ಮಾಧವಿ


Team Udayavani, Dec 23, 2018, 6:00 AM IST

9.jpg

ಮಾಧವಿ ಎನ್ನುವ ಗೆಳತಿಯ ಕತೆ ನಾನು ಬರೆಯುತ್ತಿದ್ದೇನೆ ಎನ್ನುವುದಕ್ಕಿಂತ ನನ್ನಿಂದ ಬರೆಸಿಕೊಳ್ಳುತ್ತಿದೆ ಎಂಬುದು ಸತ್ಯಕ್ಕೆ ಸಮೀಪವಾಗಬಹುದು. ಅವಳು ಮತ್ತು ಅವಳಿಷ್ಟದ ಮಲ್ಟಿಕಲರ್ಡ್‌ ಐಸ್‌ ಲಾಲಿ- ಎರಡೂ ಒಂದೇ. ಹೊಸವರ್ಷದ ಹಿಂದಿನ ದಿನ ರಾತ್ರಿ ಟೆರೇಸಿನ ಮೇಲೆ ಮೊಬೈಲ್‌ ಸೌಂಡಿನಲ್ಲೇ ಎಷ್ಟು ಕುಣಿಯುವುದು? ನಮ್ಮ ವಯಸ್ಸಿನ ಧ್ವನಿಗೆ ಕುಣಿದದ್ದೇ ಹೆಚ್ಚು. ಆವತ್ತು ಅವಳೇ ನಮ್ಮ ಮನೆಗೆ ಬಂದಿದ್ದಳು ಸೆಲೆಬ್ರೇಶನ್ನಿಗೆ.

ಹಳೇ ಹಿಂದಿ ಹಾಡುಗಳೆಂದರೆ ಹುಚ್ಚು ಆಕೆಗೆ. ಯಾವ ಬೀಟ್ಸ್‌ ಇಲ್ಲದಿದ್ದರೂ ಆಕೆಯನ್ನು ಕುಣಿಸುವಷ್ಟು ಉನ್ಮಾದ ತುಂಬುತ್ತಿದ್ದವು. ಹಮ್‌ ಬೇವಫಾ… ಹರ್‌ ಗಿಜ್‌ ನ ಥೇ…. ನನಗಂತೂ ಕುಣಿತವೆಂದರೆ ಒಂದೆರಡು ಸಲ ಭುಜ ಕುಣಿಸುವುದು ಹೆಚ್ಚೆಂದರೆ ಸೊಂಟ ಅಲುಗಾಡಿಸುವುದು. ಹೈಸ್ಕೂಲಿನಲ್ಲಿದ್ದಾಗ ಪ್ರತಿವರ್ಷವೂ ಡ್ಯಾನ್ಸ್‌ ಪ್ರೋಗ್ರಾಮಿಗೆ ಹೆಸರು ಕೊಡುತ್ತಿದ್ದೆ. ಒಂದು ವರ್ಷ ಕೂಡ ಸೆಲೆಕ್ಟ್ ಆಗಲಿಲ್ಲ. ಮನೆಯಲ್ಲಿ ಯಾರೂ ಇಲ್ಲದಾಗ ಕನ್ನಡಿಯ ಮುಂದೆ ನನ್ನ ಡ್ಯಾನ್ಸ್‌ ನಾನೇ ನೋಡಿಕೊಂಡು ಮುಖ ಮುಚ್ಚಿಕೊಂಡಿದ್ದೇನೆ ಎಷ್ಟೋ ಬಾರಿ. ಮಾಧವಿ ಎಳೆದು ತಂದಿದ್ದಾಳೆ- ಏನೋ ಕತ್ತಲೆಯಲ್ಲಿ ಹೆಜ್ಜೆ ತಪ್ಪಿದ್ದು ಯಾರಿಗೂ ತಿಳಿಯುವುದಿಲ್ಲ , ಟೆರೇಸಿನ ನೆಲವೊಂದಕ್ಕೆ ಬಿಟ್ಟು. ನಮ್ಮ ಬಟ್ಲರ್‌ ಕುಣಿತಕ್ಕೆ ಭಂಗ ಬರುವಂತೆ ಸರಿಯಾಗಿ ಹನ್ನೆರಡು ಗಂಟೆಗೆ ಒಂದು ಮಿಸ್ಡ್ ಕಾಲ್‌. ಮಾಧವಿಯ ಫೋನು ಎರಡು ಬಾರಿ ಡಿಫಾಲ್ಟ… ರಿಂಗ್‌ ಟೋನಿಗೆ ಹಾಡುವುದರೊಂದಿಗೆ ರಾಗಾಂತರವಾಯಿತು! ಅದೇ ಹಳೇ ಚೂಡಿಯನ್ನೂ ಪಾರ್ಟಿ ಗೌನಿನಂತೆ ಎರಡೂ ಕೈಯಿಂದ ಹಿಡಿದುಕೊಂಡು ಪಾಯಿಂಟೆಡ್‌ ಹೀಲ್ಸ… ಮ್ಯಾನೇಜು ಮಾಡುತ್ತ ಲೀಲಾಜಾಲವಾದ ನೋಟ ಬೀರುತ್ತ ಉನ್ಮತ್ತಿನಲ್ಲಿದ್ದ ಮಾಧವಿ ಫೋನೆತ್ತಿಕೊಂಡು ಕಾಲ್‌ ಬ್ಯಾಕ್‌ ಒತ್ತಿದಳು. 

ಹಮ್‌ ಬೇವಫಾ… ಹರ್‌ ಗಿಜ್‌ ನ ಥೇ…ಅದೇ ಕಾಲರ್‌ ಟೋನ್‌. ಅಚ್ಚರಿಯಿಂದ, “ಹಲೋ… shall I know u ಎಂದು ಹಾಡಿನಷ್ಟೇ ಲಯಬದ್ಧವಾಗಿ ಕೇಳಿದಳು. “happy new year… dear ಮಾಧವಿ’ ಫೋನ್‌ ಕಟ್‌ ಆಯ್ತು. ಸೆಲೆಬ್ರೇಶನ್ನಿನ ರಿದಮ್‌ ಅಲ್ಲೋಲಕಲ್ಲೋಲವಾಗಿ ಕುಳಿತೆವು. ಸರ್ಕಲ್ಲಿನಲ್ಲಿ ಫೈರ್‌ ಬಾಲ್‌ ಹಾರತೊಡಗಿದವು. ಓಲ್ಡ… ಮ್ಯಾನ್‌ ಕಾಮನಂತೆ ಸುಟ್ಟು ಕರಕಲಾಗಿದ್ದ. ಫ್ರೆಂಡ್ಸುಗಳ ವಿಶ್‌ ವಿನಿಮಯ- ರಾತ್ರಿ ಎರಡು ಗಂಟೆಗಳವರೆಗೂ. ವೀಡಿಯೋ ಕಾಲ್‌ಗ‌ಳಲ್ಲಿ ಕೇಕು ಮೆತ್ತಿಕೊಂಡ ಜಿಗಟು ಗಲ್ಲಗಳನ್ನು ನೋಡಿ ಸುಸ್ತಾಯಿತು. ರೂಮಿಗೆ ಮರಳುವ ಹೊತ್ತಿಗೆ ಮತ್ತೆ ಆ ಕಾಲರ್‌ ಟೋನ್‌ ಸೆಳೆತ ಹೆಚ್ಚಾಯಿತೇನೋ! 

“ಅಲ್ವೇ ನಾವ್ಯಾಕೆ ಆ ಹಾಡಿಗೆ ಕುಣಿದೆವು. ಕಾಲರ್‌ ಟೋನ್‌ ಅದೇ ಅಂದ್ರೆ ಏನಿದು? ಯಾರಿರಬಹುದಮ್ಮ, ವಿಶ್‌ ಮಾಡಿದವರು’ ಮುಂಗುರುಳು ನೇವರಿಸಿಕೊಳ್ಳುತ್ತಿರುವ ಮಾಧವಿಯ ಬೆರಳುಗಳು ಕಂಪಿಸುತ್ತಿದ್ದವು. ಒಂದು ಸಣ್ಣ ಭಯ ಹಾಗೂ ಕತ್ತಲೆಯ ಮೈಹೊಕ್ಕ ಸಣ್ಣ ದೀಪದ ತರಂಗಗಳು. ಪ್ಯಾರಾಶೂಟ್‌ ಗ್ಲೆ„ಂಡಿಂಗ್‌ ಮೇಟ್‌ ಪಿಯೂಶ್‌ ಇರಬಹುದಾ ಎಂದುಕೊಳ್ಳುವುದರಲ್ಲಿ ಕೆನ್ನೆ ರಂಗೇರಿತು.

“ಲೇ ಮಾದಿ… ಅದೇನೂ ಇಲ್ಲ. ಯಾರೋ ರಾಂಗ್‌ ನಂಬರ್‌ ಇರತ್ತೆ. ಇವತ್ತು ಕಾಲ್‌ ಜಾಮ್‌ ಆಗ್ತಿರ್ತಾವೆ ಗೊತ್ತಿಲ್ವಾ ನಿಂಗೆ. ನಿದ್ದೆ ಬರ್ತಿದೆ ಮಲಗೋಣಾÌ. ಅದ್ಯಾವನಿಗೋ ನಿನ್ನದೇ ಹೆಸರಿನ ಪ್ರೇಯಸಿ ಇರಬೇಕು’ ಎನ್ನುತ್ತ ಆಕಳಿಸುತ್ತ ವಿಂಡೋ ಕ್ಲೋಜ್‌ ಮಾಡಿ ಲ್ಯಾಚ್‌ ಹಾಕುತ್ತಿದ್ದೆ. ಒಂದು ನೆರಳು ಕಿಟಕಿಯ ಗ್ಲಾಸಿನ ಹಿಂದೆ. ಯಾರೋ ಒಬ್ಬ ಗಂಡಸು ಬಿಳಿ ಬನಿಯನ್ನು ತೊಟ್ಟಿರಬಹುದು ಎನಿಸಿತು. ಆದರೆ, ಈ ಹೊತ್ತಿನಲ್ಲಿ! ಅದೂ ನಮ್ಮ ಮನೆಯಿಂದ ಆಚೆ ಯಾವ ಮನೆಯೂ ಇಲ್ಲ ಈ ಫ್ಲೋರಿನಲ್ಲಿ. ಮಾಧವಿ ರೋಮಾಂಚಗಳನ್ನೆಲ್ಲ ಪಕ್ಕಕ್ಕಿರಿಸಿ ಶುದ್ಧ ಭಯಭೀತಳಾದಂತೆ ತೋರಿತು. ಕಾಲ್‌ ಮಾಡಿದವನೇ ಇರಬೇಕಾ ಎನ್ನುವ ಭಯ ಅವಳಿಗೆ. ಆ ಕಡೆ ಹಾಲಿನಲ್ಲಿ ಅಕ್ಕ-ಮಾವ ಮಲಗಿರ್ತಾರೆ. ಕಾಲಿಂಗ್‌ ಬೆಲ್‌ ಒತ್ತಿದರೆ ಏನು ಗತಿ. ಹಾಲ್‌ ಕಡೆಗೆ ಕಿವಿಗೊಟ್ಟು ಕಿಟಕಿಗೆ ಕಣ್ಣುನೆಟ್ಟು ತಾಸುಗಟ್ಟಲೆ ನಿರೀಕ್ಷಿಸಿದರೂ ಒಂದು ಸಣ್ಣ ಸದ್ದಿಲ್ಲ. ಒಂದು ಐಡಿಯಾ ಹೊಳೆಯಿತು. ಅದೇ ಅನ್‌ನೋನ್‌ ನಂಬರಿಗೊಂದು ರಿಂಗ್‌ ಮಾಡಿ ಬಿಡುವುದೆಂದು. ಒಂದು ವೇಳೆ ಅವನೇ ಇವನಾಗಿದ್ದರೆ ಏನಾದರೂ ಕ್ಲೂ ಸಿಗಬಹುದೆಂದು. 

“ಮಾದಿ, ಫೋನ್‌ ಕೊಡೆ ಇಲ್ಲಿ’
ಅವಳು ತೀರಾ ಪುಸುಧ್ವನಿಯಲ್ಲಿ, “ಬೇಡ ಕಣೇ…’ ಎಂದು ಕಣ್ಣು ದೊಡ್ಡದು ಮಾಡಿ ಬಾಯಿ ಮೇಲೆ “ಚುಪ್‌’ ಎನ್ನುವಂತೆ ಬೆರಳಿಟ್ಟುಕೊಂಡಳು. ಒತ್ತಾಯದಿಂದ ಫೋನ್‌ ಕಸಿದುಕೊಂಡು ರಿಂಗ್‌ ಮಾಡಿದೆ. ಅದೇ, ಹಮ್‌ ಬೇವಫಾ…. ಹರ್‌ ಗಿಜ್‌ ನ ಥೇ… ಆದರೆ ಹೊರಗಡೆಯಾಗಲಿ, ಕಿಟಕಿಯ ಹತ್ತಿರವಾಗಲಿ ಯಾವ ಚಲನೆಯೂ ಕಾಣಿಸಲಿಲ್ಲ.

ಅಡುಗೆ ಮನೆಗೆ ಹೋಗಿ ಬೈಟು ಸ್ಟ್ರಾಂಗ್‌ ಕಾಫಿ ನೊರೆಯೇಳುವಂತೆ ಸೋಸಿಕೊಂಡು ಬಂದೆ. ಅಡುಗೆ ಮನೆಗೆ ಒಂದೇ ಒಂದು ಕಿಟಕಿಯಿದೆ, ಅದು ಆ ಮನುಷ್ಯನಂತವನು ದಾಟಿಹೋದ ವಿರುದ್ಧ ದಿಕ್ಕಿನಲ್ಲಿ. ಆದರೂ ಭಯದಿಂದಲೇ ಮುಟಿಗೆಯಲ್ಲಿ ಜೀವ ಬಿಗಿಮಾಡಿಕೊಂಡೇ ಕಾಫಿ ಸೋಸಿದ್ದು. ಕಿಟಕಿಯಿಂದ ದೃಷ್ಟಿ ತೆಗೆಯದೇ ಕಾಫಿ ಗುಟುಕರಿಸುತ್ತಿರುವಾಗ ಜೀವ ಕಳೆದುಕೊಳ್ಳುತ್ತಿದ್ದ ನೊರೆ ಸುರ್‌… ಸುರ್‌… ಎಂದು ಅತೀ ಕ್ಷೀಣವಾದ ಶಬ್ದ ಮಾಡುತ್ತ ಉಸಿರು ಬಿಡುತ್ತಿತ್ತು. ರೂಮಿನ ತುಂಬಾ  ಫ್ಲೋರಸೆಂಟ್‌ ಬೆಳಕಿನ ಕ್ವಾಂಟಮುಗಳು ಗಾಳಿಯ ಭಾರ ಹೆಚ್ಚಿಸಿದಂತೆನಿಸಿತು ಅಥವಾ ನಾವಿಬ್ಬರೂ ತೂಕ ಕಳೆದುಕೊಂಡಂಥ ಗೊಂದಲಗಳು. ಮೌನವಾಗಿ ಅಚ್ಚರಿಯಿಂದ ಪರಸ್ಪರ ಕಣ್ಣುನೆಟ್ಟು ಕುಳಿತಂತೆ. ಇಡೀ ನಿಶ್ಶಬ್ದಕ್ಕೆ ಮೆರುಗು ನೀಡುವಂತೆ ಗಡಿಯಾರದ ಕ್ಷಣಗಳ ಹೆಜ್ಜೆ ಸಪ್ಪಳ. ಹಳೆ ಹಾಡಿಗೆ ಮಾಡಿದ ನಮ್ಮಿಬ್ಬರ ಡಾನ್ಸಿಗಿಂತ ಲಯಬದ್ಧವಾಗಿ ಕುಣಿಯುತ್ತಿರುವ ಭಯವನ್ನು ಎವೆಯಿಕ್ಕದೆ ನೋಡುತ್ತ ಅನುಭವಿಸುತ್ತ ಕೂಡದೆ ವಿಧಿಯೇ ಇರಲಿಲ್ಲ. ಸ್ಟೇರ್‌ಕೇಸಿನ ಪಕ್ಕದಲ್ಲೇ ನಮ್ಮ ರೂಮಿನ ಎರಡು ದಿಕ್ಕಿನ ಗೋಡೆಗಳಿಗೆ ಕಿಟಕಿಗಳಿದ್ದವು. ಬೆಳ್ಳಿ ಬೆಳಕು ಮೂಡುವ ಹೊತ್ತಾಗಿರಬೇಕು. ಆ ಕಡೆ ಹೋದ ಬನಿಯನ್ನುಧಾರಿ ಗಂಡಸು ಮರಳಿ ದಾಟಿದಂತೆ ಕಾಣಿಸಿತು. ಕಿಟಕಿ ತೆರೆದು ನೋಡುವ ಧೈರ್ಯ ಬರಲಿಲ್ಲ. ಅಂತೂ ಒಂದು ರೀತಿಯ ನಿರಾಳತೆಯನ್ನು ಅನಿರ್ವಾಹವಾಗಿ  ತಂದುಕೊಂಡು ನಿದ್ರೆಗೆ ಶರಣಾದೆವು.

ಬೆಳಿಗ್ಗೆ ಕಣ್ಣುಜ್ಜುತ್ತಲೇ ಕಿಟಕಿಯ ಕಡೆಗೆ ದೃಷ್ಟಿ ಹೋಯಿತು. ಮಾಧವಿ ಇನ್ನೂ ಮಲಗಿದ್ದಳು. ಎದ್ದು ಲಗುಬಗೆಯಿಂದ ಲ್ಯಾಚ್‌ ಎಳೆದು ಕಿಟಕಿಯಿಂದ ಹೊರಗಡೆ ಇಣುಕಿದೆ. ಗ್ಯಾಲರಿಯ ಹ್ಯಾಂಗರಿನಲ್ಲಿ ಇನ್ನೇನು ಬಿದ್ದೇ ಬಿಡುವುದೇನೋ ಎಂಬಂತೆ ನೇತಾಡುತ್ತಿದ್ದ ಹಳೇ ಟವೆಲು, ನಸಿದು ಬಣ್ಣ ಮಾಸಿ ಅಲ್ಲಲ್ಲಿ ತೂತು ಬಿದ್ದಿದ್ದ ನನ್ನ ಒಳಉಡುಪು ಕಣ್ಣಿಗೆ ಬಿದ್ದವು. ಚಪ್ಪಲ್‌ ಸ್ಟ್ಯಾಂಡಿನಲ್ಲಿ ಅಷ್ಟೂ ಜೊತೆ ಚಪ್ಪಲಿಗಳು ಜೀವ ಧರಿಸದ ದೇಹಗಳಂತೆ ನಿಶ್ಚಲವಾಗಿದ್ದವು. ಇನ್ನೊಂದು ಬದಿಗಿರುವ ಕಿಟಕಿಯನ್ನೂ ತೆರೆಯಲೇಬೆಕೆಂದು ತೆರೆದೆ. ಒಂದು ಕ್ಷಣ ದಂಗಾದೆ. ಸ್ಟೇರ್ಸ್‌ಗೆ ಅಂಟಿಕೊಂಡಂತಿರುವ ಗ್ರಿಲ್ಲುಗಳಿಗೆ ಹೊಟ್ಟೆ ಆನಿಸಿಕೊಂಡು ಬ್ರಶ್‌ ಮಾಡುತ್ತಿದ್ದ ಕೆಳಗಿನ ಫ್ಲೋರಿನ ಅಂಕಲ…. ರಾತ್ರಿ ಕಿಟಕಿಯಾಚೆ ಮಸುಕಾಗಿ ಕಂಡ ಬನಿಯನ್‌. ಅಂಕಲ್‌ ಬನಿಯನ್‌ ತೊಟ್ಟುಕೊಂಡೇ ನಿಂತಿದ್ದಾನೆ. ಅವನು ಇವನೇ ಇರಬಹುದಾ ಅಥವಾ ಇವನು ಅವನೇ ಇರಬಹುದಾ ಎಂಬ ಅನುಮಾನ ಬಲವಾಗತೊಡಗಿತು. ಅವನ ಹೆಂಡತಿ ಟಪಕ್‌ ಟಪಕ್‌ ಹವಾಯಿ ಚಪ್ಪಲಿಗೆ ಜೀವ ತುಂಬುತ್ತ¤ ಕೆಳಗಿನ ಫ್ಲೋರಿನಿಂದ ಮೇಲೆ ಹತ್ತುತ್ತ, “ಜೀ ಆವೋನಾ… ಶಮ್ಮೂ ಕೋ ಸ್ಕೇಟಿಂಗ್‌ ಪ್ರಾ$Âಕ್ಟೀಸ್‌ ಕಾ ಟೈಮ್‌ ಹೋ ರಹಾ ಹೈ’ ಎಂದು ಗಡಚಿಕ್ಕಿದ ಧ್ವನಿಯಲ್ಲಿ ಕರೆದಳು. ಅವಳ ಸೌಂದರ್ಯಕ್ಕೂ ಧ್ವನಿಗೂ ಅಜಗಜಾಂತರ. ಅಪ್ಸರೆಯಂಥ ರೂಪ ಆಕೆಯದು. ಅವಳನ್ನು ನೋಡಿ ಹೊಟ್ಟೆಕಿಚ್ಚು ಪಡದ ಹೆಣ್ಣು ಈ ಭೂಮಿಯ ಮೇಲೆ ಇಲ್ಲವೇ ಇಲ್ಲ. ತೆಳುವಾದ ಚಿಟ್ಟೆ ಪಕ್ಕದಂಥ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಅವಳು ಅವನ ಕಪ್ಪನೆಯ ತೋಳುಗಳನ್ನು ಹಿಂದಿನಿಂದಲೇ ಬಳಸಿ ಕೆಳಗೆ ಕರೆದೊಯ್ದಳು. ಒಂದಕ್ಕೊಂದು ತಾಳೆಯಾಗಲಿಲ್ಲ. “ಮಾಧವಿ, ಎದ್ದೇಳೆ’ ಎಂದೆ. 

ಮಿಸುಕಾಡುತ್ತ, “ಪ್ಲೀಜ್‌ ಐದೇ ನಿಮಿಷ’ ಎಂದಳು. 
ಫೋನ್‌ ರಿಂಗಿಸಿತು. ಥಟ್ಟನೆ ಎದ್ದು ಕುಳಿತಳು. “ಲೇ, ಅದೇ ಅನ್ನೋನ್‌ ನಂಬರ್‌’ 
“ರಿಸೀವ್‌ ಮಾಡು. ಯಾರಂತ ಕೇಳು’
“ಇಲ್ಲ, ರಾತ್ರಿದೇ ಸಾಕಾಗಿದೆ ನಂಗೆ. ನೀನೇ ಕೇಳು’
ನಾನೇ ಎತ್ತಿಕೊಂಡೆ. “ಹಲೋ ಯಾರು’
ಆ ಕಡೆಯಿಂದ, “ಹಲೋ ಮಾಧವಿ, ರಾತ್ರಿ ನಿ¨ªೆ ಬರ್ಲಿಲ್ವಾ? ಫೋನು ಸೈಲೆಂಟ್‌ ಇತ್ತು. ಸಾರೀ’
“ನಾನು ಮಾಧವಿ ಅಲ್ಲ, ನೀವ್ಯಾರು ಹೇಳಿ’
“ಹೇ ಸಾನ್ವಿ, ಕಿರಿಕ್‌ ಪಾರ್ಟಿ ಸಾನ್ವಿ ಥರಾನೇ ಕಾಣಿ¤ದೀಯಲ್ಲ ಡಿಪೀಲಿ. ಪ್ರಟಿ ಗರ್ಲ್’
“ಹೈ ಹಲೋ, ಪ್ಲೀಜ್‌ ಯಾರಂತ ತಿಳ್ಕೊàಬಹುದಾ ನಿಮ್ಮ ಹೆಸರು’ 
“ನಿಮ್ಮ ಫ್ರೆಂಡ್‌ ಮಾಧವಿ ಹತ್ರ ಫೋನ್‌ ಕೊಡಿ ಪ್ಲೀಜ…’
ಫೋನ್‌ ಕಟ್‌ ಮಾಡಿ ಇಟ್ಟೆ. ಕಂಟಿನ್ಯೂ ಕಾಲ್‌ ಬರ್ತಾನೇ ಇತ್ತು. ಮಾಧವಿಗೆ ಈಗ ಪಿಚ್ಚೆನಿಸಿ ಸ್ವಿಚ್‌ ಆಫ್ ಮಾಡಿಬಿಟ್ಟಳು.
ಇವತ್ತು ಶನಿವಾರ ಶನಿಮಂದಿರಕ್ಕೆ ಹೋಗಿಯೇ ಕಾಲೇಜಿಗೆ ಹೋಗಬೇಕು. ಇಂಜಿನಿಯರಿಂಗ್‌ ಲಾಸ್ಟ್‌ ಸೆಮ್‌ ಸುಸೂತ್ರವಾಗಿ ದಾಟಲಿ ಎಂಬಂತೆ ರೆಡಿಯಾಗಿ ದೇವರ ಮುಂದೆ ಧೂಪ ಬೆಳಗಿಸಿ ಅಕ್ಕ ಮಾಡಿದ್ದ ಮೆಂತಿ ಪರೋಟಾಕ್ಕೆ ತುಪ್ಪ ಸವರಿಕೊಂಡು ತಿಂದು ಶನಿ ಮಂದಿರದ ಕಡೆಗೆ ಹೆಜ್ಜೆ ಹಾಕುತ್ತಿ¨ªೆವು. ನಂದು ಪಿಂಕ್‌ ಪಟಿಯಾಲಾ ಟಾಪ್‌. ಅವಳದು ಬ್ಲ್ಯಾಕ್‌ ಜೀನ್ಸ್‌ ಮತ್ತು ವೈಟ್‌ ಡಾಟೆಡ್‌ ಟಾಪ್‌. ದೇವರ ದರ್ಶನ ಮುಗಿಸಿಕೊಂಡು ಸ್ಕೂಟಿ ಏರಿ ಕಾಲೇಜಿನತ್ತ ಹೊರಟೆವು. ಒಂದು ವೈಟ್‌ ಕಲರ್‌ ಸ್ವಿಫ್ಟ್ ಕಾರು ನಮ್ಮ ಹಿಂದೆ ಹಿಂದೆ. ಹಾರ್ನ್ ಮಾಡಿದ್ದಕ್ಕೆ ದಾರಿ ಬಿಟ್ಟೆವು. ತುಸು ಮುಂದೆ ಹೋಗಿ ಕಾರು ನಮಗೆ ಅಡ್ಡಗಟ್ಟಿದಂತೆ ನಿಂತಿತು. ಮಾಧವಿ ಸ್ಕೂಟಿ ನಿಲ್ಲಿಸಿ ನನ್ನ ಕೈ ಅದುಮಿದಳು. ಲೆಫ್ಟ್ ಸೈಡ್‌ ಡೋರ್‌ ಓಪನ್‌ ಮಾಡಿ ಕಪ್ಪನೆಯ ಕೈಯೊಂದು ಕಾರಿನಲ್ಲಿ ಹತ್ತುವಂತೆ ಇನ್‌ವಾಯಿಟ್‌ ಮಾಡುತ್ತಿತ್ತು. ಸ್ಕೂಟಿ ಸ್ವಲ್ಪ ಹಿಂದೆ ಜರುಗಿಸಿಕೊಂಡು ಸ್ಟಾರ್ಟ್‌ ಮಾಡಿ ಫ‌ುಲ್‌ ರೇಸಿನಲ್ಲಿ ಕಾರನ್ನು ಓವರ್‌ ಟೇಕ್‌ ಮಾಡಿ ಹೊರಟರೆ ಹಾನುì ಎಡೆಬಿಡದೆ. ಆ ಕಾರಿನಲ್ಲಿರುವ ಮನುಷ್ಯನನ್ನು ತಿರುಗಿ ನೋಡುವ ಧೈರ್ಯವಾಗಲಿಲ್ಲ. ಮತ್ತೆ ನಮಗೆ ಅಡ್ಡಗಟ್ಟಿ ನಿಂತು ಕಾರಿನಿಂದಿಳಿದು ಬಂದ ಧಡೂತಿ ಗಾಗಲುಧಾರಿ ಮಾಧವಿಯ ಎದುರಿಗೆ ಬಂದು ನಿಂತು ಅವಳ ಮೈಮಾಟದ ಮೇಲೆ ತನ್ನ ನೋಟದ ಸವಾರಿ ಮಾಡುತ್ತ, “ಹೈ  ಬೆಬೆ… ಪಫೆìಕ್ಟ್ ಫಿಗರ್‌, ಕಮಾನ್‌ ವಿಲ್‌ ಎಂಜಾಯ್‌ ದ ಡೇ’
ಸ್ಕೂಟಿ ಮನೆಯ ಕಡೆಗೆ ತಿರುವಿದೆವು. ಮತ್ತೆ ಮನೆಯ ದಾರಿ ಗೊತ್ತಾದರೆ ಪೇಚಿಗೆ ಸಿಕ್ಕಬಾರದೆಂಬಂತೆ ಬೇರೆ ಯಾವುದೋ ಗಲ್ಲಿಯ ಕಡೆ ಜನಜಂಗುಳಿಯಲ್ಲಿ ಕಳೆದು ಹೋಗಲೆಂದು ಹಿಂದೆ ಹಿಂದೆ ನೋಡುತ್ತಲೇ ಉಸಿರು ಬಿಡುತ್ತ ತೇಕುತ್ತಾ ಬೇಟೆಗಾರನಿಂದ ತಪ್ಪಿಸಿಕೊಳ್ಳುವ ಜಿಂಕೆಯಂತೆ. 

ಆದರೆ, ಕಾರು ನಮ್ಮನ್ನು ಹಿಂಬಾಲಿಸುತ್ತಲೇ ಇತ್ತು. ಕೊನೆಗೊಂದು ಉಪಾಯ ಮಾಡಿ ಯಾರದೋ ಮನೆಯ ಗೇಟು ತೆಗೆದು ಒಳನುಗ್ಗಿದೆವು. ಪುಣ್ಯಕ್ಕೆ ಆ ಮನೆ ಒಂದು ಅಪಾರ್ಟುಮೆಂಟಿನಂತಿದ್ದು ಹಿಂದೆಯೂ ಒಂದು ಸಣ್ಣ ಬಾಗಿಲಿತ್ತು. ಪ್ರಯಾಸದಿಂದ ಸ್ಕೂಟಿ ದಾಟಿಸಿಕೊಂಡು ಯಾವುದೋ ಗಲ್ಲಿ ಸೇರಿಕೊಂಡು ಸುತ್ತಾಡಿಕೊಂಡು ಮನೆ ಸೇರುವಷ್ಟಕ್ಕೆ “ಹೆಣ್ಣು ಜನ್ಮ ಸಾಕಪ್ಪ’ ಎನಿಸಿ ಹೊರಗಡೆ ಹೋಗುವಾಗ ಈ ಹೆಣ್ಣಿನ ಸಂಕೇತಗಳಾದ ದೇಹದ ಅಂಗಾಂಗಗಳನ್ನೆಲ್ಲ ಬಿಚ್ಚಿಟ್ಟು ಹೋಗುವಂತಿದ್ದಿದ್ದರೆ ಚೆನ್ನಾಗಿರುತ್ತಿತ್ತು ಅನಿಸಿಬಿಟ್ಟಿತು. ರಾತ್ರಿ ಅನ್ನೋನ್‌ ನಂಬರ್‌ ಇವನೇ ಇರಬಹುದಾ ಎಂಬ ಸಂದೇಹ. ಮಾಧವಿ ಸಿಮ್ಮು ತೆಗೆದು ನಾಲ್ಕು ಚೂರುಮಾಡಿ ಎಸೆದುಬಿಟ್ಟಳು. ಇವತ್ತು ಮಧ್ಯಾಹ್ನ ಮೂರುಗಂಟೆಗೆ ಪ್ಯಾರಾಶೂಟ್‌ ಗ್ಲೆ„ಂಡಿಂಗ್‌ ಕ್ಲಾಸಿದೆ. ಅವಳಿಗೆ ಹೋಗಲೇಬೇಕಾಗಿತ್ತು. ಈ ಮನಸ್ಥಿತಿಯಲ್ಲಿ ಎಲ್ಲಿಗೂ ಹೋಗುವುದು ಬೇಡವಾಗಿತ್ತಾದರೂ ಕೂಡ ಇನ್‌ಫಾರ್ಮ್ ಮಾಡದೇ ಕ್ಲಾಸ್‌ ಮಿಸ್‌ ಮಾಡುವ ಹಾಗಿರಲಿಲ್ಲ. ಮುರಿದುಹೋದ ಸಿಮ್ಮಿನ ಜೊತೆ ನಂಬರ್‌ ಕೂಡ ಹೋಗಿತ್ತು. ಗಗನಸಖೀಯಾಗುವ ಕನಸು ಹೊತ್ತಿದ್ದ ಮಾಧವಿ ಇತ್ತೀಚೆಗಷ್ಟೇ ಈ ಕ್ಲಾಸಿಗೆ ಸೇರಿಕೊಂಡಿದ್ದಳು. ಕ್ಲಾಸು ಮುಗಿಸಿಕೊಂಡು ತನ್ನ ಮನೆಗೆ ಹೋಗುವುದಾಗಿ ಹೇಳಿ ಹೊರಟೇ ಬಿಟ್ಟಳು.

ರಾತ್ರಿಯೆಲ್ಲ ನಿದ್ದೆಗೆಟ್ಟು ಮಲಗಿದ್ದ ನನಗೆ ಕುಂಭಕರ್ಣನ ನಿದ್ದೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ನನ್ನ ಫೋನು ನಾಲ್ಕು ಬಾರಿ ರಿಂಗಿಸಿತು. ಐದನೆಯ ಬಾರಿಗೆ ರಿಸೀವ್‌ ಮಾಡಿದೆ ನಿದ್ದೆಗಣ್ಣಲ್ಲಿ. ಮಾಧವಿಯ ಟ್ರೇನಿಂಗ್‌ ಮೇಟ್‌ ಪೀಯೂಶ್‌ ! ಮಾಧವಿ ಈಜ್‌ ನೋ ಮೋರ್‌! 

ನನ್ನ ಎದೆಬಡಿತವೇ ನಿಂತಂತೆನಿಸಿತು. ಪ್ಯಾರಾಶೂಟ್‌ ಗ್ಲೆಡಿಂಗ್‌ ಮಾಡೋವಾಗ ಬೆಲ್ಟ… ಲೂಜಾಗಿ  she fell down…
ಮಾಧವಿಯ ಮನೆಗೆ ಆಟೋರಿಕ್ಷಾ ಕರೆದುಕೊಂಡು ಹೋಗುತ್ತಿರುವಾಗ ಟ್ರಾಫಿಕ್‌ ಸಿಗ್ನಲ್ಲಿನಲ್ಲಿ ಗಾಡಾವೊಂದರ ಪಕ್ಕ ನಿಂತು ಪ್ರಮಾಣಕ್ಕೆ ತಕ್ಕಂತೆ ಬಣ್ಣಗಳ ಸಿಂಪಡಿಸಲು ಹೇಳುತ್ತ ಗಾಢವಾದ ಬಣ್ಣಗಳನ್ನು ತುಂಬಿಕೊಂಡಿದ್ದ ಬಾಟಲಿಗಳಿಗೆ ಬೆರಳು ಮಾಡಿ ತೋರಿಸುತ್ತಿದ್ದ ಗಾಗಲುಧಾರಿ ಮನುಷ್ಯ ಮತ್ತು ಪುಟ್ಟ ಮಗುವಿನ ಕೈಯಲ್ಲಿದ್ದ ಐಸ್‌ ಲಾಲಿಯಿಂದ ಸೋರುತ್ತಿರುವ ಬಣ್ಣದ ನೀರು ನೋಡಿ ಕಿಟಾರನೆ ಕಿರುಚಿದ್ದಷ್ಟೇ ಮುಂದೇನಾಯಿತೋ ಗೊತ್ತಿಲ್ಲ. 

ಮಾಧವಿ ಈಗ ಕತೆ ಬರೆಯಿಸಿಕೊಂಡಳು. 

ಭುವನಾ ಹಿರೇಮಠ

ಟಾಪ್ ನ್ಯೂಸ್

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

1-sadsad

ಪಣಜಿ: 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

1-daadad

ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

1-sadsad

ಪಣಜಿ: 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಮಲ್ಪೆ: ವಿದ್ಯುತ್‌ ಪ್ರವಹಿಸಿ ಬೋಟ್‌ ಕಾರ್ಮಿಕ ಸಾವು

ಮಲ್ಪೆ: ವಿದ್ಯುತ್‌ ಪ್ರವಹಿಸಿ ಬೋಟ್‌ ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.