ಒಳಗಣ್ಣು ಹೊಳೆಸಿತು ಬೆಳಕನು!


Team Udayavani, Mar 12, 2017, 3:50 AM IST

kannu.jpg

ಲಲಿತಾ ಸಹಸ್ರನಾಮದಲ್ಲೊಂದು ಸಾಲು ಬರುತ್ತದೆ ಅಂತರ್ಮುಖ ಸಮಾರಾಧ್ಯ ಬಹಿರ್ಮುಖ ಸುದುರ್ಲಭಾ ಎಂದು. ಇದರರ್ಥ, ದೇವಿ, ಅಂತರಂಗದ ಆರಾಧನೆಗೆ ಸುಲಭದಲ್ಲಿ ದಕ್ಕುವವಳು, ಬಹಿರ್ಮುಖ ಚಿಂತನೆಗೆ ಸುಲಭಕ್ಕೆ ನಿಲುಕದವಳು… ಎಂದು. ದೇವಿ ಎಂದರೆ ನನಗಂತೂ ಆತ್ಮಶಕ್ತಿ, ನಮ್ಮೊಳಗಿನ ಅಂತಃಶಕ್ತಿ. ಅಂಧತ್ವ , ಶಾಶ್ವತ ಕುರುಡು ಎಂಬುದು ಬಹು ದೊಡ್ಡ ಸವಾಲು. ಇದನ್ನು ಸಮರ್ಥವಾಗಿ ಎದುರಿಸಲು ಎಷ್ಟು ಧೈರ್ಯ ಇದ್ದರೂ ಸಾಲದು. ಬೇರೆ ಅಂಗ ವೈಫ‌ಲ್ಯಗಳಲ್ಲೇ ಅತಿಯಾಗಿ ನಮ್ಮನ್ನು ಕಾಡಿಸುವುದು ಈ ಅಂಧತ್ವ ಎಂದೆನಿಸುತ್ತದೆ ನನಗೆ. ಈ ಅಂಧತ್ವವನ್ನು ಹೊಂದಿದವರಿಗೆ ಹೊರಗಣ ಪ್ರಪಂಚವನ್ನು ಕಾಣಲೇ ಆಗದು. ಏನನ್ನೂ ಅನುಭೂತಿಸಲೇ ಸಾಧ್ಯವಾಗದು. ಜನರ ಸಂಪರ್ಕ, ಓದುವಿಕೆ, ಬರೆಯುವಿಕೆ ಎಲ್ಲವುದಕ್ಕೂ ಬೇರೊಬ್ಬರ ಸಹಾಯ ಅತ್ಯಗತ್ಯ. ಬ್ರೈಲ್‌ ಲಿಪಿಯ ಮುಖಾಂತರವೇ ಎಲ್ಲವನ್ನೂ ಓದಿಕೊಳ್ಳಬೇಕು. ಕಲಿಯಬೇಕು. ಬಹಳ ಕಷ್ಟ ಎಂದೇ ಈವರೆಗೂ ಭಾವಿಸಿ¨ªೆ. ಆದರೆ ನನ್ನ ಈ ಕಲ್ಪನೆ ಬಲು ಸೀಮಿತ, ಕೇವಲ ನನ್ನ ಅರಿವಿನ ಕೊರತೆಯಿಂದ ಉಂಟಾದ ಸಂಕುಚಿತ ಭಾವ ಎಂಬುದನ್ನು ತೋರಿಸಿಕೊಟ್ಟಿದೆ. ಇತ್ತೀಚೆಗೆ ನನಗೆ ಪರಿಚಿತರಾದ   ಶ್ರೀಧರ್‌ ಟಿ. ಎಸ್‌. ಅವರ ಸ್ಫೂರ್ತಿದಾಯಕ ಬದುಕು.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಜನಿಸಿದ ಶ್ರೀಧರ್‌ ಹುಟ್ಟು ಕುರುಡರು. ತಂದೆ ಶ್ರೀನಾಥ್‌ ಕೃಷಿಕರು. ತಾಯಿ ಜಯಂತಿ ಗೃಹಿಣಿ. ಶ್ರೀಧರ್‌ ತಮ್ಮ ಅಂಗವೈಕಲ್ಯದಿಂದ ಕುಗ್ಗದೇ, ಬಾಲ್ಯದಿಂದಲೇ ಎÇÉಾ ಮಕ್ಕಳಂತೇ ವಿದ್ಯಾಭ್ಯಾಸ ಪಡೆಯಲು ಪಣತೊಟ್ಟಿದ್ದರು. ಶಿಕ್ಷಣಾಭ್ಯಾಸದ ಮಹತ್ವವನ್ನು ಅರಿತಿದ್ದ ಅವರ ಹೆತ್ತವರು, ಧೈರ್ಯಮಾಡಿ ಆ ಕಾಲದಲ್ಲಿ ಸಿದ್ದಾಪುರದಲ್ಲಿ ಹೊಸತಾಗಿ ಆರಂಭವಾದ ಮೊತ್ತಮೊದಲ ಅಂಧರ ಶಾಲೆಗೆ ಸೇರಿಸಿದ್ದರು. ಇಲ್ಲಿ ಅವರು ಒಂದರಿಂದ ಐದನೆಯ ತರಗತಿಯನ್ನು ಹಾಸ್ಟೆಲ್ಲಿನಲ್ಲಿದ್ದುಕೊಂಡೇ ಕಲಿತರು. ಹೀಗೆ ಬಾಲ್ಯದಿಂದಲೇ ಹೆತ್ತವರಿಂದ, ಮನೆಯಿಂದ ದೂರವಿದ್ದು ಸ್ವಂತ ಬಲದ ಮೇಲೆ, ಛಲದಿಂದ ಕಲಿಯಲು ಶುರುವಿಟ್ಟುಕೊಂಡವರು ಶ್ರೀಧರ್‌. ಮುಂದೆ ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ಸೇರಿ, ಐದರಿಂದ ಹತ್ತನೆಯ ತರಗತಿ, ಮೈಸೂರಿನ ಜೆಎಸ್‌ಎಸ್‌ ಪಾಲಿಟೆಕ್ನಿಕ್‌ ಫಾರ್‌ ಡಿಫ‌ರೆಂಟಿÉ ಏಬಲ್ಡ್‌ ಕಾಲೇಜಿನಲ್ಲಿ ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಅಪ್ಲಿಕೇಶನ್ಸ್‌ ಫಾರ್‌ ವಿಶ್ಯುವಲಿ ಇಂಪೇರ್ಡ್‌ ಮಾಡಿಕೊಂಡು, ಬಿ.ಎ. ಡಿಗ್ರಿಯನ್ನು ಮೈಸೂರು ಮುಕ್ತ ವಿ.ವಿ.ಯಲ್ಲಿ ಮುಗಿಸಿದಾಗ ಅವರ ಮನದೊಳಗೆ ಹೊಸ ಕನಸೊಂದು ಮೂಡಿತ್ತು- ಕಂಪ್ಯೂಟರಿನಲ್ಲಿಯೇ ಉನ್ನತ ವಿದ್ಯಾಭ್ಯಾಸ ಮಾಡಬೇಕೆಂಬುದು! ಆರಂಭದಲ್ಲಿ ಹಲವರು ಇವರಿಗೆ ಕಂಪ್ಯೂಟರ್‌ ಕಲಿಸಲು ಹಿಂದೇಟು ಹಾಕಿದ್ದರಂತೆ. ಕುರುಡರಿಗೆ ಹೇಗೆ ಕಲಿಸುವುದು? ಸಾಧ್ಯವಿಲ್ಲ , ಅಂತಹ ಸೌಲಭ್ಯವಿಲ್ಲ ಎಂದುಬಿಟ್ಟಿದ್ದರಂತೆ. ಆದರೆ ಅವರು ಅಷ್ಟಕ್ಕೇ ಹತಾಶರಾಗದೇ ಡೆಸ್ಕ್ ಟಾಪಿನಲ್ಲಿ Screen reader (JAWS for Windows)   ಅಳವಡಿಸಿಕೊಂಡು, ಇದರ ಸಹಕಾರದಲ್ಲೆ ಗೂಗಲಿನಲ್ಲಿ ಹೊಸ ಹೊಸ ತಂತ್ರಾಂಶಗಳನ್ನು ಸಂಶೋಧಿಸಿ, ಸ್ವಯಂ ಹಲವು ವಿಷಯಗಳನ್ನು ಕಲಿತುಕೊಂಡರು. ಉನ್ನತ ವ್ಯಾಸಂಗಕ್ಕಾಗಿ ಸಿಕ್ಕಿಂ ಮಣಿಪಾಲ್‌ ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಿದಾಗ ಅವರು ಮೊದಲು ಒಪ್ಪಿರಲಿಲ್ಲ. ಆದರೆ, ಇವರು ಸೋಲೊಪ್ಪಿಕೊಳ್ಳದೇ, ಬೆಂಗಳೂರಿನಲ್ಲಿರುವ ಅವರ ಆಫೀಸಿಗೆ ಹೋಗಿ ತಮ್ಮ ಸಾಮರ್ಥ್ಯವನ್ನು ತೋರಿ, ಒಪ್ಪಿಸಿ ಛಲದಿಂದ ಅದೇ ವಿಶ್ವವಿದ್ಯಾನಿಲಯದಲ್ಲಿಯೇ M.Sc. IT ಯಲ್ಲಿ ಮಾಸ್ಟರ್‌ ಡಿಗ್ರಿ ಪಡೆದರು. ಪ್ರಸ್ತುತ ಶ್ರೀಧರ್‌ ಅವರು SBI ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿ¨ªಾರೆ. ಸ್ವತಂತ್ರವಾಗಿ ಎಲ್ಲೆಡೆ ಓಡಾಡುತ್ತಾರೆ. ಅಲ್ಲದೇ, ನಮ್ಮಧಿ-ನಿಮ್ಮಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಮುಖಗೋಡೆಯಲ್ಲಿ ಲೈಕು, ಕಮೆಂಟು, ಫೋಟೋ ಹಂಚಿಕೊಳ್ಳುವಿಕೆ ಎಲ್ಲವನ್ನೂ ಸುಲಲಿತವಾಗಿ ನಿರ್ವಹಿಸುತ್ತಾರೆ. ಅಂಧತ್ವ ಇವರನ್ನು ಯಾವ ಎಲ್ಲೆಯೊಳಗೂ ಬಂಧಿಸಿಟ್ಟಿಲ್ಲ! 

ಅವರೇ ಕೊಟ್ಟ ಮಾಹಿತಿಯಂತೆ ಡೆಸ್ಕ್ಟಾಪ್‌ ವಿಂಡೋಸ್‌ಗಳಲ್ಲಿ ನಾವು OCR (Optical Character recognition), NVDA (Non Visual Desktop Access) ಮತ್ತು JAWS (Job Access with speech for Windows) ತಂತ್ರಾಂಶಗಳನ್ನು (Software) ಅಳವಡಿಸಿಕೊಂಡು, ಎÇÉಾ ಕೆಲಸಗಳನ್ನು ನಿರಾತಂಕವಾಗಿ ಮಾಡಬಹುದು. ಇವು ಅಂಧರಿಗೆ ಟೈಪಿಸಲೂ ಸಹಕರಿಸುತ್ತವೆ. OCR ತಂತ್ರಾಂಶ ಫೋಟೋ ವಿನ್ಯಾಸದಲ್ಲಿರುವ (Format) ಅಕ್ಷರಗಳನ್ನೆÇÉಾ ಸರಾಗವಾಗಿ ಓದುತ್ತ ಹೋಗುತ್ತದೆ. ಇದರಿಂದ ಯಾವುದೇ ಬರಹದ ಫೋಟೋ ತೆಗೆದು ಓದಿಕೊಳ್ಳಬಹುದಾಗಿದೆ. ಹಾಗೆಯೇ ಆ್ಯಂಡ್ರಾಯಿಡ್‌ ಮೊಬೈಲ್‌ಗ‌ಳಲ್ಲಿ Talk back ಎಂಬ ತಂತ್ರಾಂಶದ ಮೂಲಕ ಮೈಲ್‌, ಫೇಸುºಕ್‌, ವಾಟ್ಸಾಪ್‌ಗ್ಳನ್ನು ನೋಡದೆಯೂ ನಿರ್ವಹಿಸಬಹುದು. ಇದರ ಕುರಿತು ಹೆಚ್ಚಿನ ಮಾಹಿತಿಗಳನ್ನು ಅಗತ್ಯವಿರುವವರು ಸಂಪರ್ಕಿಸಿದರೆ ಸ್ವತಃ ಶ್ರೀಧರ್‌ ಅವರೇ ಕೊಡುತ್ತಾರೆ. ಸ್ವತಃ ಶ್ರೀಧರ್‌ ಅವರೇ ತಮ್ಮೊಳಗಿನ ಈ ಎÇÉಾ ಮಾಹಿತಿಗಳನ್ನು ಡೆಮೋ ಸಹಿತ ಹಲವೆಡೆ ವಿವರಣೆ ನೀಡಿ ಪ್ರೇರಣೆ ನೀಡಿ¨ªಾರೆ. (ಶ್ರೀಧರ್‌ ಅವರ ಈಮೇಲ್‌ ಐಡಿಯನ್ನು ಕೊನೆಯಲ್ಲಿ ನೀಡಲಾಗಿದೆ.)

ಕಣಜ ಅಂತರ್ಜಾಲದಲ್ಲಿ ಅಪ್‌ಲೋಡಾಗಿರುವ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು , ಇನ್ನೂ ಅನೇಕಾನೇಕ ಬೃಹತ್‌ ಗೃಂಥಗಳನ್ನು ಶ್ರೀಧರ್‌ ಅವರು ಓದಿಕೊಂಡಿ¨ªಾರೆ. ಶ್ರೀ ಜೋನಾಥನ್‌ ಡಡ್ಡಿಂಗ್ಟನ್‌ ಎಂಬವರು ರೂಪಿಸಿದ ಈ-ಸ್ಪೀಕ್‌ ಎಂಬ Text to Speech (TTS) ಮುಕ್ತತಂತ್ರಾಶಕ್ಕೆ ಕನ್ನಡ ಭಾಷೆಗೆ ಬೇಕಾದ ಅಗತ್ಯಗಳನ್ನು ರೂಪಿಸಿಕೊಟ್ಟವರು ಶ್ರೀಧರ್‌ ಅವರು. TTS  (ಅಕ್ಷರ ದನಿ) ತಂತ್ರಾಶ ಕನ್ನಡದಲ್ಲಿ ಬರೆದ ಅಕ್ಷರಗಳನ್ನು ಧ್ವನಿ ಅಥವ ಮಾತಿನ ರೂಪಕ್ಕೆ ಬದಲಾಯಿಸಿಕೊಡುತ್ತದೆ. ಆದರೆ ಸದ್ಯ ನಮ್ಮಲ್ಲಿ ಕನ್ನಡ ಅಕ್ಷರಗಳನ್ನು ಓದುವ ತಂತ್ರಾಂಶ ಇಂಗ್ಲಿಶಿನಷ್ಟು ಹೆಚ್ಚು ಅಭಿವೃದ್ಧಿಗೊಂಡಿಲ್ಲ. ಫೋಟೋ ವಿನ್ಯಾಸದಲ್ಲಿರುವ ಕನ್ನಡ ಅಕ್ಷರಗಳನ್ನು ಧ್ವನಿಗೆ ಬದಲಾಯಿಸಿ ಹೇಳಬಲ್ಲ ತಂತ್ರಾಂಶ ಈಗಿನ್ನೂ ಶೈಶವ ಸ್ಥಿತಿಯಲ್ಲಿದೆ. ಕೇವಲ ಟೈಪಿಸಿದ, ವೆಬ್‌ ತಾಣ ಗಳಲ್ಲಿ ಹಾಕಲ್ಪಟ್ಟ ಅಕ್ಷರಗಳನ್ನಷ್ಟೇ ಓದಬಹುದು. ಕನ್ನಡ ಪುಸ್ತಕದ ಪುಟಗಳನ್ನು ಫೋಟೋ ತೆಗೆದು ಕೊಟ್ಟರೆ ಅದರ ಅಕ್ಷರಗಳನ್ನು ಗ್ರಹಿಸಿ ಓದಬಲ್ಲ ತಂತ್ರಾಂಶಕ್ಕಾಗಿ ಹುಡುಕಾಟ ಸಾಗಿದೆ. 

ನಾನಿಲ್ಲಿ ಕೊಟ್ಟಿರುವುದು ಬಹಳ ಸ್ಥೂಲ ಮಾಹಿತಿ ಅಷ್ಟೇ. ಅವರ ಮೇರು ವ್ಯಕ್ತಿತ್ವ ಹಿಡಿತಕ್ಕೆ ನಿಲುಕದ್ದು. ಅಂಥ ಸಾಧನೆ ಅವರದ್ದು. ಇಪ್ಪತ್ತೆಂಟು ವರುಷದ ಈ ತರುಣನಲ್ಲಿರುವ ಜೀವನೋತ್ಸಾಹ, ದೂರದೃಷ್ಟಿತ್ವ , ಹೊಸ ಕನಸುಗಳು, ವಿಶಿಷ್ಟ ಕಲ್ಪನೆಗಳು, ಸುಸ್ಪಷ್ಟ ಚಿಂತನೆಗಳು ಅಮೋಘ! ಅನ್ಯಾಯ ಮಾಡುವಷ್ಟೇ ಸಹಿಸುವುದೂ ಅಪರಾಧ ಎಂಬುದನ್ನು ಬಲವಾಗಿ ನಂಬಿರುವ ಇವರು, ಒಂದು ಪ್ರಕರಣದಲ್ಲಿ ತಮ್ಮೊಂದಿಗೆ, ತಮ್ಮಂಥವರೊಂದಿಗೆ ಅನ್ಯಾಯ ನಡೆಯುತ್ತಿರುವುದನ್ನು ಕಂಡು, ವ್ಯವಸ್ಥೆಯೊಳಗಿನ ಅವ್ಯವಸ್ಥೆಗೆ ಸಡ್ಡು ಹೊಡೆದು ನಿಂತು, ಹತಾಶರಾಗಿದ್ದ ನೂರಾರು ಅಂಗ ವಿಕಲರಿಗೆ ಬೆನ್ನೆಲುಬಾಗಿ ನಿಂತರು. ಅಂತಿಮವಾಗಿ ಎಲ್ಲರಿಗೂ ಸೂಕ್ತ ನ್ಯಾಯ ಸಿಗುವಂತೆ ಮಾಡಿದ ಯಶಸ್ಸೂ ಇವರಿಗೆ ಸಲ್ಲುತ್ತದೆ. ಸ್ವಾಭಿಮಾನ, ಆತ್ಮವಿಶ್ವಾಸದ ಜ್ಯೋತಿಯನ್ನು ಸದಾ ತಮ್ಮ ಚೆಂದದ ನಗುವಿನೊಳಗೆ ಬೆಳಗಿಸಿಕೊಂಡಿರುವ ಇವರು ನನ್ನೊಂದಿಗೆ ಸಂವಾದಿಸುತ್ತ “”ನನಗೂ ಈ ವಿಕಲಚೇತನ ಅನ್ನೋ ಪದ ಬಹಳ ಹಿಂಸೆ ಆಗುತ್ತದೆ ನೋಡಿ…” ಎಂದಿ¨ªಾರೆ. ಸಮಾಜ/ಸರಕಾರ ಇನ್ನಾದರೂ ಈ ಅಸಂಬದ್ಧ ಪದವನ್ನು ಕೈಬಿಟ್ಟರೆ, ನಮ್ಮಂಥವರಿಗೆ ಎಷ್ಟೋ ಸಮಾಧಾನ!

ಶ್ರೀಧ‌ರ್‌ ಅವರನ್ನು ಸಂಪರ್ಕಿಸಲು:
[email protected]
TTS ಮುಕ್ತ ತಂತ್ರಾಶಕ್ಕಾಗಿ – http://kanaja.in/?page_id=2464

– ತೇಜಸ್ವಿನಿ ಹೆಗಡೆ

ಟಾಪ್ ನ್ಯೂಸ್

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.