ಕನ್ನಡದ ಪಾಂಚಜನ್ಯ: ಪಾಟೀಲ ಪುಟ್ಟಪ್ಪರಿಗೆ ಶತಮಾನ ಸಂಭ್ರಮ

Team Udayavani, Jan 13, 2019, 12:30 AM IST

ಧಾರವಾಡ ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ನಗರ. ನಾಡಿನ ಹೆಸರಾಂತ ಕಲಾವಿದರು, ಸಾಹಿತಿಗಳು, ಸಂಗೀತಗಾರರು ಧಾರವಾಡದವರು ಎಂಬುದು ಹೆಮ್ಮೆಯ ಸಂಗತಿ. ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಧಾರವಾಡ ಸಾಹಿತ್ಯ ಸಂಭ್ರಮ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಶತಮಾನೋತ್ಸವ- ಹೀಗೆ ಈ ತಿಂಗಳಲ್ಲಿ  ಮೂರು  ಮಹತ್ವದ  ಕಾರ್ಯಕ್ರಮಗಳಿಗೆ ಧಾರವಾಡ ಸಾಕ್ಷಿಯಾಗುತ್ತಿದೆ. ಕನ್ನಡದ ಸಾಕ್ಷೀಪ್ರಜ್ಞೆ “ಪಾಪು’ ಜನ್ಮಶತಮಾನೋತ್ಸವದ   ಹಿನ್ನೆಲೆಯಲ್ಲಿ ಈ ಕಿರು ಲೇಖನ.

ಮರಾಠಿಯ ಹೆಸರಾಂತ ದೈನಿಕ ಲೋಕಸತ್ತಾ “ಮಹಾರಾಷ್ಟ್ರಕ್ಕೂ ಒಬ್ಬ ಪಾಟೀಲ ಪುಟ್ಟಪ್ಪ ಬೇಕಾಗಿ¨ªಾರೆ’ ಎಂಬುದಾಗಿ ಸಂಪಾದಕೀಯ ಬರೆದದ್ದು ಪಾಟೀಲ ಪುಟ್ಟಪ್ಪ ಅವರ ಕೃತುಶಕ್ತಿಗೆ ಸಾಕ್ಷಿ. 

ಕನ್ನಡಕ್ಕಾಗಿ ಮಾಡುವ ಕೆಲಸ ಬರಿಯ ಕನ್ನಡದ ಕೆಲಸವಲ್ಲ. ಅದು ನಾಡಿನ ಕೆಲಸ. ನಾಡಿನ ಕೆಲಸ ಲೋಕದ ಕೆಲಸವೂ ಹೌದು- ಎಂಬುದಾಗಿ ನಾಡಿನ ಹಿರಿಯ ಸಾಹಿತಿ ಹಾ. ಮಾ. ನಾಯಕರು ಹೇಳಿರುವ ಮಾತು ಗಮನೀಯ ಅಂಶ. ಧೀರ ಪತ್ರಕರ್ತನಾಗಿ ಕನ್ನಡವನ್ನು ಬದುಕಿನಲ್ಲಿ ಅನುಷ್ಠಾನ ಮಾಡಿಕೊಂಡು ಕನ್ನಡನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಬಣ್ಣ ಬನಿಯನ್ನು ಗಾಢಗೊಳಿಸುತ್ತ ಬಂದ ಅದಮ್ಯ ಚೇತನ, ಅಪ್ರತಿಮ ಹೋರಾಟಗಾರ ನಾಡೋಜ ಪಾಟೀಲ ಪುಟ್ಟಪ್ಪ . “ಪಾಪು’ ಎಂಬ ಎರಡಕ್ಷರಗಳಿಂದಲೇ ಪ್ರಖ್ಯಾತ ರಾಗಿ ಅಖಂಡ ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಪಾಟೀಲ ಪುಟ್ಟಪ್ಪ ಅವರು ಕರ್ನಾಟಕದ “ಸಾಕ್ಷೀಪ್ರಜ್ಞೆ’ಯಾಗಿ ಕಂಗೊಳಿಸುತ್ತ ಬಂದಿ¨ªಾರೆ. ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ ಚಳುವಳಿ, ಗೋಕಾಕ ಚಳುವಳಿ- ಹೀಗೆ ನಾನಾ ಚಳುವಳಿ, ಹೋರಾಟಗಳಲ್ಲಿ ನಾಯಕತ್ವ ವಹಿಸಿ ನಾಡಿನ ಜನರ ಹಿತ ಕಾಯ್ದ ಪಾಂಚಜನ್ಯ ಎಂಬ ಕೊಂಡಾಟಕ್ಕೂ ಅವರು ಪಾತ್ರರಾಗಿ¨ªಾರೆ. 

ಪ್ರಖ್ಯಾತ ಪತ್ರಕರ್ತರಾಗಿ, ಅವಿಶ್ರಾಂತ ಹೋರಾಟಗಾರರಾಗಿ, ಅರ್ಧ ಶತಮಾನಕ್ಕೂ ಮಿಕ್ಕು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಕಥೆಗಾರರಾಗಿ, ಲೇಖಕರಾಗಿ, ವಾಗ್ಮಿಯಾಗಿ ಕನ್ನಡ ಕಾವಲು ಕಾಯಕದಲ್ಲಿ ತಮ್ಮನ್ನು ತನುಶುದ್ಧ-ಮನಶುದ್ಧ- ಭಾವಶುದ್ಧವಾಗಿ ತೊಡಗಿಸಿಕೊಂಡವರು ಪಾಟೀಲ ಪುಟ್ಟಪ್ಪ. ಕರ್ನಾಟಕ ನಾಡು ಹಾಗೂ ಕನ್ನಡ ನುಡಿಯ ಕಟ್ಟುವಿಕೆಗೆ ನಿರ್ಭೀತ ಹೋರಾಟ ನಡೆಸುತ್ತ ಬಂದ ಪಾಪು ಅವರಿಗೆ ಈಗ ನೂರರ ಸಂಭ್ರಮ. ಈ ಇಳಿವಯಸ್ಸಿನಲ್ಲಿಯೂ ಕನ್ನಡನಾಡಿನ ಭವ್ಯ ಭವಿತವ್ಯಕ್ಕಾಗಿ ಚಿಂತನೆ ನಡೆಸುತ್ತಿದ್ದಾರೆ,

ಸಂಕ್ರಮಣದ ದಿನ ಜನಿಸಿದ ಪಾಟೀಲ ಪುಟ್ಟಪ್ಪ ಅವರದು ಹೋರಾಟದ ಬದುಕು. ಕಾಲೇಜು ದಿನಗಳÇÉೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಗಾಂಧೀಜಿ ಅವರನ್ನು ಭೇಟಿಯಾಗಿ ಖಾದಿಧಾರಿಯಾದ ಅವರು ಕಾನೂನು ವ್ಯಾಸಂಗ ಮಾಡಿ ಮುಂಬೈ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಶುರು ಮಾಡಿದರು. ಸರ್ದಾರ್‌ ವಲ್ಲಭಭಾಯಿ ಪಟೇಲರ ಪ್ರೇರಣೆಯಿಂದ ಮುಂಬೈಯಲ್ಲಿ ಪಾಪು ಪತ್ರಿಕೋದ್ಯಮದಲ್ಲಿ ನಿರತರಾದರು. ಮುಂಬೈ ಕರ್ನಾಟಕದ ಹಿರಿಯ ರಾಜಕೀಯ ಧುರೀಣ ಕೆ. ಎಫ್. ಪಾಟೀಲರು ಹುಬ್ಬಳ್ಳಿಯಲ್ಲಿ ಕನ್ನಡ ಪತ್ರಿಕೆಯನ್ನು ಆರಂಭಿಸುವುದಾಗಿ ತಿಳಿಸಿ ಪುಟ್ಟಪ್ಪ ಅವರು ಕರ್ನಾಟಕಕ್ಕೆ ಬರುವಂತೆ ಮಾಡಿದರು. ಕನ್ನಡ ನಾಡು-ನುಡಿಯ ಅಭಿಮಾನಿಗಳಾಗಿದ್ದ ಪಾಪು ಹುಬ್ಬಳ್ಳಿಯಲ್ಲಿ ವಿಶಾಲ ಕರ್ನಾಟಕ ಪತ್ರಿಕೆಯ ಸಂಪಾದಕರಾದರು. ಮುಂದೆ ಅಮೆರಿಕೆಯ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಪಾಪು ಮನಸ್ಸು ಮಾಡಿದ್ದರೆ ದೊಡ್ಡ ದೊಡ್ಡ ಹು¨ªೆಗಳನ್ನು ಪಡೆಯಬಹುದಿತ್ತು. ಆದರೆ, ಅವೆಲ್ಲವನ್ನು ಬಿಟ್ಟು ಪತ್ರಿಕೋದ್ಯಮವನ್ನು ನೆಚ್ಚಿಕೊಂಡು 1954ರಲ್ಲಿ ಅವರು ತಮ್ಮದೇ ಆದ ಪ್ರಪಂಚ ವಾರಪತ್ರಿಕೆಯನ್ನು ತೆರೆದು ಮನೆ ಮಾತಾದರು. “ಲೋಕವೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬ’ ಎಂಬ ಧೋರಣೆಯಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡು ಕನ್ನಡ ಪ್ರಪಂಚವನ್ನು ಹಿಗ್ಗಿಸಿ ಸೈ ಎನಿಸಿಕೊಂಡದ್ದು ಈಗ ಇತಿಹಾಸ. 

“ನೂರಕ್ಕೊಬ್ಬ ವೀರ, ಸಾವಿರಕ್ಕೊಬ್ಬ ಧೀರ, ಹತ್ತು ಸಾವಿರಕ್ಕೊಬ್ಬ ಮಾತುಗಾರ’ ಎಂಬ ಸುಭಾಷಿತವಿದೆ. ಪಾಪು ನಮ್ಮ ನಾಡು ಕಂಡ ವಿರಳ ವಾಗ್ಮಿಗಳಲ್ಲಿ ಒಬ್ಬರು. ಪಾಟೀಲ ಪುಟ್ಟಪ್ಪನವರ ಸ್ಮರಣಶಕ್ತಿ ಅದ್ಭುತವಾದುದು. ಕರ್ನಾಟಕ ಇತಿಹಾಸ, ಪರಂಪರೆ ಸಮಕಾಲೀನ ಘಟನೆ, ವಿದ್ಯಮಾನಗಳನ್ನು ಪುಂಖಾನುಪುಂಖವಾಗಿ ಹೇಳುವ ಅವರ ಮಾತಿನ ಧಾರೆಗೆ ಯಾರೂ ಮಂತ್ರಮುಗ್ಧರಾಗಬೇಕು. ವ್ಯಾಪಕ ಓದು, ಅಧ್ಯಯನ, ಪಾಂಡಿತ್ಯಕ್ಕೆ ಹೆಸರಾಗಿರುವ ಅವರು ಐವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿ¨ªಾರೆ. ನಲವತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಕೃತಿಗಳನ್ನು ರಚಿಸಿ ಕನ್ನಡ ಪ್ರಪಂಚದ ಕ್ರಿಯಾಚೇತನವಾಗಿ ಮಿಂಚುತ್ತ ಬಂದಿ¨ªಾರೆ. ತಮ್ಮ ಸುದೀರ್ಘ‌ವಾದ ಬರವಣಿಗೆಯ ಮೂಲಕ ನಾಡಿನ ಜನತೆಗೆ ಮಾರ್ಗದರ್ಶನ ಮಾಡಿ ಅವರಲ್ಲಿ ವೈಚಾರಿಕತೆ, ರಾಷ್ಟ್ರ ಪ್ರೇಮದ ಚಿಂತನೆಯನ್ನು ಬಿತ್ತುವ ಕಾರ್ಯವನ್ನು ಅವರು ಮಾಡುತ್ತ¤ ಬಂದಿದ್ದಾರೆ. “ಅನುಭವವಿದ್ದಲ್ಲಿ ಅಮೃತತ್ವವಿದೆ’, “ಬದುಕಲು ಬೇಕು ಬದುಕುವ ಮಾತು’ ಮೊದಲಾದ ಅಂಕಣಗಳನ್ನು ಅವರು ಸುದೀರ್ಘ‌ ಕಾಲ ಬರೆದು ದಾಖಲೆ ಮಾಡಿ¨ªಾರೆ. ಸೋತ ಬಾಳಿಗೆ ಭರವಸೆ ನೀಡುವ ಪಾಪು ವಿರಚಿತ “ಅಮೃತವಾಹಿನಿ’ “ಬದುಕುವ ಮಾತು’ ಮೊದಲಾದ ಕೃತಿಗಳು ಕನ್ನಡ ವಾš¾ಯದಲ್ಲಿ ವಿಶಿಷ್ಟವಾದ ಸ್ಥಾನಮಾನವನ್ನು ಗಳಿಸಿಕೊಂಡಿರುವುದು ಉಲ್ಲೇಖನೀಯ ಅಂಶ. 

ಅಗ್ರಗಣ್ಯ ಅಂಕಣಗಾರ
ಕನ್ನಡದ ಅಗ್ರಗಣ್ಯ ಅಂಕಣಕಾರರಲ್ಲಿ ಪಾಟೀಲ ಪುಟ್ಟಪ್ಪ ಅವರೂ ಒಬ್ಬರು. ವಿಶ್ವವಾಣಿ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ತರಂಗ, ಪ್ರಪಂಚ- ಹೀಗೆ ನಾಡಿನ ಜನಪ್ರಿಯ ದೈನಿಕ, ಮಾಸಿಕ, ಸಾಪ್ತಾಹಿಕಗಳಲ್ಲಿ ಅವರು ಬರೆದ ಅಂಕಣಗಳು ಕೃತಿ ರೂಪದಲ್ಲಿ ಬೆಳಕು ಕಂಡು ಅಪಾರ ಓದುಗ ವರ್ಗದ ಪ್ರಶಂಸೆಗೆ ಪಾತ್ರವಾಗಿವೆ. 

ನಡೆದಾಡುವ ವಿಶ್ವಕೋಶದಂತಿರುವ ಪಾಪು ತಮ್ಮ ಹೋರಾಟ, ಬರವಣಿಗೆ, ಮಾತು ಕೃತಿಗಳ ಮೂಲಕ ದಂತಕತೆಯಾಗಿ¨ªಾರೆ. ಪತ್ರಿಕೋದ್ಯಮ ಹಾಗೂ ವಾš¾ಯ ಸೇವೆಗಾಗಿ ಅನೇಕ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ ಪಡೆದಿರುವ ಪಾಪು ಅವರು ಬೆಳಗಾವಿಯಲ್ಲಿ ನಡೆದ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿ¨ªಾರೆ. ತಮ್ಮ ಪ್ರತಿಭೆ, ಕ್ರಿಯಾಶೀಲ ಗುಣಗಳಿಂದಾಗಿ ಜವಾಹರಲಾಲ ನೆಹರು ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎರಡು ಅವಧಿಗೆ ಪಾಪು (1962-1974) ರಾಜ್ಯಸಭೆಯ ಸದಸ್ಯರಾಗಿ ನಾಮಕರಣಗೊಂಡು ಜನಪರ ಸೇವಾಕಾರ್ಯದಲ್ಲಿ ನಿರತರಾದರು. ಕರ್ನಾಟಕ ಸರಕಾರದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅವರು ಮಾಡಿದ ಕನ್ನಡ ಕೈಂಕರ್ಯ ಇಂದಿಗೂ ನಾಡಿನ ಜನಮಾನಸದಲ್ಲಿ ಹಸಿರಾಗಿದೆ. ಅವರು ನಿಷ್ಠುರವಾದಿ. ಕಾರಂತರಂತೆ ಕಂಡದ್ದನ್ನು ಕಂಡಂತೆ ಹೇಳುವುದು ಅವರ ಸ್ವಭಾವ. ಶ್ರದ್ಧೆ, ಪ್ರಾಮಾಣಿಕತೆ, ನಿಚ್ಚಳ ವಿಚಾರ ಸರಣಿ, ಅವಿಶ್ರಾಂತ ದುಡಿಮೆ- ಹೀಗೆ ಏನೆಲ್ಲವನ್ನು ಒಳಗೊಂಡ ಆದರ್ಶ ವ್ಯಕ್ತಿತ್ವ ಅವರದು. ನಾಡು, ನುಡಿ, ಗಡಿಗಳ ಪ್ರಶ್ನೆ ಬಂದಾಗ ನಮಗೆ ಮೊದಲು ನೆನಪಿಗೆ ಬರುವವರು ಪಾಪು. ಅವರು ಬರೇ ವ್ಯಕ್ತಿಯಲ್ಲ; ಬಹುದೊಡ್ಡ ಶಕ್ತಿಯಾಗಿ ನಮ್ಮ ನಡುವೆ ಇರುವುದು ಕನ್ನಡಿಗರ ಸೌಭಾಗ್ಯ. ಪಾಟೀಲ ಪುಟ್ಟಪ್ಪ ಕನಸಿನಲ್ಲೂ ಕನ್ನಡ ಮಂತ್ರವನ್ನೇ ಕನವರಿಸಿದವರು. ಕನ್ನಡ ಇಂದು ಸರಾಗವಾಗಿ ಉಸಿರಾಡುತ್ತಿರುವುದಕ್ಕೆ ಕಾರಣರಾದವರಲ್ಲಿ ಪಾಪು ಅವರು ಪ್ರಮುಖರು. ಪಾಪು ಅವರದು ಚಿಕಿತ್ಸಕ ಮನೋಭಾವ. ಕೆಲವೊಮ್ಮೆ ಅವರ ಮಾತು, ಬರವಣಿಗೆ ಖಾರ ಎಂದೆನಿಸಿದರೂ ಅದರಲ್ಲಿ ಕಷಾಯದ ಗುಣವಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಇವು ಇಪ್ಪತ್ತನೆಯ ಶತಮಾನದ ಎರಡು ಮುಖ್ಯ ಚಾರಿತ್ರಿಕ ಸಂಗತಿಗಳು. ಇವುಗಳ ಒಳಹೊರಗನ್ನು  ಚೆನ್ನಾಗಿ ಬಲ್ಲವರು ಪಾಪು ಅವರನ್ನು ಬಿಟ್ಟರೆ ಮತ್ತೂಬ್ಬರಿಲ್ಲ. ಮರಾಠಿಯ ಹೆಸರಾಂತ ದೈನಿಕ ಲೋಕಸತ್ತಾ “ಮಹಾರಾಷ್ಟ್ರಕ್ಕೂ ಒಬ್ಬ ಪಾಟೀಲ ಪುಟ್ಟಪ್ಪ ಬೇಕಾಗಿದ್ದಾರೆ’ ಎಂಬುದಾಗಿ ಸಂಪಾದಕೀಯ ಬರೆದದ್ದು ಪಾಟೀಲ ಪುಟ್ಟಪ್ಪ ಅವರ ಕೃತುಶಕ್ತಿಗೆ ಸಾಕ್ಷಿ. ಒಳನಾಡು, ಗಡಿನಾಡು, ಹೊರನಾಡು ಎನ್ನದೆ ಎಲ್ಲೆಡೆ ಕನ್ನಡದ ಕಹಳೆಯನ್ನು ಮೊಳಗಿಸಿದ, ಕನ್ನಡದ ಗೌರವವನ್ನು ಹೆಚ್ಚಿಸಿದ ಕನ್ನಡದ ಹೆಮ್ಮೆಯ ಪುತ್ರ ಪಾಪು ಇದೀಗ ಶತಾಯುಷಿ. ಅವರ ಮಾರ್ಗದರ್ಶನ ಸುದೀರ್ಘ‌ ಕಾಲ ನಾಡಿಗೆ-ನುಡಿಗೆ ಸಿಗುವಂತಾಗಲಿ.

ನಾಳೆ, ಧಾರವಾಡದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪರ ಜನ್ಮಶತಮಾನೋತ್ಸವ ಸಮಾರಂಭವಿದೆ.

ಜಿ.ಎನ್‌. ಉಪಾಧ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್‌ ಓದುತ್ತಿರುವ ಮಗಳಿಗೆ ಪೋನ್‌ ಮಾಡೋಣ ಅಂತ ಮೊಬೈಲ್‌ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ...

  • ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ "ಇಸಂ'...

  • ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್‌ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್‌ ಸಿಗದ ಅಪ್ಪನ ರೇಡಿಯೋ "ಕುಯ್ಯೋ',...

  • ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ...

  • ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು...

ಹೊಸ ಸೇರ್ಪಡೆ