ಒಳನಾಡಿನಲ್ಲಿ ಸಂಯುಕ್ತಾ


Team Udayavani, May 6, 2018, 6:00 AM IST

2.jpg

ಸಂಯುಕ್ತಾ ಹೊರನಾಡು ಇತ್ತೀಚಿನ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ ಎಂದರೆ ತಪ್ಪಿಲ್ಲ. ಪ್ರಮುಖವಾಗಿ ಅವರು ಕಳೆದ ಕೆಲವು ತಿಂಗಳಲ್ಲಿ ಒಂದರ ಹಿಂದೊಂದು ಚಿತ್ರಗಳಲ್ಲಿ ಸತತವಾಗಿ ನಟಿಸುತ್ತಲೇ ಇದೆ. ಅದೆಲ್ಲದರ ಪರಿಣಾಮ, ಸಂಯುಕ್ತಾ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ. ಆ ಪೈಕಿ ಕನ್ನಡದ ಅರಿಷಡ್ವರ್ಗ, ಎಂಎಂಸಿಎಚ್‌ ಮತ್ತು ತೆಲುಗಿನ ರಾಣಾ ಸಿನಿಮಾಸ್‌ನಲ್ಲಿ ತಯಾರಾಗಿರುವ ಚಿತ್ರದ ಜೊತೆಗೆ ತಮಿಳಿನ ಚಿತ್ರವೊಂದು ಇದೇ ವರ್ಷ ಬಿಡುಗಡೆಯಾ ಗಲಿದೆ.

ಇದಲ್ಲದೆ ಸಂಯುಕ್ತಾ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್‌ ಶೇಡ್‌ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕೆ ಕಳೆದ ತಿಂಗಳಷ್ಟೇ ಮುಹೂರ್ತವಾಗಿದೆ. ಇದಲ್ಲದೆ, ನಮ್ಮ ಯುಎಫ್ಓ ಎಂಬ ಹೊಸ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಯುಕ್ತಾ, ಮೊದಲ ಬಾರಿಗೆ ಪೊಲೀಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿಗೆ ಎರಡು ಚಿತ್ರಗಳಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಜವಾಬ್ದಾರಿ ಸಂಯುಕ್ತಾ ಹೆಗಲ ಮೇಲೆ ಬಿದ್ದಿದೆ ಮತ್ತು ಇದಕ್ಕಾಗಿ ಸಂಯುಕ್ತಾ ತಮ್ಮದೇ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಸಂಯುಕ್ತಾ ಇತ್ತೀಚೆಗೆ ಸುದ್ದಿಯಾಗಿದ್ದು, ತಮ್ಮ ಹೊಸ ಫೋಟೋ ಶೂಟ್‌ನಿಂದಾಗಿ. ಸಾಮಾನ್ಯವಾಗಿ ಸಿನೆಮಾ ನಟಿಯರು ತಾವು ನಟಿಸುವ ಚಿತ್ರಗಳಿಗೆ ಫೋಟೋಶೂಟ್‌ ಮಾಡಿಸುವುದು ವಾಡಿಕೆ ಅಥವಾ ತೂಕ ಹೆಚ್ಚಿಸಿಕೊಂಡಾಗ, ಇಲ್ಲ ಇಳಿಸಿಕೊಂಡಾಗ ಫೋಟೋಶೂಟ್‌ ಮಾಡಿಸಿ ತಮ್ಮ ಸೌಂದರ್ಯವನ್ನು ತೋರಿಸುವುದು ವಾಡಿಕೆ. ಆದರೆ, ನಟಿ ಸಂಯುಕ್ತಾ ಹೊರನಾಡು ಕೊಂಚ ಭಿನ್ನ ಎನ್ನಬಹುದು. ಸಂಯುಕ್ತಾ ಫೋಟೋ ಶೂಟ್‌ ಮಾಡಿಸಿರುವುದು ಯಾವುದೇ ಸಿನಿಮಾಗಲ್ಲ. ಅದು ಪರಿಸರ ಜಾಗೃತಿಗಾಗಿ ಎಂದರೆ ಆಶ್ಚರ್ಯವಾಗಬಹುದು. ಸಂಯುಕ್ತಾ ಪ್ರತಿ ವರ್ಷ ಕೂಡ “ವಿಶ್ವ ಭೂಮಿ’ ತಿಂಗಳನ್ನು ತಮ್ಮದೇ ಶೈಲಿಯಲ್ಲಿ ಆಚರಿಸುತ್ತ ಬಂದಿದ್ದಾರೆ. ಹಾಗೆಯೇ ಈ ವರ್ಷವೂ ಜಾಗೃತಿ ಮೂಡಿಸುವ ಸಲುವಾಗಿ ಫೋಟೋ ಶೂಟ್‌ ಮಾಡಿಸಿ, ವಿಶೇಷ ಬಗೆಯಲ್ಲಿ ಆಚರಿಸಿದ್ದಾರೆ. ಈ ಪರಿಕಲ್ಪನೆಯಂತೆ ಅಂದವಾದ ಫೋಟೋಗಳನ್ನು ತೆಗೆದಿದ್ದು ಛಾಯಾಗ್ರಾಹಕ ಬಿಂದ್ಯಾ ಕಣ್ಣಪ್ಪ. ಆ ಪರಿಕಲ್ಪನೆಗೆ ತಕ್ಕಂತೆ ವಸ್ತ್ರವಿನ್ಯಾಸ ಮಾಡಿದ್ದು ಸುಚೇತಾ. ಈ ಫೋಟೋ ಶೂಟ್‌ನಲ್ಲಿ ಹೆಣ್ಣನ್ನು ಭೂಮಿಗೆ ಹೋಲಿಕೆ ಮಾಡಲಾಗಿದೆ. ಈ ಫೋಟೋ ಶೂಟ್‌ಗಾಗಿ ಅವರು ವಿಭಿನ್ನ ಬಣ್ಣದ ಕಾಸ್ಟೂéಮ್‌ಗಳನ್ನು ತೊಟ್ಟಿದ್ದು, ಒಂದೊಂದು ಬಣ್ಣವೂ ಒಂದೊಂದು ವಿಷಯವನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ, ಕೆಂಪು ಬಣ್ಣದ ಬಟ್ಟೆಯು, ಹೆಣ್ಣು ಬೆಂಕಿ ಇದ್ದಂತೆ ಎಂದು ಹೇಳುತ್ತದೆ. ತಿಳಿನೀಲಿ ಬಣ್ಣದ ಬಟ್ಟೆ ಧರಿಸಿ ತೆಗೆಸಿಕೊಂಡ ಫೋಟೋ, ನೀರಿನ ಪ್ರಾಮುಖ್ಯತೆ ಬಿಂಬಿಸುತ್ತದೆ. ಹೆಣ್ಣುಮಕ್ಕಳನ್ನು ಭೂಮಿಗೆ ಹೋಲಿಕೆ ಮಾಡಿ, ಅದೇ ರೀತಿಯ ಪರಿಕಲ್ಪನೆಯಲ್ಲಿ ಸುತ್ತಲೂ ಹಸಿರು ಇರುವ ವಾತಾವರಣದಲ್ಲೊಂದು ಫೋಟೋ ತೆಗೆಸಿದ್ದಾರೆ. ಒಟ್ಟಾರೆ ಬೆಂಕಿ, ನೀರು, ಭೂಮಿ ಹಾಗೂ ಗಾಳಿಯನ್ನು ಪ್ರಮುಖವಾಗಿಟ್ಟುಕ್ಕೊಂಡು, ಅದಕ್ಕೆ ಹೊಂದುವ ಬಣ್ಣದ ಬಟ್ಟೆ ತೊಟ್ಟು ಫೋಟೋ ಶೂಟ್‌ ಮಾಡಿಸಿದ್ದಾರೆ.

ಟಾಪ್ ನ್ಯೂಸ್

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

2shasti

ನಾಗ‌ ಶ್ರೇಷ್ಠ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಇಂದು ಚಂಪಾ ಷಷ್ಠೀ

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಸಕಲೇಶಪುರದಲ್ಲೂ ನಡೆದಿತ್ತು ಹೆಲಿಕಾಪ್ಟರ್‌ ದುರಂತ

29 ವರ್ಷಗಳ ಹಿಂದೆ ಸಕಲೇಶಪುರದಲ್ಲೂ ಸೇನಾ ಹೆಲಿಕಾಪ್ಟರ್ ಪತನ

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

5aids

ಏಡ್ಸ್ ಮುಕ್ತ ವಿಶ್ವಕ್ಕೆ ಮುನ್ನೆಚ್ಚರಿಕೆ ಅವಶ್ಯ

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು

4toilet

ಶೌಚಾಲಯ ಕಟ್ಟಲು ಇಒ ತಾಕೀತು

3life

ದೈನಂದಿನ ಕಾರ್ಯದಲ್ಲಿ ಬದಲಾವಣೆ ಮಾಡಿ

2shasti

ನಾಗ‌ ಶ್ರೇಷ್ಠ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಇಂದು ಚಂಪಾ ಷಷ್ಠೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.