ಮತ್ತೆ ಹಾಟ್‌: ರಚಿತಾ ಟಾಕ್‌

Team Udayavani, Feb 23, 2020, 5:43 AM IST

ಇತ್ತೀಚೆಗೆ ನಟಿ ರಚಿತಾ ರಾಮ್‌, ಕೊಂಚ ನೆಗೆಟಿವ್‌ ವಿಷಯಗಳಿಗೆ ಸುದ್ದಿಯಾಗುತ್ತಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಮಾತು. ಈ ಮಾತಿಗೆ ಪುಷ್ಟಿ ನೀಡುವಂತೆ ಕಳೆದ ಒಂದು ವರ್ಷದಿಂದ ಈಚೆಗೆ ರಚಿತಾ ರಾಮ್‌, ಸಿನಿಮಾದ ವಿಷಯಗಳಿಗಿಂತ ಗಾಸಿಪ್‌ ವಿಚಾರಗಳಿಗೆ ಸುದ್ದಿಯಾಗಿದ್ದೆ ಹೆಚ್ಚು. ಕೆಲ ತಿಂಗಳ ಹಿಂದಷ್ಟೆ ತಮ್ಮ ಮದುವೆ ವಿಷಯದಲ್ಲಿ ಸುದ್ದಿಯಾಗಿದ್ದ ರಚಿತಾ ರಾಮ್‌, ಈಗ ಹಾಟ್‌ ಆ್ಯಂಡ್‌ ಬೋಲ್ಡ್‌ ಲುಕ್‌ನಿಂದ ಮತ್ತೆ ಸುದ್ದಿಯಾಗುತ್ತಿದ್ದಾರೆ. ಇದೇ ಪ್ರೇಮಿಗಳ ದಿನದಂದು ರಚಿತಾರಾಮ್‌ ಅಭಿನಯಿಸಿರುವ ಏಕ್‌ ಲವ್‌ ಯಾ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಈ ಟೀಸರ್‌ನಲ್ಲಿ ರಚಿತಾ ಲಿಪ್‌ಲಾಕ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಏಕ್‌ ಲವ್‌ ಯಾ ಸಿನಿಮಾದ ಒಂದು ದೃಶ್ಯದಲ್ಲಿ ರಚಿತಾ ಲಿಪ್‌ ಕಿಸ್‌ ಮಾಡಿದ್ದಾರೆ. ನಟಿ ರಕ್ಷಿತಾ ಪ್ರೇಮ್‌ ಸಹೋದರ ರಾಣಾ ಹಾಗೂ ರಚಿತಾ ನಡುವೆ ಈ ದೃಶ್ಯ ನಡೆಯುತ್ತದೆ. ಚಿತ್ರದ ಈ ಸೀನ್‌ ಈಗ ದೊಡ್ಡ ಸುದ್ದಿ ಮಾಡುತ್ತಿದೆ. ಇದಲ್ಲದೆ ಇನ್ನೊಂದು ದೃಶ್ಯದಲ್ಲಿ ರಚಿತಾ ಸಿಗರೇಟ್‌ ಸೇದುತ್ತ ಕಾಣಿಸಿಕೊಂಡಿದ್ದಾರೆ. ಈ ಎರಡೂ ದೃಶ್ಯಗಳು ಈಗ ವೈರಲ್‌ ಆಗಿದ್ದು, ಕೆಲವರು ರಚಿತಾರಾಮ್‌ ಅವರ ಈ ಬೋಲ್ಡ್‌ ನಡೆಯನ್ನು ಪ್ರಶಂಸಿಸಿದರೆ, ಇನ್ನು ಕೆಲವರು ಇದೆಲ್ಲ ಬೇಕಾ? ಅಂತ ಕಾಲೆಳೆಯುತ್ತಿದ್ದಾರೆ.

ಉಪೇಂದ್ರ ಅಭಿನಯದ ಐ ಲವ್‌ ಯೂ ಸಿನಿಮಾದ ಹಾಡು ಬಿಟ್ಟರೆ, ರಚಿತಾ ಈ ಹಿಂದೆ ಇಷ್ಟೊಂದು ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿರಲಿಲ್ಲ. ಹೀಗಾಗಿ, ಅವರು ಏಕೆ ಇಷ್ಟೊಂದು ಗ್ಲಾಮರಸ್‌ ಪಾತ್ರದಲ್ಲಿ ನಟಿಸಿದರು ಎನ್ನುವ ಪ್ರಶ್ನೆ ಕೆಲವರಿಗೆ ಮೂಡಿದೆ. ಆದರೆ, ಇದಕ್ಕೆ ಉತ್ತರಿಸಿರುವ ರಚಿತಾ, “ನಿರ್ದೇಶಕ ಪ್ರೇಮ್‌ ಜೊತೆಗೆ ಒಂದು ಸಿನಿಮಾದಲ್ಲಿಯಾದರೂ, ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು. ಈ ಪಾತ್ರ ಆಯ್ಕೆ ಮಾಡಲು ಇದೇ ಮೊದಲ ಕಾರಣ’ ಎಂದಿದ್ದಾರೆ.

“ಪ್ರೇಮ್‌ ತಮ್ಮ ಸಿನಿಮಾಗಳಲ್ಲಿ ನಟಿಯರಿಗೆ ಕೊಡುವ ಪ್ರಾಮುಖ್ಯತೆ ನನಗಿಷ್ಟ. ಜೋಗಿ ಚಿತ್ರವನ್ನು ಏಳು ಬಾರಿ ನೋಡಿದ್ದೇನೆ. ಇದು ತುಂಬ ವಿಭಿನ್ನ ಪಾತ್ರ. ಮೊದಲ ಬಾರಿಗೆ ಇಂತಹ ವಿಭಿನ್ನ ಪಾತ್ರ ಮಾಡುತ್ತಿದ್ದೇನೆ. ನನ್ನ ಪಾತ್ರ ಬಹಳ ಇಷ್ಟ ಆಯ್ತು. ಹಾಗಾಗಿ, ಸಿನಿಮಾ ಒಪ್ಪಿಕೊಂಡೆ. ಪಾತ್ರಕ್ಕಾಗಿ ಮೊದಲ ಬಾರಿಗೆ ಸ್ಮೋಕ್‌ ಮಾಡಿದ್ದೇನೆ. ದೃಶ್ಯಗಳು ತುಂಬ ಚೆನ್ನಾಗಿ ಬಂದಿವೆ. ಟೀಸರ್‌ನಲ್ಲಿ ಒಂದು ಝಲಕ್‌ ಬಿಟ್ಟದ್ದು, ಸಿನಿಮಾದಲ್ಲಿ ಇನ್ನು ತುಂಬಾ ಇದೆ’ ಎಂದು ಕುತೂಹಲಕ್ಕೆ ರೆಕ್ಕೆ ಮೂಡುವಂತೆ ಮಾಡಿದ್ದಾರೆ.

ಇನ್ನು ಈ ಟೀಸರ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್‌ಗ‌ಳ ಬಗ್ಗೆ ಪ್ರತಿಕ್ರಿಯಿಸಿರುವ ರಚಿತಾ, “ಪಾಸಿಟಿವ್‌ ಆದ್ರೂ, ನೆಗೆಟಿವ್‌ ಆದ್ರೂ ಸುದ್ದಿ ಸುದ್ದಿನೇ. ನ್ಯೂಸ್‌ ಆಗಬೇಕು. ಸದ್ದು ಮಾಡಬೇಕು. ನಾನು ಟ್ರೋಲ್‌ಗ‌ಳನ್ನು ನೋಡಿದ್ದೇನೆ. ಒಬ್ಬ ವ್ಯಕ್ತಿ ಬಗ್ಗೆ ಒಳ್ಳೆಯದನ್ನು ಹೇಳ್ಳೋಣ’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜಗತ್ತಿನಲ್ಲಿ ಹಲವಾರು ವರ್ಷಗಳಿಗೊಮ್ಮೆ ಬರುವ ಮಹಾಮಾರಿಗಳು ಜನಸಮುದಾಯದ ಸ್ವಾಸ್ಥ್ಯವನ್ನು ಅಲ್ಲಾಡಿಸುತ್ತವೆ. ಇಂಥ ಸಂದರ್ಭದಲ್ಲೆಲ್ಲ ಮನುಷ್ಯನ ದೇಹಬಲ, ಹಣಬಲ...

  • ಗುಡುಗಿದರೆ ಸಿಂಹ, ಕುಳಿತರೆ ಬುದ್ಧ, ಸಿಡಿದೆದ್ದರೆ ಸೇರಿಗೆ ಸವ್ವಾಸೇರು. ಇಂಎ ಪಾಟೀಲ ಪುಟ್ಟಪ್ಪ ಎಂಬ ಸಿಂಹ ಧ್ವನಿಯೊಂದು ಮೌನವಾಗಿದೆ. ಹಾವೇರಿ ನೆಲದ ಕುಡಿ ಪಾಪು...

  • ಸೂರ್ಯನ ನೆರಳು. ಹೆಸರು ವಿಚಿತ್ರವಾಗಿದೆಯಲ್ಲವೆ? ಸೂರ್ಯನಿಗೆ ನೆರಳಿದೆಯೆ? ತನ್ನೆಲ್ಲ ಕಡೆಗಳಿಂದಲೂ ಬೆಳಕನ್ನು ಹೊಮ್ಮುತ್ತಿರುವ ಸೂರ್ಯ ಯಾವುದೋ ವಸ್ತುವಿನ ಮೇಲೆ...

  • ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಎಂದರೆ ಇಡೀ ಜಗತ್ತು ಮಾಯಾನಗರಿಗೆ ಲಗ್ಗೆ ಇಟ್ಟಂತೆ! ಜಾಗತಿಕ ಚಲನಚಿತ್ರ ಕ್ಷೇತ್ರದ ಎಲ್ಲ ಆಯಾಮಗಳು, ಸಂವೇದನೆಗಳು- ಇಲ್ಲಿನ...

  • ಕಳೆದ ತಿಂಗಳು ಅಣ್ಣನ ಮಗಳು ವನಿತಾಳ ಮದುವೆಗೆಂದು ನಾನು ಕುಮಟೆಗೆ ಹೋಗಿ ಬರಬೇಕಾಯಿತು. ಮದುವೆ ಅಕಸ್ಮಾತ್‌ ನಿಶ್ಚಯವಾದ್ದರಿಂದ ಮೊದಲೇ ಟಿಕೆಟ್‌ ಬುಕ್‌ ಮಾಡುವ...

ಹೊಸ ಸೇರ್ಪಡೆ