ಚಂದನವನಕ್ಕೆ ಮತ್ತೂಬ್ಬಳು ಆಶಾ ಸುಂದರಿ!

Team Udayavani, Sep 15, 2019, 5:13 AM IST

ಸ್ಟಾರ್‌ ನಟರ ಚಿತ್ರಗಳಿಗೆ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷಾ ನಟಿಯರೇ ಹೀರೋಯಿನ್‌ ಆಗಿರುತ್ತಾರೆ ಅನ್ನೋ ಅಪವಾದದ ಮಾತುಗಳು ಆಗಾಗ್ಗೆ ಚಿತ್ರರಂಗದಲ್ಲಿ ಕೇಳಿಬರುತ್ತಲೇ ಇರುತ್ತದೆ. ಇದಕ್ಕೆ ಇಂಬು ನೀಡುವಂತೆ ಅನೇಕ ಸ್ಟಾರ್‌ ನಟರ ಚಿತ್ರಗಳಿಗೆ ನಿರ್ಮಾಪಕರು ಮತ್ತು ನಿರ್ದೇಶಕರು ಕೂಡ ಕೊಂಚ ಹೆಚ್ಚಾಗಿಯೇ ಪರಭಾಷಾ ಹೀರೋಯಿನ್‌ಗಳಿಗೆ ಮಣೆ ಹಾಕುತ್ತಿರುವುದು ಕೂಡ ಒಪ್ಪಿಕೊಳ್ಳಲೇ ಬೇಕಾಗಿರುವ ಸತ್ಯ.

ಸದ್ಯ ಛಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮುಂಬರುವ ಚಿತ್ರ ರಾಬರ್ಟ್‌ ಅದ್ದೂರಿಯಾಗಿ ಚಿತ್ರೀಕರಣ ನಡೆಸುತ್ತಿದೆ. ಇದರ ನಡುವೆಯೇ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ ಅನ್ನೋ ವಿಷಯ ಕೂಡ ಕಳೆದ ಕೆಲ ತಿಂಗಳಿನಿಂದ ಚರ್ಚೆಯಲ್ಲಿತ್ತು. ಚಿತ್ರಕ್ಕೆ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ, ರಾಕುಲ್‌ ಪ್ರೀತ್‌ ಸಿಂಗ್‌, ಕೀರ್ತಿ ಸುರೇಶ್‌, ಸಾಯಿ ಪಲ್ಲವಿ ಮೊದಲಾದ ಬಹುಭಾಷಾ ನಟಿಯರು ಹೀರೋಯಿನ್‌ ಆಗಲಿದ್ದಾರೆ ಎಂಬ ಸುದ್ದಿ ಕೂಡ ಆಗಾಗ್ಗೆ ಹರಿದಾಡುತ್ತಿತ್ತು. ಇನ್ನು ಮೊದಲಿನಿಂದಲೂ ದರ್ಶನ್‌ ಅವರ ಚಿತ್ರಕ್ಕೆ ಪರಭಾಷಾ ನಟಿಯರೇ ಹೆಚ್ಚಾಗಿ ನಾಯಕಿಯ ಪಟ್ಟ ಅಲಂಕರಿಸುತ್ತ ಬಂದಿರುವುದರಿಂದ ಈ ಬಾರಿ ಕೂಡ ರಾಬರ್ಟ್‌ ಚಿತ್ರದ ಹೀರೋಯಿನ್‌ ಪಟ್ಟ ಪರಭಾಷಾ ನಟಿಯರ ಪಾಲಾಗಬಹುದು ಎಂದೇ ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ರಾಬರ್ಟ್‌ಚಿತ್ರಕ್ಕೆ ಸದ್ಯ ಅಪ್ಪಟ ಕನ್ನಡತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹೌದು, ಈ ಬಾರಿ ರಾಬರ್ಟ್‌ ಗೆಪಟ್‌ನಲ್ಲಿ ಅಭಿಮಾನಿಗಳ ಮುಂದೆ ಬರಲು ರೆಡಿಯಾಗುತ್ತಿರುವ ದರ್ಶನ್‌ ಅವರಿಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಆಶಾ ಭಟ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

2014ರ ಮಿಸ್‌ ಸುಪ್ರ ನ್ಯಾಶನಲ್‌ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ ಆಶಾ ಭಟ್‌, ಈಗಾಗಲೇ ಹಲವಾರು ಬ್ಯೂಟಿ ಕಂಟೆಸ್ಟ್‌ಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ನಡುವೆಯೇ ಬಾಲಿವುಡ್‌ಗೂ ಕಾಲಿಟ್ಟಿರುವ ಆಶಾ ಭಟ್‌, ಹಿಂದಿಯ ಜಂಗ್ಲಿ ಚಿತ್ರದಲ್ಲಿ ವಿದ್ಯುತ್‌ ಜಮಾಲ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ತೆರೆಗೆ ಬಂದಿದ್ದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಕಮಾಲ್‌ ಮಾಡದಿದ್ದರೂ, ಚಿತ್ರ ಆಶಾ ಭಟ್‌ ಎನ್ನುವ ನವ ನಾಯಕಿಯನ್ನು ಗುರುತಿಸುವಂತೆ ಮಾಡಿತ್ತು. ಸದ್ಯ ಬಾಲಿವುಡ್‌ನ‌ಲ್ಲಿ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ ಆಶಾ ಭಟ್‌, ಈಗ ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರವನ್ನು ದರ್ಶನ್‌ ಜೊತೆಗೆ ಮಾಡುವ ಅವಕಾಶ ಗಿಟ್ಟಿಸಿಕೊಂಡಿ¨ªಾರೆ. ಈಗಾಗಲೇ ರಾಬರ್ಟ್‌ ಚಿತ್ರದ ಶೂಟಿಂಗ್‌ ಶುರುವಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಆಶಾ ಭಟ್‌ ಎಂಬ ಕನ್ನಡದ ಚೆಲುವೆ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕನ್ನಡ ಸಿನಿಪ್ರಿಯರ ಮುಂದೆ ಬರೋದಂತು ಪಕ್ಕಾ ಎನ್ನಲಾ ಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

  • ಪು. ತಿ. ನರಸಿಂಹಾಚಾರ್‌, ಕೆ. ಎಸ್‌. ನರಸಿಂಹಸ್ವಾಮಿ, ಜಿ. ಎಸ್‌. ಶಿವರುದ್ರಪ್ಪ , ಎಂ. ಗೋಪಾಲಕೃಷ್ಣ ಅಡಿಗ ಮೊದಲಾದವರ ಪ್ರೇರಣೆಯಿಂದ, ತಮ್ಮದೇ ಆದ ಕಾವ್ಯಪಥವನ್ನು ರೂಪಿಸಿದ...

  • ಕಾದಂಬರಿ ಎಂದರೆ ಒಂದು ಮಹಾ-ಕತೆ ; ಸೃಷ್ಟಿಯಲ್ಲಿ ಕ್ಷುಲ್ಲಕವಾದದ್ದು ಯಾವುದೂ ಇಲ್ಲ ಎಂಬ ನಂಬಿಕೆಯಲ್ಲಿ ಎಲ್ಲವನ್ನೂ ಒಳಗೊಳ್ಳುವಂಥ ಒಂದು ಜೀವನಗಾಥೆ. ದಿನವೆಂಬ...

  • ದೀರ್ಘ‌ವಾದ ಸಮುದ್ರಯಾನವು ಬಹಳ ಮನೋಹರವಾದ ಅನುಭವವಾದರೂ ಹಲವರಿಗೆ ಅದು ತ್ರಾಸದಾಯಕವೂ ಹೌದು. ಹೊಟ್ಟೆ ತೊಳಸುವುದು, ವಾಂತಿ ಬಂದಂತೆನಿಸುವುದು, ತಲೆಯೊಳಗೆ ಎಲ್ಲವೂ...

  • ಮನೆಯ ಹಿಂದಿನ ಚಿಂಬೈ ರಸ್ತೆಯ ಬದಿಯಲ್ಲಿರುವ ಅಶ್ವತ್ಥ ಮರದ ಅಡಿಯಲ್ಲಿ ಸ್ಥಾಪಿತವಾಗಿದ್ದ ಹನುಮನ ಗುಡಿಯ ಇರವಿನ ಬಗ್ಗೆ ತಿಳಿದುಬಂದದ್ದು ನನಗೆ ಸಹಾಯಕಿಯಾಗಿ ಬರುತ್ತಿದ್ದ...

  • ಕಾರ್ಪೊರೇಟ್‌ ಪ್ರಪಂಚದಲ್ಲಿ ಬಿಜಿಯಾಗಿರುವ ಮಗ ಮೊನ್ನೆ ಕಾಲ್‌ ಮಾಡಿದ್ದ , ""ಈ ವೀಕ್‌ ಎಂಡ್‌ನ‌ಲ್ಲಿ ಬರ್ತಾ ಇದೀನಿ. ಹುರುಳಿಕಾಳಿನ ಬಸ್ಸಾರು ಮಾಡಿರಿ'' ಎಂದು. ಪಿಜ್ಜಾ...

ಹೊಸ ಸೇರ್ಪಡೆ