ಕಾವ್ಯಧಾರೆಗೆ ಬಂತು ಹೊಸ ನೀರು


Team Udayavani, Mar 8, 2020, 5:04 AM IST

hoosa-niru

ಎಸ್‌.ದಿವಾಕರ್‌ ಅವರು ತಮ್ಮ ಓದಿನ ವ್ಯಾಪ್ತಿಯಿಂದ ಸದಾ ಸಾಹಿತ್ಯ ವಲಯವನ್ನು ಅಚ್ಚರಿಗೊಳಿಸಿದ್ದಾರೆ. ಅವರ ಕತೆಗಳನ್ನು ಮೆಚ್ಚಿಕೊಂಡ ದೊಡ್ಡ ವರ್ಗವೇ ಇದೆ. ಅವರು ಸಮರ್ಥ ಕವಿಗಳು ಹೌದೆನ್ನುವುದು ಇತ್ತೀಚೆಗೆ ಬಿಡುಗಡೆಯಾದ ಅವರ ಕವಿತಾ ಗುತ್ಛ ಓದಿದರೆ ತಿಳಿಯುವುದು. ಅವರು ಇಷ್ಟು ದಿವಸ ಈ ಕವಿತೆಗಳನ್ನು ಪುಸ್ತಕ ರೂಪದಲ್ಲಿ ತರದೆ ಕನ್ನಡ ಕವಿತೆಯ ಓದುಗರಿಗೆ ತುಂಬಾ ಅನ್ಯಾಯ ಮಾಡಿದ್ದಾರೆ.

ದಿವಾಕರರ ಕವಿತೆಗಳನ್ನೋದುವಾಗ ಕವಿ ಬೊರಿಸ್‌ ಪಾಸ್ತರ್ನಾಕನ ಸಾಲುಗಳು ನೆನಪಾದವು:
ಖಾಲಿ ಬಿಡು ಜಾಗಗಳನ್ನು ಬದುಕಿನಲ್ಲಿ ಆದರೆ ಕವಿತೆಯಲ್ಲಲ್ಲ ಅವರ ಕವಿತೆಗಳಲ್ಲಿ ಯಾವ ಪದವೂ ಪ್ರತಿಮೆಯೂ ಯಾದೃಚ್ಛಿಕವಾದುದಲ್ಲ. ಕತೆಗಳನ್ನು ಕಟ್ಟುವುದರಲ್ಲಿ ಅವರು ವಹಿಸುವ ಕಟ್ಟೆಚ್ಚರ ವಿಶ್ವದಆಧುನಿಕ ಕವಿಗಳಲ್ಲಿ ಪ್ರಮುಖರಾದವರನ್ನು ನೆನಪಿಸುತ್ತದೆ.

ಕನ್ನಡ ಕಾವ್ಯದಲ್ಲಿ ಆಧುನಿಕತೆ ಬಂದಾಗ ಅದು ವಿಶ್ವಕಾವ್ಯದ ಆಧುನಿಕತೆಯ ಸೀಮಿತ ರೂಪವಾಗಿತ್ತು. ಆಧುನಿಕ ಕಾವ್ಯ ವಿಶ್ವವ್ಯಾಪಿಯಾದ ಚಳುವಳಿಯಾದರೂ ಅದರ ಚಾಲನೆ ಸುರುವಾದದ್ದು ಯುರೋಪಿನ ಭಾಗಗಳಲ್ಲಿ.ಆಧುನಿಕ ಕಾವ್ಯದ ಲಕ್ಷಣಗಳ ಬಗೆಗೆ ದೀರ್ಘ‌ಚಿಂತನೆ ಮಾಡಿದ ಅಕ್ಟೇವಿಯೊ ಪಾಜ್‌ನ ಪ್ರಕಾರ ಆಧುನಿಕ ಕಾವ್ಯಎರಡು ಪ್ರಕಾರದ್ದು.ಮೊದಲನೆಯದು, ಜರ್ಮನಿಕ್‌ ಭಾಗಗಳ ಅಂಶೀಛಂದವನ್ನು ಹೋಲುವ ಪ್ರಕಾರದ್ದು.ಇದರ ಅಭಿವ್ಯಕ್ತಿ ಬಿಚ್ಚುಛಂದಸ್ಸಿನ ರಚನೆ. ಇನ್ನೊಂದು ರೋಮಾನ್ಸ್‌ ಭಾಗಗಳದು. ಇಲ್ಲಿನ ಛಂದಸ್ಸು ಮಾತ್ರಾಧಾರಿತ. ಇದರ ಪ್ರಧಾನ ಅಭಿವ್ಯಕ್ತಿ ಗದ್ಯಕತೆ.

ಟಿ.ಎಸ್‌.ಎಲಿಯಟ್‌ನ ಕಾವ್ಯವನ್ನು ರೊಮಾನ್ಸ್‌ ಆಧುನಿಕತೆಯ ಪ್ರಾತಿನಿಧಿಕ ಕವಿಯಾದ ಲೋರ್ಕಾನ ಕತೆಗಳ ಜೊತೆ ಹೋಲಿಸಿದರೆ ಇನ್ನೊಂದು ವ್ಯತ್ಯಾಸ ಗಮನಕ್ಕೆ ಬರುತ್ತದೆ. ಅದೇನೆಂದರೆ, ಎಲಿಯಟ್‌ನ ಪ್ರತಿಮಾಲೋಕ ಜಾಗೃತಾವಸ್ಥೆಯ ಬಿಸಿಲಿನಲ್ಲಿ ಮಿಂದದ್ದು. ಆದರೆ, ಲೋರ್ಕಾನನದು ಸ್ವಪ್ನಾವಸ್ಥೆಯ ಬೆಳದಿಂಗಳಲ್ಲಿ ಮೈತೊಳೆದುಕೊಂಡದ್ದು.

ಕನ್ನಡದ ಆಧುನಿಕತೆಯ ಪ್ರಧಾನಧಾರೆ ಆಂಗ್ಲೋ-ಅಮೆರಿಕನ್‌ ಮೂಲದಿಂದ ಬಂದ ಕಾರಣ ಅದು ಜರ್ಮನಿಕ್‌ ಬಗೆಯದು; ವ್ಯಂಗ್ಯದ, ವಿಡಂಬನೆಯ ಎಚ್ಚರದಿಂದ ಕೂಡಿದ್ದು.ಆದರೆ ಇದಕ್ಕೆ$ವ್ಯತಿರಿಕ್ತವಾದ ಒಳವಾಸ್ತವಿಕ ಬಗೆಯ ಆಧುನಿಕತೆಯ ಸಣ್ಣ ಝರಿಯೊಂದು ಕನ್ನಡಕಾವ್ಯದಲ್ಲಿ ಆಗಾಗ ಹರಿದದ್ದುಂಟು.ಉದಾಹರಣೆಗೆ ಕೆಎಸ್‌ನ ಅವರ ಶಿಲಾಲತೆ ಕಾಲದ ಕತೆಗಳು, ವಿಶೇಷವಾಗಿ ಗಡಿಯಾರದಂಗಡಿಯ ಮುಂದೆ ಎಂಬ ಕವಿತೆ. ಆದರೆ, ತೆರೆದ ಬಾಗಿಲು ಹಂತಕ್ಕೆ ಬಂದಾಗ ಕೆಎಸ್‌ನ ಅವರೇ ಈ ಶೈಲಿಗೆ ದಾಯ ಹೇಳಿಬಿಟ್ಟಿದ್ದರು. ಹೀಗಾಗಿ, ವಿಶ್ವಕಾವ್ಯದ ಆಧುನಿಕತೆಯ ಒಂದು ಪ್ರಧಾನ ಭಾಷಿಕ ಸಾಹಿತ್ಯದಿಂದ ಕನ್ನಡಕಾವ್ಯ ವಂಚಿತವಾಗಿತ್ತು. ಆ ಕೊರೆಯನ್ನು ದಿವಾಕರರ ಕವಿತೆಗಳು ಸರಿಪಡಿಸಿವೆಯೆಂಬುದು ಅವರ ಕಾವ್ಯಕಾಯಕದ ವಿಶೇಷವಾಗಿದೆ.

ದಿವಾಕರರ ಕಾವ್ಯದಲ್ಲಿ ನನಗೆ ಆಂಗ್ಲೋ-ಅಮೆರಿಕನ್‌ ಕಾವ್ಯವಲಯದ ಹೊರಗಿನ ಮಹಾನ್‌ ಕವಿಗಳ ಪ್ರೇರಣೆ ಕಾಣುತ್ತದೆ. ಆದರೆ, ಅದು ಖಂಡಿತ ಅನುಕರಣೆ ಅಲ್ಲ. ದಿವಾಕರರು ಆಧುನಿಕ ವಿಶ್ವಕಾವ್ಯದ ಹಲವು ಪ್ರಯೋಗ ಸಾಧ್ಯತೆಗಳನ್ನು ಮೈಗೂಡಿಸಿಕೊಂಡು ಅದರ ಕನ್ನಡದ ವಿಶೇಷ ಬಗೆಯನ್ನು ನಿರ್ಮಿಸಿ ವಿಶಿಷ್ಟರಾಗಿದ್ದಾರೆ.

ಕಾವ್ಯ ಮತ್ತು ವೈಚಾರಿಕತೆಯ ಸಂಬಂಧದ ಪರಿ ಮತ್ತೂಂದು ಗಮನಾರ್ಹ. ಕಾವ್ಯಆಷೇಯವಾಗಲಿ, ಆಧುನಿಕವಾಗಲಿ, ಅದು ಒಂದು ವೈಚಾರಿಕ ನಿಲುವಿನ ಪದ್ಯಾತ್ಮಕ ತರ್ಜಮೆ ಅಲ್ಲ. ವೈಚಾರಿಕ ಪೂರ್ವಗ್ರಹದಿಂದ ಬಿಡುಗಡೆ ಹೊಂದಿ, ಈ ಕವಿತೆಗಳು ಭಾವಕ್ಷಣವೊಂದರ ಅನನ್ಯತೆಯನ್ನು, ಅದ್ವಿತೀಯತೆಯನ್ನು ಕಾವ್ಯವಾಗಿ ನಿರ್ಮಿಸುತ್ತಿದೆ.

“ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಹುದೆ?’ ಇದು ಅಲ್ಲಮ ಕೇಳಿದ ಪ್ರಶ್ನೆ. ಇದಕ್ಕೆ ಉತ್ತರವೋ ಎಂಬಂತೆ ದಿವಾಕರರು ಪದಗಳ ಮೂಲಕ ಪದಾರ್ಥಗಳನ್ನೂ ನಿರ್ಮಿಸುವ ಕಾರಣ ಕನ್ನಡಕಾವ್ಯವು ವಂಚಿತವಾದ ಒಂದು ಆಧುನಿಕ ಕಾವ್ಯಸಾಧ್ಯತೆಯನ್ನು ಕನ್ನಡಕ್ಕೆ ತಂದುಕೊಟ್ಟಿದ್ದಾರೆ.

ಎಚ್‌. ಎಸ್‌. ಶಿವಪ್ರಕಾಶ್‌

ಟಾಪ್ ನ್ಯೂಸ್

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.