ಪ್ರಬಂಧ: ಟೀವಿ ಜೀವಿಗಳು


Team Udayavani, Dec 2, 2018, 6:00 AM IST

s-8.jpg

ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಜೀವನವಿಧಾನವೊಂದಿರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿಯೂ ಇರುತ್ತದೆ. ಒಬ್ಬ ವ್ಯಕ್ತಿಯ ಆಹಾರ, ಆಚಾರ, ವಿಚಾರ, ಉಡುಗೆ-ತೊಡುಗೆ, ನಡೆ-ನುಡಿ ಇನ್ನೊಬ್ಬನಿಗಿಂತ ಭಿನ್ನವಾಗುತ್ತದೆ. ಅವೆಲ್ಲ ಅವನವನ ಜೀವನೋದ್ದೇಶಕ್ಕೆ ಅನುಗುಣವಾಗಿಯೇ ಇರುವುದು ಸರ್ವೇಸಾಮಾನ್ಯ. ಲೋಕೋಭಿನ್ನರುಚಿಃ ಅನ್ನುವುದೂ ಇದನ್ನೇ. ಜೀವನ ಶೈಲಿ ಅನ್ನುವುದೂ ಇದನ್ನೇ.

ಈ ಸಂದರ್ಭದಲ್ಲಿ ನನ್ನ ಗೆಳೆಯರೊಬ್ಬರ ನೆನಪಾಗುತ್ತದೆ. ಅವರನ್ನು ಅನುಕೂಲಕ್ಕಾಗಿ “ರೂ’ ಅಂತ ಹೆಸರಿಸೋಣ. ಜೀವನದಲ್ಲಿ ಒಂಟಿಯಾಗಿದ್ದ “ರೂ’ ಅವರು ರೂಮೊಂದರಲ್ಲಿ ವಾಸಮಾಡುತ್ತ ಊಟತಿಂಡಿಗೆ ಹೊಟೇಲನ್ನೇ ಅವಲಂಬಿತರಾಗಿದ್ದರು. ಇದೊಂದು ಸರ್ವೇಸಾಮಾನ್ಯ ಸಂಗತಿ. ಇದರಲ್ಲೇನು ವಿಶೇಷ ಅಂತ ನೀವು ಕೇಳಬಹುದು. ವಿಶೇಷವಿದ್ದುದು ಅವರು ಊಟ ಮಾಡುವ ವಿಧಾನದಲ್ಲಿ ಅನ್ನಿ. “ರೂ’ ಅವರು ತಮ್ಮ ಎಲೆಗೆ ಬಡಿಸುತ್ತಿದ್ದ ಎಲ್ಲ ಪರಿಕರಗಳನ್ನೂ ಅಂದರೆ ಅನ್ನ, ಸಾರು, ತಿಳಿಸಾರು, ಮಜ್ಜಿಗೆ, ಪಲ್ಯ, ಹುಳಿ, ಉಪ್ಪಿನಕಾಯಿ, ಚಟ್ನಿ, ಹಪ್ಪಳ ಜೊತೆಗೊಂದಿಷ್ಟು ಉಪ್ಪು, ವಿಶೇಷ ದಿನಗಳಲ್ಲಿ ನೀಡುತ್ತಿದ್ದ ಪಾಯಸ, ಖೀರು ಈ ಎಲ್ಲವನ್ನು ಒಟ್ಟಾಗಿ ಸೇರಿಸಿ, ಕಲಸಿ ಒಂದು ಊಟದ ಉಂಡೆಯನ್ನು ಮಾಡುತ್ತಿದ್ದರು. ಆನಂತರ ಅದನ್ನು ತುತ್ತುಗಳನ್ನಾಗಿ ಪರಿವರ್ತಿಸಿ ತಮ್ಮ ತುತ್ತಿನ ಚೀಲವನ್ನು ತುಂಬುತ್ತಿದ್ದರು. ಜೊತೆಯಲ್ಲಿ ಊಟಕ್ಕೆ ಕೂರುತ್ತಿದ್ದವರಿಗೆ ಇದೊಂದು ಬಗೆಯ ವಿಚಿತ್ರವಾಗಿ ಕಾಣಿಸುತ್ತಿತ್ತು. ಆದರೆ, “ರೂ’ ಅವರ ವಾದವೇ ಬೇರೆಯಾಗಿತ್ತು. ಅವರು ಹೇಳುತ್ತಿದ್ದರು, “”ನಾವು ಒಂದೊಂದೇ ಪದಾರ್ಥವನ್ನು ಬೆರೆಸಿ, ಕಲಸಿ ತಿನ್ನುವುದಕ್ಕೆ ಅನೇಕ ಬಾರಿ ಕೈಯನ್ನು ಆ ಕಡೆ ಈ ಕಡೆ ಓಡಾಡಿಸಬೇಕು; ಇದು ವೃಥಾ ಕಾಲಹರಣ. ಅದರ ಬದಲು ಒಂದೇ ಸಲ ಎಲ್ಲ ಪದಾರ್ಥಗಳನ್ನು ಸೇರಿಸಿ, ಕಲಸಿ ತಿನ್ನುವುದರಿಂದ ಶ್ರಮ ತಪ್ಪುತ್ತದೆ. ಇಷ್ಟಾಗಿ, ನಾವು ತಿನ್ನುವ ಎಲ್ಲ ಪದಾರ್ಥಗಳೂ ನಮ್ಮ ಹೊಟ್ಟೆಗೆ ತಾನೆ ಹೋಗುವುದು? ಬಿಡಿಬಿಡಿಯಾಗಿ ತಿಂದರೂ ಹೊಟ್ಟೆಗೇ ಹೋಗುವುದು. ಇಡಿಯಾಗಿ ತಿಂದರೂ ಹೊಟ್ಟೆಗೇ ಹೋಗುವುದು. ಅಂದಮೇಲೆ ಎಲ್ಲವನ್ನೂ ಒಟ್ಟಾಗಿ ಸೇರಿಸಿ ತಿಂದರೆ ತಪ್ಪೇನು” ಅಂತ. ಇಲ್ಲಿ ಸರಿ-ತಪ್ಪು ವ್ಯಾಖ್ಯಾನ ಬೇರೆ. ಆ ಕುರಿತು ದೀರ್ಘ‌ವಾಗಿ ವಿವೇಚಿಸುವುದು ನನ್ನ ಉದ್ದೇಶವಲ್ಲ. ಮುಖ್ಯವಾಗಿ “ರೂ’ ಅವರು ಊಟಮಾಡುವ ವಿಧಾನ ಅಥವಾ ಶೈಲಿ ಇಲ್ಲಿ ಗಮನಿಸಬೇಕಾದ ಸಂಗತಿ. ಅದಕ್ಕನುಗುಣವಾಗಿಯೇ ಅವರ ಒಟ್ಟಾರೆ ಜೀವನ ಶೈಲಿ ರೂಪಗೊಂಡಿತ್ತು ಅಂತ ನಾವಾದರೂ ಅಂಬೋಣ ಮತ್ತು ನಂಬೋಣ. 

ಹೀಗೆ ವ್ಯಕ್ತಿಯೊಬ್ಬನ ಜೀವನ ಶೈಲಿಯನ್ನು ಗಮನಿಸಿದರೆ ಅದರಲ್ಲೊಂದು ವಿಶೇಷತೆ ಕಂಡುಬರುತ್ತದೆ ಎಂಬುದು ವಾಸ್ತವಿಕವಾದರೂ ಇತ್ತೀಚಿನ ವರ್ಷಗಳಲ್ಲಿ ಆ ವೈಶಿಷ್ಟ್ಯಕ್ಕೆ ಬದಲಾಗಿ ಏಕತಾನತೆಯೊಂದು ವ್ಯಾಪಕವಾಗಿ ಹಬ್ಬುತ್ತಿದೆ. ವೈಯಕ್ತಿಕ ಬದುಕನ್ನು ಸೀಮಿತಗೊಳಿಸಿಕೊಳ್ಳುತ್ತ ಮನುಷ್ಯ ತನ್ನೊಳಗೇ ಅಂತರ್ಗತನಾಗುತ್ತ, ಜೀವನದ ಬಹುತ್ವಕ್ಕೆ ಬದಲಾಗಿ ಏಕಾಂತದೆಡೆಗೆ ಚಲಿಸುತ್ತಿದ್ದಾನೆಂಬುದು ನಮಗೆ ಕಾಣಿಸದೆ ಇರದು. ಅಂದರೆ- ನನಗೆ ನಾನು, ನಿನಗೆ ನೀನು ಎಂಬ ಮನಃಸ್ಥಿತಿಯೊಂದು ಹಾಸುಹೊಕ್ಕಾಗುತ್ತಿದೆ. ಈ ಮನಃಸ್ಥಿತಿಗೆ ಇಂದಿನ ವಾತಾವರಣವೂ ಪೂರಕವಾಗುತ್ತಿದೆ. 

ಆಧುನಿಕತೆಯ ನಾನಾ ಅನ್ವೇಷಣೆಗಳು ಮನುಷ್ಯನ ನಿತ್ಯಜೀವನದ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಅವು ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರಭಾವವನ್ನು ಗಾಢವಾಗಿ ಬೀರುತ್ತಿವೆ. ಉದಾಹರಣೆಗೆ ಟಿ.ವಿ.ಯನ್ನೇ ತೆಗೆದುಕೊಳ್ಳಿ. ತಾಯಿ ಯಶೋದೆಗೆ ಬಾಲಕ ಶ್ರೀಕೃಷ್ಣ ತನ್ನ ಬಾಯೊಳಗೆ ವಿಶ್ವರೂಪದರ್ಶನ ಮಾಡಿಸಿದ ಹಾಗೆ ನಾವು ಕುಳಿತಲ್ಲೇ ಸಮಸ್ತ ವಿಶ್ವರೂಪದರ್ಶನ ಮಾಡಿಸುತ್ತದೆ. ಟಿ. ವಿ. ನಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳನ್ನು ನಮ್ಮ ಮುಂದೆ ಸುರಳಿಸುರಳಿಯಾಗಿ ಬಿಚ್ಚಿ, ನಮ್ಮ ಅರಿವನ್ನು ಹೆಚ್ಚಿಸುತ್ತದೆ ಎಂಬುದು ನಿಜವಾದರೂ ಅದರ ಅಡ್ಡಾದಿಡ್ಡಿ ಪರಿಣಾಮಗಳನ್ನು ನಾವು ಕಡೆಗಣಿಸುವಂತಿಲ್ಲ. ಅದರಲ್ಲೂ 24 x 7 ಟಿ.ವಿ.ಗಳ ಆಗಮನವಾದ ಮೇಲಂತೂ ಈ ಬದುಕೇ ಟಿವಿಮಯವೇನೊ ಎಂಬಂತಾಗುತ್ತಿದೆ. ದಿನದ ಇಪ್ಪತ್ತನಾಲ್ಕು ಗಂಟೆಗಳ ಟಿ.ವಿ. ವಾಹಿನಿಗಳನ್ನೇ ನೋಡಿ. ಒಂದು ಘಟನೆಯ ದೃಶ್ಯ ವಿವರಗಳನ್ನೇ ಮೊದಲಿನಿಂದ ತುದಿಯವರೆಗೂ ಪದೇ ಪದೇ ಬಿತ್ತರಿಸುತ್ತ “ಪುನರಪಿ ಜನನಂ ಪುನರಪಿ ಮರಣಂ’ ಎಂಬ ಆಚಾರ್ಯರ ಉಕ್ತಿಗೆ ನಿದರ್ಶನವೇನೋ ಅನ್ನುವಂತೆ ಪುನರಾವರ್ತಿಸುವುದನ್ನು ಏನೆಂದು ಕರೆಯೋಣ? ಹಾಡಿದ್ದೇ ಹಾಡಿದ ಕಿಸುಬಾಯಿ ದಾಸಯ್ಯ ಎಂಬ ಗಾದೆ ನಮಗೆ ನೆನಪಾಗುವುದು ತಾನೆ? ನಮಗೆ ಮಾಹಿತಿ ಬೇಕು ನಿಜ. ಆದರೆಷ್ಟು ? ಅದೇ ರೀತಿ ನಿರಂತರವಾಗಿ ಹರಿದುಬರುವ ಧಾರಾವಾಹಿಗಳು, ಚಲನಚಿತ್ರಗಳು ಈ ಮುಂತಾದವು ನೋಡುಗ ಸಮುದಾಯದ ಮೇಲೆ ಘಸ್ನಿ ಮಹಮ್ಮದ್‌ ಭಾರತದ ಮೇಲೆ ಸತತ ದಾಳಿಯಿಕ್ಕಿದ ಹಾಗೆ ವೀಕ್ಷಕರ ಮೇಲೆ ದಾಳಿ ಇಕ್ಕುತ್ತ, ಅವರ ಮೈಮನಗಳ ಮೇಲೆ ನಾನಾ ಬಗೆಯ ವಕ್ರ ಪರಿಣಾಮಗಳನ್ನು ಬೀರುವುದರ ಬಗ್ಗೆ ಅನುಮಾನವೇ ಇಲ್ಲ. ಅವು ತಮ್ಮ ಆಯಸ್ಕಾಂತ ಶಕ್ತಿಯಿಂದ ಎಷ್ಟರಮಟ್ಟಿಗೆ ನೋಡುಗರನ್ನು ಸೆಳೆದುಬಿಟ್ಟಿವೆಯೆಂದರೆ  ಜನರ ದಿನನಿತ್ಯದ ಚಟುವಟಿಕೆಗಳು, ಅವುಗಳು ಬಿತ್ತರಿಸುವ ಕಾರ್ಯಕ್ರಮಗಳು, ವೇಳಾಪಟ್ಟಿಗಳಿಗನುಗುಣವಾಗಿ ನಡೆದುಕೊಂಡು ಹೋಗುವಂತಾಗಿವೆ. ನಾನು ಬಲ್ಲ ವ್ಯಕ್ತಿಯೊಬ್ಬರಿ¨ªಾರೆ. ಅವರು ಬೆಳಗಾಗೆದ್ದು  ಏಳುವುದೇ ತಡ ಒಮ್ಮೆ ಟಿ.ವಿ. ಆನ್‌ ಮಾಡಿ, ಬರುವ ಸುದ್ದಿಯನ್ನೊಮ್ಮೆ ನೋಡಿ, ಆಮೇಲೆ ತಿಂಡಿ ತಿನ್ನುವುದರೊಂದಿಗೆ ಸುದ್ದಿಯನ್ನು ನಂಜಿಕೊಂಡು, ಬಳಿಕ ಧಾರಾವಾಹಿಗಳತ್ತ ತಮ್ಮ ಕಣ್ಣುಗಳನ್ನು ತಿರುಗಿಸುತ್ತಾರೆ. 

ಮಧ್ಯಾಹ್ನ ಊಟವಾದ ನಂತರ ಒಂದು ಹದ ನಿದ್ದೆ ಮಾಡಿ, ಆಮೇಲೆ ತಿರುಗಿ ಧಾರಾಕಾರವಾಗಿ ಧಾರಾವಾಹಿಗಳತ್ತ ಎರಗಿಕೊಳ್ಳುತ್ತಾರೆ. ಪುಂಖಾನುಪುಂಖವಾಗಿ ಧಾರಾವಾಹಿಗಳನ್ನು ನೋಡುತ್ತ, ರಾತ್ರಿ ಚಲನಚಿತ್ರಗಳತ್ತ ಹೊರಳುತ್ತಾರೆ. ಆನಂತರ, ರಾತ್ರಿ ಹಾಸಿಗೆಗೆ ಹೊರಳುವುದು ಮಧ್ಯರಾತ್ರಿಯೇ ಅನ್ನಿ. ವೃತ್ತಿಯಿಂದ ನಿವೃತ್ತಿಯಾದ ಅವರು ಬರುವ ಮಾಸಿಕ ಪಿಂಚಣಿಯಲ್ಲಿ ಇಳಿವಯಸ್ಸಿನ ಜೀವನವನ್ನು ರೂಢಿಸಿಕೊಂಡಿರುವುದು ಹೀಗೆ. ಈ ರೀತಿಯ ಹಲವು ಜನರನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಕಾಣಬಹುದು. ಟಿ.ವಿ.ಯೊಂದಿಗೆ ಅಂತರ್ಧಾನವಾಗಿರುವ ಅಂಥವರು ವಾಸ್ತವಿಕ ಬದುಕಿಗೂ ತಮಗೂ ಏನೇನೂ ಸಂಬಂಧವಿಲ್ಲ ಎಂಬಂತೆ ಬದುಕುವುದನ್ನು ರೂಢಿಸಿಕೊಂಡುಬಿಟ್ಟಿದ್ದಾರೆ ಎಂದು ನಾವಾದರು ನಿರ್ಣಯಕ್ಕೆ ಬರಬಹುದು.

ಟಿ.ವಿ.ಯೊಂದಿಗೇ ಬೆಳಗನ್ನು ಪ್ರಾರಂಭಿಸುವವರು ಅನೇಕ ಮಂದಿ ಇದ್ದಾರೆನ್ನಿ. ಇವರನ್ನು ನೋಡಿ. ಬೆಳಗಾಗೆದ್ದು, ಗೋಡೆಯ ಮೇಲಿನ ದೇವರ ಪಟವನ್ನು ನೋಡುವ ಮೊದಲು ಅಲಂಕೃತವಾದ ಟಿ.ವಿ. ದೇವರತ್ತ ತಮ್ಮ ಮುಖ ತಿರುಗಿಸುತ್ತಾರೆ. ಟಿ.ವಿ. ಆನ್‌ ಮಾಡಿ, ಅದರ ಮುಂದೆ ನಿಂತಾಗ, ಬಣ್ಣ ಬಣ್ಣದ ದೇವರ ಚಿತ್ರ ಅವರ ಕಣ್ಣುಗಳನ್ನು ತುಂಬುತ್ತದೆ. ಅವರು ಪರದೆಯ ಮೇಲೆ ಕಾಣಿಸುತ್ತಿರುವ ಪಾರ್ವತಿ-ಪರಮೇಶ್ವರರಿಗೆ ಕೈಮುಗಿಯುತ್ತ ಹಾಗೆ ಕ್ಷಣಕಾಲ ಕಣ್ಣು ಮುಚ್ಚಿ , ಧ್ಯಾನಿಸಿ, ಕಣ್ಣುಬಿಟ್ಟಾಗ ಪರದೆಯ ಮೇಲೆ ಆ ದೇವರು ನಾಪತ್ತೆಯಾಗಿ ಆ ಸ್ಥಾನದಲ್ಲಿ ತಿರುಪತಿ ವೆಂಕಟರಮಣ ತನ್ನ ಭರ್ಜರಿ ನಾಮದೊಂದಿಗೆ ನಿಂತಿರುತ್ತಾನೆ. ಭಕ್ತರಿಗೆ ಭಾವಭಂಗವಾಗುತ್ತದೆ. ಅರರೆ, ನಾನು ಕೈಮುಗಿದು ಪ್ರಾರ್ಥಿಸಿಕೊಂಡಿದ್ದು ಶಿವಪಾರ್ವತಿಯರನ್ನು, ಈಗ ನೋಡಿದರೆ ನಾಮದ ತಿರುಪತಿ ಪ್ರತ್ಯಕ್ಷನಾಗಿದ್ದಾನಲ್ಲ! ಅಂತ ಇವರು ಪೇಚಾಡಿಕೊಳ್ಳಬಹುದು. ಅಷ್ಟೇ ಅಲ್ಲ ಈ ಟಿ.ವಿ. ಭಕ್ತರ ಪೀಕಲಾಟ ದೇವರುಗಳ ಪೀಕಲಾಟಕ್ಕೂ ಕಾರಣವಾಗುತ್ತದೆ ಅನ್ನೋಣ. ಭಕ್ತರ ಇಷ್ಟಾರ್ಥವನ್ನು ಯಾವ ದೇವರು ಪೂರೈಸಬೇಕು ಎಂಬ ಜಿಜ್ಞಾಸೆ ದೇವರುಗಳ ನಡುವೆ ಉಂಟಾಗುವುದರಲ್ಲಿಯೂ ಅನುಮಾನವಿಲ್ಲ. ಇನ್ನು ಟಿ.ವಿ.ಯಿಂದ ಹೊರಹೊಮ್ಮುವ ಸುಪ್ರಭಾತವನ್ನೊ, ಸ್ತೋತ್ರವನ್ನೊ ಕೇಳುತ್ತ, ತಮ್ಮ ಶ್ರವಣಗಳು ಪುಣ್ಯವಾದವು ಎಂದು ಪರಿಭ್ರಮಿಸುತ್ತ ದೈನಂದಿನ ಗೃಹಕೃತ್ಯಗಳಲ್ಲಿ ತೊಡಗುವ ಹೆಂಗಸರೂ ಇದ್ದಾರೆನ್ನಿ.

ಟಿ.ವಿ.ಯನ್ನೇ ಸಮಯಪಾಲಕವನ್ನಾಗಿ ಪರಿವರ್ತಿಸಿಕೊಂಡು ಅದಕ್ಕನುಗುಣವಾಗಿ ತಮ್ಮ ದಿನಚರಿಯನ್ನು ರೂಢಿಸಿಕೊಂಡಿರುವವರೂ ಸಮಾಜದಲ್ಲಿ ಅಗಣಿತವಾಗಿ ಕಂಡುಬರುತ್ತಾರೆ. ಬೆಳಗಿನ ಮೊದಲ ಧಾರಾವಾಹಿ ಬರುವುದರೊಳಗಾಗಿ ತಿಂಡಿ, ಮಧ್ಯಾಹ್ನ ಇಷ್ಟಪಟ್ಟು ನೋಡುವ ಧಾರಾವಾಹಿ ಬರುವುದರೊಳಗಾಗಿ ಊಟ, ಸಂಜೆಯ ಧಾರಾವಾಹಿಯನ್ನೊ, ಚಲನಚಿತ್ರವನ್ನು ನೋಡಿದನಂತರ ವಾಕಿಂಗ್‌ಗೊ, ಶಾಪಿಂಗ್‌ಗೊ ಹೊರಹೋಗುವುದು, ರಾತ್ರಿ ಕಣ್ಣು ಮತ್ತು ಮನಸ್ಸು ಅಸ್ತವ್ಯಸ್ತ ಆಗುವವರೆಗೆ ಟಿ.ವಿ. ನೋಡಿಯೇ  ನೋಡಿ, ಆಮೇಲೆ ನಿದ್ರಾದೇವಿಯ ತೆಕ್ಕೆಗೆ ಮೊರೆ ಹೋಗುವುದು. ಈ ಬಗೆಯ ದಿನಚರಿಯಿಂದ ಸುತ್ತಲ ಜಗತ್ತು ಕತ್ತಲ ಜಗತ್ತಾಗಿ ಪರಿವರ್ತನೆಯಾಗುವುದರಲ್ಲಿ ಅನುಮಾನವಿಲ್ಲ ಎಂದೇ ನನ್ನ ನಂಬಿಕೆ. ತಾವು ಮಾಡಬೇಕಾದ ಅಥವಾ ಮಾಡಬಹುದಾದ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ಕೆಲವರು ಎಷ್ಟೊಂದು ಟಿ.ವಿ. ಧ್ಯಾನಾಸಕ್ತರಾಗಿರುತ್ತಾರೆಂದರೆ, ಅಲ್ಲಿಂದವರು ಕದಲದೆ ಗಂಟೆಗಟ್ಟಲೆ ಝಂಡಾ ಹೂಡಿಬಿಡುತ್ತಾರೆ. ಕುಳಿತಲ್ಲೇ ಅವರು ರಿಮೋಟ್‌ ಕಂಟ್ರೋಲ್‌ ಅನ್ನು ಒತ್ತುತ್ತ, ಚಾನಲ್‌ನಿಂದ ಚಾನೆಲ್‌ಗೆ ನೆಗೆಯುತ್ತಿರುತ್ತಾರೆ. ಯಾವುದೊ ಒಂದು ಧಾರಾವಾಹಿಯನ್ನೋ ಚಲನಚಿತ್ರವನ್ನೋ ನೋಡುತ್ತಿದ್ದವರು, ಅದಕ್ಕೊಂದು ವಿರಾಮ ಬಂದಾಗ, ಇನ್ನೊಂದು ಚಾನಲ್‌ನತ್ತ ನೆಗೆದು, ಅಲ್ಲಿಯೂ ಬೇಸರವಾದರೆ ಮತ್ತೂಂದಕ್ಕೆ ಜಿಗಿದು ಜಿಗಿಯುತ್ತಲೇ ಹೋಗುವುದರಿಂದ ಅಂತಹವರನ್ನು ಜಿಗಿತದ ವೀಕ್ಷಕರು ಎಂದು ನಾಮಕರಣಗೊಳಿಸಬಹುದು. ಅವರು ಯಾವುದನ್ನು ಎಷ್ಟು ಗ್ರಹಿಸಿದರು, ಯಾವುದನ್ನು ಎಷ್ಟು ಪರಿಗ್ರಹಿಸಿದರು ಎಂಬುದಕ್ಕೆ ದಾಖಲಾತಿಯೇ ಇರುವುದಿಲ್ಲ. ಈ ಸಂದರ್ಭದಲ್ಲಿ ನನ್ನ ಗುರುಗಳಾಗಿದ್ದ ಡಾ. ಎಂ. ಚಿದಾನಂದಮೂರ್ತಿ ಅವರು ವಿಶ್ರಾಂತಿ ಅಂದರೆ ಮಾಡುವ ಕೆಲಸದಿಂದ ವಿರಮಿಸುವುದಲ್ಲ. ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಬದಲಾವಣೆ; ಓದಿ ಸಾಕಾದಾಗ ಬರಹಕ್ಕೆ ತೊಡಗಿಕೊಳ್ಳುವುದು, ಈ ರೀತಿ ಅಂತ ಹೇಳುತ್ತಿದ್ದ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಚಾನೆಲ್‌ನಿಂದ ಚಾನೆಲ್‌ಗೆ ನೆಗೆಯುವುದರ ಮೂಲಕ ಇಂಥವರು ಡಾ. ಮೂರ್ತಿ ಅವರ ಮಾತಿಗೆ ಪೂರಕವಾಗಿ ನಿಲ್ಲುತ್ತಾರೆ ಅನ್ನಬಹುದಲ್ಲವೆ?

ಇನ್ನೂ ಕೆಲವರಿದ್ದಾರೆ, ತುಂಬಾ ಸಾಮಾಜಿಕ ಕಳಕಳಿಯುಳ್ಳ ವೀಕ್ಷಕರು ಅಂತ ತಮಗೆ ತಾವೇ ಕಲ್ಪಿಸಿಕೊಂಡುಬಿಟ್ಟಿರುತ್ತಾರೆ. ಟಿ.ವಿ.ಗಳಲ್ಲಿ ಪ್ರಸಾರವಾಗುವ ಸಾಮಾಜಿಕ, ಆರ್ಥಿಕ, ರಾಜಕೀಯ ಈ ಮುಂತಾದ ಚರ್ಚೆಗಳಲ್ಲಿ ತನ್ಮಯರಾಗಿ ಅದರಲ್ಲೇ ಲೀನವಾಗಿಬಿಡುತ್ತಾರೆ. ಚರ್ಚಾಪಟುಗಳು ಇಲ್ಲವೇ ಗೋಷ್ಠಿಪಟುಗಳು ನಿಗದಿತ ವಿಷಯದ ಬಗ್ಗೆ ವಿಚಾರವಿನಿಮಯ ಮಾಡುತ್ತಿರುವಾಗ ಈ ವೀಕ್ಷಕ ಮಹನೀಯರು ಮಧ್ಯೆ ಮಧ್ಯೆ ತಮ್ಮ ಅಭಿಪ್ರಾಯವನ್ನು ಉಚ್ಚರಿಸುತ್ತಾರೆ. ಆದರೆ, ಅವರ ಅಭಿಪ್ರಾಯಗಳು ಟಿ.ವಿ. ಪರದೆಗೆ ತಾಕಿ ಹಾಗೆಯೇ ರಿಬೌಂಡ್‌ ಆಗಿಬಿಡುವುದು ಸಹಜ ತಾನೆ? ಆದರೂ ಅವರು ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ಬಿಡುವುದಿಲ್ಲ. ಕೆಲವೊಮ್ಮೆ ಭಾವೋದ್ವೇಗಕ್ಕೆ ಒಳಗಾಗಿ ತಮ್ಮ ಮೈಮನಗಳ ಸುಸ್ಥಿತಿಯನ್ನು ದುಸ್ಥಿತಿಯನ್ನಾಗಿ ಮಾಡಿಕೊಳ್ಳುವುದೂ ಉಂಟು. ಆನಂತರ, ಮನೆಯವರೊಂದಿಗೊ, ಗೆಳೆಯ-ಗೆಳತಿಯರೊಂದಿಗೊ ತಮ್ಮ ಅಭಿಪ್ರಾಯ-ಭಿನ್ನಾಭಿಪ್ರಾಯಗಳ ಮಳೆ ಸುರಿಸುತ್ತ, ತಾವೊಬ್ಬ ಅತಿ ಕಾಳಜಿಯುಳ್ಳ ವ್ಯಕ್ತಿ ಎಂದು ಬೀಗುತ್ತ ತಮಗೆ ತಾವೇ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾರೆ.

ನ‌ನ್ನದೊಂದು ಅನುಭವವನ್ನು ತಮಗೆ ಹೇಳಲೇಬೇಕು. ಒಂದು ಸಂಜೆ ನಾನು ಪರಿಚಯದವರೊಬ್ಬರ ಮನೆಗೆ ಹೋಗಬೇಕಾಗಿ ಬಂತು. ಹೋದೆ, ಗೇಟು ಹಾಕಿತ್ತು. ಮನೆಯ ಬಾಗಿಲು ಮುಚ್ಚಿತ್ತು. ಮನೆಯವರ್ಯಾರಾದರು ಇದ್ದಾರೊ ಇಲ್ಲವೊ ಎಂಬ ಅನುಮಾನ ಬಂದಿತಾದರೂ, ಇರಲಿ ಅಂತ ಬಾಗಿಲು ಬಡಿದೆ. ಬೆಲ್ಲು ಒತ್ತಿದೆ. ಹೀಗೆ ಒಂದೆರಡು ಬಾರಿ ಮಾಡುವುದರಲ್ಲಿ ಮನೆಯ ಬಾಗಿಲು ತೆರೆಯಿತು. ನನ್ನ ಮುಖ ನೋಡಿದವರು ಇವನ್ಯಾಕೆ ಬಂದ ಇಷ್ಟೊತ್ತಿನಲ್ಲಿ? ಅನ್ನುವಂತೆ ಮುಖ ಮಾಡಿದರೂ, “ಒಳಗೆ ಬನ್ನಿ’ ಅಂದರು ಸೌಜನ್ಯಕ್ಕೆ. ನಿಸ್ಸಂಕೋಚವಾಗಿ ಮನೆಯೊಳಗೆ ಹೋದೆ. ನೋಡಿದೆ. ಮನೆಮಂದಿ ಎಲ್ಲ ಟಿ.ವಿ. ಮುಂದೆ ಧರಣಿ ಕುಳಿತಿದ್ದರು. “ಕೂರಿ’ ಅಂದರು. ನಾನೂ ಅವರೊಂದಿಗೆ ಧರಣಿ ಕೂತೆ. ನನ್ನ ಎದುರುಗಡೆಯಿದ್ದ ಟಿ.ವಿ.ಯಲ್ಲಿ ಪ್ರಶ್ನೋತ್ತ‌ರಮಾಲಿಕೆ ಕಾರ್ಯಕ್ರಮ ನಡೆಯುತ್ತಿತ್ತು. ಕೆಲವಾರು ತಂಡಗಳನ್ನೊಳಗೊಂಡಿದ್ದ ಆ ಕಾರ್ಯಕ್ರಮವನ್ನು ನಿರೂಪಕ ತನ್ನ ಬಗೆಬಗೆಯ ಹಾವಭಾವಗಳಿಂದ ನಿರ್ವಹಿಸುತ್ತಿದ್ದ. ಅವನ ಪ್ರಶ್ನೆಗಳಿಗೆ ಕರಾರುವಕ್ಕಾಗಿ ಉತ್ತರ ಹೇಳುವ ತಂಡಕ್ಕೆ ಆಕರ್ಷಕ ಬಹುಮಾನ ನೀಡುವುದಾಗಿ ಆತ ಪದೇ ಪದೇ ಘೋಷಿಸುತ್ತಿದ್ದ. ಹಾಗಾಗಿ, ಸ್ಟುಡಿಯೋ ಒಳಗೆ ಸೇರಿದ್ದ ತಂಡಗಳ ಸದಸ್ಯರು ಚುರುಕಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಬಹುದಾಗಿತ್ತು. ಇತ್ತ ಧರಣಿ ಕುಳಿತ ವೀಕ್ಷಕರ ನಡುವೆ ಒಬ್ಬ ಕಾಲೇಜು ವಿದ್ಯಾರ್ಥಿನಿಯೂ ಇದ್ದಳು. ಅವಳು ಸಾಕಷ್ಟು ಚುರುಕಾಗಿಯೂ ಇದ್ದಳು. ನಿರೂಪಕ ಇರಿಸುತ್ತಿದ್ದ ಸಮಸ್ಯೆಗಳಿಗೆ ಟಿ.ವಿ. ಕಾರ್ಯಕ್ರಮದಲ್ಲಿ ಭಾಗವಹಿದ್ದ ತಂಡಗಳು ಉತ್ತರ ಹೇಳಲು ತಡಬಡಾಯಿಸುವ ಹೊತ್ತಿಗೆ ಈಕೆ ಕರಾರುವಕ್ಕಾದ ಉತ್ತರ ಹೇಳುತ್ತ ಉಳಿದವರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಳು. ಪ್ರಶ್ನೋತ್ತರಮಾಲಿಕೆ ಮುಗಿಯುವ ಹೊತ್ತಿಗೆ ನಿರೂಪಕನ ಎಲ್ಲ ಪ್ರಶ್ನೆಗಳಿಗೆ ಆಕೆ ಉತ್ತರ ಹೇಳಿಯಾಗಿತ್ತು. ಆದರೆ, ನಿರೂಪಕ ಗೆದ್ದ ತಂಡದ ಹೆಸರು ಘೋಷಿಸಿದಾಗ, ಈ ಉತ್ತರದಾಯಿನಿ ಹುಡುಗಿ ಕಣ್ಣುದುಂಬಿಕೊಂಡು ಅಲ್ಲಿಂದ ಎದ್ದುಹೋದಳು. ಇಂಥ ವಿಚಿತ್ರ ಮನಃಸ್ಥಿತಿಗೆ ಏನನ್ನುವುದು? ಇದೇ ರೀತಿ ಎಷ್ಟೋ ಮನೆಗಳಲ್ಲಿ ಹೆಂಗಸರು ತಮ್ಮ ಮನೆಕೆಲಸಗಳನ್ನು ಚುಟುಕಾಗಿ ಮುಗಿಸಿ, ಧಾರಾವಾಹಿಗಳಿಗೆ ಗಂಟುಬೀಳುವುದೂ ಉಂಟು, ಬಿಡುವಾದಾಗ, ಅಕ್ಕಪಕ್ಕದ ಮನೆಯವರೊಂದಿಗೆ  ಇಲ್ಲವೆ ಗೆಳತಿಯರೊಂದಿಗೊ ಅಂದಂದಿನ ಧಾರಾವಾಹಿಗಳ ಸನ್ನಿವೇಶಗಳ ಬಗ್ಗೆ ಗಹನವಾದ ಚರ್ಚೆಯಲ್ಲಿ ಮುಳುಗಿಬಿಡುವುದೂ ಉಂಟು. “”ನೋಡಿದರೇನ್ರಿ, ಈ ಧಾರಾವಾಹೀಲಿ ರೇಖಾ ತನ್ನ ಗಂಡನಿಗೆ ಹೇಗೆ ದಬಾಯಿಸಿದಳು!”, “”ನೋಡಿದ್ರಾ ಆ ಧಾರಾವಾಹೀಲಿ ರಾಧಮ್ಮನವರನ್ನ? ವಯಸ್ಸಾದ್ರೂ ಎಂಥ ಫ್ಯಾಷನ್ನಿನ ಸೀರೆ ಉಟ್ಕೊಂಡಿದ್ದಳ್ಳು?”, “”ನೀವು ಏನೇ ಹೇಳಿ ಆ ಧಾರಾವಾಹೀಲಿ ವಸಂತ ತನ್ನತ್ತೆ ಮೇಲೆ ಅಷ್ಟೊಂದು ಜಬರ್ದಸ್ತು ತೋರಿಸ್ಬಾರ್ದಿತ್ತು. ನಾನು ಅತ್ತೆಯಾಗಿದ್ರೆ?” ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸುತ್ತ. ಅವುಗಳೊಳಗೆ ತಮ್ಮನ್ನು ಸಮೀಕರಿಸಿಕೊಂಡುಬಿಡುತ್ತಾರೆ. ಇವೆಲ್ಲ ಸರಿಯೆ, ತಪ್ಪೆ ಅನ್ನುವ ವ್ಯಾಖ್ಯಾನಕ್ಕಿಂತ ಈ ಬಗೆಯ ಜೀವನಶೈಲಿ ಎಷ್ಟರಮಟ್ಟಿಗೆ ವಾಸ್ತವಿಕ ಬದುಕಿಗೆ ಪೂರಕವಾದದ್ದು ಎಂಬುದು ಮುಖ್ಯವಾಗುತ್ತದೆ. ದೈನಂದಿನ ಬದುಕಿಗೆ ವಿಮುಖವಾಗಿ ಭಾÅಮಕಲೋಕದಲ್ಲಿ ವಿಹರಿಸುತ್ತ ತಾನುಂಟೊ ಟಿ.ವಿ. ಲೋಕವುಂಟೊ ಎಂಬಂತೆ ಕಾಲಕಳೆಯುವುದು ಸುತರಾಂ ಒಪ್ಪುವ ಮಾತಲ್ಲ. ನೋಡುಗರ ಈ ಮನಃಸ್ಥಿತಿಗಳನ್ನೇ ಬಂಡವಾಳ ಮಾಡಿಕೊಂಡಿರುವ ಟಿ.ವಿ.ಗಳು ಅಂಥದೇ ನಿರಂತರ ಸ್ಫೋಟಕ ಸುದ್ದಿಗಳನ್ನೂ, ಮಾಹಿತಿಗಳನ್ನೂ, ಧಾರಾವಾಹಿಗಳನ್ನೂ ಬಿತ್ತರಿಸುತ್ತ ನೋಡುಗರ ಮನಸ್ಸಿನಲ್ಲಿ ಅನೇಕ ಬಗೆಯ ಸ್ಫೋಟಕಗಳನ್ನು ಸ್ಫೋಟಿಸಿಬಿಡುತ್ತವೆ. ಇಂಥ ಸ್ಫೋಟದಿಂದ ಮನೆಗಳೇನು ಕುಸಿಯುವುದಿಲ್ಲ ನಿಜ. ಆದರೆ, ಮನಗಳು ಕುಸಿಯುವುದನ್ನು ತಡೆಯಲಾದೀತೆ?

ಹೊರೆಯಾಲ ದೊರೆಸ್ವಾಮಿ

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.