ಅರಿವು-ಮರೆವುಗಳ ಅಚ್ಚರಿ

ಹಳೆಯದನ್ನು ಮರೆಯದೆ ಹೊಸದನ್ನು ಅರಿಯುವುದು ಅಸಾಧ್ಯ !

Team Udayavani, Sep 1, 2019, 5:29 AM IST

la

ಉಪನಿಷತ್ತುಗಳೆಂದು ಕರೆಯಲ್ಪಡುವ ಸಾಹಿತ್ಯದಲ್ಲಿ ನಾಟಕೀಯ ತಿರುವುಗಳು ಅಷ್ಟಾಗಿ ಕಾಣಿಸಿಕೊಳ್ಳಲಾರವು ಎಂದು ನಾ ತಿಳಿದಿದ್ದೆ. ಏಕೆಂದರೆ, ಅದು ಇಬ್ಬರ ನಡುವೆ ಮನಬಿಚ್ಚಿ ನಡೆಯುವ ಬದುಕಿನ ಆಳದ ನಿಜಗಳನ್ನು ಕುರಿತ ಸಂವಾದಗಳಾಗಿವೆ. ಕಡಲಿನಲ್ಲಿ ಹೆದ್ದೆರೆಗಳ ಕುಣಿತಮಣಿತಗಳೆಲ್ಲ ದಡದ ಸಮೀಪದಲ್ಲಿ ನಡೆಯುವುದಲ್ಲದೆ ಅಲೆಗಳ ವಲಯವನ್ನು ದಾಟಿಹೋದರೆ ಅಲ್ಲಿನ ನಿಸ್ತರಂಗ ಕಡಲು ಒಂದೇ ಹಾಳೆಯಂತೆ ವಿರಮಿಸಿಕೊಂಡಿರುವ ಜಲಫ‌ಲಕವಲ್ಲವೆ? ಉಪನಿಷತ್ತು ಹಾಗಿದೆ. ಆದರೂ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಅಲೆಗಳ ದಣಿಯದ ಆಟವನ್ನು ಅದು ನೋಡುತ್ತಲೂ ಇದೆ. ಇತಿಹಾಸ, ಪುರಾಣ, ಧರ್ಮಶಾಸ್ತ್ರ , ಅರ್ಥಶಾಸ್ತ್ರಾದಿ ಹದಿನಾಲ್ಕು ವಿದ್ಯಾ ಸ್ಥಾನಗಳೆಂಬ ಚಿಂತನೆಯ ನೆಲೆಗಳು ಉಪನಿಷತ್ತಿನಲ್ಲಿಯೇ ಉಲ್ಲೇಖಗೊಂಡಿವೆ.

ಇಂತಿರಲು ಈ ವಿದ್ಯಾಸ್ಥಾನಗಳಲ್ಲೆಲ್ಲ ಕಂಡುಬರುವ, ಬದುಕು ಪಡೆಯಬಹುದಾದ ನಾನಾ ತಿರುವುಗಳೂ ಉಪನಿಷತ್ತಿಗೆ ಗುರುತಾಗಿವೆ. ಇದರ ಅಗತ್ಯವನ್ನೂ ಉಪನಿಷತ್ತು ಮನಗಂಡಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಗಹನವಾದ ಸತ್ಯವು ತನ್ನ ಗಹನತೆಯನ್ನು ತಾನೇ ತಿಳಿಯಲೆಂಬಂತೆ ಸ್ವ-ಶೋಧಕವೂ ಆಗಿರುವುದರಿಂದ ಬದುಕಿನಲ್ಲಿ ಎದುರಾಗುವ ತಿರುವುಗಳು ತನ್ನ ಶೋಧನೆಗೆ ಅನುಕೂಲವಾಗಿ ಒದಗಿಬಂತೆಂಬಂತೆ ಸತ್ಯವು ಗ್ರಹಿಸುತ್ತದೆ. ಸತ್ಯವು ಗೂಟ ಹೊಡೆದಂತೆ ಎಲ್ಲೋ ಸ್ಥಾಪಿತವಾಗಿಲ್ಲ. ಸತ್ಯವು ಶೋಧನೆಗೆ ಇಡಿಯಾಗಿ ತನ್ನನ್ನು ಒಡ್ಡಿಕೊಂಡೇ ಬಯಲಲ್ಲಿ ಬಯಲೆಂಬಂತೆ ಇರುವುದೆಂದು ಭಾಸವಾಗುತ್ತದೆ! ಶ್ರೀ ಅರವಿಂದರು, ತಮ್ಮ ಮಹಾಕಾವ್ಯ ಸಾವಿತ್ರಿಯನ್ನು ಬರೆದಾಗ, ಮೇಲಿನಿಂದ ಬಂದ ಪ್ರಚೋದನೆಯಿಂದ ಇದನ್ನು ಬರೆಯಲಾಯಿತಷ್ಟೆ- ಎಂದರು. ಹಾಗಿದ್ದರೂ ತಮ್ಮ ಕಾವ್ಯವನ್ನು ಮತ್ತೆ ಮತ್ತೆ ತಿದ್ದುತ್ತಲೂ ಇದ್ದರು. ಇದು ವಿರೋಧಾಭಾಸವಲ್ಲವೆ ಎಂದು ಕೆಲವರು ಪ್ರಶ್ನಿಸಿದಾಗ, ತಿದ್ದುವುದು ಸಾಧ್ಯವಿದ್ದಾಗ ತಿದ್ದಬೇಕೆನ್ನುವುದೂ ಅದರದೇ ಪ್ರಚೋದನೆ ಎಂದರು ! ಅರವಿಂದರು, Perfection ಎನ್ನದೆ Perfect- Perfection-   ಎಂದರಂತೆ. ಅಂದರೆ ಭೂಮಿಯಾಳದ ಖನಿಜಗಳಂತೆ; ಅಮೂಲ್ಯವಾದುದೆಲ್ಲವೂ- ನಿಮಗೆ ಹೇಗೆ ಅಗತ್ಯವೋ ಹಾಗೆ ನಮ್ಮನ್ನು ಅಮೂಲ್ಯವಾಗಿಸಿಕೊಳ್ಳಿ ಎಂಬ ಸಂದೇಶದೊಂದಿಗೇ ಮನುಷ್ಯರಿಗೆ ಒದಗಿಬರುತ್ತವೇನೋ.

ಈ ಮಾತೇಕೆಂದರೆ, ಕಠೊಪನಿಷತ್ತಿನಲ್ಲಿ ವಿಲಕ್ಷಣವಾದ ನಾಟಕೀಯ ತಿರುವೊಂದನ್ನು ನಾವು ಎದುರುಗೊಳ್ಳುವೆವು. ನಚಿಕೇತನು ಯಮನನ್ನು ಸಂಧಿಸಿ, ಅವನಿಂದ ಮೂರು ವರಗಳನ್ನು ತನ್ನ ನಿಷ್ಠೆಗೆ ಕೊಡುಗೆ ಎಂಬಂತೆ ಪಡೆದು, ಬಹು ಅರ್ಥಪೂರ್ಣವಾಗಿ ಎರಡು ವರಗಳನ್ನು ವಿನಿಯೋಗಿಸಿಕೊಂಡು, ಯಮನಿಂದ ಪಡೆದ ಅಗ್ನಿವಿದ್ಯೆಯು ನಚಿಕೇತನ ಹೆಸರಿನಲ್ಲಿಯೇ ಕೀರ್ತಿವಂತವಾಗಲಿ ಎಂಬ ಹರಕೆಯನ್ನೂ ಪಡೆದು, ಇಹ-ಪರಗಳೆರಡೂ ಸಿದ್ಧಿಸಿ, ಇನ್ನೇನು ಎಲ್ಲವೂ ಸುಖಾಂತ್ಯಗೊಳ್ಳಲಿದೆ ಎಂಬ ಹೊತ್ತಿನಲ್ಲಿ , ನಚಿಕೇತನು ಕೇಳಿದ ಮೂರನೆಯ ವರವಾದರೋ- ಇದುವರೆಗೆ ನಡೆದುದೆಲ್ಲವೂ ಒಂದು ಕನಸೇನೋ- ನನಸೇ ಅಲ್ಲವೇನೋ ಎಂದು ಭಾವಿಸುವಂತೆ ಇತ್ತು! ನಚಿಕೇತನು ಉತ್ತರವನ್ನು ಬಯಸಿದ ಆ ಮೂರನೆಯ ಪ್ರಶ್ನೆ ಅಥವಾ ಜಿಜ್ಞಾಸೆ ಹೀಗಿತ್ತು :
ಯೇಯಂ ಪ್ರೇತೇ ವಿಚಿಕಿತ್ಸಾಮನುಷ್ಯೆà ಅಸ್ತೀತ್ಯೇಕೇ ನಾಯಮಸ್ತೀತಿ ಚೈಕೇ
ಏತದ್‌ವಿದ್ಯಾಂ ಅನುಶಿಷ್ಟಃ ತ್ವಯಾಹಂ ವರಾಣಾಂ ವಷವರಃ ತೃತೀಯಃ
ಮನುಜರೀ ಇಹದಿಂದ ತೆರಳಿದ ಮೇಲೆ
ದೊಡ್ಡ ಸಂದೆಯವೊಂದು ಕಾಡುವುದು
ಇಹರೊ ಇಲ್ಲವೋ ಎಂಬ ಬಗೆಯಿಂದ.
ಇಬ್ಬಣಗಳಿವೆ ವಾದಿಸುತಲೀಪರಿಯಲ್ಲಿ
ನಿಜವೇನು? ನೀ ಬಲ್ಲೆ. ಅರುಹು. ನೀ ತಿದ್ದು
ಈ ನಿಜವೆ ಬೇಕೆನಗೆ. ಇದೆ ಮೂರನೆಯ ಮಾತು
ನಚಿಕೇತನ ಈ ಜಿಜ್ಞಾಸೆ ಮರ್ಮವನ್ನೇ ಮುಟ್ಟುವಂತಿದೆ. ಮನುಷ್ಯರನ್ನು ಕಾಡುವ ಮೂಲಭೂತ ಪ್ರಶ್ನೆಗಳಿವು. ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದೇ ತಣ್ತೀಜ್ಞಾನದ ಸಾರ್ಥಕತೆಯಾಗಿದೆ. ಆದರೆ, ಯಮಲೋಕಕ್ಕೆ ತೆರಳಿ, ಯಮನನ್ನು ಸಂಧಿಸಿ, ಇಹ-ಪರಗಳೆರಡನ್ನೂ ಬೆಸೆಯುವ ಅಗ್ನಿ ರಹಸ್ಯವನ್ನು ತಿಳಿದನೆಂಬ ಕಥನದ ತುದಿಯಲ್ಲಿ- ದೇಹಕ್ಕಿಂತ ಬೇರೆಯಾಗಿ “ಜೀವ’ ಎಂಬುದು ಇದೆಯೇ ಇಲ್ಲವೇ ಎಂಬ ಜಿಜ್ಞಾಸೆಯು ಅಪ್ರಸ್ತುತವಲ್ಲವೇ ಎಂಬ ಪ್ರಶ್ನೆ ಎದುರಾಗುವುದು. ಹಾಗಾದರೆ, ಇದುವರೆಗೆ ಯಮ-ನಚಿಕೇತರ ನಡುವೆ ನಡೆದುದೇನು? ಅದು ಯಾವ ಸ್ತರದಲ್ಲಿ ನಡೆಯಿತು ಎಂಬ ಪ್ರಶ್ನೆ ಮೊನಚಿನದಾಗಿದೆ. ಈ ಸೂಕ್ಷ್ಮವನ್ನು ಗ್ರಹಿಸಿಯೇ ಶ್ರೀಮಧ್ವಾಚಾರ್ಯರು, ನಚಿಕೇತನ ಜಿಜ್ಞಾಸೆಯು ದೇಹಾತಿರಿಕ್ತ ಆತ್ಮನ ಅಸ್ತಿತ್ವವನ್ನು ಕುರಿತದ್ದಲ್ಲ ; ಅದು ಜೀವರು ಮುಕ್ತರಾದ ಮೇಲೆಯೂ ಅವರ ಮುಕ್ತಿಗೆ ಕಾರಣವಾದ ಭಗವತ್‌ ತಣ್ತೀದ ಜೊತೆ ಇರುವ ನಿಯಮ್ಯ-ನಿಯಾಮಕಭಾವವನ್ನು ಕುರಿತದ್ದಾಗಿದೆ ಎನ್ನುವರು. ಉಪನಿಷತ್ತು ನೀಡುವ ಮುಂದಿನ ಉತ್ತರ ರೂಪದ ವಿವರಣೆಗಳಲ್ಲಿ ಈ ಮಾತಿಗೆ ಸಂವಾದವೂ ಇದೆಯಾಗಿ ಇದು ಯುಕ್ತಿಯುಕ್ತವಾಗಿಯೂ ಕೇಳಿಸುತ್ತದೆ. ಆದರೆ ನಚಿಕೇತನ ಜಿಜ್ಞಾಸೆಯಲ್ಲಿ ಮನುಷ್ಯ ಸಮಾಜವನ್ನು ಕಾಡುವ ಮೂಲಭೂತ ಸಂದೇಹವನ್ನು ಕುರಿತ ಮಾತಿದೆ. “ವಿಚಿಕಿತ್ಸಾ’ ಎಂದರೆ ಸಂದೇಹ. ಅಸ್ಪಷ್ಟತೆ. ಖಚಿತವಾಗಿ ಹೇಳಲಾಗದ ಸ್ಥಿತಿ. ಅದು ದೇಹಾತಿರಿಕ್ತವಾಗಿ ಆತ್ಮವೆಂಬುದಿದು ಇದೆಯೇ ಇಲ್ಲವೇ ಎಂಬ ಪ್ರಶ್ನೆಯ ಸುತ್ತಲೇ ಸುಳಿಯುವ ಸಂದೇಹವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಅದೇಕೋ ಅನಿಸುತ್ತದೆ. ಅಲ್ಲದೆ ಇದೆ ಎನ್ನುವ- ಇಲ್ಲ ಎನ್ನುವ ಇಬ್ಬಣಗಳ ಉಲ್ಲೇಖವೂ ಈ ಮೂಲಪ್ರಶ್ನೆಯ ಕುರಿತೇ ಆಗಿರುವ ಸಂಭವವಿದೆ ಎಂಬ ಭಾವವು ಉಂಟಾಗುವುದು. ಇದನ್ನೊಪ್ಪಿದರೆ ನಚಿಕೇತನ ಮಾತು- ಈ ವಿಷಯದಲ್ಲಿ ಪರ-ವಿರೋಧಗಳ ವಾದವನ್ನು ಮೀರಿ ತನ್ನನ್ನು ಅನುಭವದ ದಿಕ್ಕಿನತ್ತ ನೇರ ಒಯ್ಯಬೇಕೆನ್ನುವ, ಅನುಭವದಲ್ಲಿಯೇ ಸತ್ಯವನ್ನು ಕಂಡುಕೊಳ್ಳಬೇಕಲ್ಲದೆ ಅದು ವಾದಗೋಚರವಲ್ಲವೆನ್ನುವ ತೀರ ಕಳಕಳಿಯ ಮಾತಾಗಿ ಕೇಳಿಸುತ್ತದೆ.

ಇದು ತಿರುವು ! ಇದುವರೆಗಿನ ಅನುಭವವನ್ನು , ಇದು ಮುಖ್ಯವಲ್ಲವೆಂದು, ಇನ್ನು ಮುಂದಿನದಕ್ಕೆ ಸಜ್ಜಾಗುವುದಕ್ಕಾಗಿ ತೆರವು ಮಾಡಬಲ್ಲ ಮನೋಸ್ಥಿತಿ ! “ಶ್ರದ್ಧೆ’ ಒಳಹೊಕ್ಕವನು ಆ ಶ್ರದ್ಧೆಯು ಎಲ್ಲಿಯ ತನಕ ತನ್ನನ್ನು ಒಯ್ಯುತ್ತದೋ ಅಲ್ಲಿಯತನಕ ಸಾಗಲೇಬೇಕು. ಅನುಭವಗಳನ್ನು ಪಡೆಯುತ್ತಲೇ ಪಯಣವು ನಿಲ್ಲದೆ ಮುಂದರಿಯಬೇಕು. ನಿಲ್ಲದೆ ನಡೆಯುವಾಗ ಅನುಭವದ ಶೋಧನೆಯೂ ಆಗುತ್ತಿರುತ್ತದೆ! ಈ ಶೋಧನೆಯಲ್ಲಿ ವಿಚಿತ್ರವಾದ ತಿರುವುಗಳೂ ಎದುರಾಗಬಹುದು. ತಿರುವುಗಳು ಹೇಗಿರುತ್ತವೆಂದರೆ: ಒಂದೆಡೆಯಲ್ಲಿ ಉಪನಿಷತ್ತು ಪರಾ ಮತ್ತು ಅಪರಾ ವಿದ್ಯೆಗಳ ಬಗ್ಗೆ ವಿಂಗಡಿಸಿ ಹೇಳಲು ತೊಡಗಿತು. ಪರಾ ಎಂದರೆ ಆಧ್ಯಾತ್ಮಿಕವಾದ ಮತ್ತು ಅಪರಾ ಎಂದರೆ ಲೌಕಿಕವಾದ ವಿದ್ಯೆಗಳು ಎಂದು ತಿಳಿದುಕೊಳ್ಳಬಹುದು. ಈ ಎರಡು ಬಗೆಯ ವಿದ್ಯೆಗಳನ್ನೂ ತಿಳಿಯಬೇಕು ಎಂದು ಕೂಡ ಉಪನಿಷತ್ತು ಹೇಳಿತು. ನಿಜ. ಅಪರಾ ವಿದ್ಯೆಯ ಬಗ್ಗೆ ಮೊದಲು ಹೇಳುತ್ತ, ವೇದ-ವೇದಾಂಗಗಳೆಲ್ಲ ಅಪರಾ ವಿದ್ಯೆಗೆ ಸೇರಿದ ವಾš¾ಯಗಳೆಂದು ವಿವರಿಸಿತು! ಇದೀಗ ಚಕಿತಗೊಳಿಸುವ ಸಂಗತಿಯಾಗಿದೆ. ವೇದ-ವೇದಾಂಗಗಳು ಅಪರಾವಿದ್ಯೆಯ ಸ್ಥಾನಗಳೆ? ಸ್ಥಾನಗಳಾಗಿ ಬಿಟ್ಟವೆ? ಹೌದಾದರೆ ಪರಾ ವಿದ್ಯೆಯನ್ನು ಎಲ್ಲಿ ತಿಳಿಯುವುದು? ಅದರ ಸ್ಥಾನ ಯಾವುದು? ಎಂದರೆ ವೇದಗಳೇ ಪರಾವಿದ್ಯೆಗೂ ಸ್ಥಾನಗಳೆಂದೇ ಉತ್ತರಿಸುವರು! ಉಪನಿಷತ್ತುಗಳೆಂದರೆ ವೇದಗಳೇ ಅಲ್ಲವೆ? ಉಪನಿಷತ್ತು ಪರಾವಿದ್ಯೆಯಲ್ಲವೆ?- ಎನ್ನುವರು! ಇದೇನು ಗೊಂದಲ-ಅವ್ಯವಸ್ಥೆ- ಎಂದುಕೊಳ್ಳಬಹುದು ನಾವು. ಅದು ಬೇರೆ ಮಾತು. ನಿಜಕ್ಕಾದರೆ ನಾವು ಹೇಗೆ ನೋಡುತ್ತೇವೋ ಹಾಗೆ ಜ್ಞಾnನ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ವೇದೋಪನಿಷತ್ತುಗಳನ್ನು ಲೌಕಿಕ ದೃಷ್ಟಿಯಿಂದ ನೋಡಿದರೆ ಅವು ಹಾಗೆಯೇ ತೋರಿಬರುತ್ತವೆ. ಆಧ್ಯಾತ್ಮಿಕವಾಗಿ ಅಂದರೆ ಭಗವತ್‌ ಪರವಾಗಿ ನೋಡಲು ಸಾಧ್ಯವಾದರೆ ಅವು ಆಧ್ಯಾತ್ಮಿಕವಾದ ಅರಿವನ್ನೇ ಉಣಬಡಿಸುವವು. ಇದರ ಮೇಲಿನಿಂದ ನೋಡಿದರೆ, ಪರಾ-ಅಪರಾ ಎಂಬ ವಿಂಗಡಣೆಯೂ ನಾಮಮಾತ್ರದ್ದಾಗಿ ಕಾಣಿಸುವುದು. ಅರಿವು ಒಂದೇ. ಹೇಗೆ ನೋಡುವೆವೋ ಹಾಗೆ ಕಾಣಿಸಿಕೊಳ್ಳುವುದು ಅದರ ತವಕ. ಅರಿವಿನಲ್ಲಿರುವ ಈ ಚಮತ್ಕಾರಿಕ ಅಂಶವು ತಿಳಿದುಬರಬೇಕಾದರೂ ಅನೇಕ ತಿರುವುಗಳಲ್ಲಿ ಹಾಯದೆ ಇದು ತಿಳಿದುಬರದು!

ತಿರುವುಗಳಲ್ಲಿ ಹಾಯುವುದೆಂದರೆ- ಅರಿವು ನಮಗೆ ಒಡ್ಡಿಕೊಂಡಂತೆ, ನಾವೂ ಅರಿವಿಗೆ ಒಡ್ಡಿಕೊಳ್ಳುತ್ತ ಬಗೆಬಗೆಯ ಪ್ರಯೋಗಗಳನ್ನು ಮಾಡುವುದು. ಕೆಲವೊಮ್ಮೆ ತಿಳಿದು; ಕೆಲವೊಮ್ಮೆ ತಿಳಿಯದೆ. ತಿಳಿಯದೇ ಮಾಡುವುದೆಂದರೆ ಮರೆತಂತಿರುವುದು. ನಿಜ; ಮರೆಯುವುದು ಕೂಡ ಒಂದು ಪ್ರಯೋಗದಂತೆ ಆಗಬಹುದು. ಮರೆವೂ, ಅರಿವಿನ ಇನ್ನೊಂದು ಮುಖವೇ. ಇದನ್ನು unlearning ಎನ್ನುತ್ತಾರೆ. ಅಂದರೆ, ಈಗಾಗಲೇ ಕಲಿತುದನ್ನು ಮರೆಯದೇ ಹೊಸ ಕಲಿಕೆ ಸಾಧ್ಯವೆ? ಸಾಧ್ಯವಾಗದಿದ್ದರೆ, ಅದಕ್ಕೆ ಹಳೆ ಕಲಿಕೆಯೇ ಅಡ್ಡಿಯಾಯಿತಲ್ಲವೆ? ಅರಿವೇ ಅರಿವಿಗೆ ಅಡ್ಡಿಯಾಗಿ ಬಿಟ್ಟಿತಲ್ಲ! ಆದುದರಿಂದಲೇ learning ಹೇಗೆ, unlearning ಕೂಡ ಹಾಗೆ ಮುಖ್ಯ! ನಚಿಕೇತನು ತಾನು ಇದುವರೆಗೆ ಯಮನಿಂದ ಕಲಿತುದನ್ನು, ಆ ಬೌದ್ಧಿಕ ಸಂಸ್ಕಾರವನ್ನು, ಮರೆಯಲು ಸಿದ್ಧನಾದನೆಂದೇ ಈ ಮೂರನೆಯ ಪ್ರಶ್ನೆಯನ್ನು ಕೇಳಲು ಸಾಧ್ಯವಾಯಿತು! ಇದುವರೆಗೆ ಕಲಿತುದೇ ಈ ಸಾಹಸಕ್ಕೆ ಪ್ರೇರಣೆಯೂ ಆಯಿತು ಎಂದು ತಿಳಿದೆವಾದರೆ, “ಅರಿವು’ ಸದಾ ತನ್ನನ್ನು ತಾನು ಮೀರಲು ಹವಣಿಸುತ್ತದೆ ಎಂದಂತಾಯಿತು. ಅರವಿಂದರ Perfect Perfection ಎಂಬ ನುಡಿಗಟ್ಟು ಮತ್ತೆ ನೆನಪಾಗುತ್ತಿದೆ. ಅಲ್ಲದೆ, “ಅರಿವು’ ತನ್ನನ್ನೇ ಮೀರಲು ಬಯಸುತ್ತಿದೆ ಎಂದರೆ ತನ್ನನ್ನೇ ತಾನು ಮರೆಯಬಯಸುತ್ತಿದೆ ಎಂದಂತೆ ಕೂಡ ಕೇಳಿಸಿ-ಅರಿವು; ಮರೆವುಗಳ ಈ ಅನ್ಯೋನ್ಯ ಅಚ್ಚರಿ ಹುಟ್ಟಿಸುತ್ತದೆ !

ಇದು ನಚಿಕೇತನು ಹಾಯುತ್ತಿರುವ ತಿರುವು ಮಾತ್ರ ಅಲ್ಲ, ಇದು ಯಮಧರ್ಮನೂ ತನಗರಿಯದೇ ಎದುರಾದ ತಿರುವು ಎಂದು ಉಪನಿಷತ್ತು ಸೂಚಿಸುವುದು ತೀರಾ ಹೃದ್ಯವಾಗಿದೆ. ಮನುಜರು ಸತ್ತಮೇಲೆ ಏನಿದೆ? ಏನುಳಿಯುವುದು? ಇದೆಯೋ? ಇಲ್ಲವೋ? ಎಂಬ ಪ್ರಶ್ನೆಯನ್ನು ಇದುವರೆಗಿನ ಅನುಭವಗಳಿಗೆ ಸಾಯದೆ ಕೇಳುವಂತಿಲ್ಲ ! ನಚಿಕೇತ ಹಾಗೆ ಕೇಳುತ್ತಿದ್ದಾನೆ. ಈ ಪ್ರಶ್ನೆಗೆ ಸಾವಿನ ದೈವ-ಯಮನೇ- ಉತ್ತರಿಸಬೇಕು. ಉತ್ತರಿಸುವುದು ಸುಲಭವೂ ಅಲ್ಲ. ಏಕೆಂದರೆ, ಹಾಗೆ ಉತ್ತರಿಸುವಾಗ ಯಮನು ತನ್ನನ್ನು ತಾನು ಮರೆತಂತೆಯೇ !

(ಮುಂದಿನ ವಾರ ಈ ಸರಣಿಯ ಕೊನೆಯ ಬರಹ )

-ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

ಆರ್ಡರ್‌ ಮಾಡಿದ್ದು ದುಬಾರಿ ಲ್ಯಾಪ್‌ ಟಾಪ್‌ .., ಬದಲಿಗೆ ಬಂದದ್ದು.. ಇದೆಂಥಾ ಮೋಸ.!

ಇದೆಂಥಾ ಮೋಸ! ಆರ್ಡರ್‌ ಮಾಡಿದ್ದು ದುಬಾರಿ ಲ್ಯಾಪ್‌ ಟಾಪ್‌ , ಬದಲಿಗೆ ಬಂದದ್ದು…

ಬಳ್ಳಾರಿ: ಮಟ್ಕಾ ಬುಕ್ಕಿ, ಅಕ್ಕಿ ವ್ಯಾಪಾರಿಯನ್ನು ಅಟ್ಟಾಡಿಸಿಕೊಂಡು ಹತ್ಯೆಗೈದ ದುಷ್ಕರ್ಮಿಗಳು

ಬಳ್ಳಾರಿ: ಮಟ್ಕಾ ಬುಕ್ಕಿ, ಅಕ್ಕಿ ವ್ಯಾಪಾರಿಯನ್ನು ಅಟ್ಟಾಡಿಸಿಕೊಂಡು ಹತ್ಯೆಗೈದ ದುಷ್ಕರ್ಮಿಗಳು

ಟಾಲಿವುಡ್ ಸೂಪರ್ ಸ್ಟಾರ್ ʻಮಹೇಶ್ ಬಾಬುʼಗೆ ಮಾತೃ ವಿಯೋಗ

ಟಾಲಿವುಡ್ ಸೂಪರ್ ಸ್ಟಾರ್ ʻಮಹೇಶ್ ಬಾಬುʼಗೆ ಮಾತೃ ವಿಯೋಗ

ಭಗತ್ ಸಿಂಗ್ 115ನೇ ಜನ್ಮ ದಿನ: ಕ್ರಾಂತಿಕಾರಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

ಭಗತ್ ಸಿಂಗ್ 115ನೇ ಜನ್ಮ ದಿನ: ಕ್ರಾಂತಿಕಾರಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

9

ಹುಣಸೂರು: ಚಿರತೆ ದಾಳಿಗೆ ಕರು ಬಲಿ

ಆರ್ಡರ್‌ ಮಾಡಿದ್ದು ದುಬಾರಿ ಲ್ಯಾಪ್‌ ಟಾಪ್‌ .., ಬದಲಿಗೆ ಬಂದದ್ದು.. ಇದೆಂಥಾ ಮೋಸ.!

ಇದೆಂಥಾ ಮೋಸ! ಆರ್ಡರ್‌ ಮಾಡಿದ್ದು ದುಬಾರಿ ಲ್ಯಾಪ್‌ ಟಾಪ್‌ , ಬದಲಿಗೆ ಬಂದದ್ದು…

ಬಳ್ಳಾರಿ: ಮಟ್ಕಾ ಬುಕ್ಕಿ, ಅಕ್ಕಿ ವ್ಯಾಪಾರಿಯನ್ನು ಅಟ್ಟಾಡಿಸಿಕೊಂಡು ಹತ್ಯೆಗೈದ ದುಷ್ಕರ್ಮಿಗಳು

ಬಳ್ಳಾರಿ: ಮಟ್ಕಾ ಬುಕ್ಕಿ, ಅಕ್ಕಿ ವ್ಯಾಪಾರಿಯನ್ನು ಅಟ್ಟಾಡಿಸಿಕೊಂಡು ಹತ್ಯೆಗೈದ ದುಷ್ಕರ್ಮಿಗಳು

8

ಹುಣಸೂರು: ಹುಲಿ ಪತ್ತೆಗೆ ಬಲರಾಮ, ಅಶ್ವತ್ಥಾಮನ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.