ಬಿಝಿ ತಾನ್ಯಾ

Team Udayavani, Jun 3, 2018, 6:00 AM IST

ss-4.jpg

ಕೆಲವರು ಚಿತ್ರರಂಗಕ್ಕೆ ಬಲಗಾಲಿಟ್ಟು ಎಂಟ್ರಿಕೊಡುತ್ತಾರೆ. ಎಂಟ್ರಿಕೊಟ್ಟ ದಿನದಿಂದಲೇ ಅವರಿಗೆ ಒಳ್ಳೆಯ ಸಿನೆಮಾಗಳು ಸಿಗುತ್ತಾ, ಬಿಝಿಯಾಗುತ್ತಾ ಹೋಗುತ್ತಾರೆ. ವಿಶೇಷವೆಂದರೆ ಒಂದೇ ಒಂದು ಸಿನೆಮಾ ರಿಲೀಸ್‌ ಆಗುವ ಮುನ್ನವೇ ಕೈ ತುಂಬಾ ಅವಕಾಶ ಸಿಗುತ್ತದೆ. ಸದ್ಯ ಈ ಮಾತು ಅನ್ವಯವಾಗೋದು ತಾನ್ಯಾ ಹೋಪ್‌. ಯಾರು ಈ ತಾನ್ಯಾ ಹೋಪ್‌ ಎಂದು ನೀವು ಕೇಳಬಹುದು. ಕಳೆದ ಒಂದು ವಾರದಿಂದ ಈ ಹೆಸರು ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಕೇಳಿಬಂದಿತ್ತು. ಅದಕ್ಕೆ ಕಾರಣ ಅಮರ್‌ ಚಿತ್ರ. ಅಂಬರೀಶ್‌ ಪುತ್ರ ಅಭಿಷೇಕ್‌ ಅಮರ್‌ ಚಿತ್ರದ ಮೂಲಕ ಲಾಂಚ್‌ ಆಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಚರ್ಚೆ ಜೋರಾಗಿ ಕೇಳಿಬರುತ್ತಿರುವ ಹೊತ್ತಿನಲ್ಲಿ ಓಡಾಡಿದ ಹೆಸರು ತಾನ್ಯಾ ಹೋಪ್‌. ಆದರಂತೆ ತಾನ್ಯಾ ಈಗ ಅಮರ್‌ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಅಮರ್‌ ಚಿತ್ರಕ್ಕೆ ನಾಯಕಿಯಾಗಿರುವುದು ತಾನ್ಯಾಗೂ ಖುಷಿಕೊಟ್ಟಿದೆಯಂತೆ. ಚಿತ್ರದಲ್ಲಿ ತಾನ್ಯಾ ಬೈಕ್‌ ರೇಸರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಯಾರು ಈ ತಾನ್ಯಾ ಎಂದು ನೀವು ಕೇಳಿದರೆ ಮಹಾರಾಷ್ಟ್ರ ಮೂಲದ ಬೆಂಗಳೂರು ಹುಡುಗಿ. ತಾನ್ಯಾ ಹುಟ್ಟಿ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಎಲ್ಲಾ ನಟಿಯರಂತೆ ತಾನ್ಯಾ ಕೂಡಾ ರ್‍ಯಾಂಪ್‌ ವಾಕ್‌, ಮಾಡೆಲಿಂಗ್‌ ಮಾಡಿಯೇ ಸಿನೆಮಾ ರಂಗಕ್ಕೆ ಬಂದವರು. 

ತಾನ್ಯಾ ಬೆಂಗಳೂರು ಮೂಲದವ ರಾದರೂ ಕೆರಿಯರ್‌ ಆರಂಭಿಸಿದ್ದು ಮಾತ್ರ ತೆಲುಗಿನಲ್ಲಿ. ಈಗಾಗಲೇ ತಾನ್ಯಾ ತೆಲುಗಿನ ನಾಲ್ಕು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಒಂದು ತಮಿಳು ಸಿನಿಮಾ ಕೂಡಾ ತಾನ್ಯಾ ಕೈಯಲ್ಲಿದೆ. ಇಂತಿಪ್ಪ ತಾನ್ಯಾ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದು ಉಪೇಂದ್ರ ಅವರ ಸಿನೆಮಾ ಮೂಲಕ. ಸದ್ದಿಲ್ಲದೇ ಆರಂಭಗೊಂಡ ಉಪೇಂದ್ರ ಅವರ ಹೋಮ್‌ ಮಿನಿಸ್ಟರ್‌ ಸಿನಿಮಾದಲ್ಲಿ ತಾನ್ಯಾ ನಾಯಕಿ ಯಾಗುವ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ್ದಾರೆ. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇದರ ಬೆನ್ನಲ್ಲೇ ತಾನ್ಯಾಗೆ ಸಿಕ್ಕ ದೊಡ್ಡ ಅವಕಾಶ ಎಂದರೆ ಯಜಮಾನ. ದರ್ಶನ್‌ ನಾಯಕರಾಗಿರುವ ಯಜಮಾನ ಚಿತ್ರದ ಇಬ್ಬರು ನಾಯಕಿಯರಲ್ಲಿ ತಾನ್ಯಾ ಕೂಡಾ ಒಬ್ಬರು. ಈಗಾಗಲೇ ಚಿತ್ರೀಕರಣದಲ್ಲಿ ಭಾಗವಹಿಸಿ ಖುಷಿಯಾಗಿದ್ದಾರೆ. ಈಗ ತಾನ್ಯಾಗೆ ಅಮರ್‌ ಚಿತ್ರದಿಂದ ಅವಕಾಶ ಸಿಕ್ಕಿದೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾ ಬಿಡುಗಡೆಯಾಗುವ ಮುನ್ನವೇ ತಾನ್ಯಾ ಕೈಯಲ್ಲಿ ಮೂರು ಸಿನೆಮಾಗಳಿರುವುದು ವಿಶೇಷ. ಈ ನಡುವೆಯೇ ತಾನ್ಯಾಗೆ ಮತ್ತೂಂದಿಷ್ಟು ಆಫ‌ರ್‌ಗಳು ಹುಡುಕಿಕೊಂಡು ಬರುತ್ತಿವೆಯಂತೆ. 

ಟಾಪ್ ನ್ಯೂಸ್

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.