ಚಂದನವನದಲ್ಲಿ ಪದ್ಮಾವತಿ ಕಲ್ಯಾಣವು

Team Udayavani, Aug 25, 2019, 5:00 AM IST

ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವಾರದಿಂದ ಜೋರಾಗಿ ಹರಿದಾಡುತ್ತಿರುವ ಹೆಸರು ನಟಿ ರಮ್ಯಾ ಅವರದ್ದು. ಹಾಗಾದರೆ, ಕನ್ನಡದಲ್ಲಿ ನಟಿ ರಮ್ಯಾ ಮತ್ತೆ ಯಾವುದಾದ್ರೂ ಹೊಸ ಸಿನಿಮಾ ಮಾಡುತ್ತಿದ್ದಾರಾ ಅಥವಾ ಮತ್ತೆ ರಾಜಕಾರಣದಲ್ಲಿ ಮುನ್ನೆಲೆಗೆ ಬರುತ್ತಾರಾ ಅಂದ್ರೆ ವಿಷಯ ಅದ್ಯಾವುದೂ ಅಲ್ಲ. ರಮ್ಯಾ ಅವರ ಹೆಸರು ಸದ್ಯಕ್ಕೆ ಸದ್ದು ಮಾಡುತ್ತಿರುವುದು ಅವರ ಮದುವೆಯ ವಿಷಯದಲ್ಲಿ.

ಹೌದು, ವಾರದ ಹಿಂದಷ್ಟೇ ಸ್ಯಾಂಡಲ್‌ವುಡ್‌ನ‌ “ಪದ್ಮಾವತಿ’ ರಮ್ಯಾ ಸದ್ದಿಲ್ಲದೆ ಮದುವೆಯಾಗುತ್ತಿದ್ದಾರೆ, ಹಳೆ ಬಾಯ್‌ಫ್ರೆಂಡ್‌ ರಾಫೆಲ್‌ ಜೊತೆಗೆ ರಮ್ಯಾ ಮದುವೆ ನಿಗದಿಯಾಗಿದ್ದು, ದುಬೈನಲ್ಲಿ ಈ ಜೋಡಿ ವಿವಾಹ ನಡೆಯುತ್ತಿದೆ ಎನ್ನುವ ಮಾತು ಹರಡಿದೆ. ಯಾರು ಈ ಸುದ್ದಿ ಹಬ್ಬಿಸಿದರೋ.., ಏನೋ ಗೊತ್ತಿಲ್ಲ. ಆದರೆ, ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಜೋರಾಗಿ ಹರಡಿದರೂ, ರಮ್ಯಾ ಮಾತ್ರ ಈ ಯಾವ ವಿಷಯಕ್ಕೂ ಪ್ರತಿಕ್ರಿಯಿಸಿಲ್ಲ.

ಇನ್ನು ರಮ್ಯಾ ಮದುವೆ ವಿಷಯ ಜೋರಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ರಮ್ಯಾ ತಾಯಿ ರಂಜಿತಾ, “ರಮ್ಯಾ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಆಕೆ ಮದುವೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮದುವೆ ಮಾಡುವಾಗ ಎಲ್ಲರಿಗೂ ಹೇಳಿಯೇ ಮಾಡುತ್ತೇವೆ. ನಾವೇನು ಕದ್ದುಮುಚ್ಚಿ ಮದುವೆ ಮಾಡುವುದಿಲ್ಲ. ಈಗ ಸುಮ್ಮನೆ ಸುಳ್ಳು ಸುದ್ದಿ ಹರಿದಾಡುತ್ತಿದೆ ಅಷ್ಟೇ’ ಎಂದು ಖಾರವಾಗಿ ಹೇಳಿದ್ದಾರೆ.

ಅಲ್ಲದೆ, ರಮ್ಯಾ ತಮ್ಮ ಮಾಜಿ ಪ್ರಿಯಕರ ರಾಫೆಲ್‌ ಜೊತೆಗೆಯೇ ಮದುವೆ ಆಗುತ್ತಾರೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿರುವ ರಮ್ಯಾ ಅವರ ತಾಯಿ ರಂಜಿತಾ, “ರಮ್ಯಾ ಹಾಗೂ ರಾಫೆಲ್‌ ಇಬ್ಬರು ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ. ಆದರೆ, ಈಗಲೂ ಇಬ್ಬರ ನಡುವೆ ಸ್ನೇಹ ಇದೆ. ರಾಫೆಲ್‌ ಕುಟುಂಬ ಹಾಗೂ ನಾವು ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದೇವೆ. ಈಗಲೂ, ಫೋನ್‌ ಮಾಡುತ್ತಾ ಇರುತ್ತಾರೆ’ ಎಂದಿದ್ದಾರೆ.

ಇನ್ನು ರಮ್ಯಾ ಹಾಗೂ ರಾಫೆಲ್‌ ನಡುವೆ ಬ್ರೇಕ್‌ಅಪ್‌ ಆಗಿದೆ ಎಂದಿರುವ ರಂಜಿತಾ, ರಮ್ಯಾ ಮತ್ತು ರಾಫೆಲ್‌ ಬೇರೆ ಬೇರೆ ಆಗಲು ಮುಖ್ಯ ಕಾರಣ ಕೆಲಸದ ಒತ್ತಡ ಕಾರಣ ಎಂದಿದ್ದಾರೆ. ಈಗಾಗಲೇ ರಮ್ಯಾ ರಾಜಕೀಯದಲ್ಲಿ, ರಾಫೆಲ್‌ ಬ್ಯುಸಿನೆಸ್‌ನಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಪರಸ್ಪರ ಸಮಯ ನೀಡಲಾಗುತ್ತಿಲ್ಲ. ಅಲ್ಲದೆ, ರಮ್ಯಾಗೆ ವಿದೇಶಕ್ಕೆ ಹೋಗಲು ಇಷ್ಟವಿಲ್ಲ, ರಾಫೆಲ್‌ ಭಾರತದಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಇಬ್ಬರು ಸಹಮತದಿಂದ ಬ್ರೇಕ್‌ಅಪ್‌ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಆದರೆ ಇದ್ಯಾವುದರ ಬಗ್ಗೆಯೂ ತುಟಿಬಿಚ್ಚದ ರಮ್ಯಾ, ಸದ್ಯ ದೆಹಲಿಯಲ್ಲಿ ಇದ್ದು, ಸ್ನೇಹಿತರ ಹಾಗೂ ಮಾಧ್ಯಮದವರು ಸೇರಿದಂತೆ ಯಾರ ಜೊತೆಗೆ ಸಂಪರ್ಕದಲ್ಲಿ ಇಲ್ಲ. ಅಲ್ಲದೆ ಮದುವೆಯಾಗು ಎಂದು ಒತ್ತಾಯ ಮಾಡಿದ್ದಕ್ಕೆ ತಾಯಿ ಜೊತೆಗೂ ಮಾತು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಸ್ಯಾಂಡಲ್‌ವುಡ್‌ನ‌ಲ್ಲಿ ಪದ್ಮಾವತಿ ಕಲ್ಯಾಣ ಒಂದಷ್ಟು ಸದ್ದು ಮಾಡಿದ್ದಂತೂ ಸುಳ್ಳಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು...

  • ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ! 1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ...

  • ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ...

  • ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ...

  • ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. "ಅದ್ವಿಕಾ' ಎಂದು ಉತ್ತರ ಬಂತು....

ಹೊಸ ಸೇರ್ಪಡೆ