ಸಂಯುಕ್ತಾ ಕಿರಿಕ್‌

Team Udayavani, Oct 6, 2019, 5:34 AM IST

ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ, ಆ ಚಿತ್ರದ ನಂತರ ತನ್ನ ಪಾತ್ರಗಳು, ಅಭಿನಯಕ್ಕಿಂತ ಹೆಚ್ಚಾಗಿ ಅನಗತ್ಯ ವಾದ-ವಿವಾದಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಬಹುಶಃ ಇದರಿಂದಾಗಿಯೇ ಇರಬೇಕು, ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಮಿಂಚಿದ್ದ ನಟಿಗೆ ಚಿತ್ರರಂಗದ ಮಂದಿ “ಕಿರಿಕ್‌ ಹುಡುಗಿ’ ಅಂತಾನೇ ಕರೆಯೋದಕ್ಕೆ ಶುರು ಮಾಡಿದ್ದಾರೆ. ಈಗ ಸಂಯುಕ್ತಾ ಹೆಗ್ಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಕೂಡ ಎಂದಿನಂತೆ ಬೇರೆಯದೇ ವಿಷಯಕ್ಕೆ.

ಹೌದು, ಇತ್ತೀಚೆಗಷ್ಟೇ ಸಂಯುಕ್ತಾ ಹೆಗ್ಡೆ ತಮಿಳಿನಲ್ಲಿ ಅಭಿನಯಿಸಿರುವ ಪಪ್ಪಿ ಚಿತ್ರದ ಫ‌ಸ್ಟ್‌ ಟ್ರೇಲರ್‌ ಬಿಡುಗಡೆಯಾಗಿದೆ. ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಟ್ರೇಲರ್‌ನಲ್ಲಿ, ಸಂಯುಕ್ತಾ ಸಖತ್‌ ಬೋಲ್ಡ್‌ ಆ್ಯಂಡ್‌ ಬ್ಯೂಟಿಫ‌ುಲ್‌ ಆಗಿ ಕಾಣಿಸಿಕೊಂಡಿ¨ªಾರೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಟ್ರೇಲರ್‌ನಲ್ಲಿ ಬರುವ ದೃಶ್ಯವೊಂದರಲ್ಲಿ ಸಂಯುಕ್ತಾ ಹೆಗ್ಡೆ, ಚಿತ್ರದ ನಾಯಕ ವರುಣ್‌ ಜೊತೆ ಲಿಪ್‌ ಲಾಕ್‌ ಕೂಡ ಮಾಡಿದ್ದಾರೆ.

ಪಪ್ಪಿ ಚಿತ್ರದ ಫ‌ಸ್ಟ್‌ ಟ್ರೇಲರ್‌ಬಿಡುಗಡೆಯಾಗುತ್ತಿದ್ದಂತೆ, ಸಂಯುಕ್ತಾ ಹೆಗ್ಡೆ ಮತ್ತು ವರುಣ್‌ ಲಿಪ್‌ ಲಾಕ್‌ ದೃಶ್ಯಗಳು, ಸುದ್ದಿಗಳೇ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಅದರಲ್ಲೂ ಕನ್ನಡದ ಸಿನಿಪ್ರಿಯರು ಸಂಯುಕ್ತಾ ಹೆಗ್ಡೆ

ವಿರುದ್ದ ಹರಿಹಾಯುತ್ತಿದ್ದಾರೆ. ಈ ಹಿಂದೆ ಸಂಯುಕ್ತಾ ಕನ್ನಡದಲ್ಲಿ ಮೈ ನೇಮ್‌ ಈಸ್‌ ರಾಜ್‌ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಆದರೆ ಚಿತ್ರದಲ್ಲಿ ಚುಂಬನದ ದೃಶ್ಯಗಳು ಇವೆ ಎಂಬ ಕಾರಣದಿಂದ ಆ ಚಿತ್ರವನ್ನು ರಿಜೆಕ್ಟ್ ಮಾಡಿದ್ದರು.

ಅಲ್ಲದೆ ಕನ್ನಡದ ಇನ್ನೂ ಸುಮಾರು ಮೂರು-ನಾಲ್ಕು ಚಿತ್ರಗಳಲ್ಲಿ ರೊಮ್ಯಾಂಟಿಕ್‌ ದೃಶ್ಯಗಳಿವೆ ಎಂಬ ಕಾರಣಕ್ಕಾಗಿ ಅಭಿನಯಿಸಲು ನಿರಾಕರಿಸಿದ್ದರು. ಈ ವಿಷಯ ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ಸುದ್ದಿಯಾಗಿತ್ತು. ಕನ್ನಡ ಚಿತ್ರರಂಗದಲ್ಲೂ ಅನೇಕರು ಸಂಯುಕ್ತಾ ನಿಲುವಿಗೆ ಬೆಂಬಲ ನೀಡಿದ್ದರು. ಆದರೆ ಇದೆಲ್ಲ ನಡೆದು ಕೇವಲ ವರ್ಷದೊಳಗೆ, ಸಂಯುಕ್ತಾ ತಮಿಳು ಚಿತ್ರದಲ್ಲಿ ಇಂಥದ್ದೇ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಅನೇಕರ ಕಣ್ಣು ಕೆಂಪಾಗುವಂತೆ ಮಾಡಿದೆ.

ಇದೆಲ್ಲದರ ನಡುವೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲೂ ಹಾಟ್‌ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಿರುವ ಸಂಯುಕ್ತಾ ಹೆಗ್ಡೆ, ಬೇರೆ ಚಿತ್ರರಂಗದಲ್ಲಿ ಮೈ ಚಳಿ ಬಿಟ್ಟು ಅಭಿನಯಿಸುತ್ತಾರೆ. ಆದರೆ, ಕನ್ನಡ ಚಿತ್ರಗಳ ಬಗ್ಗೆ ಕನ್ನಡ ಚಿತ್ರಗಳ ಬಗ್ಗೆ ಇಲ್ಲ-ಸಲ್ಲದ ಕ್ಯಾತೆ, ತಂಟೆ-ತಕರಾರು ಮಾಡುತ್ತಾರೆ. ತನ್ನನ್ನು ನಟಿಯಾಗಿ ಪರಿಚಯಿಸಿದ ಕನ್ನಡ ಚಿತ್ರರಂಗದ ಬಗ್ಗೆಯೇಸಂಯುಕ್ತಾ ಹೆಗ್ಡೆಗೆ ತಾತ್ಸಾರದ ಮನೋಭಾವವಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಸಂಯುಕ್ತಾ ಮಾತ್ರವಾಗಿ ಆರಾಮಾಗಿ ತಾನಾಯಿತು, ತನ್ನ ಕಿರಿಕ್‌ ಕೆಲಸಗಳಾಯಿತು ಎನ್ನುವಂತೆ ಇದ್ದಾರೆ. ಅಂದ ಹಾಗೆ, ಸದ್ಯ ಪಪ್ಪಿ ಚಿತ್ರದ ಫ‌ಸ್ಟ್‌ ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದ್ದು, ಚಿತ್ರ ಮುಂದಿನ ತಿಂಗಳು ತಮಿಳಿನಲ್ಲಿ ತೆರೆಗೆಬರುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ