ಆಶಿಕಾ ಕೇ ಲಿಯೇ

Team Udayavani, Sep 23, 2018, 6:00 AM IST

ಆಶಿಕಾ ರಂಗನಾಥ್‌ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ತಾಯಿಗೆ ತಕ್ಕ ಮಗ ಸಿನೆಮಾ. ಹೌದು, ಆಶಿಕಾ, ತಾಯಿಗೆ ತಕ್ಕ ಮಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಹಾಡೊಂದರಲ್ಲಿ ಆಶಿಕಾ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದು, ಈಗ ಆ ಹಾಡಿನ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ. ಜಯಂತ್‌ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿಬಂದ ಹೃದಯಕೆ ಹೆದರಿಕೆ… ಹೀಗೆ ನೋಡಿದರೆ… ಹುಡುಕುತಾ ಬರುವೆಯಾ ಹೇಳದೇ ಹೋದರೆ… ಎಂಬ ಹಾಡಿಗೆ ವ್ಯಕ್ತವಾಗುತ್ತಿರುವ ಮೆಚ್ಚುಗೆಯಿಂದ ಆಶಿಕಾ ಖುಷಿಯಾಗಿದ್ದಾರೆ. ಈ ಹಿಂದೆ ಶರಣ್‌ ನಾಯಕರಾಗಿದ್ದ “ರ್‍ಯಾಂಬೋ-2′ ಚಿತ್ರದಲ್ಲೂ ಆಶಿಕಾ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದರು. ಈಗ ತಾಯಿಗೆ ತಕ್ಕ ಮಗನ ಸರದಿ.  ವಿಲ್ಲಾವೊಂದರಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಶಶಾಂಕ್‌ ನಿರ್ದೇಶನದ ಈ ಚಿತ್ರದಲ್ಲಿ ಅಜೇಯ್‌ ರಾವ್‌ ನಾಯಕರಾಗಿದ್ದಾರೆ. ಈಗಾಗಲೇ ಈ ಜೋಡಿಯ ಹಿಂದಿನ ಸಿನೆಮಾಗಳು ಹಿಟ್‌ ಆಗಿರುವ ಮೂಲಕ ತಾಯಿಗೆ ತಕ್ಕ ಮಗ ಬಗ್ಗೆಯೂ ನಿರೀಕ್ಷೆ ಇದೆ. ಅದೇ ನಿರೀಕ್ಷೆಯಲ್ಲಿ ಆಶಿಕಾ ಕೂಡ ಎದುರು ನೋಡುತ್ತಿದ್ದಾರೆ.

ಕ್ರೇಜಿಬಾಯ್‌ ಚಿತ್ರದ ಮೂಲಕ ನಾಯಕಿಯಾದ ಆಶಿಕಾ ಆ ನಂತರ ಕನ್ನಡದಲ್ಲಿ ಮಾಸ್‌ ಲೀಡರ್‌, ಮುಗುಳುನಗೆ, ರಾಜು ಕನ್ನಡ ಮೀಡಿಯಂ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ತಾಯಿಗೆ ತಕ್ಕ ಮಗನ ಸರದಿ. ಕ್ರೇಜಿಬಾಯ್‌ ನಂತರ ತನಗೆ ಒಂದೆರಡು ಸಿನೆಮಾ ಸಿಗಬಹುದಷ್ಟೇ ಎಂದುಕೊಂಡಿದ್ದರಂತೆ ಆಶಿಕಾ. ಕ್ರೇಜಿಬಾಯ್‌ ಆದ ಮೇಲೆ ಒಂದು ಸಿನೆಮಾ ಸಿಗಬಹುದೇನೋ ಅಂದುಕೊಂಡಿದ್ದೆ. ಆದರೆ, ಈಗ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಒಂದೊಂದು ಅವಕಾಶಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ನನ್ನದು. ರಾತ್ರೋರಾತ್ರಿ ಬರುವ ಯಶಸ್ಸು ಶಾಶ್ವತವಲ್ಲ ಎಂದು ನಂಬಿದವಳು ನಾನು ಎಂದು ತಮ್ಮ ಜರ್ನಿ ಬಗ್ಗೆ ಹೇಳುತ್ತಾರೆ ಆಶಿಕಾ. ಆಶಿಕಾಗೆ ಅವರ  ವಯಸ್ಸಿಗೆ ತಕ್ಕುದಾದ ಪಾತ್ರಗಳೇ ಬರುತ್ತಿವೆಯಂತೆ. ಕಾಲೇಜು ಹುಡುಗಿ, ತರಲೆ, ತಮಾಷೆಯ ಪಾತ್ರಗಳು ಸಿಗುತ್ತಿರುವುದರಿಂದ ಆಶಿಕಾ ಕೂಡ ಖುಷಿಯಾಗಿದ್ದಾರೆ. ಕೆಲವು ನಟ-ನಟಿಯರು ಸಿನೆಮಾಕ್ಕೆ ಬರಬೇಕೆಂದು ಪ್ರಯತ್ನಿಸಿ ಬರುತ್ತಾರೆ. ಇನ್ನು ಕೆಲವರು ಸಿಗುವ ಅವಕಾಶವನ್ನು ಮಿಸ್‌ ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಬರುತ್ತಾರೆ. ಅದೇ ರೀತಿ ಆಶಿಕಾಗೆ ಅವಕಾಶ ಸಿಕ್ಕಿ ಬಂದವರು. ಒಂದು ವೇಳೆ ಚಿತ್ರರಂಗಕ್ಕೆ ಬರದಿದ್ದರೆ ಆಶಿಕಾ ಏನಾಗುತ್ತಿದ್ದರು ಎಂದರೆ ಡಾಕ್ಟರ್‌ ಎಂಬ ಉತ್ತರ ಅವರಿಂದ ಬರುತ್ತದೆ.  ಅವರಿಗೆ ಡಾಕ್ಟರ್‌ ಆಗಬೇಕೆಂಬ ಆಸೆ ಇತ್ತಂತೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಡ್ಯಾನ್ಸ್‌ ಕ್ಷೇತ್ರದಲ್ಲೆ ಏನಾದರೂ ಮಾಡಿಕೊಂಡು ಇರುತ್ತಿದ್ದರಂತೆ. 

“ನನಗೆ ಡ್ಯಾನ್ಸ್‌ ಎಂದರೆ ತುಂಬಾ ಇಷ್ಟ. ಬೇರೆ ಬೇರೆ ಡ್ಯಾನ್ಸ್‌ ಪ್ರಕಾರಗಳನ್ನು ಕಲಿಯೋದೆಂದರೆ ನನಗೆ ತುಂಬಾ ಇಷ್ಟ’ ಎನ್ನುವ ಆಶಿಕಾ, ಸದ್ಯ ತಾಯಿಗೆ ತಕ್ಕ ಮಗ ನಿರೀಕ್ಷೆಯಲ್ಲಿರುವುದು ಸುಳ್ಳಲ್ಲ. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

  • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

  • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ