ಅಮೆರಿಕದ ಮಹಾಕಣಿವೆಯಲ್ಲಿ ಸನಾತನ ದೇವರ ಹೆಸರುಗಳು

Team Udayavani, May 12, 2019, 6:00 AM IST

ಮಾನವ ಈ ಭೂಮಿಯ ಮೇಲೆ ಪರಿಶ್ರಮದಿಂದ ಹಲವು ಅದ್ಭುತಗಳನ್ನು ನಿರ್ಮಿಸಿದ್ದಾನೆ. ಆದರೆ, ಪ್ರಕೃತಿ ಇದಕ್ಕಿಂತಲೂ ಮಿಗಿಲಾದ ಅದ್ಭುತಗಳನ್ನು ತಾನೇ ಸೃಷ್ಟಿಸಿದೆ. ಅಂತಹ ಏಳು ಅದ್ಭುತಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳೆಂದರೆ, ಭಾರತದ ಹಿಮಾಲಯ ಪರ್ವತ ,ಆಸ್ಟ್ರೇಲಿಯಾದ ಗ್ರೇಟ್‌ ಬ್ಯಾರಿರ್ಯ ರೀಫ್, ಜಾಂಬಿಯಾ ದ ವಿಕ್ಟೊರಿಯಾ ಫಾಲ್ಸ… , ಕೆನಡಾದ ಔರೋರಾ, ಬ್ರೆಜಿಲ್‌ನ ಹಾಬರ್‌ ಆಫ್ ರಿಯೋ ಡಿ ಜೆನೈರಿಯೋ, ಮೆಕ್ಸಿಕೊದ ಪರ್ಸಿಕುಟಿನ್‌ ವಲ್ಕನೋ ಮತ್ತು ಅಮೆರಿಕದ ಗ್ರಾಂಡ್‌ ಕ್ಯಾನನ್‌ (Grand Canyon).

ನನ್ನ ಅಮೆರಿಕ ಪ್ರವಾಸದ ವೇಳೆ ಅಂದರೆ, ಇದೇ ಎಪ್ರಿಲ್‌ ಮಾಸಾಂತ್ಯದಲ್ಲಿ ಜಗತ್ತಿನ ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾದ ಗ್ರಾಂಡ್‌ ಕೆನಾನ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಇದಿರುವುದು ಅಮೆರಿಕದ ನೈಋತ್ಯ ಭಾಗದಲ್ಲಿರುವ ಅರಿಜೋನಾ ಪ್ರಾಂತ್ಯದಲ್ಲಿ.

ಅಮೆರಿಕದ 7 ಮತ್ತು ಮೆಕ್ಸಿಕೋದ 2 ರಾಜ್ಯಗಳ ಮೂಲಕ 2300 ಕಿ. ಮೀ. ಉದ್ದಕ್ಕೆ ಹರಿಯುವ ಕೊಲರಾಡೋ ಎಂಬ ಮಹಾನದಿಯೇ ಈ ಪ್ರಾಕೃತಿಕ ಅದ್ಭುತಕ್ಕೆ ಕಾರಣ. ಕ್ಯಾನನ್‌ ಅಂದರೆ ಕಣಿವೆ ಎಂದರ್ಥ. ಅಂದರೆ, ಇದೊಂದು ಮಹಾ ಕಣಿವೆ ಎಂದಾಯಿತು. ಈ ಮಹಾ ಕಣಿವೆಯನ್ನು ಕೊಲರಾಡೊ ನದಿ ಹೇಗೆ ಸೃಷ್ಟಿ ಮಾಡಿತು? ಇದರ ವಿಶೇಷತೆಗಳೇನು? ಎಂದು ನೋಡುತ್ತ ಹೋದರೆ, ಪ್ರಕೃತಿಯ ಎದುರು ನಾವೆಷ್ಟು ಕುಬ್ಜರೆಂದು ಅರಿವಾಗುತ್ತದೆ.

ಮಹಾಸೃಷ್ಟಿಯ ಮಹಾಕಣಿವೆ
ಭೂಗರ್ಭಶಾಸ್ತ್ರಜ್ಞರ ಪ್ರಕಾರ ಈ ಮಹಾ ಕಣಿವೆ ಸೃಷ್ಟಿಯಾಗಲು ಬರೋಬ್ಬರಿ 70 ಮಿಲಿಯನ್‌ ವರ್ಷ ತಗುಲಿದೆ.ಕೊಲರಾಡೊ ನದಿ ಈ ದೀರ್ಘಾವಧಿಯಲ್ಲಿ ಭೂಮಿಯ ಮೇಲೆ ಹರಿಯುತ್ತ ಸಾಗಿದಂತೆ ಇಲ್ಲಿನ ಮಣ್ಣು ಮತ್ತು ಕಲ್ಲು ಕರಗುತ್ತ ಹೋಯಿತು. ಈ ರೀತಿ ಭೂಮಿ ಕರಗುತ್ತ ಹೋದಂತೆ ನಿರ್ಮಾಣಗೊಳ್ಳುತ್ತ ಬಂದ ಕಣಿವೆಯಗೋಡೆಗಳ ಮೇಲೆ ಕಲಾವಿದನ ಕುಂಚದಲ್ಲಿ ಮೂಡುವ ಚಿತ್ತಾರದಂತೆ ಪದರ ಪದರದಲ್ಲಿ ಕಲ್ಲುಬಂಡೆಗಳು ವಿವಿಧ ವರ್ಣ ಗಳಲ್ಲಿ , ವಿವಿಧ ಆಕಾರಗಳಲ್ಲಿ ಜೀವ ತಳೆದವು. ಈ ಕರಗುವಿಕೆ ಎಷ್ಟು ಉದ್ದಕ್ಕೆ ಎಷ್ಟು ಅಗಲಕ್ಕೆ ಮತ್ತು ಎಷ್ಟು ಆಳಕ್ಕೆ ಕರಗಿತು ಎಂದು ತಿಳಿದಾಗ ನಾವು ಬೆಕ್ಕಸ ಬೆರಗಾಗುತ್ತೇವೆ. ಅತೀ ಹೆಚ್ಚೆಂದರೆ ಗ್ರಾಂಡ್‌ ಕ್ಯಾನನ್‌ 446 ಕಿ. ಮೀ. ಉದ್ದ , 26 ಕಿ. ಮೀ. ಅಗಲ ಹಾಗೂ 1. 6 ಕಿ. ಮೀ. ಆಳದ ಕಣಿವೆಯಾಗಿದೆ. ಇದನ್ನು ದಕ್ಷಿಣ ದಿಕ್ಕಿನಿಂದ ಹೆಚ್ಚು ಹತ್ತಿರದಿಂದ ಕಾಣಬಹುದಾದ್ದರಿಂದ ಗ್ರಾಂಡ್‌ ಕ್ಯಾನನ್‌ ಸೌತ್‌ ಎನ್ನುತ್ತಾರೆ.

1916 ರಲ್ಲಿ ಅಮೆರಿಕ ಸರಕಾರ ಇದನ್ನು ರಾಷ್ಟ್ರೀಯ ಉದ್ಯಾನ ವೆಂದು ಘೋಷಿಸಿತು. ಆ ತನಕ ಕ್ಯಾನನ್‌ನ ಕಣಿವೆಯಲ್ಲಿ ಸುಮಾರು ಆರು ವಿಧದ ಬುಡಕಟ್ಟು ಜನಾಂಗದವರು ಪ್ರಕೃತಿಯ ಮಡಿಲಲ್ಲಿ ವಾಸವಾಗಿದ್ದರು. ರಾಷ್ಟ್ರೀಯ ಉದ್ಯಾನದ ಘೋಷಣೆಯಾದ ಬಳಿಕ ಇವರನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ. ಆದರೂ ಕಣಿವೆಯ ಪಶ್ಚಿಮ ಭಾಗ, ಒಂದು ಬುಡಕಟ್ಟು ಜನಾಂಗದವರ ನಿಯಂತ್ರಣ ದಲ್ಲಿದ್ದು, ಈ ಭಾಗದ ವೀಕ್ಷಣೆಗೆ ಅವರು ದುಬಾರಿ ಶುಲ್ಕ ವಸೂಲು ಮಾಡುತ್ತಾರೆ. ಅದುದರಿಂದ ಸರಕಾರ ನಿರ್ವಹಿಸುತ್ತಿರುವ ದಕ್ಷಿಣ ಭಾಗವೇ ಪ್ರವಾಸಿಗರಿಗೆ ಉತ್ತಮ ಆಯ್ಕೆಯಾಗಿದೆ.

ಪ್ರತಿ ವರ್ಷ 5 ಮಿಲಿಯನ್‌ ಪ್ರವಾಸಿಗರು ಗ್ರಾಂಡ್‌ ಕೆನಾನ್‌ ಸೌತ್‌, ಇಲ್ಲಿಗೆ ಭೇಟಿ ನೀಡಿ ಈ ಪ್ರಾಕೃತಿಕ ವಿಸ್ಮಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ವರ್ಷದ ಹನ್ನೆರಡು ತಿಂಗಳೂ ಗ್ರಾಂಡ್‌ ಕ್ಯಾನನ್‌ ಪ್ರವಾಸಿಗರಿಗೆ ತೆರೆದಿರುತ್ತದೆಯಾದರೂ, ಮಾರ್ಚ್‌ನಿಂದ ಮೇ ತನಕ ಮತ್ತು ಸೆಪ್ಟೆಂಬರ್‌ನಿಂದ ನವಂಬರ್‌ ತನಕ ಅತ್ಯಂತ ಪ್ರಶಸ್ತ ಸಮಯವಾಗಿದೆ. ಬೇಸಿಗೆ ಕಾಲದಲ್ಲಿ ಇಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಕಾಣಬಹುದು.

ಈ ಅದ್ಭುತವನ್ನು ವೀಕ್ಷಿಸಲು ವಾಹನವೊಂದಕ್ಕೆ 35 ಡಾಲರ್‌ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಇಲ್ಲಿಗೆ ಅರಿಝೊನಾದ ಫೀನಿಕ್ಸ್‌ , ಪ್ಲಾಗ್‌ ಸ್ಟಾಫ್ ಅಥವಾ ನೆವಾಡಾದ ಲಾಸ್‌ ವೇಗಸ್‌ ನಿಂದ ಆಗಮಿಸಬಹುದು. ಮೋಟಾರ್‌ ಕಾರ್‌, ರೈಲು ಹಾಗೂ ವಿಮಾನದಲ್ಲೂ ಇಲ್ಲಿಗೆ ತಲುಪಬಹುದು. ಇಲ್ಲಿನ ಸೂರ್ಯೋ ದಯ ಮತ್ತು ಸೂರ್ಯಾಸ್ತ ವೀಕ್ಷಿಸಲು ಕಣ್ಣೆರಡು ಸಾಲದು. ಗ್ರಾಂಡ್‌ ಕ್ಯಾನನ್‌ನಲ್ಲಿ 50 ವ್ಯೂ ಪಾಯಿಂಟ್‌ ಗಳಿದ್ದು ಅವುಗಳಲ್ಲಿ 20ನ್ನು ನಮ್ಮದೇ ವಾಹನಗಳಲ್ಲಿ ಪ್ರಯಾಣಿಸಿ ವೀಕ್ಷಿಸಬಹುದು. ಆದರೆ, ಅತ್ಯಂತ ಪ್ರಮುಖ ಉಳಿದ ಸ್ಥಳಗಳಿಗೆ ತೆರಳಲು ಪ್ರವಾಸಿ ಕೇಂದ್ರವೇ ಉಚಿತ ಬಸ್‌ ವ್ಯವಸ್ಥೆ ಮಾಡುತ್ತದೆ. ಗ್ರಾಂಡ್‌ ಕ್ಯಾನನ್‌ ಸೌತ್‌ ಒಟ್ಟು 20 ಕಿ. ಮೀ. ಉದ್ದಕ್ಕೆ ಹೀಗೆ ಬಸ್‌ ಪ್ರತಿ 10 ನಿಮಿಷಗಳಿಗೊಮ್ಮೆ ಸಂಚರಿಸುತ್ತದೆ. ಒಂದು ಪಾಯಿಂಟ್‌ ವೀಕ್ಷಣೆ ಮುಗಿದಾಗ, ಮುಂದಿನ ಪಾಯಿಂಟ್‌ಗೆ ಕರೆದೊಯ್ಯಲು ಬಸ್‌ ಸಿದ್ಧವಾಗಿರುತ್ತದೆ.

ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲು ಕಣ್ಣೆರಡು ಸಾಲದು. ಸೂರ್ಯಾಸ್ತಕ್ಕೆ ಹೋಪಿ ಪಾಯಿಂಟ್‌ ಮತ್ತು ಸೂರ್ಯೋದಯಕ್ಕೆ ಮ್ಯಾಥರ್ಸ್‌ ಪಾಯಿಂಟ್‌ ಎನ್ನುತ್ತಾರೆ.

ದೇವರ ಹೆಸರುಗಳು
ಇಲ್ಲಿನ ಮತ್ತೂಂದು ವಿಶೇಷವೆಂದರೆ ಈ ಕಣಿವೆ ಯಲ್ಲಿ ನಮಗೆ ಹಲವು ಕಡೆ ದೇವಾಲಯ ಗಳಂತಹ ರಚನೆಗಳು ಪ್ರಕೃತಿದತ್ತವಾಗಿ ಕಾಣ ಸಿಗುತ್ತವೆ. 1880 ರಲ್ಲಿ ಚಾಲ್ಸ…ì ವಾಲ್ಕೊಟ್‌ ಎಂಬಾತ ಈ ರಚನೆಗಳಿಗೆ ಹಿಂದೂ ದೇವರುಗಳಾದ ಬ್ರಹ್ಮ , ವಿಷ್ಣು , ಶಿವ ಮತ್ತು ರಾಮ ಇವರ ಹೆಸರನ್ನು ನೀಡಿರುತ್ತಾನೆ ಎಂದು ಹೇಳಲಾಗಿದೆ. ಚಾಲ್ಸ…ì ದಾಟೊನ್‌ ಎಂಬ ಲೇಖಕನ ಪ್ರಕಾರ ಭಾರತದಿಂದ ಸಾವಿರಾರು ಕಿ. ಮೀ. ದೂರದ ಅಮೆರಿಕದಲ್ಲಿ ಹಿಂದೂ ಧರ್ಮ ಅಥವಾ ದೇವಸ್ಥಾನ ಗಳ ಮಾತು ಇಂತಹ ಪ್ರವಾಸಿ ಸ್ಥಳಗಳಲ್ಲಿ ಕೇಳಿ ಬರಲು ಸಾಧ್ಯವೇ ಇಲ್ಲ. ಪ್ರಕೃತಿ ನಿರ್ಮಿಸಿರುವ ಈ ಮಾಹಾನ್‌ ಅದ್ಭುತ ದೇವರದ್ದೇ ಸೃಷ್ಟಿ. ಆದುದರಿಂದ ಜಗತ್ತಿನ ಅತ್ಯಂತ ಸನಾತನ ಧರ್ಮವಾದ ಭಾರತೀಯ ಧರ್ಮದ ದೇವರುಗಳ ಹೆಸರನಿಂದ ಈ ರಚನೆಗಳನ್ನು ಕರೆದು ಅಮೆರಿಕನ್ನರು ಸಾಂಸ್ಕೃತಿಕ ಐಕ್ಯವನ್ನು ಮೆರೆದಿದ್ದರೆ ಎಂಬುದು ದಾಟೋನ್‌ ಅಭಿಮತ. ಅದೇನೇ ಇರಲಿ ಜಗತ್ತಿನ ಪ್ರಾಕೃತ್ರಿಕ ವಿಸ್ಮಯಗಳನ್ನೊಂದಾದ ಗ್ರಾಂಡ್‌ ಕ್ಯಾನನ್‌ ನಲ್ಲೂ ಭಾರತೀಯ ಸನಾತನ ಧರ್ಮ ವಿಜೃಂಭಿಸುತ್ತಿದೆ.

ಬಿ. ವಿ. ಸೂರ್ಯನಾರಾಯಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ಪ್ರಸಿದ್ಧ ಕತೆಗಾರ ಕೆ. ಸದಾಶಿವರು "ನಲ್ಲಿಯಲ್ಲಿ ನೀರು ಬಂದಿತು' ಎಂಬ ಕತೆ ಬರೆದಿದ್ದರು. "ಹಳ್ಳಿ ಮಾರ್ಗದಲ್ಲಿ ಬಸ್ಸು ಬಂದಿತು' ಎಂಬ ಶೀರ್ಷಿಕೆಯಲ್ಲೇನಾದರೂ...

  • ಯಾಂತ್ರಿಕ ಜೀವನ', "ಕಾಂಕ್ರೀಟ್‌ ಕಾಡು' ಎಂಬ ಹುರುಳಿಲ್ಲದ ಅಪವಾದಗಳನ್ನು ಹೊತ್ತಿರುವ ಮುಂಬಯಿಯಲ್ಲಿ ಪಾರ್ಕುಗಳಿಗೇನೂ ಕೊರತೆ ಯಿಲ್ಲ. ನಮ್ಮ ಬಾಂದ್ರಾ ಪರಿಸರದಲ್ಲೇ-...

  • Trying to use words, and every attempt Is a wholly new start, and a different kind of failure ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್‌. ಎಲಿಯಟ್‌ಗಿಂತ ಹೆಚ್ಚು ಯಾರಿಗೆ ತಾನೆ ಗೊತ್ತಿರುತ್ತದೆ?...

  • ರಬ್ಬಿಲ್‌ ಅವ್ವಲ್‌ ತಿಂಗಳ ಹದಿನಾಲ್ಕನೇ ತಿಯದಿ ಪೂರ್ಣ ಚಂದ್ರನ ಇರುಳು ಪ್ರಯಾಣಿಕರ ಸಣ್ಣ ಹಡಗೊಂದರಲ್ಲಿ ದ್ವೀಪಕ್ಕೆ ವಾಪಸು ಹೊರಟಿದ್ದೆ. ಎಲ್ಲಿಂದ ಎಂದು ದಯವಿಟ್ಟು...

  • ಎಂಎ ಓದುತ್ತಿರುವಾಗ ಸಾಹಿತಿ ಅರುಣ್‌ ಕೊಲಾಟ್ಕರ್‌ ಅವರ ಕವಿತೆಗಳನ್ನು ಓದಿದ್ದೆ. ಜೆಜುರಿ ಅನ್ನುವ ಕವಿತಾಸಂಕಲನ ಬಹಳ ಪ್ರಸಿದ್ಧ. ಮಾರ್ಮಿಕವಾಗಿ ಬರೆಯುವ, ಮರಾಠಿ...

ಹೊಸ ಸೇರ್ಪಡೆ