Udayavni Special

ಜಾಗತಿಕವಾಗಿ ಯೋಗಧ್ವಜ ಹಾರಿಸಿದ ರಾಮ್‌ದೇವ್‌


Team Udayavani, Nov 10, 2019, 5:15 AM IST

dd-9

ಬಾಬಾ ರಾಮ್‌ದೇವ್‌ ನೇತೃತ್ವದಲ್ಲಿ ನವೆಂಬರ್‌ 16ರಿಂದ 20ರವರೆಗೆ ಉಡುಪಿ ಶ್ರೀಕೃಷ್ಣಮಠ- ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಐದು ದಿನಗಳ ಯೋಗ ಶಿಬಿರ ನಡೆಯಲಿದೆ.

2014ರಲ್ಲಿ ಜಾತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತಾವ ಮಂಡಿಸಿ ಅದನ್ನು ಆಗುಗೊಳಿಸುವಲ್ಲಿ ಸಫ‌ಲರಾದರು. ಇದಕ್ಕಾಗಿ ದೇಶದ ಜನರು ಅವ ರ ನ್ನು ಶ್ಲಾ ಸುತ್ತಾರೆ. ಒಪ್ಪುವಂಥದ್ದೇ ಆದರೂ 1990ರ ದಶಕದಿಂದ ಜಾಗತಿಕ ಮಟ್ಟದಲ್ಲಿ ಯೋಗದ ಧ್ವಜವನ್ನು ಹಾರಿಸುತ್ತಿರುವವರು ಬಾಬಾ ರಾಮ್‌ದೇವ್‌ ಎನ್ನುವುದನ್ನು ಮರೆಯಲಾಗದು.

ಸಾಮಾನ್ಯ ಯೋಗಿ ಈಗ ಕೋಟ್ಯಂತರ ರೂ. ವ್ಯವಹಾರಗಳ ಪರೋಕ್ಷ ಕಾರಣಭೂತ ವ್ಯಕ್ತಿಯಾಗಲು ದೊಡ್ಡ ಅಂತಸ್ತಿನ ಮನೆತನ ಕಾರಣವಲ್ಲ, ಕೇವಲ ಸದಿಚ್ಛಾಶಕ್ತಿಯಿಂದಲೇ ಇದು ಸಾಧ್ಯವಾಗಿದೆ. ಹರ್ಯಾಣ ರಾಜ್ಯದ ಮಹೇದ್ರಗಢ ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ, ಕೃಷಿ ಹಿನ್ನೆಲೆಯ ರಾಮ್‌ನಿವಾಸ್‌ ಯಾದವ್‌ ಮತ್ತು ಗುಲಾಬೋ ದೇವಿ ದಂಪತಿಗೆ 1965ರಲ್ಲಿ ಜನಿಸಿದ ರಾಮ್‌ಕಿಶನ್‌ ಯಾದವ್‌ ಬಾಲ್ಯದಲ್ಲಿ ಗುರುಕುಲ ಮಾದರಿ ವಿದ್ಯಾಲಯದಲ್ಲಿ ಯೋಗ, ವ್ಯಾಕರಣ, ಸಂಸ್ಕೃತವನ್ನು ಅಧ್ಯಯನ ನಡೆಸಿದರು. ಹರ್ಯಾಣದ ಕಾಲ್ವಾ ಗುರುಕುಲದಲ್ಲಿ ಆರ್ಯಸಮಾಜಕ್ಕೆ ಸೇರಿದ ಗುರು ಕರನ್ವೀರ್‌ ಅವರಿಂದ ಯೋಗದ ಉನ್ನತಾಧ್ಯಯನ ನಡೆಸಿದರು.

ಯೋಗ-ಆಯುರ್ವೇದ
1990ರಿಂದ 93ರ ವರೆಗೆ ಪ್ರಸಿದ್ಧ ಯಾತ್ರಾಸ್ಥಳವಾದ ಗಂಗೋತ್ರಿ ಯಲ್ಲಿ ಯೋಗ ಸಾಧನೆ ಮಾಡಿದರು. ಆಗ ಆಯುರ್ವೇದವನ್ನು ಕಲಿತ ನೇಪಾಲಿ ಮೂಲದ ಆಚಾರ್ಯ ಬಾಲಕೃಷ್ಣರ ಪರಿಚಯವಾಯಿತು. ಆಗ ಒಂದಾದ ಯೋಗ- ಆಯುರ್ವೇದ ತಜ್ಞರ ಜೋಡಿ ಇಂದು ಜಾಗತಿಕ ಮಟ್ಟದಲ್ಲಿ ಮೋಡಿ ಮಾಡುತ್ತಿದೆ.

ಗಂಗೋತ್ರಿಯಿಂದ ಹರಿದ್ವಾರಕ್ಕೆ ಬಂದು ಕಪಾಲುಬಾಲ್‌ ಆಶ್ರಮದಲ್ಲಿ ರಾಮ್‌ದೇವ್‌ ಯೋಗವನ್ನೂ, ಬಾಲಕೃಷ್ಣ ಆಯುರ್ವೇ ದವನ್ನೂ ಜನರ ಸಾಮಾನ್ಯರ ಮೇಲೆ ಉಣ ಬಡಿಸುತ್ತಾರೆ. ಹರಿದ್ವಾರ ಹೇಗಿದ್ದರೂ ಯಾತ್ರಾಸ್ಥಳ. ಅಲ್ಲಿಗೆ ಬರುವ ಭಕ್ತರಿಗೆ ಶಿಬಿರಗಳ ಮೂಲಕ ಯೋಗವನ್ನು ಹೇಳಿಕೊಡುತ್ತಾರೆ. ಅಗತ್ಯವುಳ್ಳ ರೋಗಿಗಳಿಗೆ ಬಾಲಕೃಷ್ಣ ತಾನು ಕಲಿತ ಆಯುರ್ವೇದ ಔಷಧಿಗಳನ್ನು ನೀಡಿ ಉಪಚರಿಸುತ್ತಾರೆ. ಅಸ್ತಮಾ, ಗಂಟು ನೋವು ಇತ್ಯಾದಿ ದೀರ್ಘ‌ಕಾಲೀನ ಕಾಯಿಲೆಗಳಿಗೆ ಯೋಗ ಮತ್ತು ಆಯುರ್ವೇದದ ಮಿಲನ ಪರಿಣಾಮಕಾರಿಯಾದುದನ್ನು ಗುರುತಿಸಿದ ಈ ಜೋಡಿ ಮತ್ತೆ ಹಿಂದೆ ನೋಡಲಿಲ್ಲ. 1995ರಲ್ಲಿ ಪತಂಜಲಿ ಯೋಗ ಪೀಠ ಟ್ರಸ್ಟ್‌ ಸ್ಥಾಪಿಸಿದರು. ಆಗಲೇ ಇವರಿಂದ ಉಪಕೃತರಾದವರು ಟ್ರಸ್ಟ್‌ ಸ್ಥಾಪನೆಗೆ ಸಹಾಯ ಹಸ್ತ ನೀಡುತ್ತಾರೆ. ಇವರಲ್ಲಿ ಪ್ರಮುಖರು ಗಂಟಲು ಕ್ಯಾನ್ಸರ್‌ನಿಂದ ಗುಣಮುಖರಾದ ಗುಜರಾತ್‌ ಸೂರತ್‌ನ ಉದ್ಯಮಿ ಜೀವರಾಜಭಾಯಿ ಪಟೇಲ್‌ ಒಬ್ಬರು. ಆಗಲೇ ಆಸ್ಥಾ ಟಿವಿಯಲ್ಲಿ ಅರ್ಧ ಗಂಟೆ ಯೋಗ ಪ್ರಾತ್ಯಕ್ಷಿಕೆ ಭಿತ್ತರಗೊಳ್ಳುತ್ತದೆ. ಈ ಮಾಧ್ಯಮದಿಂದ ಪ್ರಚಾರಗೊಂಡ ರಾಮ್‌ದೇವ್‌ 2000ರಲ್ಲಿ ಆರು ದಿನಗಳ ಯೋಗ ಶಿಬಿರಗಳನ್ನು ನಡೆಸಲು ಆರಂಭಿಸಿದರು. ಮೊದ ಮೊದಲು ಟ್ರಸ್ಟ್‌ ನಿರ್ವಹಣೆಗಾಗಿ ಶಿಬಿರಾರ್ಥಿಗಳಾಗಿ ಬಂದವರಿಂದ ಪ್ರವೇಶ ದೇಣಿಗೆ ಪಡೆಯುತ್ತಿದ್ದರು.

2005ರಲ್ಲಿ ಆಚಾರ್ಯ ಬಾಲಕೃಷ್ಣರ ಹೆಸರಿನಲ್ಲಿ ಆರಂಭಗೊಂಡ ಪತಂಜಲಿ ಆಯುರ್ವೇದ ಸಂಸ್ಥೆ ಈಗ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದೆ. ಆದರೆ ಇದರಲ್ಲಿ ರಾಮ್‌ದೇವ್‌ ಪದಾಧಿಕಾರಿಯಾಗಿಲ್ಲ ಎನ್ನುವುದು ಉಲ್ಲೇಖನೀಯ. ಬಿಹಾರದ ಉದ್ಯಮಿ ಸುನಿಲ್‌ ಪೋತಾªರ್‌ 100 ಕೋ.ರೂ. ಕೈಸಾಲ ನೀಡಿದ್ದರು. ದೇಶದ ವಿವಿಧೆಡೆ ಆಯುರ್ವೇದ ಪದವೀಧರ ವೈದ್ಯರನ್ನು ನೇಮಿಸಿಕೊಂಡು ಚಿಕಿತ್ಸಾಲಯವನ್ನು ನಡೆಸಲಾಗುತ್ತಿದ್ದು ಪ್ರಸ್ತುತ ದೇಶದ ವಿವಿಧೆಡೆ 3,000 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಸಂಭಾವನೆಯನ್ನು ಕೊಡಲಾಗುತ್ತಿದೆ. ಇವರು ಉಚಿತ ಸೇವೆಯನ್ನು ರೋಗಿಗಳಿಗೆ ನೀಡಬೇಕು.

ಸಂಸ್ಥೆ ಸ್ವಾವಲಂಬಿಯಾಗುತ್ತಿದ್ದಂತೆ ರಾಮ್‌ದೇವ್‌ 2007ರಲ್ಲಿ ಯೋಗ ಶಿಬಿರಗಳಿಗೆ ಪ್ರವೇಶ ದೇಣಿಗೆ ಪಡೆಯುತ್ತಿದ್ದ ಕ್ರಮವನ್ನು ರದ್ದುಗೊಳಿಸಿದರು. ಒಂದೊಂದು ಊರಿನಲ್ಲಿ ಮೂರು ದಿನಗಳ ಯೋಗ ಶಿಬಿರ ಮಾಡುತ್ತಿದ್ದ ರಾಮ್‌ದೇವ್‌ 2007ರಲ್ಲಿ ಆರು ದಿನಗಳ ಯೋಗ ನಡೆಸಿದರು. ಇಂತಹ ಶಿಬಿರ ಹುಬ್ಬಳ್ಳಿಯಲ್ಲಿ ನಡೆದಿತ್ತು. ರಾಮ್‌ದೇವ್‌ ಹೆಸರು ಜಾಗತಿಕ ಸ್ತರದಲ್ಲಿ ಬೆಳೆಯುತ್ತಿದ್ದಂತೆ ಒಂದೊಂದು ಊರಿನಲ್ಲಿ ಆರು ದಿನ ಕಳೆಯುವುದು ದುಸ್ತರವಾಯಿತು. ಪರಿಣಾಮ ಶಿಬಿರಗಳ ದಿನ ಒಂದೆರಡಕ್ಕೆ ಸೀಮಿತವಾಯಿತು.

2019ರ ಜೂನ್‌ನಲ್ಲಿ 2-3 ದಿನಗಳ ಶಿಬಿರಗಳಿಂದ ಯೋಗದ ಪೂರ್ಣ ಪರಿಚಯ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಐದು ದಿನಗಳ ಶಿಬಿರವನ್ನು ಒಂದೇ ಊರಿನಲ್ಲಿ ನಡೆಸಬೇಕೆಂದು ನಿರ್ಧಾರಕ್ಕೆ ರಾಮ್‌ದೇವ್‌ ಬಂದರು. ಈ ನಿರ್ಣಯವಾದ ಬಳಿಕ ಉಡುಪಿಯಲ್ಲಿ ನವೆಂಬರ್‌ 16ರಿಂದ 20ರ ವರೆಗೆ ಐದು ದಿನಗಳ ಮೊದಲ ಯೋಗ ಶಿಬಿರ ನಡೆಯುತ್ತಿದೆ. ಪ್ರತಿನಿತ್ಯ ಬೆಳಗ್ಗೆ ನಡೆಯುವ ಯೋಗ ಶಿಬಿರಗಳಲ್ಲಿ ವಿವಿಧ ಕಾಯಿಲೆಗಳ ನಿರ್ವಹಣೆ, ಯೋಗ- ಪ್ರಾಣಾಯಾಮದ ವಿವಿಧ ಮುಖಗಳನ್ನು ಪರಿಚಯಿಸಲಿದ್ದಾರೆ.

ಪ್ರಯೋಗಶೀಲತೆ
ಯೋಗ ಮತ್ತು ಆಯುರ್ವೇದವನ್ನು ರಾಮ್‌ದೇವ್‌ ಮತ್ತು ಆಚಾರ್ಯ ಬಾಲಕೃಷ್ಣರು ಇದನ್ನು ಪ್ರಯೋಗಕ್ಕೆ ಒಡ್ಡಿದರು. ಒಮ್ಮೆ ಪ್ರತಿ ರಾಜ್ಯದ ಎರಡು ಜಿಲ್ಲೆಗಳ ತಲಾ ನೂರು ಸ್ಥೂಲಕಾಯರನ್ನು ಆಯ್ಕೆ ಮಾಡಿ ಅವರ ಮೇಲೆ ಯೋಗದ ಪ್ರಯೋಗ ಮಾಡಲಾಯಿತು. ಕರ್ನಾಟಕದಿಂದ ಆಯ್ಕೆಯಾದ ಎರಡು ಜಿಲ್ಲೆಗಳು ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ. ಇದರಲ್ಲಿ ಐದು ಕೆ.ಜಿ.ಯಿಂದ 43 ಕೆ.ಜಿ.ವರೆಗೆ ಬೊಜ್ಜು ಕರಗಿಸಿಕೊಂಡವರಿದ್ದಾರೆ. ಅತಿ ಹೆಚ್ಚು ಬೊಜ್ಜು ಕರಗಿಸಿಕೊಂಡವರು ಬೆಳಗಾವಿಯವರು. ಇವರ ನಷ್ಟವಾದ ಬೊಜ್ಜು 43 ಕೆ.ಜಿ. ಪತಂಜಲಿ ಸಂಶೋಧನ ಪ್ರತಿಷ್ಠಾನದ ಮುಖ್ಯಸ್ಥರಾದ ಮೂಲತಃ ಗೋವಾದ ಡಾ| ಸರ್ಲಿ ಟೆಲೆಸ್‌ ಶಿಬಿರಗಳ ಉಸ್ತುವಾರಿ ವಹಿಸಿದ್ದರು. ಬೊಜ್ಜಿನ ಸಮಸ್ಯೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಬಗೆ. ಅಮೆರಿಕದಲ್ಲಿ ಎಲ್ಲ ಅಂಗಗಳೂ ಬೊಜ್ಜಿನಿಂದ ಕೂಡಿದ್ದರೆ ಭಾರತದಲ್ಲಿ ಹೊಟ್ಟೆ ಭಾಗ ಬೊಜ್ಜಿನಿಂದ ಕೂಡಿರುತ್ತದೆ ಎಂಬುದನ್ನು ಪರಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ್‌ ಟ್ರಸ್ಟ್‌ ಕರ್ನಾಟಕದ ಪ್ರಭಾರಿ ಯೋಗಾಚಾರ್ಯ ಭವರಲಾಲ್‌ ಆರ್ಯ ಬೆಟ್ಟು ಮಾಡುತ್ತಾರೆ.

ಜಗತ್ತಿನ ಸಮಸ್ಯೆಗಳಿಗೆ ಪತಂಜಲಿ ಸೂತ್ರ
ಮಹರ್ಷಿ ಪತಂಜಲಿ ಯೋಗಸೂತ್ರದ ಆದ್ಯಪ್ರವರ್ತಕ. ನಮಗೀಗ ಮೇಲ್ನೋಟಕ್ಕೆ ಕಾಣುವುದು ಪತಂಜಲಿಯ ಯೋಗಾಸನ- ಪ್ರಾಣಾಯಾಮ ಮಾತ್ರ. ಆದರೆ ಪತಂಜಲಿಯು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಟು ಸೂತ್ರಗಳನ್ನು ನೀಡುತ್ತಾರೆ. ಹೇಗೆ ಬದುಕಬೇಕು? ವ್ಯಕ್ತಿಯಿಂದ ಹಿಡಿದು ಸಮಾಜದವರೆಗೆ ಶಾಂತಿಯುತ ಜೀವನಕ್ಕೆ ಬದುಕಿನಲ್ಲಿ ನೈತಿಕತೆ ಎಷ್ಟು ಮುಖ್ಯ ಎನ್ನುವುದು ಇಲ್ಲಿ ಪ್ರತಿಪಾದಿತವಾಗುತ್ತದೆ.ಜಾತಿ, ರಾಜಕೀಯ, ಸ್ವಾರ್ಥ, ದುರಾಸೆ ಇತ್ಯಾದಿಗಳಿಂದ ಬಳಲುತ್ತಿರುವ ಜಾಗತಿಕ ಸಮಸ್ಯೆಗಳಿಗೆ ಪತಂಜಲಿ ಸೂತ್ರದಲ್ಲಿ ಪರಿಹಾರವಿದೆ ಎನ್ನುವ ರಾಮ್‌ದೇವ್‌ ಇದನ್ನು ಸಮಾಜದ ರೋಗಗಳಿಗೆ ಅನ್ವಯಿಸುತ್ತಿದ್ದಾರೆ.

ಬಹುರೂಪಿ ಪ್ರಯೋಗ
ರಾಮ್‌ದೇವ್‌ ಅಂದಾಕ್ಷಣ ಯೋಗ, ಪತಂಜಲಿ ಉತ್ಪನ್ನಗಳ ನೆನಪು ಬರುತ್ತದೆ. ಬಹುತೇಕ ನಮ್ಮನ್ನು ಕಾಡುತ್ತಿರುವುದು ಈಗ ಆರೋಗ್ಯ. ಇದರ ಮೂಲ ಇರುವುದು ಆಹಾರ ದೋಷದಲ್ಲಿ. ಶುದ್ಧ ಆಹಾರಕ್ಕಾಗಿ ಸಾವಯವ ಕೃಷಿ, ಭಾರತೀಯ ಗೋತಳಿಗಳ ಉತ್ಪನ್ನಗಳ ಬಳಕೆಗೆ ಆದ್ಯತೆ ಕೊಡುತ್ತಿದ್ದಾರೆ. ಗಾಂಧೀಜಿಯವರು ಸ್ವಾತಂತ್ರ್ಯ, ಸ್ವಾಭಿಮಾನದ ಎಚ್ಚರ ಮೂಡಿಸಲು ವಿದೇಶಿ ಬಟ್ಟೆಗಳನ್ನು ಸುಡುವ ಆಂದೋಲನ ನಡೆಸಿ ಚರಕದಿಂದ ಉತ್ಪಾದಿಸಿದ ಬಟ್ಟೆ ಧರಿಸಲು ಕರೆ ಕೊಟ್ಟಿದ್ದರು. ಈಗ ಬಾಬಾರಾಮ್‌ದೇವ್‌ ಪರಿಧಾನ ಯೋಜನೆ ಮೂಲಕ ದೇಸೀ ಬಟ್ಟೆಗಳ ಉತ್ಪನ್ನ, ಬಳಕೆ, ಮಾರುಕಟ್ಟೆಗೆ ಯತ್ನಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಉತ್ಪಾದಿಸಿದ ಬಟ್ಟೆಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಖರೀದಿಸಿ ಅವುಗಳ ಬ್ರಾಂಡ್‌ ಕೊಟ್ಟು ಅದರ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಿವೆ. ಇವುಗಳನ್ನು ತಡೆಗಟ್ಟುವುದು ನಮ್ಮ ಗುರಿ ಎನ್ನುತ್ತಾರೆ ರಾಮ್‌ದೇವ್‌ ಅವರ ಕರ್ನಾಟಕದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿರುವ ಭವರ್‌ಲಾಲ್‌ ಆರ್ಯ.

ಎಂಎನ್‌ಸಿಗಳ ಕುಹಕಕ್ಕೆ ಎಂಎನ್‌ಸಿ ಆದ ಬಾಬಾ
ರಾಮ್‌ದೇವ್‌ ಬಾಬಾ ಅವರು ಸ್ವದೇಶಿ ಆಂದೋಲನವನ್ನು ಪ್ರಚುರಪಡಿಸುವಾಗ ದೊಡ್ಡ ದೊಡ್ಡ ಕುಳಗಳು “ಕೌಪೀನಧಾರಿ ಸನ್ಯಾಸಿ ಏನು ಹೇಳೂದು? ಬಹುರಾಷ್ಟ್ರೀಯ ಕಂಪೆನಿಗಳಿಗೆ ಸರಿದೂಗುವ ಉತ್ಪನ್ನ ಕೊಡುವುದು ಸಾಧ್ಯವೆ?’ ಎಂದು ಗೇಲಿ ಮಾಡಿ ಸವಾಲೆಸೆದರು. ಆಗ ರಾಮ್‌ದೇವ್‌ ಆ ಸವಾಲನ್ನು ಸ್ವೀಕರಿಸಿದರು. ಅದುವರೆಗೆ ಕೆಲವೇ ಶ್ರೇಣಿಗಳಿಗೆ ಸೀಮಿತವಾಗಿದ್ದ ಪತಂಜಲಿ ಉತ್ಪನ್ನಗಳನ್ನು ವಿಶಾಲಶ್ರೇಣಿಯಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಟ್ಟರು. ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳಿಗಿಂತ ಹೆಚ್ಚು ಗುಣಮಟ್ಟದ, ಕಡಿಮೆ ದರದಲ್ಲಿ ಪೂರೈಸಿದ ಪರಿಣಾಮ ಈಗ ಪತಂಜಲಿಯ ವಾರ್ಷಿಕ ವಹಿವಾಟು 8,000 ಕೋ.ರೂ.

ರಾಮ್‌ದೇವ್‌ ಕರ್ನಾಟಕದ ಪರೋಕ್ಷ ಸಂಬಂಧ
1990ರಲ್ಲಿ ಗಂಗೋತ್ರಿಗೆ ರಾಮ್‌ದೇವ್‌ ಹೋದಾಗ ಉಡುಪಿ ಮೂಲದ ಸುಭದ್ರಾಮಾತಾ ಪರಿಚಯವಾಯಿತು. ಸುಭದ್ರಾಮಾತಾ ಶ್ರೀಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಶಿಷ್ಯೆ. ಆಗ ರಾಮ್‌ದೇವರಿಗೆ ಸಹಕಾರ ಕೊಟ್ಟ ಸುಭದ್ರಾಮಾತಾ ಈಗ ವೃದ್ಧಾಪ್ಯದಲ್ಲಿ ಹರಿದ್ವಾರದ ರಾಮ್‌ದೇವ್‌ ಆಶ್ರಮದಲ್ಲಿದ್ದಾರೆ.

ಮಟಪಾಡಿ ಕುಮಾರಸ್ವಾಮಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಕ್ ಡೌನ್ ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಲಾಕ್ ಡೌನ್ ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

ಪಂಡಿತ್ ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

ವಿಜಯಪುರ : ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ! ಜನರಲ್ಲಿ ಆತಂಕ

ವಿಜಯಪುರ : ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ! ಜನರಲ್ಲಿ ಆತಂಕ

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಮೂಳೂರು : ವಾಹನಗಳೆರಡು ಢಿಕ್ಕಿ : ಸಂಚಾರ ಅಸ್ತವ್ಯಸ್ತ

ಮೂಳೂರು : ವಾಹನಗಳೆರಡು ಢಿಕ್ಕಿ, ಸಂಚಾರ ಅಸ್ತವ್ಯಸ್ತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಲಾಕ್ ಡೌನ್ ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಲಾಕ್ ಡೌನ್ ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಉಡುಪಿ ಅಕ್ರಮ ಮರಳುಗಾರಿಕೆ ಬಹುಕೋಟಿ ಹಗರಣ ತನಿಖೆಗೆ ಕಾಂಗ್ರೆಸ್ ಆಗ್ರಹ

ಉಡುಪಿ ಅಕ್ರಮ ಮರಳುಗಾರಿಕೆ ಬಹುಕೋಟಿ ಹಗರಣ ತನಿಖೆಗೆ ಕಾಂಗ್ರೆಸ್ ಆಗ್ರಹ

ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

ಪಂಡಿತ್ ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

27-May-06

ಕೋವಿಡ್ ಸೋಂಕಿನ ಚೈನ್‌ಲಿಂಕ್‌ ಕಡಿತ ನಿಶ್ಚಿತ: ಭೈರತಿ

ಶ್ರಮಿಕ ರೈಲುಗಳಲ್ಲಿ 2.33 ಲಕ್ಷ ಕಾರ್ಮಿಕರು ಪ್ರಯಾಣ

ಶ್ರಮಿಕ ರೈಲುಗಳಲ್ಲಿ 2.33 ಲಕ್ಷ ಕಾರ್ಮಿಕರು ಪ್ರಯಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.