ಹಾರ್ಮೋನಿಯಂ ಚರಿತೆ- ಸಣ್ಣದೊಂದು ಅಪಸ್ವರ 


Team Udayavani, Feb 17, 2019, 12:30 AM IST

6.jpg

ಕಳೆದ ಸಂಚಿಕೆಯಲ್ಲಿ ಹಾರ್ಮೋನಿಯಂ ಹೇಗೆ ಭಾರತದ ಹಳ್ಳಿಗಳ ಜನಜೀವನದ ಭಾವನಾತ್ಮಕ ಬದುಕಿನ ಭಾಗವಾಗಿತ್ತು  ಎಂಬ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆ.  

ಈ ಸಲ ಭಾರತದ ಸಾಂಸ್ಕೃತಿಕ ನಾಡಿ ಆಗಿರುವ‌ ಹಾರ್ಮೋನಿಯಂನ್ನು ಯಾಕೆ ಬ್ಯಾನ್‌ ಮಾಡಿದರು ಎಂದು ಚರ್ಚಿಸುವ ಮೊದಲು 19ನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಹಾರ್ಮೋನಿಯಂ ಯಾಕೆ ಅಷ್ಟು ಪ್ರಸಿದ್ಧವಾಯಿತು ಎಂಬುದನ್ನು ಅವಲೋಕಿಸೋಣ. 

ಹಾರ್ಮೋನಿಯಂನ ಮೊದಲು ಅದರ ಜಾಗದಲ್ಲಿ ಸಾರಂಗಿ ಇತ್ತು. ಅದೊಂದು ಕಷ್ಟವಾದ್ಯವೆನ್ನುವುದು ಎಲ್ಲರೂ ಒಪ್ಪುವ ಸಂಗತಿ. (ನಿರ್ವಹಣೆಯ ಕಷ್ಟವೊಂದೇ ಅಲ್ಲ, ಉಳಿದ ತಂತುವಾದ್ಯವಾದ ವಯಲಿನ್‌ನಲ್ಲಿ ತಂತಿ ಹಿಡಿದುಕೊಳ್ಳುವ ರೀತಿಗೂ ಸಾರಂಗಿಯಲ್ಲಿ ಹಿಡಿದುಕೊಳ್ಳುವ ರೀತಿಗೂ ವ್ಯತ್ಯಾಸವಿದೆ). ಹಾಗಾಗಿ ಆ ಸಮಯದಲ್ಲಿ ಸಾರಂಗಿ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿತ್ತು. ಯಾವಾಗ ಕುಳಿತು ಬಾರಿಸುವ ಚಿಕ್ಕ ಹಾರ್ಮೋನಿಯಂನ ಆವಿಷ್ಕಾರವಾಯಿತೋ ಅದು ಒಮ್ಮೆಲೇ ಹ್ಯಾಂಡಿ ಆಯಿತು. ಭಾರತದ ಸಂಗೀತವನ್ನು ಕುಳಿತು ಪ್ರಸ್ತುತಪಡಿಸುವುದರಿಂದ ಇದು ಬಹಳೇ ಅನುಕೂಲವಾಯಿತು ಎಂದೆನ್ನಬೇಕು. ಹಾಗಾಗಿ ಸಂಗೀತ ತರಗತಿ, ದೇವಸ್ಥಾನ, ಗುರುದ್ವಾರ, ಸಂಗೀತ ಕಛೇರಿಗಳಲ್ಲಿ ಹಾರ್ಮೋನಿಯಂ ಬರತೊಡಗಿತು. ನಾಟಕ ಕಂಪೆನಿಯಲ್ಲಿ ಸ್ಟೇಜಿನ ಸರಿ ಸರಿ ಎತ್ತರಕ್ಕೆ ಕುಂತು ನುಡಿಸಬೇಕಾದ್ದರಿಂದ ಅಲ್ಲಿ ಲೆಗ್‌ ಹಾರ್ಮೋನಿಯಂ ಹೆಚ್ಚು ಸಹಕಾರಿಯಾಗಿ ಅದೇ ಮುಂದುವರಿಯಿತು. 

ಇದೊಂದು ಸುಲಭ ವಾದ್ಯವೆಂದು ಹೇಳುವುದುಂಟು, ಒಂದು ರೀತಿಯಲ್ಲಿ ಸತ್ಯವೇ. ಮೂರು ಸ್ತರಗಳಲ್ಲಿ ತನ್ನೆಲ್ಲ ಶುೃತಿಗಳನ್ನು ತೋರಿಸುವುದರಿಂದ ಕಲಿಯುವವರಿಗೆ ಸಹಾಯವಾದೀತು. ಮತ್ತೆ ತಂತು ಅಥವಾ ಉಳಿದ ವಾದ್ಯಗಳಲ್ಲಿ ಸೌಂಡ್‌ ಪ್ರೊಡ್ನೂಸ್‌ ಮಾಡಬೇಕಾದಂತೆ ಇದರಲ್ಲಿ ಮಾಡಬೇಕಾಗಿಲ್ಲ. ಕೇವಲ ಮಣೆಯನ್ನು ಒತ್ತಬೇಕಷ್ಟೆ. ಇನ್ನು ಕಲಿಸುವ ಗುರುಗಳು ಕೂಡಾ ಪ್ರತೀ ಮಣೆಯನ್ನು ನುಡಿಸಿ ತೋರಿಸಬಹುದು. ಹಾಗಾಗಿ, ಅದನ್ನು ರೆಡಿಮೇಡ್‌ ಸೌಂಡ್‌ ಎನ್ನಬಹುದು. ಉಳಿದ ವಾದನದಲ್ಲಿ ನುಡಿಸಿ ತೋರಿಸಿದರೂ, ಎಷ್ಟು ಕಂಡರೂ ಕಿವಿ ಅದನ್ನು ಆಲಿಸಿ ಅಹುದೆನಬೇಕು. ಯಾವುದೇ ಸಂಗೀತ ನಿರ್ದೇಶಕರ ಫೊಟೊ ಗಮನಿಸಿದರೆ ಹೆಚ್ಚಾಗಿ ಅವರ ಎದುರು ಹಾರ್ಮೋನಿಯಂ ಕಾಣಬಹುದು. ಉಳಿದ ವಾದ್ಯಗಳೊಡನೆ ಫೊಟೊ ಇರುವುದು ಬಹಳ ವಿರಳ. ಹರಿಪ್ರಸಾದ ಚೌರಾಸಿಯಾ- ಶಿವಕುಮಾರ ಶರ್ಮರ ಜೋಡಿ ಶಿವಹರಿ ಕೂಡ ಸಂಗೀತ ನಿರ್ದೇಶನದ ಸಮಯದಲ್ಲಿ ಬಳಸಿದ್ದು ಹಾರ್ಮೋನಿಯಂ! ತನ್ನೆಲ್ಲ ರೆಡಿಮೇಡ್‌ ಶ್ರುತಿಗಳನ್ನು ತೋರಿಸುವುದರಿಂದ ಅದನ್ನು ಆಧಾರವಾಗಿ ಇಟ್ಟುಕೊಂಡು ಸಂಗೀತ ನಿರ್ದೇಶಕನಿಗೆ ಹೊಸ ಮಾದರಿಗಳ ಹುಡುಕಾಟಕ್ಕೆ ಸಹಾಯವಾಯಿತು. ಉಳಿದ ವಾದ್ಯಗಳಲ್ಲಿ ಮೊದಲು ಶ್ರುತಿಯನ್ನೇ ಹುಡುಕಬೇಕಲ್ಲ !  

ಇದನ್ನು ಸುಲಭವಾದ್ಯವೆನ್ನುವ ಹಣೆಪಟ್ಟಿ ಪೂರ್ತಿ ಒಪ್ಪುವಂತಿಲ್ಲ. ಇದನ್ನು ಒಂದು ಸಹಾಯಕ ವಾದ್ಯವೆಂದೇ ಗುರುತಿಸುವುದರಿಂದ ಎಲ್ಲರಿಗೂ ಅದರ ಬಗೆಗೊಂದು ಸಾಮಾನ್ಯ ಜ್ಞಾನವಿರುವುದು ಖಂಡಿತ. ಆದರೆ, ಅದನ್ನು ತನ್ನ ಮುಖ್ಯ ಆಸಕ್ತಿ ಹಾಗೂ ತಾನು ಇದನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎನ್ನುವವರು ಕಡಿಮೆಯೆ. ಪ್ರತಿ ಊರಿನಲ್ಲೂ ಹಾರ್ಮೋನಿಯಂ ನುಡಿಸುವವರು ಸಿಗುತ್ತಾರೆ. ಅವರು ಆಯಾ ಊರಿನ ಭಜನೆ, ಶಾಲಾ ವಾರ್ಷಿಕೋತ್ಸವ ಇತ್ಯಾದಿಗಳನ್ನು ಸಂಭಾಳಿಸುತ್ತಿ¨ªಾರೆ. ಬಳಕೆಯ ಸಂಖ್ಯಾದೃಷ್ಟಿಯಿಂದಾದರೂ ಈ ವಾದ್ಯದಲ್ಲಿ ಪ್ರಸಿದ್ಧರಾದವರು ಹೆಚ್ಚಿರಬೇಕಿತ್ತು. ಆದರೆ, ಹಾಗಾಗಲೇ ಇಲ್ಲ. ತುಂಬಾ ಪ್ರಸಿದ್ಧರಾದವರೂ ಸಂವಾದಿನಿಯಲ್ಲಿ ಕುಂತು ಎಲ್ಲ ಬೇಕಾದ ಮಣೆಗಳು ಕಂಡರೂ ಬೇಡದ ಮಣೆ ಒತ್ತಿ ಬೇಸುರ್‌ ಬಾರಿಸಿದ್ದನ್ನು ಕಂಡಿದ್ದೇವೆ. ಈ ವಾದ್ಯ ಎಲ್ಲರನ್ನೂ ಹತ್ತಿರ ಕರೆದಿದೆ. ಆ ಸಂಖ್ಯೆ ಗಮನಿಸಿದರೆ ಕೆಲವರನ್ನಷ್ಟೇ ಹತ್ತಿರ ಕರೆದು ತನ್ನ ತೊಡೆಯ ಮೇಲೆ ಕೂರಿಸಿ ಉಪಚರಿಸಿದೆ. ಬೇಕಾಗುವ ಮಣೆಗಳು ಕಣ್ಣಮುಂದೆ ಇದ್ದವಲ್ಲ ಕೇವಲ ಆ ಮಣೆಯನ್ನು ಮುಟ್ಟಬೇಕಿತ್ತಷ್ಟೆ ! ಹೆಚ್ಚು ಆಪ್ಶನ್‌ಗಳಿರುವ ಸಿಸ್ಟಮ್‌ಗಳು ಫ‌ಜೈಲ್‌ ಎಂದು ನಾವು ಕೇಳಿದ್ದೇವೆ. ಅಂದರೆ ಹೆಚ್ಚು ಆಯ್ಕೆಯಿರುವ ವ್ಯವಸ್ಥೆ ಹೆಚ್ಚು ಸೂಕ್ಷ್ಮವೂ ತನ್ಮೂಲಕ ದುರ್ಬಲವೂ ಆಗಿರುತ್ತದೆ ಎಂದರ್ಥ. ಇರುವ ಎಲ್ಲ ಆಪ್ಶನ್‌ಗಳು ಸರಿ ಇವೆಯೆ ಎನ್ನುವುದನ್ನು ಮುಂದೆ ನೋಡೋಣ. 

ಇಲ್ಲೊಂದು ವಿಚಿತ್ರವಿದೆ. ಪ್ರತೀ ತಾಲೂಕಿನಲ್ಲೂ ಆರ್ಕೆಸ್ಟ್ರಾಗೆ ಕೀಬೋರ್ಡ್‌ ನುಡಿಸುವವರಿ¨ªಾರೆ. ಪಂಜಾಬಿನಿಂದ ಹಿಡಿದು ಕೇರಳದವರೆಗೆ ಗಮನಿಸಿದರೂ ಇವರ ಕೈಚಳಕ ಆಶ್ಚರ್ಯಪಡಿಸುವಂತಹದ್ದು. ಇವರು ಯಾರೋ, ಇವರು ಯಾವ ಗುರುಗಳಲ್ಲಿ ತಮ್ಮ ಶಿಷ್ಯವೃತ್ತಿ ಪ್ರಾರಂಭಿಸಿದರೋ, ಯಾವ ಗುರುಶಿಷ್ಯ ಪರಂಪರೆಯೋ! ಒಂದೂ ತಿಳಿಯುವುದಿಲ್ಲ. ಕುಲಕಸುಬಿನಂತೇ ಮುಂದುವರಿದಿದೆ ! 

ಸ್ವರಗಳ ಹುಡುಕಾಟ
ಹಾರ್ಮೋನಿಯಂನಲ್ಲಿ ಎಲ್ಲ ಆಪ್ಶನ್‌ಗಳೂ ಕಣ್ಣಮುಂದೆ ಇದೆ, ಅವೆಲ್ಲವೂ ಸರಿ ಇವೆಯೋ ಇಲ್ಲವೋ ಎನ್ನುವುದನ್ನು ಚರ್ಚಿಸೋಣ ಎಂದೆ. ಮೊದಲನೆಯದಾಗಿ, ಹಾಗೆ ನೋಡಿದರೆ ಹಾರ್ಮೋನಿಯಂ ಪಾಶ್ಚಾತ್ಯ ಇಕ್ವಿಟೆಂಪರ್ಡ್‌ ಶ್ರುತಿಯಿಂದ ಮಾಡಲ್ಪಟ್ಟಿದ್ದರಿಂದ ಭಾರತೀಯ ಮೆಲೊಡಿ ಆಧಾರಿತ ಸಂಗೀತಕ್ಕೆ ಹೊಂದುವುದಿಲ್ಲ. ಅಂದರೆ ಈಗಿನ ಹಾರ್ಮೋನಿಯಂ ತನ್ನ 12 ಶ್ರುತಿಗಳನ್ನು ಸಮ ವಿಭಾಗ ಮಾಡುವುದರಿಂದ ಯಾವ ಸ್ವರವೂ ಷಡ್ಜಕ್ಕೆ ಕನ್ಸೋನೆಂಟ್‌ ಅಥವಾ ಪೂರಕವಾಗಿ ಹೊಂದುವುದಿಲ್ಲ. ಭಾರತೀಯ ಸಂಗೀತದಲ್ಲಿ  ಸ-ಗ-ಪ, 100-125- 150 ಹರ್ಡ್ಸ್‌

ಇದ್ದರೆ ಈಗಿನ ಹಾರ್ಮೋನಿಯಂ ಶ್ರುತಿಯಲ್ಲಿ ಅದು 100-126-149.30. ಭಾರತೀಯ ಸಂಗೀತದಲ್ಲಿ 22 ಶ್ರುತಿಗಳಿವೆ. ಅಂದರೆ ಸ, ಪ ಸ್ಥಿರ ಶ್ರುತಿಯಾದರೆ ಉಳಿದ 10 ಶ್ರುತಿಯನ್ನು 20 ಶ್ರುತಿಗಳನ್ನಾಗಿ ವಿಭಾಗಿಸಲಾಗಿದೆ. ಒಟ್ಟೂ 22 ಶ್ರುತಿ ಆಯಿತಲ್ಲ. ಆಶ್ಚರ್ಯವೆಂದರೆ ಈ ಎಲ್ಲ ಶುಶ್ರುತಿಗಳೂ ಷಡ್ಜದೊಂದಿಗೆ ಮೇಳೈಸುತ್ತವೆ. ಉದಾಹರಣೆಗೆ ರಿಷಭ ತೆಗೆದುಕೊಂಡರೆ ಈಗಿನ ಹಾರ್ಮೋನಿಯಂನಲ್ಲಿ ಕೋಮಲ ರಿಷಭ ಮತ್ತು ಶುದ್ಧ ರಿಷಭ ಇದೆ. ಒಟ್ಟು ಎರಡು ಸ್ಥಾನ. ಆದರೆ, ಭಾರತೀಯ ಸಂಗೀತದಲ್ಲಿ ಕೋಮಲ ರಿಷಭದಲ್ಲಿ ಎರಡು ಸ್ಥಾನ, ಶುದ್ಧ ರಿಷಭದಲ್ಲಿ ಇನ್ನೆರಡು ಸ್ಥಾನಗಳಿವೆ. ಅಂದರೆ ಒಟ್ಟು ರಿಷಭದಲ್ಲಿ ನಾಲ್ಕು ಸ್ಥಾನಗಳು. (ಅತಿ ಕೋಮಲ, ಕೋಮಲ, ಶುದ್ಧ, ತೀವ್ರ) ಆದರೆ, ಈಗಿನ ಹಾರ್ಮೋನಿಯಂನಲ್ಲಿರುವ ರಿಷಭ ಆ ಎರಡು ಸ್ಥಾನಗಳ ನಡುವೆ ಇರುವುದರಿಂದ ನಿಜವಾದ ಯಾವ ಕೋಮಲ/ಶುದ್ಧ ರಿಷಭವನ್ನೂ ಪ್ರತಿನಿಧಿಸುವುದಿಲ್ಲ. ಈ ನಿರ್ವಹಣೆ ಎಲ್ಲ ಸ್ವರದೊಂದಿಗೂ ಆಗಿ ಸಂಪೂರ್ಣ “ಬೇಸೂರ್‌’ ಎಂದು ಕರೆಯುವ ಹಂತಕ್ಕೆ ತಲುಪುತ್ತದೆ. ಉದಾಹರಣೆಗೆ ರಾಗ ಯಮನ್‌ನಲ್ಲಿ ರಿಷಭದ ಛಾಯೆಯನ್ನು ಸರಿಯಾಗಿ ತೋರಿಸಬೇಕಾದರೆ ಶುದ್ಧ ರಿಷಭವು ಭಾರತೀಯ ಸಂಗೀತದ ತೀವ್ರ ರಿಷಭವೇ ಹೊರತೂ ಈಗಿನ ಹಾರ್ಮೋನಿಯಂನಲ್ಲಿರುವ ಅದೂ ಅಲ್ಲದ ಇದೂ ಅಲ್ಲದ ಶುದ್ಧ ರಿಷಭ ಅಲ್ಲ. ಅಂತೆಯೇ ರಾಗ್‌ ಭಾಗೇಶ್ರಿಯಲ್ಲಿ ಬರುವ ಶುದ್ಧ ರಿಷಭವು ಮ ಕ್ಕೆ ಪೂರಕವಾಗಿದ್ದು ಈಗಿನ ಹಾರ್ಮೋನಿಯಂನ ಶುದ್ಧ ರಿಷಭಕ್ಕಿಂತ ಸ್ವಲ್ಪ ಕಡಿಮೆ (ಭಾರತೀಯ ಸಂಗೀತದ ಶುದ್ಧ ರಿಷಭ) ಇರುತ್ತದೆ. ಅಂದರೆ ಈಗಿನ ಹಾರ್ಮೋನಿಯಂ ಈ ಎರಡೂ ರಾಗದ ಭಾವನೆಗೆ ಪೂರಕವಾಗುವ ರಿಷಭವನ್ನು ಪೂರೈಸುವುದಿಲ್ಲ. ಹಾಡುವವನ ಸ್ವರ ಹುಡುಕಾಟ ಸರಿ ಇದ್ದರೆ (ಮೊದಲು ಕಲಾವಿದನಿಗೆ ಆ ಸೂಕ್ಷ್ಮ ಸ್ವರ ಸ್ಥಾನದ ಅರಿವಿರಬೇಕು) ಆತನಿಗೆ ಸಾರಂಗಿ ಮತ್ತು ತಂಬೂರ ಅತ್ಯಂತ ಪೂರಕವಾಗಬಹುದು. ಎರಡನೆಯದಾಗಿ, ಸಾರಂಗಿ ತರಹದ ವಾದ್ಯಗಳು ತಂತು ವಾದ್ಯವಾದದ್ದರಿಂದ 22 ಶ್ರುತಿ ಅಷ್ಟೇ ಅಲ್ಲದೇ ಅದರ ನಡುವೆ ಅಪರಿಮಿತ ಸಾಧ್ಯತೆಗಳಿವೆ. ಸ್ವರದಿಂದ ಸ್ವರಕ್ಕೆ ಸರ್ಕನಾ  ಅಂದರೆ ಮೀಂಡ್‌ ಸಾಧ್ಯವಾಗಿ ನಿರಂತರ ಭಾವನೆ ಸಾಧ್ಯವಾಗಿದೆ. ಇದೂ ಕೂಡ ಹಾರ್ಮೋನಿಯಂನಿಂದ ಸಾಧ್ಯವಾಗುವುದಿಲ್ಲ. ಅಂದರೆ ಪ ದಿಂದ ಗ ಅಥವಾ ಸ ಸ್ವರಕ್ಕೆ ದಾಟುವಾಗಿನ ಮಧ್ಯದಲ್ಲಿ ಅವಿಛಿನ್ನ ಟ್ರಾಜೆಕ್ಟರಿ ಮೂಡುವುದಿಲ್ಲ. ಮೂರನೆಯದಾಗಿ ಒಂದು ತಂತಿಯಲ್ಲಾಗುವ ಆಂದೋಲನ ಅಥವಾ ಅಂಡ್ಯುಲೇಶನ್‌ ಕೂಡ ಹಾರ್ಮೋನಿಯಂನಲ್ಲಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹಿಂದಿನ ಬಹಳಷ್ಟು ಕಲಾವಿದರು ಸಾರಂಗಿಯನ್ನು ಬಳಸಿದರೇ ಹೊರತು ಹಾರ್ಮೋನಿಯಂನ್ನು ಬಳಸಲಿಲ್ಲ. ಆಗಿನ ಸಂದರ್ಭದಲ್ಲಿ ಅವರು ಅಲ್ಲಿಯವರೆಗೆ ಅನುಭವಿಸಿದ ಸ್ವರ, ಅದರ ಮೂಲಕ ಊಂಟಾದ ಭಾವನೆ ಆಥವಾ ರಾಗದ ಛಾಯೆ ಈ ಹೊಸ ಹಾರ್ಮೋನಿಯಂನಲ್ಲಿ ದೊರಕದೇ ಖನ್ನರಾಗಿದ್ದೂ ಸ್ವಾಭಾವಿಕವೇ. ಪಾಶ್ಚಾತ್ಯರ ಆಕ್ರಮಣ ದೇಶದ ಮೂಲ ಸಂಗೀತದ ಮೇಲೂ ಆಗಿದೆ ಎನ್ನುವುದೂ ಅಷ್ಟೇ ಸತ್ಯ. 

ಇವೆಲ್ಲ ಕಾರಣಗಳಿಂದ ಆಲ್‌ ಇಂಡಿಯಾ ರೇಡಿಯೋದಲ್ಲಿ 1940ರಿಂದ 1971 ರವರೆಗೆ ಈ ವಾದ್ಯ ಬ್ಯಾನ್‌ ಆಗಿತ್ತು ಎಂದು ಹೇಳಬಹುದು. ಇದು ಚರ್ಚೆಯ ಒಂದು ಮುಖವಷ್ಟೆ. (ಯಾಕೆ ಬ್ಯಾನ್‌ ಆಯಿತು ಎನ್ನುವ ಚರ್ಚೆಯನ್ನು ಇಲ್ಲಿ ಮಾಡುತ್ತಿದ್ದೇವೆಯೇ ಹೊರತೂ ಯಾರು ಬ್ಯಾನ್‌ ಮಾಡಿದ್ದರು, ಮತ್ತು ನೆಹರೂ ಗಾಂಧಿ ಟಾಗೋರರಿಗೆ ಹಾರ್ಮೋನಿಯಂ ಇಷ್ಟವೇ/ಇಷ್ಟವಾಗುತ್ತಿರಲಿಲ್ಲವೇ ಇತ್ಯಾದಿ ಚರ್ಚೆ ಮಾಡುತ್ತಿಲ್ಲ ಮತ್ತು ಅವು ಸಂಗೀತಕ್ಕೆ ಸಂಬಂಧಪಟ್ಟು ಮುಖ್ಯವೂ ಆಗುವುದಿಲ್ಲ)

22 ಶ್ರುತಿಗಳ ಹಾರ್ಮೋನಿಯಂ
ಡಾ. ವಿದ್ಯಾಧರ ಓಕ್‌ ಇಂದು 22 ಶ್ರುತಿಯ ಹಾರ್ಮೋನಿಯಂನ್ನು ಕಂಡುಹಿಡಿದು ಅದನ್ನು ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಲ್ಲದೇ ಸಮರ್ಥವಾಗಿ ನುಡಿಸಿಯೂ ತೋರಿಸಿ¨ªಾರೆ. ಆದರೆ, ಅವರ ಹಾರ್ಮೋನಿಯಂ ಕೇವಲ ಡೆಮೊನ್‌ಸ್ಟ್ರೇಷನ್‌ಗೆ ಸೀಮಿತವಾಗಿದೆ ಎಂದು ಅನಿಸುತ್ತಿದೆಯೇ ಹೊರತು ಯಾರೂ ಬಳಸುತ್ತಿಲ್ಲ. ಉಳಿದ ಕಲಾವಿದರು ಈ ಆವಿಷ್ಕಾರವನ್ನು ಒಪ್ಪುವುದಾದರೂ ಇದು ಅತಿ ಸಂಕೀರ್ಣವಾದದ್ದು ಮತ್ತು ಟ್ಯೂನಿಂಗ್‌ ಕಷ್ಟ, ಬಳಕೆ ಪ್ರಾಕ್ಟಿಕಲ್‌ ಅಲ್ಲ, ಈಗಿರುವ ಹಾರ್ಮೋನಿಯಮ್ಮೇ ಸಾಕು, ನಮಗೆ ಇದೇ ಸುಖ ಎನ್ನುವ ಅಭಿಪ್ರಾಯ ಅವರದ್ದು. ಗಾಳಿಯ ನಿಯಂತ್ರಣದಿಂದ ಬೇಕಾದ ಸ್ವರವನ್ನು ತರಿಸಬಹುದೆನ್ನುವ ಕೆಲವು ವಾದಕರ ವಾದವನ್ನು ಪೂರ್ತಿ ತೆಗೆದುಹಾಕಲಾಗದಿದ್ದರೂ ಅದನ್ನು ನಿರ್ದಿಷ್ಟವಾಗಿ ಪ್ರಮಾಣೀಕರಿಸುವುದು ಕಷ್ಟ ಮತ್ತು ಅಂತಹ ಕಲಾವಿದರೂ ವಿರಳವೇ ಸರಿ.

ಈಗೊಂದು ಮುಖ್ಯ ಪ್ರಶ್ನೆ ಬರುವುದು ಸಹಜ. ಈ ನೂರು ವರುಷದಲ್ಲಿ ಇದೇ ಸುಖವಲ್ಲದ (ಬೇಸುರ್‌…!) ಹಾರ್ಮೋನಿಯಂನ್ನು ಭೀಮಸೇನ ಜೋಶಿ, ಅಜಯ ಚಕ್ರವರ್ತಿ ಆದಿಯಾಗಿ ಉಪಯೋಗಿಸಲಿಲ್ಲವೆ? ರಿಷಭ ವಲ್ಲದ ರಿಷಭ, ನಿಷಾದ ವಲ್ಲದ ನಿಷಾದ ಹಚ್ಚಲಿಲ್ಲವೆ ಎನ್ನುವುದು. ಇದಕ್ಕೆ ಉತ್ತರ ಮೊದಲನೇಯದು, ಇಂತಹ ಶ್ರೇಷ್ಠ ಸಂಗೀತಗಾರರಿಗೆ ಪ್ರತೀ ರಾಗದ ಛಾಯೆ ಗೊತ್ತಿದ್ದು, ಅದನ್ನು ಸಮರ್ಪಕವಾಗಿ ಪ್ರಸ್ತುತ ಪಡಿಸಿ ಹಾರ್ಮೋನಿಯಂನ ನ್ಯೂನತೆಗಳನ್ನು ತಿಳಿದೂ ಅದನ್ನು ನಗಣ್ಯ ಮಾಡಿದ್ದು.  ಎರಡನೆಯದು ಹಾರ್ಮೋನಿಯಂನ ನ್ಯೂನತೆ ತಿಳಿದಿದ್ದೂ, ಸಾರಂಗಿಯ ದುರ್ಲಭದಿಂದ ಬೇರೆ ದಾರಿಯಿಲ್ಲದೇ ಹಾರ್ಮೋನಿಯಂನ್ನೇ ಬಳಸಿದ್ದು. ಮೂರನೆಯದು ಪ್ರಾಥಮಿಕ ಕಲಿಕೆಯ ಹಂತದಿಂದಲೂ ಹಾರ್ಮೋನಿಯಂ ಬಳಕೆಯಾಗಿ ಅದು ಸರಿಯೋ ತಪ್ಪೋ ಅದು ಕೊಡುವುದನ್ನೇ ಸತ್ಯವೆಂದು ತಿಳಿದಿದ್ದು. ಉದಾಹರಣೆಗೆ ಹೊಸದಾಗಿ ಬೆಂಗಳೂರಿಗೆ ಬಂದಾಗ ನಮಗೆ ಇಲ್ಲಿನ ಹಾಲು ರುಚಿಸದೇ ಹೊಂದಿಕೆಯಾಗುವುದಿಲ್ಲ. ಆದರೆ, ಮೂರು ನಾಲ್ಕು ದಿನಗಳಾದಾಗ ನಾವು ಅದೇ ರುಚಿಗೆ ಹೊಂದಿಕೊಳ್ಳುತ್ತೇವೆ. ಹೀಗೆಯೇ ಸಂಗೀತದಲ್ಲೂ ನಿಜವಾದ ಸ್ವರವನ್ನು ಗುರುತಿಸುವ ಸಂವೇದನೆಯನ್ನು ಈ ಪೀಳಿಗೆ ಕಳೆದುಕೊಂಡಿದೆ ಎನ್ನುವುದೂ ಅಷ್ಟೇ ಸತ್ಯ.  

ಶ್ರೇಷ್ಠ ಸಂಗೀತಗಾರರು ಹೇಳಿದ ಮಾತನ್ನು ನಾವು ಕೇಳಿದ್ದೇವೆ. ಸಂಗೀತವು ನಿರಂತರ ಸ್ವರದ ಹುಡುಕಾಟ. ಜೀವನವಿಡೀ ಒಂದು ಗಾಂಧಾರ (ಗ) ಹುಡುಕುವದರಲ್ಲೇ ಆಗುತ್ತದೆ. ಸಿಕ್ಕಿದ ದಿವಸ ನಾವು ಧನ್ಯ. ಈ ಮೂಲ ಹುಡುಕಾಟವನ್ನು ನಾವು ಅಂದರೆ ಪ್ರೇಕ್ಷಕ ಮತ್ತು ಕಲಾವಿದ  ಅರ್ಥ ಮಾಡಿಕೊಳ್ಳಬೇಕಾಗಿದೆ. 

ಸಚ್ಚಿದಾನಂದ ಹೆಗಡೆ

ಟಾಪ್ ನ್ಯೂಸ್

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.