Udayavni Special

ಕಿಯಾಂಗ್‌ ನಾಂಗ್ಬಾ ಮೇಘಾಲಯದ ಸ್ವಾತಂತ್ರ್ಯದ ಅಮರ ಚೇತನ


Team Udayavani, May 20, 2018, 9:11 AM IST

o-20.jpg

ಅಂದು 1862ರ ದಶಂಬರ 30. 19ನೆಯ ಶತಮಾನದ ಆ ವರ್ಷ ಉರುಳಿ ಇನ್ನೊಂದು ವರುಷದ ಹರುಷ ತರಲು ಕೇವಲ ಇನ್ನೊಂದೇ ದಿನ ಬಾಕಿ ಉಳಿದಿತ್ತು. ಮೇಘಾಲಯದ ಗಿರಿ, ಕಂದರಗಳ ಮಧ್ಯೆ ಹರಡಿನಿಂತ ಹಳ್ಳಿಗಳ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಆಚರಣೆಯ ಗಂಟೆಗಳು ಇನ್ನೂ ಮೊಳಗುತ್ತಲೇ ಇದ್ದವು. ಸೂರ್ಯ ಮುಳುಗದ ಸಾಮ್ರಾಜ್ಯದ ಕರಿಛಾಯೆ, ಮೇಘಗಳ ಆ ಸುಂದರ ರಾಜ್ಯದಲ್ಲಿ ಪಸರಿಸಿತ್ತು. ತಮ್ಮ  ಮೂಲ ನಂಬಿಕೆಗಳಿಗೆ ಮಾತ್ರವಲ್ಲ , ಸಹಸ್ರಾರು ವರ್ಷಗಳಿಂದ ಬೆಳೆದು ನಿಂತಿದ್ದ ಪರಂಪರೆ, ಜೀವನ ಪದ್ಧತಿಯ ಎಲ್ಲಾ  ಬೇರುಗಳೂ ಆಂಗ್ಲರ ಆಳ್ವಿಕೆ ತರಿಯುತ್ತಿದ್ದವು.  

ಈ ತೆರನಾದ ಪರಕೀಯರ ದಬ್ಟಾಳಿಕೆ, ಸ್ವಂತಿಕೆಗೆ ಮರ್ಮಾಘಾತ ಆದಾಗ ಬಿಲ್ಲುಬಾಣ ಹೆಗಲಿಗೇರಿಸಿ ಹಗಲು ರಾತ್ರಿ ಹೋರಾಡಿದ ಬಿಸಿನೆ‌ತ್ತರ ಯುವಕ ಕಿಯಾಂಗ್‌ ನಾಂಗ್ಬಾ. ಪೂರ್ವ ಜೈಂತಿಯೊ ಬೆಟ್ಟಗುಡ್ಡಗಳಲ್ಲಿ ಈ ಸ್ವಾತಂತ್ರ್ಯ ಯೋಧನ ಹೋರಾಟದ ಸಿಂಹ ಘರ್ಜನೆ ಪ್ರತಿಧ್ವನಿಸಲಾರಂಭಿಸಿತು. “ಬ್ರಿಟಿಷ್‌ ಚಕ್ರಾಧಿಪತ್ಯಕ್ಕೆ ಈತ ದ್ರೋಹ ಎಸಗುತ್ತಿದ್ದಾನೆ; ಈತ ಶಿಕ್ಷಾರ್ಹ ಬಂಡುಕೋರ’ ಎಂದೆಲ್ಲ ಹಣೆಪಟ್ಟಿಯೊಂದಿಗೆ ಈತನ ಸೆರೆಗೆ ಸರಕಾರ ಮುಂದಾಯಿತು. ಆಗತಾನೇ ಈಸ್ಟ್‌ಇಂಡಿಯಾ ಕಂಪೆನಿಯಿಂದ ನೇರ ಅಧಿಕಾರ ಪಡೆದುಕೊಂಡ ಲಂಡನ್‌ ಕೇಂದ್ರೀಕೃತ ಬ್ರಿಟಿಷ್‌ ಸರಕಾರದ ಕದಂಬ ಬಾಹು ದೂರದ ಈಶಾನ್ಯ ಭಾರತದ ಪದರ ಪದರಕ್ಕೂ ಚಾಚಿತ್ತು! ಸಿಡಿದೇಳುವ ಸ್ವಾತಂತ್ರ್ಯ ಕಿಡಿಗಳನ್ನು ಅಡಗಿಸಲು ಗುಡ್ಡಗಾಡು ಜನಾಂಗದಿಂದಲೇ ಆಯ್ದ ಯುವಕರ ಅಸ್ಸಾಂ ರೈಫ‌ಲ್ಸ್‌ ಪಡೆ ಸಿದ್ಧಗೊಂಡಿತು. ಸ್ವಾತಂತ್ರ್ಯದ ಧ್ವನಿ ಎತ್ತಿದವರ ಹುಟ್ಟಡಗಿಸುವ ಕಾರ್ಯಕ್ಕೆ ವಿಷಾದನೀಯ ವಿಪರ್ಯಾಸ ಎಂಬಂತೆ ಮಣ್ಣಿನ ಮಕ್ಕಳದೇ ಪಡೆ ಸಿದ್ಧಗೊಂಡಿತು! ಈಶಾನ್ಯ ಭಾರತದ ಈಗಿನ ಮಣಿಪುರ, ನಾಗಾಲ್ಯಾಂಡ್‌, ಮಿಜೋರಾಮ್‌ ಇಲ್ಲೆಲ್ಲಾ ಆಂಗ್ಲ ಸೈನ್ಯಾಧಿಕಾರಿ ಆದೇಶ ಹೊತ್ತ ದೇಸೀ ಪಡೆಗಳೇ ನೆಲದ ಮುಕ್ತತೆಯ ಉಸಿರು ತಡೆ‌ಯಲಾರಂಭಿಸಿದವು.

ಅಪ್ರತಿಮ ದೇಶಭಕ್ತ
ಅಂತಹ ದಾರುಣ, ಪಾರತಂತ್ರ್ಯದ ದಿನಗಳಲ್ಲಿ ಚಾರಿತ್ರಿಕ ಎನಿಸುವ ವೀರಗಾಥೆ ಸೃಜಿಸಿದ ಕಿಯಾಂಗ್‌ ನಾಂKiang nangbahಗ್ಬಾ ಅಪ್ರತಿಮ ರಾಷ್ಟ್ರಭಕ್ತ; ಆಂಗ್ಲರಿಗೆ ಸಿಂಹಸ್ವಪ್ನವೂ ಆಗಿದ್ದ. ಆದರೇನು? ಬ್ರಿಟಿಷರು ಕುಟಿಲೋಪಾಯ ಬಲೆ ಬೀಸಿದರು. ಕೊನೆಗೊಂದು ದಿನ ತನ್ನ ಆಪ್ತರೇ ಈತನ ಚಲನವಲನದ ಸ್ಪಷ್ಟ ಮಾಹಿತಿ ಆಂಗ್ಲ ಅಧಿಕಾರಿಗೆ ರವಾನಿಸಿಬಿಟ್ಟರು. ಇದರ ಅರಿವೇ ಇಲ್ಲದ ತರುಣ ನಾಂಗ್ಬಾ ಬ್ರಿಟಿಷರ ಬಂಧಿಯಾದ; ತನ್ನವರ ವಿಶ್ವಾಸದ್ರೋಹದ ಫ‌ಲಶ್ರುತಿಯಾಗಿ ಶಿಲ್ಲಾಂಗ್‌ನಿಂದ ಬಹುದೂರದ ಜುವಾç ಎಂಬ ಸ್ಥಳದ ಸಮೀಪ ಬಂಧನಕ್ಕೊಳಗಾದ. ಮುಂದಿನ ಕಥೆ ಕರುಣಾಜನಕ ವ್ಯಥೆಯ ಪ್ರಸಂಗ. “ಬ್ರಿಟಿಷ್‌ ಚಕ್ರಾಧಿಪತ್ಯಕ್ಕೆ ದ್ರೋಹ ಬಗೆದಾತ’ ಎಂಬ ಹಣೆಪಟ್ಟಿಯೊಂದಿಗೆ ಭಾರತದ ವೀರಪುತ್ರನಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಜುವಾಯಿ ಪಟ್ಟಣದ ಇವಾಮ್ಯುಸಿಯಾಂಗ್‌ ಎಂಬಲ್ಲಿ ಬಹಿರಂಗವಾಗಿ, ಸಾರ್ವಜನಿಕರ ಎದುರಿಗೇ ಮರಕ್ಕೆ ಕುಣಿಕೆ ಬಿಗಿದು ನೇತುಹಾಕಲಾಯಿತು. ನೇಣಿಗೆ ಶರಣಾಗುವ ಮೊದಲು ಅಲ್ಲಿ ಕಂಬನಿ ತುಂಬಿ ಮೂಕವಿಸ್ಮಿತರಾಗಿ ನಿಂತ ಸಹಸ್ರಾರು ಜನರನ್ನು ಉದ್ದೇಶಿಸಿ ಕಿಂಗ್‌ ನಾಂಗ್ಬಾ ಘೋಷಿಸಿದ ಅಮರವಾಣಿ ಇಂದಿಗೂ ಅಲ್ಲಿ ಜನಜನಿತ. “ತನ್ನ ಮೃತಶರೀರದ ಮುಖ ಪೂರ್ವಾಭಿಮುಖವಾಗಿ ನಿಂತರೆ ಕೇವಲ 100 ವರ್ಷಗಳೊಳಗೇ ನನ್ನ ಈ ಮಾತೃಭೂಮಿ ಸ್ವತಂತ್ರಗೊಳ್ಳುತ್ತದೆ. ಒಂದೊಮ್ಮೆ ನನ್ನ ನಿರ್ಜೀವ ಮುಖ ಪಶ್ಚಿಮಾಭಿಮುಖವಾಗಿ ತಿರುಗಿಬಿಟ್ಟರೆ ಆಗ… ನೀವೆಲ್ಲ ಶಾಶ್ವತವಾಗಿ ಗುಲಾಮಗಿರಿಯಲ್ಲೇ ಇರಬೇಕಾಗುತ್ತದೆ’. ಈ ಭವಿಷ್ಯವಾಣಿ ನೂರಕ್ಕೆ ನೂರು ಪ್ರತಿಶತ ನಿಜವಾಯಿತು. 1857ರಿಂದ ಅರ್ಥಾತ್‌ ಪ್ರಥಮ ಸಂಗ್ರಾಮದ ಬಳಿಕ ಕೇವಲ 9 ದಶಮಾನಗಳವರೆಗೆ ಅಂದರೆ 1947ರ ವರೆಗೆ ಮಾತ್ರ ಈ ನೆಲದ ಬಾನಲ್ಲಿ ಯೂನಿಯನ್‌ ಜ್ಯಾಕ್‌ ಬಾವುಟ ಹಾರಿತು. 1862ರಿಂದ ಕೇವಲ 85 ವರ್ಷಗಳೊಳಗೆ ತ್ರಿವರ್ಣ ಧ್ವಜ ಆ ಮಹಾನ್‌ ಚೇತನ ಅಮರವಾದ ಜಾಗದಲ್ಲೂ ಹಾರಿತು. ಕಿಯಾಂಗ್‌ ನಾಂಗ್ಬಾನ ಅಮರ ಚೇತನಕ್ಕೆ ಸಾಕ್ಷಿಯಾಗಿ ಜುವಾಯಿಯ ಪ್ರಶಾಂತ ಹಸಿರು ಪರಿಸರದಲ್ಲಿ ಸುಂದರ ಸ್ಮಾರಕ ಅಪಾರ ದೇಶಭಕ್ತರನ್ನು ಸೆಳೆಯುತ್ತಿದೆ; ರಾಷ್ಟ್ರಪ್ರೇಮದ ಸಿಂಚನ ಮೂಡುತ್ತಿದೆ.

ಪಿ. ಅನಂತಕೃಷ್ಣ ಭಟ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Tewatia-1

ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

Mayank-01

ರಾಹುಲ್–ಮಯಾಂಕ್ ಭರ್ಜರಿ ಬ್ಯಾಟಿಂಗ್ ಜೊತೆಯಾಟ: ರಾಯಲ್ಸ್ ಬೆವರಿಳಿಸಿದ ‘ಹುಡುಗರು’!

ತಾಯಿ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ! ಜಿಲ್ಲೆಯಲ್ಲಿ ಎರಡನೇ ಸಾವು

ತಾಯಿ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ! ಜಿಲ್ಲೆಯಲ್ಲಿ ಎರಡನೇ ಸಾವು

ಚಾಮರಾಜನಗರ ; ಕಾವಿಡ್ ಸೋಂಕಿಗೆ ಓರ್ವ ಸಾವು! 44 ಹೊಸ ಪ್ರಕರಣ

ಚಾಮರಾಜನಗರ ; ಕೋವಿಡ್ ಸೋಂಕಿಗೆ ಓರ್ವ ಸಾವು! 44 ಹೊಸ ಪ್ರಕರಣ

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ-ಯೋಗಕ್ಷೇಮ ವಿಚಾರಣೆ

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ-ಯೋಗಕ್ಷೇಮ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

Tewatia-1

ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ನೀವು ಶ್ವಾನಪ್ರಿಯರೇ? ಹಾಗಿದ್ದರೆ ರೇಬಿಸ್‌ ಬಗ್ಗೆ ತಿಳಿಯಿರಿ

ನೀವು ಶ್ವಾನಪ್ರಿಯರೇ? ಹಾಗಿದ್ದರೆ ರೇಬಿಸ್‌ ಬಗ್ಗೆ ತಿಳಿಯಿರಿ

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

edition-tdy-1

ಸೂಕ್ತ ಮುನ್ನೆಚ್ಚರಿಕೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ರೇಬಿಸ್‌ ಕಾಯಿಲೆ ತಡೆಗೆ ನಿರ್ಣಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.