ಹಳೆಯ ಪುಸ್ತಕದಂಗಡಿಯ ಪುಸ್ತಕಗಳು ಸೂಸುವ ಗಂಧವು


Team Udayavani, Nov 24, 2019, 4:14 AM IST

mm-5

ಸಾಂದರ್ಭಿಕ ಚಿತ್ರ

ಬಂತು ನಮ್ಮ ಲಿವೇರಿಯಾ, ರಾತ್ರಿ ಕಾಲೇಜಿನಲ್ಲಿ ಕಲಿಯುವ ಚೂಪು ಮೂಗು-ಕೆಂಪು ಗಲ್ಲದ ಸೋಫಿಯಾ ತಾನು ನಡೆಸುತ್ತಿದ್ದ (ವಿದ್ಯುತ್‌ ರಿಕ್ಷಾ) “ಟುಕ್‌ ಟುಕ್‌’ನ್ನು ಮಾರ್ಗದ ತಿರುವಿನಲ್ಲಿ ನಿಲ್ಲಿಸಿ ಕೈನೀಡಿ ತೋರಿಸಿದ್ದಳು. ಪೋರ್ಚುಗಲ್ಲಿನ ರಾಜಧಾನಿ ಲಿಸ್ಬನ್ನಿನ ಏರು-ಇಳಿಜಾರುಗಳುಳ್ಳ, ನುಣುಪುಗಲ್ಲಿನ ರಸ್ತೆಗಳ ತುಂಬ ನಮ್ಮನ್ನು ಓಡಾಡಿಸಿದ ಸೋಫಿಯಾ ಸುತ್ತಾಟದ ಕೊನೆಯಲ್ಲಿ ಲಿವೇರಿಯಾ ಬರ್ಟಾಂಡ್‌ ಅಂಗಡಿಗೆ ಕರೆದೊಯ್ದಿದ್ದಳು. ಪೋರ್ಚುಗೀಸ್‌ ಭಾಷೆಯಲ್ಲಿ ಲಿವೇರಿಯಾ ಎಂದರೆ ಪುಸ್ತಕಾಲಯ.

ವಿಶಾಲವಾದ ಪುಸ್ತಕದಂಗಡಿಯನ್ನು ಹೊಕ್ಕು, ಪುಸ್ತಕಗಳ ಪುಟ ತಿರುವುತ್ತ ಸಮಯ ಕಳೆಯುವ ಅನುಭವ ಬಹು ಆಪ್ಯಾಯಮಾನವಾದದ್ದು. ಪುಸ್ತಕದ ಬೀರುಗಳ ನಡುವೆ ಸಾಗುತ್ತಿದ್ದರೆ, ದೇಶ-ವಿದೇಶಗಳ ಕತೆ-ಕಾದಂಬರಿಗಳು, ಎಂದಿಗೂ ಸಲ್ಲುವ ಕಾಲಾತೀತಗಳು, ಇಂದಿಗೆ ಮೆರೆದು ನಾಳೆ ಮಾಯವಾಗುವ “ಜನಪ್ರಿಯ’ ಪ್ರಕಾರಗಳು, ಜ್ಞಾನ-ವಿಜ್ಞಾನ-ಕಲೆಗಳ ಹೊತ್ತಿಗೆಗಳು, ತರತರದ ಕೈಪಿಡಿಗಳು- ತಮ್ಮ ಹೆಸರುಗಳಿಂದಲೇ ನಮ್ಮನ್ನು ತಮ್ಮ ಲೋಕಕ್ಕೆ ಸೆಳೆದೊಯ್ಯಬಲ್ಲಂಥವು. ಭಾವನೆಗಳನ್ನು ಹರಿಯಬಿಟ್ಟರೆ, ಮನುಕುಲದ ಸತ್ವ ಸಾಗರದಲ್ಲಿ ತೇಲಿ ಹೋಗುವ ಅನುಭವ. ಸಾಲದ್ದಕ್ಕೆ ಹೊಸ/ಹಳೆ ಪುಸ್ತಕಗಳ ಅದಮ್ಯ ಪರಿಮಳದ ಸೆಳೆತ ಬೇರೆ. ಹಾಗಾಗಿ, ಮುಂಬಯಿಯಲ್ಲಿ ಮಾತ್ರವಲ್ಲ , ಪರಊರಿಗೆ ಹೋದಾಗಲೂ ಅಲ್ಲಿನ ಪುಸ್ತಕದಂಗಡಿಯಲ್ಲಿ ಸ್ವಲ್ಪ ಸಮಯವನ್ನಾದರೂ ಕಳೆಯುವ ಹಂಬಲ.

ಆದರೆ, ಲಿಸ್ಬನ್ನಿಗೆ ಭೇಟಿಯಿತ್ತಾಗ ಜಗತ್ತಿನ ಅತ್ಯಂತ ಪ್ರಾಚೀನ ಪುಸ್ತಕಾಲಯದ ಅನುಭವ ದೊರೆಯಬಹುದೆಂಬುದರ ಸುಳಿವೇ ನಮಗಿರಲಿಲ್ಲ. ಅಲ್ಲಿ ಕಾಲಿಟ್ಟಾಗ ಕಾಲವು ತಟಸ್ಥವಾದಂತೆನಿಸಿತು. 1732ರಲ್ಲಿ ಸ್ಥಾಪಿಸಲ್ಪಟ್ಟ ಲಿವೇರಿಯಾ ಬರ್ಟಾಂಡ್‌ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬಂದಿರುವ, ಗಿನ್ನೆಸ್‌ ದಾಖಲೆಯ ಖ್ಯಾತಿ ಪಡೆದ ವಿಶಿಷ್ಟವಾದ ಪುಸ್ತಕದಂಗಡಿ. 1755ರ ಭೀಕರ ಲಿಸ್ಬನ್‌ ಭೂಕಂಪದಲ್ಲಿ ಕಟ್ಟಡ ನಾಶವಾದಾಗಲೂ, ತಾತ್ಕಾಲಿಕವಾಗಿ ಬೇರೆಡೆಗೆ ಸಾಗಿಸಲ್ಪಟ್ಟಿತೇ ವಿನಾ ಅಂಗಡಿ ಮುಚ್ಚಿರಲಿಲ್ಲ.

ಎರಡು ಶತಮಾನಗಳ ಉದ್ದಕ್ಕೂ ನಗರದ ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿ ಬೆಳೆದುಕೊಂಡು ಬಂದಿರುವ ಅಂಗಡಿಯು ಕೇವಲ ಪುಸ್ತಕ ಮಾರಾಟಕ್ಕೆ ಮಾತ್ರ ಸೀಮಿತವಾಗಿರದೆ, ಕವಿಗಳು, ಚಿಂತಕರು, ಬರಹಗಾರರು ಕೂಡುವ ಜಾಗವಾಗಿಕೊಂಡೂ ಬಂದಿದೆ. ನಮ್ಮೊಂದಿಗೆ ಒಳಗೆ ಬಂದು ಇವೆಲ್ಲವನ್ನು ವಿವರಿಸಿದ ಸೋಫಿಯಾ, ಅಕ್ವಿಲಿನೋ ಎಂಬ ಲೇಖಕ ಕುಳಿತುಕೊಳ್ಳುತ್ತಿದ್ದ ಮೂಲೆ ಈಗ ಅವನದೇ ಹೆಸರಿನಿಂದ ಕರೆಯಲ್ಪಡುತ್ತದೆ ಎಂದು ಬೊಟ್ಟು ಮಾಡಿ ತೋರಿಸಿದಳು. ಒಂದು ರಸ್ತೆಯಿಂದ ಇನ್ನೊಂದು ರಸ್ತೆಯವರೆಗೆ ಹಬ್ಬಿದ ಅಂಗಡಿ, ಒಳಗಿಂದೊಳಗೆ ಆರು ವಿಶಾಲವಾದ ಕೋಣೆಗಳ ಹರಹು, ನಡುನಡುವೆ ಕಮಾನಾಕಾರದ ಬಾಗಿಲುಗಳು. ಕಣ್ಣು ಹಾಯಿಸಿದಲ್ಲಿ ಪುಸ್ತಕಗಳ ರಾಶಿ. ಇತ್ತೀಚೆಗಿನ ದಿನಗಳಲ್ಲಿ ಜಗತ್ತಿನಾದ್ಯಂತ ಪುಸ್ತಕಾಲಯಗಳು ಮುಚ್ಚುತ್ತಿರುವ ಸಂದರ್ಭದಲ್ಲಿ, 286 ವರ್ಷಗಳಿಂದ ನಿರಂತರವಾಗಿ ಕಾರ್ಯವೆಸಗುತ್ತಿರುವ ಪುಸ್ತಕದಂಗಡಿಯನ್ನು ನೋಡುವುದೇ ಮನಸ್ಸಿಗೊಂದು ತಂಪುಕೊಡುವ ವಿಷಯ.

ನೆನಪಿಗೊಂದೆರಡು ಪುಸ್ತಕಗಳಿರಲಿ ಎಂದುಕೊಂಡು ಅಲ್ಲಿನ ಮೇಲ್ವಿಚಾರಕನನ್ನು ಸಂಪರ್ಕಿಸಿದೆವು. ಪೋರ್ಚುಗೀಸ್‌ ಸಾಹಿತ್ಯದ ಅಚ್ಚುಕಟ್ಟಾದ ಒಳನೋಟವನ್ನು ಚುರುಕಾಗಿ ನೀಡಿದ ಆತ, ಪುಸ್ತಕ ಆಯ್ಕೆಯಲ್ಲಿ ನೆರವು ನೀಡಿದ.ಅವನ ಸಲಹೆಯಂತೆ, ಇಕಾ ದ ಕ್ಯುರೇಝ್ ಬರೆದ ಇಲ್ಲಸ್ಟ್ರಿಯಸ್‌ ಹೌಸ್‌ ಆಫ್ ರಮಿರೇಸ್‌ ಮತ್ತು ನೋಬೆಲ್‌ ಪ್ರಶಸ್ತಿ ವಿಜೇತ ಹೋಸೆ ಸರಮಾಗೊ ಬರೆದ ಕೇನ್‌- ವಿಭಿನ್ನ ಶೈಲಿಯ ಎರಡು ಪೋರ್ಚುಗೀಸ್‌ ಕಾದಂಬರಿಗಳ ಇಂಗ್ಲೀಷ್‌ ಅನುವಾದಗಳನ್ನು ಕೊಂಡು ಅಲ್ಲಿಂದ ಹೊರಬಿದ್ದೆವು.

ಬಟ್ರ್ಯಾಂಡ್‌ ಪುಸ್ತಕಾಲಯದ ವೃತ್ತಾಂತವಾದ ಮೇಲೆ ಭಾರತದ ಅತ್ಯಂತ ಹಳೆಯ ಪುಸ್ತಕದಂಗಡಿಗೆ ಹೋದ ಕತೆಯನ್ನು ಬಿಡುವುದು ಹೇಗೆ? ದೇಶದ ಸಾಂಸ್ಕೃತಿಕ ಪುನರುತ್ಥಾನದ ತಾಣವಾಗಿದ್ದ ಕೊಲ್ಕತ್ತವು ಪುಸ್ತಕದಂಗಡಿಗಳ ತವರುಮನೆ. 1886ರಲ್ಲಿ ಆರಂಭವಾಗಿದ್ದ ದಾಸ್‌ಗುಪ್ತ ಎಂಡ್‌ ಕೊ ಅಂಗಡಿಯು ಕೊಲ್ಕತ್ತದ ಕಾಲೇಜು ರಸ್ತೆಯಲ್ಲಿದೆ. ಅಂಗಡಿಯ ಈಗಿನ ಮಾಲಿಕ ಅರಬಿಂದೊ ದಾಸ್‌ಗುಪ್ತ ಐದನೆಯ ಪೀಳಿಗೆಯವನು. ಇಂಚಿಂಚೂ ಪುಸ್ತಕಗಳಿಂದ ತುಂಬಿದ, ದಿನಪ್ರತಿ 300-400 ಗಿರಾಕಿಗಳು ಕಾಲಿಡುವ ಅಂಗಡಿಯಲ್ಲಿ, ಆತ ಗಿರಾಕಿಗಳಿಗಾಗಿ, ಪುಸ್ತಕಗಳನ್ನು ಅಗೆದು, ತೆಗೆದು ಹುಡುಕುವುದರಲ್ಲಿ ಮಗ್ನನಾಗಿದ್ದ. ಹಿಂದೆ ಆತನ ಅಜ್ಜನ ಕಾಲದಲ್ಲಿ ಜಗದೀಶಚಂದ್ರ ಬೋಸರೂ ಅಲ್ಲಿಗೆ ಬರುತ್ತಿದ್ದರಂತೆ. ಈಗಲೂ ಅಮರ್ತ್ಯ ಸೇನ್‌, ಗೋಪಾಲ್‌ ಗಾಂಧಿಯಂಥವರೂ ತನ್ನ ಗಿರಾಕಿಗಳೆಂದು ಹೆಮ್ಮೆಯಿಂದ ಹೇಳಿದ.

ಈ ಅಂಗಡಿಯಿರುವ ರಸ್ತೆಯ ವೈಶಿಷ್ಟ್ಯವೆಂದರೆ, ರಸ್ತೆಯ ಒಂದೂವರೆ ಕಿ. ಮೀ. ಉದ್ದಕ್ಕೂ ಸಾಲು ಸಾಲು ಪುಸ್ತಕದಂಗಡಿಗಳೇ- ಗೂಡಂಗಡಿಗಳಿಂದ ಹಿಡಿದು ಪ್ರಸಿದ್ಧ ಪ್ರಕಾಶನ ಸಂಸ್ಥೆಗಳವರೆಗೆ; ರಸ್ತೆಯ ಮೇಲೆ ಅಕ್ಷರಶಃ ಉಕ್ಕಿ ಹರಿಯುವ ಪುಸ್ತಕಗಳು. ಬಂಗಾಲಿಗಳು ಈ ರಸ್ತೆಯನ್ನು ಬೌಪಾರಾ (ಪುಸ್ತಕಗಳ ವಠಾರ) ಎನ್ನುತ್ತಾರೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಹಳೆಯ ಪುಸ್ತಕಗಳ ಮಾರುಕಟ್ಟೆಯೂ ಹೌದು. ದಶಕಗಳಿಂದ ಬುದ್ಧಿಜೀವಿಗಳನ್ನು, ಚಿಂತಕರನ್ನು ಆಕರ್ಷಿಸುತ್ತಿರುವ ಇಂಡಿಯನ್‌ ಕಾಫಿ ಹೌಸ್‌ ಇರುವುದು ಇಲ್ಲಿಯೇ.

ಹಿಂದೆ ಅಮೆರಿಕಕ್ಕೆ ಹೋದಾಗಲೆಲ್ಲ ಗಂಟೆಗಟ್ಟಲೆ, ಕೆಲವೊಮ್ಮೆ ಹಗಲಿಡೀ ಬಾರ್ಡರ್‌ ಇಲ್ಲವೇ ಬಾರ್ನ್ಸ್ ಎಂಡ್‌ ನೋಬಲ್ ಅಂಗಡಿಗಳಲ್ಲಿ ಪುಸ್ತಕ ರಾಶಿಯಲ್ಲಿ ಮುಖ ಹುದುಗಿಸಿ ಕುಳಿತುಬಿಡುತ್ತಿದ್ದೆವು. ಈಗ ಬಾರ್ಡರ್‌ನ ಅಂಗಡಿಗಳದು ಹೇಳಹೆಸರಿಲ್ಲ; ಬಾರ್ನ್ಸ್ ಅಂಡ್‌ ನೋಬಲ್ ನ ಅಂಗಡಿಗಳೂ ಒಂದೊಂದಾಗಿ ಮುಚ್ಚಲ್ಪಡುವ ದುಃಸ್ಥಿತಿ!

ನಮ್ಮ ಮುಂಬಯಿಯಲ್ಲೂ ಎಷ್ಟೋ ಪ್ರಸಿದ್ಧ ಪುಸ್ತಕದಂಗಡಿಗಳು, ಗ್ರಂಥಾಲಯಗಳು- ಫೋರ್ಟ್‌ನ ಮಾರುತಿ ಬೀದಿಯಲ್ಲಿದ್ದ ವಿದ್ಯಾನಿಧಿ ಪುಸ್ತಕದಂಗಡಿ, ಪಿ.ಎಂ. ರಸ್ತೆಯಲ್ಲಿದ್ದ “ಸ್ಟ್ರೇಂಡ್‌’ ಪುಸ್ತಕಾಲಯ, ನರಿಮನ್‌ ಪೌಂಟಿನಲ್ಲಿದ್ದ ಬ್ರಿಟಿಷ್‌ ಕೌನ್ಸಿಲ್ಲೆ„ ಬ್ರೆರಿ- ಮುಚ್ಚಲ್ಪಟ್ಟಾಗ, ಏನನ್ನೋ ಕಳಕೊಂಡ ನೋವು.

ಅಮೆಜಾನಿನಂತಹ ಆನ್‌ಲೈನ್‌ ಕಂಪೆನಿಗಳು, ಪುಸ್ತಕಗಳ ಡಿಜಿಟಲ್‌ ಅವತಾರಗಳು, ನಗರಗಳಲ್ಲಿ ಏರುತ್ತಿರುವ ಬಾಡಿಗೆ ದರ, ಅಲ್ಲದೆ, ಮಾಧ್ಯಮಗಳ ಒತ್ತಡದಿಂದಾಗಿ ಕಡಿಮೆಯಾಗುತ್ತಿರುವ ಓದುಗರ ಸಂಖ್ಯೆ- ಹೀಗೆ ಹತ್ತುಹಲವು ಕಾರಣಗಳಿಂದಾಗಿ ಪುಸ್ತಕದಂಗಡಿಗಳು ಮುಚ್ಚುತ್ತಿರಬಹುದು. ಆದರೆ ಬಟ್ರ್ಯಾಂನ‌ಂತಹ ಕ್ರಿಯಾಶೀಲ ಅಂಗಡಿಗಳು, ಕಾಲೇಜು ರಸ್ತೆಯಂತಹ ಗುಜು ಗುಡುವ ಪುಸ್ತಕ-ವಠಾರಗಳು ನಮ್ಮನ್ನು ನಿರಾಶಾದಾಯಕರಾಗಲು ಬಿಡಲೊಲ್ಲವು.

ಕಾಲೇಜು ರಸ್ತೆಯಿಂದ ಹೊರಟ ಎಷ್ಟೋ ಹೊತ್ತಿನವರೆಗೆ ಮೂಗಿಗಡರಿದ, ಮನಸ್ಸನ್ನು ಆವರಿಸಿದ ಪುಸ್ತಕಗಳ ಸಮ್ಮೊàಹಕ ಸುಗಂಧವು ನಮ್ಮೊಂದಿಗೇ ಬರುತ್ತಿತ್ತು. ಆ ಮರ-ಕಾಗದ-ಶಾಯಿ ಮಿಶ್ರಿತ ಸುವಾಸನೆಯು ಮನಸ್ಸಿಗೆ ಕೊಡುವ ಆತ್ಮೀಯ ಒಡನಾಟದ ನೆಮ್ಮದಿಗೆ, ಏನೋ ಹೊಸತಿನ, ಮತ್ತೇನೋ ತಾಜಾತನದ ಭರವಸೆಗೆ ಸರಿಸಾಟಿಯಾದುದು ಜಗತ್ತಿನಲ್ಲಿ ಬೇರಾವುದೂ ಇಲ್ಲವೆನಿಸುತ್ತದೆ.

ಮಿತ್ರಾ ವೆಂಕಟ್ರಾಜ್‌

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.