ಸೆಕೆಂಡ್‌ ಇನ್ನಿಂಗ್ಸ್‌ನತ್ತ ಶ್ರೀಮತಿ ಪ್ರಿಯಾಮಣಿ ಚಿತ್ತ!


Team Udayavani, Dec 30, 2018, 12:30 AM IST

87.jpg

ಚಿತ್ರರಂಗದಲ್ಲಿ ನಾಯಕ ನಟಿಯರು ಮದುವೆಯಾದರೆ ಅವರಿಗೆ ಅವಕಾಶಗಳು ಸಹಜವಾಗಿಯೇ ಕಡಿಮೆಯಾಗುತ್ತವೆ. ಹಾಗೇನಾದರೂ ಅವಕಾಶಗಳು ಮತ್ತೆ ಅವರನ್ನು ಹುಡುಕಿಕೊಂಡು ಬಂದರೂ, ಅದು ಪೋಷಕ ಪಾತ್ರಗಳು, ಮತ್ತಿತರ ಪಾತ್ರಗಳಿಗಷ್ಟೇ ಸೀಮಿತವಾಗಿರುತ್ತವೆ ಎಂಬುದು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಮಾತು. ಬಹುತೇಕ ನಟಿಮಣಿಯರ ವಿಷಯದಲ್ಲಿ ಈ ಮಾತು ನಿಜವಾಗಿರುವುದರಿಂದ ಚಿತ್ರರಂಗ ಮತ್ತು ಸಿನಿಪ್ರಿಯರು ಕೂಡ ಮರುಮಾತಿಲ್ಲದೆ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಕೆಲವು ನಾಯಕ ನಟಿಯರ ವಿಷಯದಲ್ಲಿ ಈ ಮಾತು ಸುಳ್ಳಾಗಿರುವುದು ಅಷ್ಟೇ ನಿಜ! ಮದುವೆಯಾಗಿ, ಮಕ್ಕಳಾದ ನಂತರವೂ ಬಣ್ಣದ ಬದುಕಿನಲ್ಲಿ ಬೇಡಿಕೆಯನ್ನು ಉಳಿಸಿಕೊಂಡು ವೃತ್ತಿಜೀವನವನ್ನು ಮುಂದುವರೆಸಿದ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟಿದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಈ ಬಗ್ಗೆ ಹೇಳುವುದಾದರೆ ಅಂತಹ ನಾಯಕಿಯರ ಸಂಖ್ಯೆಯಂತೂ ತುಂಬಾ ವಿರಳ. ಇನ್ನು ಕನ್ನಡದಲ್ಲಿ ಇತ್ತೀಚೆಗೆ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರವೂ ಒಂದಷ್ಟು ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಎಂದರೆ ಪ್ರಿಯಾಮಣಿ. 

ಮೂಲತಃ ಕನ್ನಡದ ಹುಡುಗಿಯಾದರೂ ಪ್ರಿಯಾಮಣಿ ನಾಯಕ ನಟಿಯಾಗಿ ಪ್ರವರ್ಧಮಾನಕ್ಕೆ ಬಂದಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ರಾಮ್‌ ಚಿತ್ರದಲ್ಲಿ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪ್ರಿಯಾಮಣಿ, ಕನ್ನಡದ ಹಲವು ಸ್ಟಾರ್‌ ನಟರ ಚಿತ್ರಗಳಿಗೆ ನಾಯಕಿಯಾದರು. ಪುನೀತ್‌ ರಾಜಕುಮಾರ್‌, ಸುದೀಪ್‌, ಉಪೇಂದ್ರ, ದರ್ಶನ್‌, ಶಿವರಾಜಕುಮಾರ್‌, ಗಣೇಶ್‌, ದುನಿಯಾ ವಿಜಯ್‌ ಹೀಗೆ ಕನ್ನಡ ಹಲವು ಸ್ಟಾರ್‌ ನಾಯಕರ ಚಿತ್ರಗಳಲ್ಲಿ ಅಭಿನಯಿಸಿ ಸ್ಟಾರ್‌ ಹೀರೋಯಿನ್‌ ಎನಿಸಿಕೊಂಡರು. 

ಕನ್ನಡದಲ್ಲಿ ಬೇಡಿಕೆಯ ಹೀರೋಯಿನ್‌ ಆಗಿರುವಾಗಲೇ, ಉದ್ಯಮಿ ಮುಸ್ತಫಾ ರಾಜ್‌ ಅವರನ್ನು ವರಿಸುವ ಮೂಲಕ ವೈವಾಹಿಕ ಬದುಕಿಗೆ ಪ್ರಿಯಾಮಣಿ ಅಡಿಯಿಟ್ಟರು. ಇನ್ನೇನು ಪ್ರಿಯಾಮಣಿ ಫ್ಯಾಮಿಲಿ ಲೈಫ್ ಅಂತ ಅಲ್ಲೇ ಸೆಟಲ್‌ ಆಗುತ್ತಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನುತ್ತಿರುವಾಗಲೇ ಪ್ರಿಯಾಮಣಿ, ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟಿವ್‌ ಆಗುವ, ಕಂ ಬ್ಯಾಕ್‌ ಆಗುವ ಸುಳಿವನ್ನು ನೀಡಿದ್ದಾರೆ. 

ಹೌದು, ಪ್ರಿಯಾಮಣಿ ಮದುವೆಯಾದ ಬಳಿಕ ಸದ್ಯ ಕನ್ನಡದಲ್ಲಿ ನನ್ನ ಪ್ರಕಾರ, ದಶರಥ, ಡಿಆರ್‌ 56 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ತಮಿಳಿನಲ್ಲಿ ಕುತ್ತರಪಾಯಿಚ್ಚಿ, ತೆಲುಗಿನಲ್ಲಿ ಸಿರಿವೆನಿಲ್ಲಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವೆಲ್ಲದರ ಜೊತೆ ತೆಲುಗಿನ ಸ್ಟಾರ್‌ ನಿರ್ದೇಶಕ ಎಸ್‌.ಎಸ್‌ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದಲ್ಲೂ ಪ್ರಿಯಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕನ್ನಡ ಮತ್ತು ತೆಲುಗಿನಲ್ಲಿ ಒಂದೆರಡು ಹೊಸ ಚಿತ್ರಗಳಲ್ಲಿ ಪ್ರಿಯಾಮಣಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಗಳು ಇದ್ದರೂ, ಆ ಚಿತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ಹೊರಬೀಳಬೇಕಿದೆ. 

ಒಟ್ಟಾರೆ ಹೀರೋಯಿನ್‌ಗಳು ಮದುವೆಯ ಬಳಿಕ ಚಿತ್ರರಂಗಕ್ಕೆ ಗುಡ್‌ ಬೈ ಹೇಳುತ್ತಾರೆ, ಬೇಡಿಕೆ ಕಳೆದುಕೊಳ್ಳುತ್ತಾರೆ ಎಂಬ ಮಾತುಗಳ ನಡುವೆಯೇ ಚಿತ್ರರಂಗದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಲು ತಯಾರಿ ನಡೆಸಿರುವ ಪ್ರಿಯಾಮಣಿ, 2019ರಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರೋದಂತೂ ಗ್ಯಾರೆಂಟಿ. ಹೊಸಚಿತ್ರಗಳು, ಪ್ರಿಯಾಮಣಿ ಹೊಸ ಗೆಟಪ್‌ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ಈ ಚಿತ್ರಗಳು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ. ಬಾಲಿವುಡ್‌ನ‌ಲ್ಲಿ ಐಶ್ವರ್ಯಾ ರೈ, ಅನುಷ್ಕಾ ಶರ್ಮ, ಕರೀನಾ ಕಪೂರ್‌ ಅವರಂತೆ ಚಂದನವನ ಚೆಲುವೆ ಪ್ರಿಯಾಮಣಿ ಕೂಡ ಸಿನಿಕೆರಿಯರ್‌ನ ಸೆಕೆಂಡ್‌ ಇನ್ನಿಂಗ್ಸ್‌ ನಲ್ಲಿ ಸಕ್ಸಸ್‌ ಆಗುತ್ತಾರಾ..? ಎಂಬುದನ್ನು ಕಾದು ನೋಡಬೇಕು. 

ಟಾಪ್ ನ್ಯೂಸ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

mamata

ಗೋವಾದಲ್ಲಿ ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಬ್ಯಾನರ್ ಗಳ ವಿರೂಪ : ಟಿಎಂಸಿ ಕಿಡಿ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

ಆರೋಗ್ಯ ಸೇವೆ ದೊರೆಯದೇ ಪರದಾಟ

ಆರೋಗ್ಯ ಸೇವೆ ದೊರೆಯದೇ ಪರದಾಟ

1ty

ಬೈಲಹೊಂಗಲ: ಟ್ರಾಫಿಕ್ ಇನ್ಸ್ ಪೆಕ್ಟರ್ ವಿರುದ್ಧ ಬಸ್ ತಡೆದು ಎಬಿವಿಪಿ ಪ್ರತಿಭಟನೆ

ಕಾಂಗ್ರೆಸ್‌ ಹಳಿ ತಪ್ಪಿದ ತುಕಡೆ ಗ್ಯಾಂಗ್‌: ಕಟೀಲ್‌

ಕಾಂಗ್ರೆಸ್‌ ಹಳಿ ತಪ್ಪಿದ ತುಕಡೆ ಗ್ಯಾಂಗ್‌: ಕಟೀಲ್‌

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

ಬೇಂದ್ರೆ ಕಾವ್ಯದಲ್ಲಿ ಮಹಿಳಾ ಅಂತಃಕರಣದ ಛಾಪು

ಬೇಂದ್ರೆ ಕಾವ್ಯದಲ್ಲಿ ಮಹಿಳಾ ಅಂತಃಕರಣದ ಛಾಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.