೇ. ಸಾûಾತ್‌ ಅಪ್ಸರೆಯೇ ಸ್ವರ್ಗದಿಂದ ಧರೆಗಿಳಿದು ಬರುವಂತೆ ನಿಧಾನಕ್ಕೆ ಬಳುಕುತ್ತಾ ಬರುತ್ತಿ¨ªಾಳೆ. ತನ್ನ ಸುತ್ತುಮುತ್ತಲಿನ ಜಗತ್ತಿನ ಪರಿವೆಯೇ ಇಲ್ಲದೆ, ಪಕ್ಯಾನ ಕಾತುರತೆಯ ಅರಿವೇ ಇಲ್ಲದೆ ತನ್ನಷ್ಟಕ್ಕೆ ಚೂಯಿಂಗ್‌ ಗಮ್‌ ಮೆಲುಕಾಡುತ್ತಾ, ಹಣೆಯ ಮೇಲೆ ಹಾರಾಡುತ್ತಿರುವ ಮುಂಗುರುಳನ್ನು ನಯವಾಗಿ ಹಿಂದೂಡುತ್ತಾ, ಮುಗುಳು ನಗುತ್ತಾ ಗಾಳಿಯಲ್ಲಿ ತೇಲಿಬರುತ್ತಿರುವ ಅವಳನ್ನು ನೋಡಿಯೇ ಪಕ್ಯಾ ಹಿಗ್ಗಿ ಬಲೂನಿನಂತಾದ. ಅಷ್ಟರವರೆಗೆ ಅವನನ್ನು ಕಾಡುತ್ತಿದ್ದ ಬೇಸರಗಳೆಲ್ಲ ಪುರ್‌ ಎಂದು ಗಾಳಿಗೆ ಹಾರಿ ಹೋದವು. ಏನಾದರೂ ಸರಿ ಇವತ್ತು ತನ್ನ ಮನಸ್ಸಿನಲ್ಲಿದ್ದುದೆಲ್ಲವನ್ನೂ ಅವಳಿಗೆ ಹೇಳಿಯೇ ಬಿಡಬೇಕೆಂದು ನಿಶ್ಚಯಿಸಿದ್ದ ಆತನ ಎದೆ ಎಂದಿಗಿಂತ ಹೆಚ್ಚು ವೇಗವಾಗಿ ಡವಗುಟ್ಟುತ್ತಿತ್ತು. ತನ್ನ ಉದ್ವೇಗವನ್ನು ಹತ್ತಿಕ್ಕುವ ಪ್ರಯತ್ನವೋ ಎಂಬಂತೆ ಗಣಪತಿ ವಿಸರ್ಜನೆಯಂದು ಬಡಿಯುವ ಡೋಲಿನಂತೆ ಬಡಿದುಕೊಳ್ಳುತ್ತಿದ್ದ ಪುಟ್ಟ ಎದೆಯನ್ನು ಮೆಲ್ಲಗೆ ನೀವುತ್ತಾ ಅವಳತ್ತ ನೋಡಿ ನಸುನಕ್ಕ.

“”ಕ್ಯಾ ದೋಸ್ತ್, ಕೈಸಾ ಹೈ? ಕ್ಯಾ ಝಕಾಸ್‌ ಶರ್ಟ್‌ ಪೆಹಾ° ಹೈರೆ ತೂ” ಎಂದು ಕತ್ತು ಕೊಂಕಿಸಿ ನಕ್ಕಾಗ ಸಾವಿರ ನಕ್ಷತ್ರಗಳು ಒಮ್ಮೆಲೆ ಮಿನುಗಿದಂತಾಯಿತು. ತನ್ನನ್ನೇ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದ ಪಕ್ಯಾನ ತಲೆಗೊಂದು ಮೃದುವಾಗಿ ಕುಟ್ಟಿದಳು. ಅವಳು ಹಚ್ಚಿಕೊಂಡಿದ್ದ ಸುಗಂಧ ದ್ರವ್ಯದ ಪರಿಮಳವನ್ನು ದೀರ್ಘ‌ ಶ್ವಾಸದಿಂದ ತನ್ನೊಳಗೆ ಎಳೆದುಕೊಳ್ಳುವ ಪ್ರಯತ್ನದಲ್ಲಿದ್ದ ಪಕ್ಯಾನ ಆಟವೆಲ್ಲ ತನಗೆ ಗೊತ್ತು ಎನ್ನುವಂತೆ ಮತ್ತೂಮ್ಮೆ ಕತ್ತು ಕೊಂಕಿಸಿ ಕಣ್ಣು ಮಿಟುಕಾಯಿಸಿ ನಕ್ಕಳು. ಪಕ್ಯಾ ಕೂಡ ಪೆದ್ದನಂತೆ ಪಕ ಪಕ ನಕ್ಕ. ಅಷ್ಟರಲ್ಲಿ ಆಟೊ ಒಂದು ಅವರನ್ನು ಸ್ಪರ್ಶಿಸುತ್ತಾ ಹೋದಂತೆ ಒಳಗಿದ್ದವರು ಅವಳನ್ನು ನೋಡಿ ಕೇಕೆ ಹಾಕಿ ಶಿಳ್ಳೆ ಹೊಡಿದುದನ್ನು ಕೇಳಿ ಅವನ ಮೈಯೆಲ್ಲ ಮುಳ್ಳೆದ್ದಿತು. ಆಕೆ “”ಏಯ್‌, ಜಾನೆ ದೋ… ಯಾರ್‌” ಎನ್ನುತ್ತಾ ಆತನ ಲಕ್ಷ ತನ್ನತ್ತ ಸೆಳೆದಳು.

“”ಅಣ್ಣಾ ಬಂದಿ¨ªಾರೆ ಊರಿನಿಂದ”.
“”ಅಣ್ಣಾ?”
“”ಹೂಂ… ಅಣ್ಣಾ… ”
“”ನಾನು ನನ್ನ ತಂದೆಯವರನ್ನು ಅಣ್ಣಾ ಎಂದೆ ಕರೆಯುವುದು. ಊರಿನಿಂದ ಬಂದಿ¨ªಾರೆ”
“”ಓಹೋ…” ಎಂದ ಅವಳು ಕ್ಷಣಕಾಲ ಕಣ್ಮುಚ್ಚಿಕೊಂಡಳು. (ಅಣ್ಣಾ… ತಂದೆಯವರನ್ನು ತಾನು ಅಪ್ಪಾ ಎಂದು ಕರೆಯುತ್ತಿ¨ªೆ. ತಾನೆಂದರೆ ಎಷ್ಟು ಪ್ರೀತಿಯಿತ್ತು ಅವರಿಗೆ! ನಾಲ್ಕು ಅಕ್ಕಂದಿರ ನಂತರ ಹುಟ್ಟಿದ ಕಾರಣ ಅತ್ಯಂತ ಮುದ್ದಿನಿಂದ ಸಾಕಿದ್ದರು. ಒಳ್ಳೆಯ ಬಟ್ಟೆಬರೆ, ಒಳ್ಳೆಯ ಶಾಲೆ. ಕೇಳಿ ಕೇಳಿ¨ªೆಲ್ಲವೂ ಕೈಗೆಟಕುತ್ತಿತ್ತು. ಆದರೆ ತನ್ನ ಹಣೆಬರಹವೇ ಬೇರೆಯಾಗಿತ್ತು. ತನ್ನತನವನ್ನೇ ಬಚ್ಚಿಟ್ಟು ಉಸಿರುಗಟ್ಟಿ ಬದುಕುವುದು ಸಾಧ್ಯವೇ ಇಲ್ಲವೆಂದಾಗ ತನ್ನವರಿಂದಲೇ ಮನೆಯಿಂದ ಹೊರದಬ್ಬಲ್ಪಟ್ಟಿದ್ದು ಮರೆಯಲಾಗುತ್ತಿಲ್ಲ.) ಪಳಕ್ಕನೆ ಕಣ್ತೆರೆದಾಗ ಅವಳನ್ನೆ ಆತಂಕದಿಂದ ಗಮನಿಸುತ್ತಿದ್ದ ಪಕ್ಯಾನ ಕಣ್ತಪ್ಪಿಸಿ ಹೈವೇಯಲ್ಲಿ ಓಡುತ್ತಿದ್ದ ಕಾರುಗಳನ್ನು ಗಮನಿಸಲಾರಂಭಿಸಿದಳು. ಧೂಳೆಬ್ಬಿಸುತ್ತಾ ಟ್ರಕ್ಕೊಂದು ಹಾಯಿತು. ಕಣ್ಣೊಳಗೆ ಕಸ ಹೊಕ್ಕಿದಂತೆ ಆಕೆ ಕಣ್ಣಿಗೆ ಕಚೀìಫ್ ಒತ್ತಿಕೊಂಡಳು. ಏನೂ ಅರ್ಥವಾಗದ ಪಕ್ಯಾ ಮೌನ ಧರಿಸಿದ್ದ. 

ಗಾಳಿಗೆ ಹಾರುತ್ತಿದ್ದ ತನ್ನ ಸೆರಗಿನ ಅಂಚನ್ನು ಕೈಯಲ್ಲಿ ಎಳೆದುಕೊಳ್ಳುತ್ತಾ, “”ಅರೆ ವಾಹ್‌! ಮಜ್ಜಾ ಹೈ ತೆರಾ… ಏನಂತಾರೆ ನಿನ್ನ ಅಣ್ಣಾ?” ಎಂದಾಗ ಪಕ್ಯಾ, “”ಏನಿಲ್ಲ ಕಳೆದ ತಿಂಗಳಿಂದ ಅವರ ಮೂರು ಪತ್ರಗಳಿಗೆ ನಾನು ಜವಾಬೇ ಕೊಟ್ಟಿಲ್ಲ. ಅದಕ್ಕೇ ಸಿಟ್ಟಾಗಿ ಬಂದಿ¨ªಾರೆ”. “”ಯಾಕೆ? ಯಾಕೆ ಜವಾಬ್‌ ಕೊಡಲಿಲ್ಲ?” ಪಕ್ಯಾ ಮಾತಿಗಾಗಿ ತಡಕಾಡಿದ. “”ಹೂಂ ಹೇಳು ಯಾಕೆ ಪತ್ರ ಬರೆಯಲಿಲ್ಲ? ಪಾಪ ಎಷ್ಟು ಗಾಬರಿಯಾಗಿರಬೇಕು ಅವರು…”
“”ಅಣ್ಣಾನಿಗೆ ನನ್ನ ಮದುವೆಯ ಜಲ್ದಿ. ಯಾರೋ ಊರಿನ ಹುಡುಗಿಯನ್ನ ಪಸಂದ್‌ ಬೇರೆ ಮಾಡಿ¨ªಾರೆ. ಥತ್‌…” ನಾಲಿಗೆ ಕಚ್ಚಿಕೊಂಡ. “”ವಾರೆವಾ ಮದುವೆ?” ಕಣ್ಣರಳಿಸುತ್ತಾ, “”ನೀನು ಖುಷ್‌ ಕಾಣುತ್ತಿಲ್ಲ?”

“”ಯಾಕೆಂದರೆ ಹುಡುಗೀನ ನಾನು ಪಸಂದ ಮಾಡಬೇಡವೇ? ಇವತ್ತು ಅಣ್ಣಾನಿಗೆ ಎÇÉಾ ಹೇಳಿ ಬಿಡುತ್ತೇನೆ. ನಾನು ಮದುವೆ ಯಾಗುವುದಾದರೆ ನನ್ನ ಪಸಂದಿನ ಹುಡುಗಿಯನ್ನೇ…” ಎನ್ನುತ್ತಾ ಅವಳ ಕಣ್ಣುಗಳನ್ನೆ ದಿಟ್ಟಿಸಿ ನೋಡಿದ. ಅವನ ಮಾತು ಕೇಳಿ ಆಕೆ ಮೋಹಕವಾಗಿ ನಕ್ಕಳು. ಅವಳ ಕಂಗಳಲ್ಲಿ ಮಿನುಗುತ್ತಿರುವ ತುಂಟತನ ಬಿಟ್ಟರೆ ಬೇರೆ ಯಾವ ಭಾವವನ್ನೂ ಕಾಣದೆ ಆತ ನಿರಾಶನಾದ. ತಲೆತಗ್ಗಿಸಿ ಕೂತ ಪಕ್ಯಾನನ್ನು ಕಂಡು ಕರುಳುಹಿಂಡಿದಂತಾದರೂ ವ್ಯಕ್ತಪಡಿಸದೆ ಅವಳು ಅವನ ಗಲ್ಲ ಎತ್ತಿ, “”ಕ್ಯೂ ಉದಾಸ್‌ ಹೋತಾ ಹೈ ಮೇರಿ ಜಾನ್‌. ಅಣ್ಣಾ ನಿನ್ನ ಒಳ್ಳೆಯದನ್ನೇ ಯೋಚಿಸಿರಬೇಕಲ್ಲ. ಎÇÉಾ ಸರಿಯಾಗುತ್ತದೆ. ನಿನ್ನ ಮನಸ್ಸಿನಲ್ಲಿದ್ದುದು ನೆರವೇರುತ್ತದೆ. ಎಲ್ಲಿ ನಗು ನೋಡೋಣ” ಎಂದಾಗ “ನನ್ನ ಮನಸ್ಸಿನಲ್ಲಿದ್ದುದು’ ಎನ್ನಲು ಹೊರಟ ಪಕ್ಯಾನನ್ನು ತಡೆದು, “”ಥತ್‌, ಪಗಲಾ ಕಹಿಕಾ” ಎನ್ನುತ್ತಾ ಆತನ ತುಟಿಯ ಮೇಲೆ ಬೆರಳನೊತ್ತಿ, ಗಲ್ಲವನ್ನು ನಯವಾಗಿ ಚಿವುಟಿದಳು. ಪಕ್ಯಾ ಆಸೆಕಂಗಳಿಂದ ಆವಳನ್ನೇ ನಿಟ್ಟಿಸಿದನು.

“”ಏಯ್‌ ಗಂಟೆ ಐದಾಯಿತು. ಚಲೋ ಚಲೋ ಮುಝೆ ಕಾಮ್‌ಮೆ ಲಗನಾ ಹೈ” ಎನ್ನುತ್ತಾ ಬಲಗೈಯಿಂದ ಸೆರಗು ಸರಿಸಿ ಬ್ಲೌಸಿನ ಎಡಬದಿಯಿಂದ ಐದುನೂರರ ನೋಟೊಂದನ್ನು ಹೊರತೆಗೆದು ಪಕ್ಯಾನ ಕೈಗಿತ್ತು, “”ಮನೆಗೆ ಹೋಗು. ನಿನ್ನ ಅಣ್ಣಾ ಮೊದಲ ಸಲ ಮುಂಬೈಗೆ ಬಂದಿ¨ªಾರೆ. ಅವರನ್ನು ಚೆನ್ನಾಗಿ ನೋಡಿಕೋ. ಬೊಂಬೈ ಘುಮಾ… ಖುಷ್‌ ರಖನಾ. ನನ್ನ ದಂಧೆಯ ಟೈಮಾಯಿತು. ಬಾಯ್‌”  ಎನ್ನುತ್ತಾ ಫ್ಲೆçಯಿಂಗ್‌ ಕಿಸ್‌ ಕೊಟ್ಟು ಸರಕ್ಕನೆ ತಿರುಗಿ ಸಿಗ್ನಲ್‌ ಕಡೆಗೆ ನಡೆದಳು. ಎರಡೂ ಕೈಗಳಿಂದ ಚಪ್ಪಾಳೆ ತಟ್ಟುತ್ತಾ ಸಿಗ್ನಲ್‌ಗೆ ನಿಲ್ಲುತ್ತಿದ್ದ ರಿûಾ ಕಾರುಗಳತ್ತ ಬಳಕುತ್ತಾ ನಡೆದಳು ಪಕ್ಯಾನ ಅಪ್ಸರೆ.

– ಮಮತಾ ರಾವ್‌
 

ಟಾಪ್ ನ್ಯೂಸ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.