ಲೈಫ್ ರಿಮೈಂಡರ್‌


Team Udayavani, Dec 31, 2017, 6:35 AM IST

rakshit.jpg

ಹೊಸವರ್ಷ ಎಂದರೆ ನನಗೆ ನನ್ನ ಕಾಲೇಜು ದಿನಗಳೇ ನೆನಪಾಗುತ್ತವೆ. ಅಲ್ಲಿಯವರೆಗೂ ಇಂಥಾದ್ದೊಂದು ಆಚರಣೆಯ ಬಗ್ಗೆ ಅರಿವೇ ಇರಲಿಲ್ಲ. ಕಾಲೇಜು ಎಂದರೆ ಹೇಳಿಕೇಳಿ ಏರು ಯೌವನದ ಸಮಯವಲ್ಲವೆ? ಸಹಜವಾಗಿಯೇ ಹೊಸ ವರ್ಷಕ್ಕೂ ಯೌವನಕ್ಕೂ ಸಂಬಂಧವಿದೆ. ನಾನು, ನನ್ನ ಸ್ನೇಹಿತರು ನಮ್ಮದೇ ಶೈಲಿಯಲ್ಲಿ ಹೊಸವರ್ಷವನ್ನು ಆಚರಿಸುತ್ತಿದ್ದೆವು. ಆದರೆ, ಕಾಲೇಜು ಕಳೆದು ಮುಂದಿನ ಬದುಕಿನಲ್ಲಿ ಇವೆಲ್ಲ ಮರೆತೇಹೋಗುತ್ತವೆ. ಜೀವನದ ಜಂಜಾಟಗಳೇ ಅಧಿಕವಾಗುತ್ತವೆ. 
ಆದರೆ, ನನ್ನ ಪಾಲಿಗೆ ಹಾಗಾಗಲಿಲ್ಲ. ಸಿನೆಮಾ ನನ್ನ ಬದುಕಿನಲ್ಲಿ ಹೊಸ ಸವಾಲುಗಳನ್ನು ತಂದೊಡ್ಡಿ ನಿತ್ಯನೂತನವಾಗಿಸುತ್ತದೆ. ಪ್ರತಿದಿನವನ್ನೂ ಹೊಸತೆಂದು ಭಾವಿಸುವ ನನಗೆ ವರ್ಷವೇ ಹೊಸತಾಗುವುದರಲ್ಲಿ ಅಚ್ಚರಿಯೇನೋ ಇಲ್ಲ. 

ನಾನು ಹೊಸವರ್ಷ ಬಂದಾಗಲೆಲ್ಲ ಹಳೆಯ ವರ್ಷದ ಕಡೆಗೊಮ್ಮೆ ದೃಷ್ಟಿಸುತ್ತೇನೆ. 2016 ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ವರ್ಷವಾಗಿತ್ತು. ಅದಕ್ಕೆ ಕಾರಣವಿದೆ. ನಮ್ಮದೇ ನಿರ್ಮಾಣದ ಕಿರಿಕ್‌ ಪಾರ್ಟಿ 2016ರಲ್ಲಿ ಬಿಡುಗಡೆಯಾದದ್ದು. ಹಾಗಾಗಿ, ಅದು ಒಂಥರಾ ಸ್ಪೆಷಲ್‌. ಹಾಗಾಗಿ, ಸಿನೆಮಾ ಕ್ಷೇತ್ರದವನಾದ ನನಗೆ ಸಿನೆಮಾದ ಮೂಲಕವೇ ಹೊಸವರ್ಷ ಆಚರಿಸಬೇಕೆಂಬ ಆಸೆ. ಈ ವರ್ಷವೂ ಹಂಬಲ್‌ ಪೊಲಿಟೀಶಿಯನ್‌ ಬಿಡುಗಡೆಯಾಗಲಿದೆ. ಜೊತೆಗೆ, ಚಮಕ್‌  ಕೂಡ ತೆರೆಕಾಣುತ್ತಿರುವುದು ನಿಮಗೆಲ್ಲ ತಿಳಿದಿದೆ. ಈ ಎರಡೂ ಚಿತ್ರಗಳು ನನ್ನ ಹೊಸವರ್ಷಾಚರಣೆಯ ಸಂಭ್ರಮವನ್ನು ಹೆಚ್ಚಿಸುತ್ತಿವೆ.

ನನ್ನ ಗೋಧಿಬಣ್ಣ ಸಾಧಾರಣ ಮೈಕಟ್ಟು  ಸಿನೆಮಾವನ್ನು ನೀವೆಲ್ಲ ನೋಡಿರಬಹುದು. ಒಂದು ರೀತಿಯಲ್ಲಿ “ಮರೆವಿನ ಕತೆ’ ಇದು. ಮನುಷ್ಯನಿಗೆ “ನೆನಪು’ ಎಷ್ಟೊಂದು ಮುಖ್ಯವಾದದ್ದು ಎಂದು ಈ ಚಲನಚಿತ್ರವನ್ನು ನೋಡಿದಾಗ ತಿಳಿದುಬರಬಹುದು. ನೆನಪು ಇಲ್ಲದೆ ಕನಸು ಇಲ್ಲ. ಹಳೆಯ ವರ್ಷದ ನೆನಪನ್ನು ಹೊಂದಿರದವರು, ಹೊಸವರ್ಷದ ಕನಸನ್ನು ಕಟ್ಟಲಾರರು. ಹಳೆಯ ವರ್ಷವನ್ನೂ ಹಿರಿಯ ವ್ಯಕ್ತಿಗಳನ್ನೂ ಸ್ಮರಿಸದೆ ನಮ್ಮ ಯಾವ ಸಂಭ್ರಮಕ್ಕೂ ಅರ್ಥವಿಲ್ಲ. 

ಹೊಸವರ್ಷವನ್ನು ವೈಭವದೊಂದಿಗೆ ಆಚರಿಸುವವರಿದ್ದಾರೆ. ಅದು ತಪ್ಪಲ್ಲ. ಬದುಕಿನ ರಿಮೈಂಡರ್‌ ಅಷ್ಟೆ. ರಿಮೈಂಡಿಂಗ್‌ ಎಂದರೆ ನೆನಪಿಸಿಕೊಳ್ಳುವುದು ಎಂದೇ ಅರ್ಥ. ನೆನಪಿನ ಬುನಾದಿಯ ಮೇಲೆ ಕಟ್ಟಿದ ಕನಸುಗಳು 2018ನ್ನು ಮುನ್ನಡೆಸಲಿ. ಹೊಸವರ್ಷದ ಶುಭಾಶಯಗಳು.

ಟಾಪ್ ನ್ಯೂಸ್

1-fdsfsdf

ಮೊಮ್ಮಗಳ ನಿಧನ : ಜಿ.ಟಿ. ದೇವೇಗೌಡರಿಗೆ ಪ್ರಧಾನಿ ಮೋದಿ ಸಾಂತ್ವನ ಪತ್ರ

1-d-fsfsf

ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ: ರೈತರ ಆಕ್ರೋಶ

27

ಪಂಪಾಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಪ್ರಕರಣ; ಸ್ಥಳೀಯರ ಆಕ್ರೋಶ

21nirani

ದಲಿತ ಯುವಕನ ಹತ್ಯೆ: ಆರೋಪಿಗಳಿಗೆ ಕಠಿಣ ಕಾನೂನು ಕ್ರಮ: ಸಚಿವ ನಿರಾಣಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

20death

ಕುಣಿಗಲ್‌: ಪ್ರತ್ಯೇಕ ಪ್ರಕರಣ ಇಬ್ಬರು ನೇಣುಬಿಗಿದು ಆತ್ಮಹತ್ಯೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಲಾಭ ಗಳಿಸಿದ ಷೇರು ಯಾವುದು…

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಮೇ.27ರಂದು ಲಾಭ ಗಳಿಸಿದ ಷೇರು ಯಾವುದು…ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

1-fdsfsdf

ಮೊಮ್ಮಗಳ ನಿಧನ : ಜಿ.ಟಿ. ದೇವೇಗೌಡರಿಗೆ ಪ್ರಧಾನಿ ಮೋದಿ ಸಾಂತ್ವನ ಪತ್ರ

1-d-fsfsf

ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ: ರೈತರ ಆಕ್ರೋಶ

ತಿಂಗಳಾಡಿ: ಹೆಚ್ಚಾದ ಕಳ್ಳರ ಹಾವಳಿ; ಸೀಯಾಳ ಕದ್ದು ಕುಡಿದ ಕಳ್ಳರು..!

ತಿಂಗಳಾಡಿ: ಹೆಚ್ಚಾದ ಕಳ್ಳರ ಹಾವಳಿ; ಸೀಯಾಳ ಕದ್ದು ಕುಡಿದ ಕಳ್ಳರು..!

1-sdffsdf

ನದಿಗೆ ಬಿಯರ್ ಬಾಟಲಿ: ಗೋವಾದಲ್ಲಿ ಪ್ರವಾಸಿಗರ ವಾಹನ ಬೆನ್ನಟ್ಟಿ ದಂಡ !

ಪಿಎಂಇಜಿಪಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ; ಶ್ರೀನಿವಾಸ ರೆಡ್ಡಿ

ಪಿಎಂಇಜಿಪಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ; ಶ್ರೀನಿವಾಸ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.