ಗರ್ಭಧಾರಣೆ ಮತ್ತು ಬಾಯಿಯ ಆರೋಗ್ಯ


Team Udayavani, Feb 23, 2020, 4:46 AM IST

ram-19

ಗರ್ಭಧಾರಣೆ ಎಂಬುದು ಶಿಶು ಜನನವನ್ನು ನಿರೀಕ್ಷಿಸುತ್ತಿರುವ ತಾಯಿ ಮಾತ್ರವಲ್ಲದೆ ಇಡೀ ಕುಟುಂಬವೇ ಹರ್ಷೋಲ್ಲಾಸದಲ್ಲಿ ಇರುವ ಸಮಯ. ಗರ್ಭಧಾರಣೆಯ ಒಂಬತ್ತು ತಿಂಗಳುಗಳ ಅವಧಿಯಲ್ಲಿ ತಾಯಿ ಮತ್ತು ಭ್ರೂಣ ಹಾಗೂ ಆ ಬಳಿಕ ಶಿಶು ಮತ್ತು ತಾಯಿಯ ಆರೋಗ್ಯ ಚೆನ್ನಾಗಿರುವುದಕ್ಕಾಗಿ ಮಾತ್ರವಲ್ಲದೆ ಯಾವುದೇ ಸಮಸ್ಯೆಗಳು ತಲೆದೋರದಿರಲು ಗರ್ಭಿಣಿ ಸ್ತ್ರೀಗೆ ಅತ್ಯುತ್ಕೃಷ್ಟ ಆರೈಕೆಗಳು, ಕಾಳಜಿ, ಮುನ್ನೆಚ್ಚರಿಕೆಗಳನ್ನು ಒದಗಿಸಬೇಕಾಗುತ್ತದೆ.

ಗರ್ಭ ಧರಿಸಿದ ಮತ್ತು ಶಿಶು ಜನನದ ಬಳಿಕದ ಅವಧಿಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗದಿರುವುದಕ್ಕೆ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತೀರಾ ಅಗತ್ಯ. ತಾಯಿಯ ಬಾಯಿಯ ಆರೋಗ್ಯವು ಭ್ರೂಣದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಇತ್ತೀಚೆಗಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದ ಗರ್ಭ ಧರಿಸಿದ ಅವಧಿಯಲ್ಲಿ ಯಾವುದೇ ಸಂಕೀರ್ಣ ಸಮಸ್ಯೆಗಳು ತಲೆದೋರದಂತೆ ಇರುವುದಕ್ಕಾಗಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸ್ತ್ರೀಯ ಗರ್ಭ ಧರಿಸಿದ ಅವಧಿಯಲ್ಲಿ ಆಕೆಯ ದೇಹದಲ್ಲಿ ಏನೇನು ಬದಲಾವಣೆಗಳಾಗುತ್ತವೆ ಮತ್ತು ಈ ಅವಧಿಯಲ್ಲಿ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಗರ್ಭ ಧರಿಸುವುದಕ್ಕೆ ಮುನ್ನ
ಗರ್ಭ ಧರಿಸುವ ಯೋಜನೆ ಹಾಕಿಕೊಂಡಿದ್ದರೆ ದಂತ ವೈದ್ಯರನ್ನು ಭೇಟಿಯಾಗಿ. ಅವರು ನಿಮ್ಮ ಹಲ್ಲುಗಳು ಮತ್ತು ಬಾಯಿಯನ್ನು ಪರೀಕ್ಷಿಸಿ ಯಾವುದಾದರೂ ಸಮಸ್ಯೆಗಳಿದ್ದರೆ ಚಿಕಿತ್ಸೆ ನೀಡುತ್ತಾರೆ. ಈ ಮೂಲಕ ಗರ್ಭ ಧರಿಸಿದ ಬಳಿಕ ತೊಂದರೆ ನೀಡಬಹುದಾದ ಸಮಸ್ಯೆಗಳನ್ನು ಅದಕ್ಕೆ ಮುನ್ನವೇ ಪರಿಹರಿಸಿಕೊಳ್ಳಬಹುದು.

ಗರ್ಭ ಧರಿಸಿದ ಅವಧಿಯಲ್ಲಿ
ಗರ್ಭ ಧರಿಸಿದ ದಿನದಿಂದ ತೊಡಗಿ ಹೆರಿಗೆಯಾಗುವವರೆಗೂ ಸ್ತ್ರೀ ದೇಹ ಹತ್ತು ಹಲವು ಬದಲಾವಣೆಗಳನ್ನು ಅನುಭವಿಸುತ್ತದೆ. ಹಲವಾರು ಹಾರ್ಮೋನ್‌ ಸಂಬಂಧಿ ಬದಲಾವಣೆಗಳು ಉಂಟಾಗುತ್ತವೆ. ಈ ಹಾರ್ಮೋನ್‌ ಬದಲಾವಣೆಗಳಿಂದ ಕೆಲವು ಗರ್ಭಿಣಿಯರಲ್ಲಿ ವಸಡುಗಳ ಊತ, ವಸಡುಗಳಿಂದ ರಕ್ತಸ್ರಾವ ಉಂಟಾಗಬಹುದು. ಇಂತಹ ಸಮಸ್ಯೆ ಉಂಟಾದರೆ ದಂತವೈದ್ಯರನ್ನು ಅಗತ್ಯವಾಗಿ ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಮನೆಯಲ್ಲಿ ದಿನಕ್ಕೆ ಎರಡು ಬಾರಿ ಮೃದುವಾದ ಬ್ರಶ್‌ನಿಂದ ಹಲ್ಲುಗಳನ್ನು ಉಜ್ಜಿಕೊಳ್ಳುವುದು ಅಗತ್ಯ. ಹದ ಬಿಸಿಯಾದ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳುವುದು ಕೂಡ ಸಹಾಯಕ.

ದಂತವೈದ್ಯರನ್ನು ಭೇಟಿಯಾಗುವ ಸಂದರ್ಭದಲ್ಲಿ ನೀವು ಗರ್ಭಿಣಿ ಎಂಬುದನ್ನು ಅವರ ಗಮನಕ್ಕೆ ತನ್ನಿ. ಇದರಿಂದ ಎಕ್ಸ್‌ರೇಗಳನ್ನು ತೆಗೆಯಬೇಕಾದ ಸಂದರ್ಭದಲ್ಲಿ ಹೊಟ್ಟೆಯ ಭಾಗವನ್ನು ಸೂಕ್ತ ರಕ್ಷಾ ಕವಚದಿಂದ ಮುಚ್ಚಿ ತೆಗೆಯಲು ಸಾಧ್ಯವಾಗುತ್ತದೆ.

ಯಾವುದೇ ದಂತ ವೈದ್ಯಕೀಯ ಚಿಕಿತ್ಸೆಯನ್ನು ಕೈಗೊಳ್ಳಲು ಗರ್ಭಧಾರಣೆಯ ದ್ವಿತೀಯ ತ್ತೈಮಾಸಿಕ ಅತ್ಯಂತ ಸುರಕ್ಷಿತವಾದ ಅವಧಿಯಾಗಿರುತ್ತದೆ. ಸಾಮಾನ್ಯ ರೂಢಿಗತ ಹಲ್ಲುಗಳ ತಪಾಸಣೆಯನ್ನು ಯಾವುದೇ ಸಮಯದಲ್ಲಿ ನಡೆಸಬಹುದು.

ಗರ್ಭಧಾರಣೆಯ ಸಮಯದ ಗಡ್ಡೆಗಳು
ಗಡ್ಡೆಗಳು ಎಂದ ಕೂಡಲೇ ನೀವು ಗಾಬರಿಗೊಳ್ಳಬೇಕಾಗಿಲ್ಲ. ಗರ್ಭಧಾರಣೆಯ ಸಮಯದ ಗಡ್ಡೆಗಳು ಜಿಂಜಿವಾದಲ್ಲಿ ಹಲ್ಲುಗಳ ನಡುವೆ ಉಂಟಾಗುವ ಮೃದು ಅಂಗಾಂಶಗಳ ಹೆಚ್ಚುವರಿ ಬೆಳವಣಿಗೆ. ಇವು ಅಪಾಯಕಾರಿಯಲ್ಲ ಮತ್ತು ಶಿಶು ಜನನದ ಬಳಿಕ ತಾವಾಗಿ ಮಾಯವಾಗುತ್ತವೆ.
ಅವು ನಿಜವಾಗಿಯೂ ಕಿರಿಕಿರಿ ಉಂಟು ಮಾಡುತ್ತಿದ್ದರೆ ದಂತ ವೈದ್ಯರು ಸ್ಥಳೀಯ ಅರಿವಳಿಕೆ ನೀಡಿ ಅವುಗಳನ್ನು ನಿವಾರಿಸಬಹುದಾಗಿದೆ.

ಮಾರ್ನಿಂಗ್‌ ಸಿಕ್‌ನೆಸ್‌ ಮತ್ತು ಹಲ್ಲುಗಳು
ಅನೇಕ ಸ್ತ್ರೀಯರು ಗರ್ಭ ಧರಿಸಿದ ಅವಧಿಯಲ್ಲಿ ಹೊಟ್ಟೆತೊಳೆಸುವಿಕೆ ಮತ್ತು ವಾಂತಿಯಾಗುವ ತೊಂದರೆಯನ್ನು ಅನುಭವಿಸುತ್ತಾರೆ. ಇದು ಬೆಳಗ್ಗಿನ ಸಮಯದಲ್ಲಿ ಅತಿ ಹೆಚ್ಚು. ಹೊಟ್ಟೆಯಲ್ಲಿರುವ ಆಮ್ಲವು ವಾಂತಿಯ ಮೂಲಕ ಬಾಯಿಗೆ ಬರುವಾಗ ಹಲ್ಲುಗಳ ಎನಾಮಲ್‌ ಕೊರೆದು ಸೂಕ್ಷ್ಮ ಸಂವೇದಕತ್ವ ಉಂಟಾಗುವ ಸಾಧ್ಯತೆಯಿರುವುದರಿಂದ ಈ ಬಗ್ಗೆ ಕಾಳಜಿ ಅವಶ್ಯ.
ಮಾರ್ನಿಂಗ್‌ ಸಿಕ್‌ನೆಸ್‌ ಮತ್ತು ಹೊಟ್ಟೆಯುರಿ ಉಂಟಾಗುವ ಸಮಸ್ಯೆ ನಿಮಗಿದ್ದರೆ ವಾಂತಿಯ ಬಳಿಕ ಬಾಯಿಯನ್ನು ಸ್ವತ್ಛವಾಗಿ ತೊಳೆದುಕೊಳ್ಳಿ. ಇದರಿಂದ ಬಾಯಿಗೆ ಬಂದಿರುವ ಆಮ್ಲವು ತೊಳೆದುಹೋಗಿ ಹಲ್ಲುಗಳು ಸುರಕ್ಷಿತವಾಗಿರುತ್ತವೆ.

ಗರ್ಭಧಾರಣೆಯ ಅವಧಿಯಲ್ಲಿ ಬಾಯಿ ಒಣಗುವಿಕೆ ಸಾಕಷ್ಟು ನೀರು ಕುಡಿಯುವ ಮೂಲಕ ಬಾಯಿಯನ್ನು
ಆದ್ರವಾಗಿ ಇರಿಸಿಕೊಳ್ಳಿ. ಬಾಯಿ ಒಣಗಿದ್ದರೆ ಹಲ್ಲು ಹುಳುಕಾಗುವ ಸಾಧ್ಯತೆಗಳು ಹೆಚ್ಚು. ಬಾಯಿ ಮತ್ತು ಹಲ್ಲುಗಳ ಆರೋಗ್ಯವೂ ತಾಯಿ ಮತ್ತು ಶಿಶುವಿನ ಸ್ವಾಸ್ಥ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಗರ್ಭಧಾರಣೆಯ ಸಂದರ್ಭದಲ್ಲಿ ಈ ಬಗ್ಗೆ ಸಾಕಷ್ಟು ಎಚ್ಚರಿಕೆ, ಕಾಳಜಿ ಹೊಂದಿರುವುದು ತುಂಬಾ ಆವಶ್ಯಕವಾಗಿದೆ.

ಡಾ| ಆನಂದ್‌ದೀಪ್‌ ಶುಕ್ಲಾ ,
ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.