ಉಪಕಾರ ಸ್ಮರಣೆ

Team Udayavani, Jul 7, 2019, 5:00 AM IST

ವೇಗವಾಗಿ ಬರುತ್ತಿರುವ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್‌. ಗರ್ವದಿಂದ ಚಾಲಕನ ಸೀಟಿನತ್ತ ಬರುತ್ತ ಡ್ರೈವಿಂಗ್‌ ಲೈಸನ್ಸ್‌ ತೋರಿಸುವಂತೆ ಕೇಳಿದ. ಆತ ಕಂದಾಯ ಇಲಾಖೆಯ ಉದ್ಯೋಗಿ. ಎಲ್ಲ ಕಾಗದ ಪತ್ರಗಳನ್ನು ತೋರಿಸಿದ. ಇನ್ಶೂರೆನ್ಸ್‌ ಮಾತ್ರ ಲ್ಯಾಪ್ಸ್‌ ಆಗಿತ್ತು.  ಪೊಲೀಸ್‌, ಕಂದಾಯ ಇಲಾಖೆಯ ಉದ್ಯೋಗಿಯ ಮುಖ ನೋಡಿದ. ಪರಸ್ಪರ ನಕ್ಕರು. “ಸರಿ, ಹೋಗಿ’ ಎಂದು ಪೊಲೀಸ್‌ ಅವನನ್ನು ಬಿಟ್ಟ. ಮತ್ತೂಮ್ಮೆ ಪೊಲೀಸ್‌ನ ಮಗನಿಗೆ ಅರ್ಜೆಂಟಾಗಿ ಜಾತಿ ಪ್ರಮಾಣ ಪತ್ರ ಬೇಕಾಗಿತ್ತು. ಆಫೀಸ್‌ ಕಡೆ ಹೋದರೆ ಅಲ್ಲಿನ ಅಲ್ಲಿದ್ದ ಸಿಬಂದಿ “ಒಂದು ವಾರ ಬೇಕಾಗುತ್ತದೆ. ಈಗ ಕಂಪ್ಯೂಟರೈಸ್ಡ್ ಆಗಿರೋದ್ರಿಂದ ಎಲ್ಲ ಶಿಸ್ತುಬದ್ಧವಾಗಿ ನಡೀತಿದೆ’ ಎಂದು ಹೇಳಿದರು.

ಈ ಹಿಂದೆ ತನ್ನ “ಔದಾರ್ಯ’ದ ಲಾಭವನ್ನು ಪಡೆದಿದ್ದ ಕಂದಾಯ ಇಲಾಖೆಯ ಉದ್ಯೋಗಿಯ ನೆನಪಾಯಿತು. ಅವನನ್ನು ಭೇಟಿಯಾದ. ಇಬ್ಬರೂ ಪರಸ್ಪರ ಮುಖ ನೋಡಿ ನಕ್ಕರು.  ಆತನಲ್ಲಿ ಉಪಕಾರ ಸ್ಮರಣೆ ಇತ್ತು. ಆ ದಿನ ಸಂಜೆಯೇ ಜಾತಿ ಪ್ರಮಾಣ ಪತ್ರ ಪೊಲೀಸನ ಕೈ ಸೇರಿತು. ರೂಲ್ಸ್‌ ಪಾಲಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ರೂಲ್ಸ್‌ ಬ್ರೇಕ್‌ ಮಾಡುವುದರಿಂದಲೂ ಎಷ್ಟೆಲ್ಲ ಪ್ರಯೋಜನ ಇದೆ ನೋಡಿ, ಯಾರಿಗೆಲ್ಲ ಎಂದು ಕೇಳಬೇಡಿ !

ಭೋಜರಾಜ ಸೊಪ್ಪಿಮಠ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜಗತ್ತಿನಲ್ಲಿ ಹಲವಾರು ವರ್ಷಗಳಿಗೊಮ್ಮೆ ಬರುವ ಮಹಾಮಾರಿಗಳು ಜನಸಮುದಾಯದ ಸ್ವಾಸ್ಥ್ಯವನ್ನು ಅಲ್ಲಾಡಿಸುತ್ತವೆ. ಇಂಥ ಸಂದರ್ಭದಲ್ಲೆಲ್ಲ ಮನುಷ್ಯನ ದೇಹಬಲ, ಹಣಬಲ...

  • ಗುಡುಗಿದರೆ ಸಿಂಹ, ಕುಳಿತರೆ ಬುದ್ಧ, ಸಿಡಿದೆದ್ದರೆ ಸೇರಿಗೆ ಸವ್ವಾಸೇರು. ಇಂಎ ಪಾಟೀಲ ಪುಟ್ಟಪ್ಪ ಎಂಬ ಸಿಂಹ ಧ್ವನಿಯೊಂದು ಮೌನವಾಗಿದೆ. ಹಾವೇರಿ ನೆಲದ ಕುಡಿ ಪಾಪು...

  • ಸೂರ್ಯನ ನೆರಳು. ಹೆಸರು ವಿಚಿತ್ರವಾಗಿದೆಯಲ್ಲವೆ? ಸೂರ್ಯನಿಗೆ ನೆರಳಿದೆಯೆ? ತನ್ನೆಲ್ಲ ಕಡೆಗಳಿಂದಲೂ ಬೆಳಕನ್ನು ಹೊಮ್ಮುತ್ತಿರುವ ಸೂರ್ಯ ಯಾವುದೋ ವಸ್ತುವಿನ ಮೇಲೆ...

  • ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಎಂದರೆ ಇಡೀ ಜಗತ್ತು ಮಾಯಾನಗರಿಗೆ ಲಗ್ಗೆ ಇಟ್ಟಂತೆ! ಜಾಗತಿಕ ಚಲನಚಿತ್ರ ಕ್ಷೇತ್ರದ ಎಲ್ಲ ಆಯಾಮಗಳು, ಸಂವೇದನೆಗಳು- ಇಲ್ಲಿನ...

  • ಕಳೆದ ತಿಂಗಳು ಅಣ್ಣನ ಮಗಳು ವನಿತಾಳ ಮದುವೆಗೆಂದು ನಾನು ಕುಮಟೆಗೆ ಹೋಗಿ ಬರಬೇಕಾಯಿತು. ಮದುವೆ ಅಕಸ್ಮಾತ್‌ ನಿಶ್ಚಯವಾದ್ದರಿಂದ ಮೊದಲೇ ಟಿಕೆಟ್‌ ಬುಕ್‌ ಮಾಡುವ...

ಹೊಸ ಸೇರ್ಪಡೆ