ಶಾಂಘಾಯಲ್ಲಿ ಬುದ್ಧ


Team Udayavani, Jan 27, 2019, 12:30 AM IST

ww-2.jpg

ಚೀನಾದ ಬೀಜಿಂಗ್‌ನಿಂದ ಶಾಂಘಾಗೆ ಸುಮಾರು 1,318 ಕಿ. ಮೀ. ದೂರ. ಇದನ್ನು ಕ್ರಮಿಸಲು ಬುಲೆಟ್‌ ಟ್ರೈನ್‌ ತೆಗೆದುಕೊಂಡ ಅವಧಿ 4.18 ನಿಮಿಷಗಳು! ಹೆಸರಿಗೆ ತಕ್ಕಂತೆ ನಿಜವಾದ ಬುಲೆಟ್‌ನ ರೀತಿಯಲ್ಲಿ ಇದು ಮಿಂಚಿನಂತೆ ಸಾಗುತ್ತಿತ್ತು. ಚೀನೀಯರ ಆಧುನಿಕ ತಂತ್ರಜ್ಞಾನದ ನೈಜ ಆವಿಷ್ಕಾರದ ಪರಿಣತಿ ಇದರಲ್ಲಿ ಕುಳಿತಾಗಲೇ ತಿಳಿಯಿತು. ಶಾಂಘಾ ತಲುಪಿದಾಗ ಬ್ಲೇಕ್‌ ಎಂಬ ಹೆಸರಿನ ಗೈಡ್‌ ನಮಗಾಗಿ ಕಾಯುತ್ತಿದ್ದ. ಶಾಂಘಾçಯನ್ನು  ಚೀನೀಗಳು ಶಹಾಯ್‌ ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಪ್ರದೇಶ ಎಂಬರ್ಥವನ್ನು ನೀಡುವುದಂತೆ. ಹಿಂದೆ ಈ ಇಡೀ ಪ್ರದೇಶ ಸಮುದ್ರ ನೀರಿನಿಂದ ಆವರಿಸಿದ್ದ ಪ್ರದೇಶವಾಗಿದ್ದು ಬರಿಯ ಮೀನುಗಾರರು ಮಾತ್ರ ವಾಸಿಸುತ್ತಿದ್ದರಂತೆ. ಕ್ರಮೇಣ ಇದು¤ ಬೆಳೆಯುತ್ತ ಆಧುನಿಕವಾಗಿ ನಿರ್ಮಾಣಗೊಂಡ ಪಟ್ಟಣವಾಗಿ ಬೆಳೆಯಿತು. ಹಿಂದೆ ಬ್ರಿಟಿಷರು ಮತ್ತು ಫ್ರೆಂಚರು ಇಲ್ಲಿ ವಾಸಿಸುತ್ತಿದ್ದರು ಎಂಬುದರ ಕುರುಹಾಗಿ ಅವರ ವಾಸದ ಮನೆಗಳನ್ನು ಇಂದಿಗೂ ಅದೇ ಶೈಲಿಯಲ್ಲಿ ಉಳಿಸಿಕೊಂಡಿದ್ದಾರೆ.  

ಇದಲ್ಲದೆ ಇಲ್ಲಿ ಬಹುಮುಖ್ಯವಾದ ಪ್ರದೇಶ ಬಂದ್‌. ಬಂದ್‌ ಎಂದರೆ ನದಿಯ ದಡ ಎಂದರ್ಥ. ಇಲ್ಲಿ ಮುಖ್ಯವಾಗಿ ಹುವಾಂಗ್‌ ಫ‌ೂ ಹೆಸರಿನ ನದಿ ಹರಿಯುತ್ತದೆ. ಇದು ಶಾಂಘಾç ನಗರದ ಮಧ್ಯ ಭಾಗದಲ್ಲಿ ಹರಿಯುತ್ತ ಇಡೀ ಪಟ್ಟಣವನ್ನು  ಎರಡಾಗಿ ವಿಭಾಗಿಸುತ್ತ ಮುಂದೆ ಸಾಗುತ್ತದೆ. ಇಲ್ಲಿಂದ ಶಾಂಘಾಯ ಪ್ರಮುಖ ಐತಿಹಾಸಿಕ ಕಟ್ಟಡಗಳು, ಸ್ಟಾಕ್‌ ಎಕ್ಸ್‌ಚೇಂಜ್‌, ಬಿಸಿನೆಸ್‌ ಸೆಂಟರ್‌, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇಲಾಖೆಗಳು, ಪ್ರಪಂಚದ ಪ್ರಮುಖ ಬ್ಯಾಂಕುಗಳು- ಇವನ್ನೆಲ್ಲ ಕಾಣಬಹುದು. ಕಳೆದ ನಾಲ್ಕೈದು ದಶಕಗಳ ಹಿಂದೆ ಸಂಭವಿಸಿದ ಸರಣಿ ನೆರೆಯಿಂದ ರಕ್ಷಣೆಯನ್ನು ಪಡೆಯಲು ಇಡೀ ಬಂದ್‌ ಪ್ರದೇಶವನ್ನು ಶಾಂಘಾç ಪಟ್ಟಣಕ್ಕಿಂತ ಸುಮಾರು ಹತ್ತು ಮೀ. ಗಳಷ್ಟು ಏರಿಸಲಾಯಿತಂತೆ. ಪ್ರಮುಖವಾಗಿ ಈ ಭಾಗ ದಲ್ಲಿ ಸುಂದರ ಉದ್ಯಾನವನ, ಯುದ್ಧ ಸ್ಮಾರಕಗಳು ಹಾಗೂ ಆಕರ್ಷಣೀಯ ಸೇತುವೆಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳವಾಗಿದೆ. ಬಂದ್‌ನ ಆ ಕಡೆಗೆ ಕಾಣಿಸುವುದೇ ಪುದೋಂಗ್‌ ಪಟ್ಟಣ. ಇಲ್ಲಿ ಪ್ರಮುಖ ಫೈನಾನ್ಶಿಯಲ್‌ ಸೆಂಟರ್‌, ಬೃಹತ್‌ ಗೋಪುರದ ಜೊತೆಗೆ ನೂರು ಅಂತಸ್ತಿನ ಗಾಜಿನ ಹೊದಿಕೆಯ ಬಹಳ ಆಕರ್ಷಕ ಕಟ್ಟಡವಿದೆ. ಈ ಕಟ್ಟಡದ ತುದಿಯಲ್ಲಿ ಅಳವಡಿಸಿದ ಗಾಜಿನ ಮೇಲೆ ನಡೆಯುವಾಗ ದುಬೈಯ ಬುರ್ಜ್‌ ಖಲೀಫಾದ ತುದಿಯಲ್ಲಿ ನಿಂತು ನೋಡಿದ ಅನುಭವವಾಗುತ್ತಿತ್ತು. ರಾತ್ರಿ ಹೊತ್ತು ಕ್ರೂಸ್‌ನಲ್ಲಿ ಸಂಚರಿಸುತ್ತ ಕಟ್ಟಡಗಳ ವಿವಿಧ ಅಲಂಕೃತ ದೀಪಗಳ ಅಂದವನ್ನು ನೋಡುವುದೇ ಕಣ್ಣಿಗೆ ಆನಂದ. 

ಜೇಡ್‌ ಬುದ್ಧ ದೇವಾಲಯ
ಶಾಂಘಾçಯ ಜೇಡ್‌ ಬುದ್ಧ ದೇವಾಲಯ ಪ್ರವಾಸಿಗರು ಭೇಟಿ ನೀಡಲೇಬೇಕಾದ ಪ್ರಸಿದ್ಧ ಸ್ಥಳ. ಬೌದ್ಧ ಭಿಕ್ಷು ಹ್ಯುಗೇನ್‌ ಎಂಬಾತ 1882ರಲ್ಲಿ ಇದನ್ನು ಕಟ್ಟಿಸಿದ. ಇಲ್ಲಿ ಪುರಾತನ ಏಷ್ಯಾ ಇಂಡಿಯಾ ಶೈಲಿಯಲ್ಲಿರುವ ಹಸಿರು, ಬಿಳಿ ಜೇಡ್‌ನಿಂದ ರಚಿತವಾದ ಮೂರ್ತಿಗಳನ್ನು  ಬರ್ಮಾದಲ್ಲಿ ತಯಾರಿಸಿ ಸಮುದ್ರ ಮಾರ್ಗವಾಗಿ ಇಲ್ಲಿಗೆ ತರಲಾಗಿತ್ತಂತೆ. ಚೀನೀಯರ ಬೌದ್ಧ ಕಲ್ಪನೆ ಸೌಮ್ಯ ಹಾಗೂ ಸೌಂದರ್ಯವನ್ನು ಸಾರುವಂಥಾದ್ದು. ಶಯನ ಭಂಗಿಯ ಈ ಮೂರ್ತಿ ನೋಡುವುದಕ್ಕೇ ಅತೀ ಸುಂದರ. 

ಶಾಂಘಾç ಪಟ್ಟಣದ ಹೃದಯ ಭಾಗದಲ್ಲಿಯೂ ಯು ಗಾರ್ಡನ್‌ ಇದೆ, ಸುಮಾರು 500 ವರ್ಷಗಳ ಹಿನ್ನೆಲೆಯಿರುವ ಇದನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿ¨ªಾರೆ. ಮಿಂಗ್‌ ರಾಜಮನೆತನಕ್ಕೆ ಸೇರಿದ ಪಾನ್‌ ಎಂಬಾತ ಕಟ್ಟಿಸಿರುವ ಈ ಉದ್ಯಾನವನ ಕಲ್ಲು , ಮರ  ಹಾಗೂ ವಾಸ್ತುಶಿಲ್ಪಗಳಿಂದ  ನೋಡಲು ಆಕರ್ಷಣೀಯವಾಗಿದೆ.

ಬೀದಿಯಲ್ಲಿ ಮಾಂಸ ಮಾರಾಟ
ಚೀನಾದ ಆಹಾರ ಪದ್ಧತಿಯಲ್ಲಿ ಎರಡು ಬಗೆಯವು. ಒಂದು, ಶ್ರೀಮಂತ‌ ಆಹಾರ ಶೈಲಿ. ಇನ್ನೊಂದು ಜನಪದ ಶೈಲಿಯ ಆಹಾರ. ಇದನ್ನು ನೋಡಬೇಕಾದರೆ ಪಟ್ಟಣವನ್ನು ಬಿಟ್ಟು ಸ್ವಲ್ಪ ಒಳಗೆ ಬೀದಿಗಳಿಗೆ ಬಂದರೆ ನೈಜ ಸ್ಟ್ರೀಟ್‌ಫ‌ುಡ್‌ಗಳು ದೊರೆಯುತ್ತವೆ. ಬಹುವಾಗಿ ಮಾಂಸಾಹಾರ ಬಳಸುವ ಇವರು ಸಾಮಾನ್ಯವಾಗಿ ಬಾತುಕೋಳಿ, ಬೀಫ್, ಹಂದಿ, ಕುರಿಯ ಮಾಂಸಗಳನ್ನು ಉಪಯೋಗಿಸುತ್ತಾರೆ. ಇದಲ್ಲದೆ ಜಿರಳೆ, ಚೇಳು, ಹಾವು, ಕಪ್ಪೆ, ಬೆಕ್ಕು ಇತ್ಯಾದಿ ಆಹಾರಗಳೂ ಸ್ಟ್ರೀಟ್‌ನಲ್ಲಿ  ಸಾಮಾನ್ಯವಾಗಿ ಕಾಣಸಿಗುತ್ತವೆ. 

ಶಾಂಘಾç ಪಟ್ಟಣದ ಹೊರವಲಯದ‌ಲ್ಲಿ  ಝಜಿಯಾಝಿಯೋ ಎಂಬ ವಾಟರ್‌ಟೌನ್‌ ಇದೆ. 36 ವಿವಿಧ ಶೈಲಿಯ ಸೇತುವೆಗಳಿಗೆ ಹೆಸರಾಗಿರುವ ಈ ಪಟ್ಟಣ ಒಂದು ಕಾಲದಲ್ಲಿ  ಬಟ್ಟೆ ಮತ್ತು ಅಕ್ಕಿಯ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿತ್ತಂತೆ. ಇಲ್ಲಿ ಬೋಟಿಂಗ್‌ ಮಾಡಲು ವ್ಯವಸ್ಥೆ ಇದೆ. 

ಹಾಂಕಾಂಗ್‌ಗೆ ಹಾರಿದಾಗ…
ಮೂರು ದಿನಗಳ ನಮ್ಮ ಶಾಂಘಾç ಪ್ರವಾಸನ್ನು ಮುಗಿಸಿ ನಾವು ಹಾಂಕಾಂಗ್‌ಗೆ ಬಂದಿಳಿದೆವು. ಚೀನಾದ ಸ್ವತ್ಛ , ಸುಂದರ, ಶಿಸ್ತುಬದ್ಧ ನಾಡಿನಿಂದ ಸುಂದರ ಕನಸುಗಳನ್ನು ಹೊತ್ತು ಬಂದ ನಮಗೆ ಹಾಂಕಾಂಗ್‌ ಬಗೆಗಿನ ನಮ್ಮ ಕಲ್ಪನೆಗೆ ಸ್ವಲ್ಪ ನಿರಾಸೆಯೇ ಆಯಿತೆನ್ನಬಹುದು. ಚೀನಾದ ಸ್ವತ್ಛ, ಸುಂದರ ಕಲ್ಪನೆಯಿಂದ ಇಲ್ಲಿಗೆ ಬಂದಿಳಿದರೆ ಹಾಂಕಾಂಗ್‌ ಸಾಮಾನ್ಯ ನಗರದಂತೆ ಇದೆ. ಹಾಂಕಾಂಗ್‌ನ  ಹೊರವಲಯದಲ್ಲಿ ಗಗನ ಚುಂಬಿ ಕಟ್ಟಡಗಳನ್ನು ಹೊರತುಪಡಿಸಿದರೆ ಮಾಮೂಲಿ ನಗರದಂತಿದೆ. ಅಂದೇ ನಾವು ವಿಕ್ಟೋರಿಯಾ ಪೀಕ್‌ ಹಾಗೂ ಮೇಡಮ್‌ ತ್ಸುಸಾಡ್‌ ಮ್ಯೂಸಿಯಂಗೆ ಭೇಟಿ ನೀಡಿದೆವು, ವಿಕ್ಟೋರಿಯ ಪೀಕ್‌ನಲ್ಲಿ ನಿಂತು ಇಡೀ ಹಾಂಕಾಂಗ್‌ನ ಸೌಂದರ್ಯವನ್ನು ರಾತ್ರಿಯ  ಬಣ್ಣದ ದೀಪಗಳಲ್ಲಿ ನೋಡುವುದು ಇಲ್ಲಿನ ಆಕರ್ಷಣೆ. ಮೇಡಂ ತ್ಸುಸಾಡ್‌ ಮ್ಯೂಸಿಯಂ ಸುಮಾರು ನೂರು ವಿವಿಧ ಮೇಣದ ಮೂರ್ತಿಗಳಿಗೆ ಹೆಸರುವಾಸಿಯಾಗಿದೆ. ಗಾಂಧೀಜಿ, ಮೋದಿ, ಅಮಿತಾಬ್‌ ಬಚ್ಚನ್‌, ಶಾರೂಖ್‌ಖಾನ್‌ ಇವರ ಮೂರ್ತಿಗಳನ್ನು ನೋಡುತ್ತಿದ್ದಂತೆ ಒಮ್ಮೆ ಭಾರತಕ್ಕೆ ಬಂದ ಅನುಭವವಾಯಿತು. 

ಲಾಂಟಾವೋ ದ್ವೀಪ ಮತ್ತು  ಬೃಹತ್‌ ಬುದ್ಧ ವಿಗ್ರಹ 
ಹಾಂಕಾಂಗ್‌ನ್ನು  ಕೌಲೂನ್‌, ಹಾಂಕಾಂಗ್‌, ನ್ಯೂ ಟೆರಿಟರಿ ಹಾಗೂ ಲಾಂಟಾವೊ ದ್ವೀಪ- ಹೀಗೆ ನಾಲ್ಕು ವಿಭಾಗಗಳಲ್ಲಿ ನೋಡಬಹುದಾಗಿದೆ. ಲಾಂಟಾವೊ ದ್ವೀಪ ಹಾಂಕಾಂಗ್‌ಗಿಂತ ಎರಡೂವರೆ ಪಟ್ಟು ದೊಡ್ಡದಾಗಿರುವ ಈಶಾನ್ಯ ಭಾಗದಲ್ಲಿರುವ ಪ್ರದೇಶ. ಮೂಲದಲ್ಲಿ ಇದು ಮೀನುಗಾರರ ಹಳ್ಳಿಯಾಗಿತ್ತು. ಕ್ರಮೇಣ ಇದು ಅಭಿವೃದ್ಧಿ ಹೊಂದಿತು. ಜಾಯಿಂಟ್‌ಬುದ್ಧನನ್ನು ನೋಡುವುದಕ್ಕಾಗಿ ಬೆಳಗ್ಗೆಯೇ ಹೊರಟು ಕೇಬಲ್‌ ಕಾರ್‌ ಸ್ಟೇಶನ್‌ಗೆ ಬಂದೆವು. ಅಲ್ಲಿ ನೋಡಿದರೆ ಜನಸಾಗರ. ಮೊದಲೇ ಟಿಕೆಟಿನ ವ್ಯವಸ್ಥೆಯನ್ನು ವ್ಯವಸ್ಥಾಪಕರು ಮಾಡಿದ್ದ ಕಾರಣ ಸಾಲನ್ನು ತಪ್ಪಿಸಿ ಕೇಬಲ್‌ ಕಾರಲ್ಲಿ ಕುಳಿತೆವು. ಇದೊಂದು ಬದುಕಿನ ಅದ್ಭುತ, ಅನನ್ಯ ಅನುಭವಗಳಲ್ಲಿ ಒಂದು. ಕೇಬಲ್‌ ಕಾರ್‌ ಸಮುದ್ರ, ಹೊಳೆ, ಬೆಟ್ಟದ ತುದಿಗಳನ್ನು ಸ್ಪರ್ಶಿಸುತ್ತ ಕಾಡಿನ ಮಧ್ಯೆ ಸುಮಾರು ಅರ್ಧ ಗಂಟೆ ಸಾಗುವಾಗ ದಿವ್ಯಾನುಭವ. ಕೇಬಲ್‌ ಕಾರಲ್ಲಿ ಸಾಗುತ್ತಿರುವಾಗಲೇ ದೂರದ  ಗೋಂಗ್‌ಪಿಂಗ್‌ ಬೆಟ್ಟದ ತುದಿಯಲ್ಲಿ  ಬೃಹತ್‌ ಬುದ್ಧನ ಪ್ರತಿಮೆ ಕಾಣಿಸುತ್ತದೆ. ಕೇಬಲ್‌ ಕಾರ್‌ ಇಳಿದು 268 ಮೆಟ್ಟಲುಗಳನ್ನು ಏರುವಾಗ ಕಮಲದ ಮೇಲೆ ಕುಳಿತ ಬುದ್ಧನ ಕಂಚಿನ ಪ್ರಶಾಂತ ವಿಗ್ರಹ. ಇದನ್ನು ನೋಡುವಾಗಲೇ ಜ್ಞಾನೋದಯವಾದ ಆನಂದ. ಈ ವಿಗ್ರಹವನ್ನು 1990ರಿಂದ 93ರ ನಡುವೆ ನಿರ್ಮಿಸಲಾಗಿದೆ. ಇದರ ಎತ್ತರ 112 ಅಡಿ. 

ಪ್ರವಾಸೋದ್ಯಮ ಎಂದರೆ ಒಂದು ಉದ್ಯಮವಲ್ಲ, ಸಂಸ್ಕೃತಿ. ಚೀನೀಯರಿಗೆ ಅದು ತಿಳಿದಿದೆ. ಅಲ್ಲಿನ ಆಕರ್ಷಣೀಯ ಪ್ರದೇಶಗಳಿಗೆ ಸಮನಾಗಬಲ್ಲಂಥ ಅನೇಕ ಸ್ಥಳಗಳು ನಮ್ಮಲ್ಲಿಯೂ ಇವೆ. ಆದರೆ, ನಮ್ಮಲ್ಲಿ ಇನ್ನೂ  “ಪ್ರವಾಸ’ದ‌ ಕಲ್ಪನೆ ವ್ಯವಸ್ಥಿತವಾಗಿ ಬೆಳೆದಿಲ್ಲ. ನಾವು ಪ್ರವಾಸವನ್ನು ಉದ್ಯಮವಾಗಿ ಮಾತ್ರ ನೋಡುತ್ತೇವೆ, ಸಾಂಸ್ಕೃತಿಕ ವಿಸ್ತರಣೆಯ ಭಾಗವೆಂದು ಭಾವಿಸುತ್ತಿಲ್ಲ. ಆ ಭಾವನೆ ಬೆಳೆದರೆ ಚೀನಾದಂತೆ ಭಾರತವೂ ವಿದೇಶೀಯ ಪ್ರವಾಸಿಗರನ್ನು ಆಕರ್ಷಿಸಬಹುದು.

ಅಶೋಕ ಆಳ್ವ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.