Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

Team Udayavani, Jun 9, 2024, 11:59 AM IST

Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

ಧೋ ಎಂದು ಸುರಿವ ಮಳೆ, ಚಿಟಪಟ ಮಳೆ, ಜಿಟಿಜಿಟಿಯಾಗಿ ಸುರಿಯುತ್ತಲೇ ಇರುವ ಮಳೆ…ಮಳೆಗಾಲ ಬಂತೆಂದರೆ ಮಳೆ ನಮ್ಮ ಹೃದಯವನ್ನೂ ತಂಪಾಗಿಸಿಬಿಡುತ್ತದೆ. ಮಳೆ ಬರುವ ಮುನ್ನ ಒಂದು ಮಳೆಗಾಗಿ ಎಷ್ಟೊಂದು ಹಪಹಪಿಸಿಬಿಡುತ್ತೇವೆ. ಒಂದು ಬಾರಿ ಸುರಿದ ಮೇಲೆ ಇಳೆಯಂತೆ ನಮ್ಮ ಮನಸ್ಸೂ ಹಗುರಾಗಿ ಬಿಡುತ್ತದೆ. ಸೃಷ್ಟಿಯ ಜೀವಕಳೆ ಮಳೆಯನ್ನವಲಂಬಿಸಿದೆ. ಮಳೆಗೆ ಕೊಡೆಯೊಳಗೆ ಸೇರಿಕೊಂಡಂತೆ, ಮಳೆಯ ಜೊತೆಗೆ ಸೇರಿಕೊಂಡ ನೆನಪುಗಳೂ ಅಷ್ಟೇ ಚೇತೋಹಾರಿ. ಅವು, ಮಳೆಯ ಸರಸರ ಸದ್ದಿನೊಂದಿಗೆ ಸರಕ್ಕನೆ ನಮ್ಮ ಕಣ್ಣ ಮುಂದೆ ಬಂದುಬಿಡುತ್ತವೆ.

ಅದರಲ್ಲೂ ಬಾಲ್ಯಕ್ಕೆ ಬಣ್ಣ ತುಂಬಿದ ಮಳೆಯ ನೆನಪುಗಳು. ಗಾಳಿಗೆ ಉಲ್ಟಾ ಹೊಡೆದ ಕೊಡೆ, ತೋಡಿನ ನೀರಿನಲ್ಲಿ ಹರಿ ಬಿಡುವ ಕಾಗದದ ದೋಣಿ, ತೋಡು ದಾಟುವಾಗ ಬೊಳ್ಳದಲ್ಲಿ ಹೋದ ಚಪ್ಪಲಿ, ಮಳೆಯಲ್ಲಿ ಬೇಕಂತಲೇ ಒದ್ದೆಯಾಗಿಕೊಂಡು ಹೋಗಿ ಮೇಷ್ಟ್ರಲ್ಲಿ ಶಾಲೆಗೆ ರಜೆ ಕೇಳಿದ್ದು, ಬರುವ ದಾರಿಯಲ್ಲಿ ಗದ್ದೆಯ ಕೆಸರಿನಲ್ಲೋ, ತೋಡಿನ ನೀರಿನಲ್ಲೋ ಆಟವಾಡುತ್ತಾ ಬಾಲ್ಯದ ದಿನಗಳನ್ನು ಎಷ್ಟು ಚಂದ ವಾಗಿ ಕಳೆದಿದ್ದೆವು… ಈಗ ಬೇಕೆಂದರೂ ಅಂತಹ ದಿನಗಳು ವಾಪಸ್‌ ಬರಲಾರದು. ಈಗ ಗದ್ದೆ ತೋಡು ದಾಟಿಕೊಂಡು ಶಾಲೆಗೆ ಹೋಗಬೇಕಾದ ಪ್ರಸಂಗಗಳೇ ವಿರಳ.

ಅದು ಬೆರಗಿನ ಬದುಕು…

ಹಳ್ಳಿಗಳಲ್ಲಿ ಮಳೆಗಾಲಕ್ಕಾಗಿ ನಡೆಸುವ ತಯಾರಿಯೂ ಒಂದು ರೀತಿಯಲ್ಲಿ ಸಂಭ್ರಮ ಎನ್ನಬಹುದು. ಒಲೆಯ ಬೆಂಕಿಗೆ ಕಟ್ಟಿಗೆಯಿಂದ ಹಿಡಿದು ಹಪ್ಪಳ, ಸಂಡಿಗೆ, ಅಕ್ಕಿ, ತರಕಾರಿ(ಮೊದಲೆಲ್ಲಾ ಹಳ್ಳಿಗಳಲ್ಲಿ ತಾವು ಬೆಳೆದ ಸೌತೆ, ಕುಂಬಳಕಾಯಿಗಳನ್ನೆಲ್ಲಾ ಬಾಳೆಗಿಡದ ನಾರಿನಲ್ಲಿ ಕಟ್ಟಿ ಛಾವಣಿಗೆ ನೇತು ಹಾಕಿಡುತ್ತಿದ್ದರು) ಎಲ್ಲವನ್ನೂ ಸಂಗ್ರಹಿಸಿಡುತ್ತಾರೆ.

ಹಾಗಂತ ಮಳೆ ಬಂದರೆ ಮನೆಯ ಹೊರಗೆ ಕಾಲಿಡುವುದಿಲ್ಲ ಎಂಬ ಅರ್ಥ ಅಲ್ಲ. ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಜಡಿ ಮಳೆ ಎನ್ನದೆ ಗದ್ದೆ, ತೋಟಗಳಲ್ಲಿ ಒದ್ದೆಯಾಗುತ್ತಲೇ ದುಡಿಯುವ ರೈತರ ಬೆರಗು ತುಂಬಿದ ಬದುಕು, ಹಸಿರಿನ ನಡುವೆ ತುಂಬಿ ಹರಿಯುವ ಜಲರಾಶಿ, ಇಳೆಯ ಕಳೆ, ಬೆಳೆಯ ಸೊಗಸು ಯಾರನ್ನಾದರೂ ಆಕರ್ಷಿಸದೆ ಇರದು.

ಆಹಾ ಹಳ್ಳಿಯ ಬದುಕೇ…

ಯಾಕೆಂದರೆ ಇವೆಲ್ಲವುಗಳಲ್ಲಿ ತೋರಿಕೆಗಳಿಲ್ಲ. ಜನರ ಸಹಜ ಬದುಕಿನ ನಡುವೆ ಪ್ರಕೃತಿಯ ಸಹ ಜತೆಯೂ ಸೇರಿಕೊಂಡು ಆಹಾ ಹಳ್ಳಿಯ ಬದುಕೇ ತಂಪು ಅಂತನ್ನಿಸಿಬಿಡುತ್ತದೆ. ಮಳೆಗೆ ಇಳೆ ತಂಪಾಗಿಬಿಡುವ ಸೊಗಸು, ಒಲೆಯ ಮುಂದೆ ಕುಳಿತು ಒದ್ದೆಯಾದ ಮೈ ಮನಸ್ಸನ್ನು ಬೆಚ್ಚಗಾಗಿಸಿಕೊಳ್ಳುವ ಸುಖ, ಹಬೆಯಾಡುವ ಹಂಡೆ ನೀರಿನ ಸ್ನಾನ, ಪಾಚಿಗಟ್ಟಿದ ಅಂಗಳ, ಹೆಂಚಿನಿಂದ ಝರಿಯಾಗಿ ಇಳಿ ಬೀಳುವ ನೀರು…ಈ ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಕಾಣಸಿಗುವ ನೋಟಗಳೇ ಸೊಗಸು. ಇದೇ ನೋಟವನ್ನು ನಮ್ಮ ನಗರಗಳಲ್ಲಿ ಕಾಣಸಿಗುವುದು ಅಸಾಧ್ಯ. ಒಂದು ಜೋರು ಮಳೆ ಬಂದರೆ ನಗರವೇ ಮುಳುಗುವಷ್ಟು ನೀರು ಹರಿದುಬರುತ್ತದೆ. ಇಲ್ಲಿ ಚರಂಡಿ ನೀರು ಹರಿಯುವುದನ್ನು ನೋಡಿ ಖುಷಿಪಡಬೇಕೇ ಹೊರತು ಮಳೆಯ ನಿಜ ಸುಖವನ್ನು ಅನುಭವಿಸಲಾಗದು.

ಮಳೆಗಾಲ ಎಂಬ ಬೆರಗು

ಆಕಾಶದಿಂದ ಧುಮ್ಮಿಕ್ಕುವ ನೀರು ಬರಿಯ ನೀರಾಗಿರದೆ ಕೆಲವೊಮ್ಮೆ ಯಾವುದೋ ಕಾಲದ ಆಪ್ತ ಸ್ನೇಹಿತ ಅಚಾನಕ್‌ ಕಣ್ಣ ಮುಂದೆ ಬಂದುನಿಂತಾಗ ಸಿಗುವಾಗಿನ ಭಾವವನ್ನು ನೀಡಿ ನಮ್ಮನ್ನು ಆವರಿಸುತ್ತದೆ. ನಮ್ಮೊಳಗೊಂದು ಅಳತೆಗೆ ಸಿಗದ ಪುಳಕವನ್ನೆಬ್ಬಿಸಲು ಮಳೆಗೆ ಸಾಧ್ಯ. ಎಳೆಎಳೆಯಾಗಿ ಇಳಿಬೀಳುವ ನೀರು, ಕೊಚ್ಚೆಗಳನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತದೆ. ಎಲ್ಲಿಯೋ ಬರಡಾದ ನೆಲದಲ್ಲಿ ಮತ್ತೆ ಚಿಗುರೊಡೆಯಬಲ್ಲ ಭರವಸೆಗೆ ಒರತೆಯಾಗುತ್ತದೆ. ನದಿಯಾಗಿ, ಝರಿಯಾಗಿ ಆಪ್ತವಾಗಿ ಬಿಡುತ್ತದೆ. ಈ ಮಳೆಗಾಲವೂ ಅಂತಹದೊಂದು ಬೆಚ್ಚನೆಯ ಭಾವಗಳ ಗೂಡಾಗಲಿ.

-ಅನುರಾಧಾ ತೆಳ್ಳಾರ್‌

ಟಾಪ್ ನ್ಯೂಸ್

ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Hubli; ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

Jagannath Ratna Bhandara Treasury of Puri opened after 46 years

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Aparna Vastarey: ಅಪರ್ಣಾ… ಮಾತು ನಿಲ್ಲಿಸಿದ ಕನ್ನಡದ ಹಕ್ಕಿ

Aparna Vastarey: ಅಪರ್ಣಾ… ಮಾತು ನಿಲ್ಲಿಸಿದ ಕನ್ನಡದ ಹಕ್ಕಿ

Mythical stories: ಕಲ್ಕಿ ಅವತಾರದಲ್ಲಿ ಪೌರಾಣಿಕ ಕಥೆಗಳು

Mythical stories: ಕಲ್ಕಿ ಅವತಾರದಲ್ಲಿ ಪೌರಾಣಿಕ ಕಥೆಗಳು

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಸಹನೆ ವಜ್ರದ ಕವಚ: ಅನುಮಾನ, ಅಪಮಾನ, ಸನ್ಮಾನ!

ಸಹನೆ ವಜ್ರದ ಕವಚ: ಅನುಮಾನ, ಅಪಮಾನ, ಸನ್ಮಾನ!

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

Hemavati Reservoir: ಹೇಮಾವತಿ ಅಚ್ಚುಕಟ್ಟಿಗೆ ಈ ವರ್ಷವೂ ನೀರಿಲ್ಲ?

Hemavati Reservoir: ಹೇಮಾವತಿ ಅಚ್ಚುಕಟ್ಟಿಗೆ ಈ ವರ್ಷವೂ ನೀರಿಲ್ಲ?

ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Hubli; ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10-cow

ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.