ಇರಾಕ್‌ ದೇಶದ ಕತೆ; ಚಿನ್ನದ ಚೆಂಡು


Team Udayavani, Mar 26, 2017, 3:50 AM IST

26-SAPT-4.jpg

ಒಬ್ಬ ರಾಜನಿಗೆ ಸುಂದರಿಯಾದ ಒಬ್ಬಳೇ ಮಗಳಿದ್ದಳು. ರಾಜ ಅವಳನ್ನು ಅತಿಶಯವಾಗಿ ಪ್ರೀತಿಸುತ್ತಿದ್ದ. ತಾನು ಸುಂದರಿ ಎಂಬ ಅಹಂಕಾರ ಅವಳಿಗೆ ನೆತ್ತಿಗೇರಿತ್ತು. ತನ್ನ ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡುತ್ತಿದ್ದಳು. ಸುಳ್ಳು ಹೇಳುತ್ತಿದ್ದಳು. ಒಂದು ದಿನ ಸಂಜೆ ಅವಳು ಪಡು ಕಡಲಿನಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಿದಳು. ತಂದೆಯ ಬಳಿಗೆ ಬಂದು, “”ಅಪ್ಪಾ, ನನಗೆ ಈ ಸೂರ್ಯನನ್ನೇ ಚೆಂಡನ್ನಾಗಿ ಬಳಸಿ ಆಟವಾಡಬೇಕೆಂಬ ಆಶೆಯಾಗಿದೆ. ಅವನನ್ನು ತರಿಸಿಕೊಡು” ಎಂದು ಕೇಳಿದಳು. ಈ ಮಾತಿಗೆ ರಾಜನು ಜೋರಾಗಿ ನಕ್ಕುಬಿಟ್ಟ. “”ಎಂಥ ಹುಚ್ಚು ಮಾತಿದು ಮಗಳೇ. ಸೂರ್ಯನ ಬಳಿಗೆ ಹೋಗಲು ಯಾರಿಂದಲೂ ಸಾಧ್ಯವಿಲ್ಲ, ಹಾಗೆಲ್ಲಾದರೂ ಮಾಡಿದರೆ ಸುಟ್ಟು ಬೂದಿಯಾಗುತ್ತೇವೆ. ಇನ್ನು ಅವನನ್ನು ಹಿಡಿಯುವ ಮಾತೆಲ್ಲಿ ಬಂತು? ಅದರ ಬದಲು ಚಿನ್ನದ ಚೆಂಡನ್ನು ಮಾಡಿಸಿಕೊಡುತ್ತೇನೆ. ಅದನ್ನೇ ಸೂರ್ಯನೆಂದು ಭಾವಿಸಿ ಆಟವಾಡು” ಎಂದು ಹೇಳಿದ. ರಾಜಕುಮಾರಿ ಈ ಮಾತಿಗೆ ಒಪ್ಪಿಕೊಂಡಳು. ರಾಜ ಚಿನಿವಾರರಿಂದ ಚಿನ್ನದ ಚೆಂಡನ್ನು ಮಾಡಿಸಿ ಮಗಳಿಗೆ ಕೊಟ್ಟ.

ರಾಜಕುಮಾರಿ ಹೊತ್ತು ಕತ್ತಲಾಗುವವರೆಗೂ ಚಿನ್ನದ ಚೆಂಡಿನಲ್ಲಿ ಆಟವಾಡಿದಳು. ಕಡೆಗೆ ಚೆಂಡು ಪುಟಿಯುತ್ತ ಹೋಗಿ ಒಂದು ಬಾವಿಗೆ ಬಿತ್ತು. ತುಂಬ ನೀರಿರುವ ಆಳವಾದ ಬಾವಿಗೆ ಬಗ್ಗಿ ನೋಡಿ ರಾಜಕುಮಾರಿ ಅಸಹಾಯಳಾಗಿ ಅಳತೊಡಗಿದಳು. “”ಅಯ್ಯೋ, ನಾನು ಬಾವಿಗೆ ಇಳಿಯಲಾರೆನಲ್ಲ. ನನ್ನ ಚೆಂಡನ್ನು ಯಾರು ತಂದು ಕೊಡುತ್ತಾರೆ?” ಎಂದು ಕೂಗಿಕೊಂಡಳು. ಆಗ ಬಾವಿಯ ಕಟ್ಟೆಯಿಂದ ಒಂದು ಪುಟ್ಟ ಧ್ವನಿ, “”ರಾಜಕುಮಾರಿ, ನಿನ್ನ ಚೆಂಡನ್ನು ನಾನು ಹೆಕ್ಕಿ ತಂದುಕೊಟ್ಟರೆ ಆಗಬಹುದೆ?” ಎಂದು ಕೇಳಿತು. “”ಆಗದೆ ಏನು? ಯಾರು ತಂದುಕೊಟ್ಟರೂ ಆಗುತ್ತದೆ” ಎಂದಳು ರಾಜಕುಮಾರಿ. “”ಸುಮ್ಮನೆ ಯಾರು ತಂದುಕೊಡುತ್ತಾರೆ? ಪ್ರತಿಫ‌ಲವೆಂದು ನಾನು ಕೇಳಿದುದನ್ನು ಕೊಡುತ್ತೇನೆಂದು ಮಾತು ಕೊಡಬೇಕು” ಎಂದಿತು ಧ್ವನಿ. “”ಕೊಡುತ್ತೇನೆ ಮಹಾರಾಯಾ ಕೊಡುತ್ತೇನೆ. ಅಂಥ ಉಪಕಾರ ಮಾಡಿದವರಿಗೆ ಏನು ಕೇಳಿದರೂ ಕೊಡುವ ಸಾಮರ್ಥ್ಯ ನನಗಿದೆ. ಸಿರಿವಂತ ದೊರೆಯ ಒಬ್ಬಳೇ ಮಗಳು ನಾನು” ಎಂದು ಮಾತು ಕೊಟ್ಟಳು ರಾಜಕುಮಾರಿ.

ಅರೆಕ್ಷಣದಲ್ಲಿ ಯಾರೋ ಬಾವಿಗೆ ಧುಳುಮ್ಮನೆ ಜಿಗಿದು ಅರೆಕ್ಷಣದಲ್ಲಿ ಚೆಂಡಿನೊಂದಿಗೆ ಮೇಲೆ ಬರುವುದನ್ನು ರಾಜಕುಮಾರಿ ನೋಡಿದಳು. ಅದೊಂದು ದೊಡ್ಡ ಕಪ್ಪೆ! “”ರಾಜಕುಮಾರಿ, ಚೆಂಡು ತೆಗೆದುಕೋ. ಪ್ರತಿಫ‌ಲವಾಗಿ ನನ್ನನ್ನು ಮದುವೆಯಾಗು” ಎಂದು ಹೇಳಿ ಅದು ಚೆಂಡನ್ನು ನೀಡಿತು. ರಾಜಕುಮಾರಿ ಅಸಹ್ಯದಿಂದ ನಕ್ಕಳು. “”ಒಂದು ಕಪ್ಪೆಗೆ ನನ್ನಂತಹ ಸುಂದರಿ ಹೆಂಡತಿಯಾಗುವುದೆ? ಹೋಗು ಹೋಗು” ಎಂದು ಚೆಂಡನ್ನು ತೆಗೆದುಕೊಂಡು ಹೊರಟುಹೋದಳು. ಆದರೆ ಕಪ್ಪೆ$ ಬಿಡಲಿಲ್ಲ. ನೇರವಾಗಿ ರಾಜನ ಸಭೆಗೆ ಹೋಯಿತು. ರಾಜನ ಬಳಿ, “”ದೊರೆಯೇ ನಿಮ್ಮ ರಾಜ್ಯದಲ್ಲಿ ಕೊಟ್ಟ ಮಾತು ತಪ್ಪಿದವರನ್ನು ಏನು ಮಾಡುತ್ತೀರಿ?” ಎಂದು ಕೇಳಿತು. “”ನನ್ನ ಬಂಧುಗಳಾದರೂ ಸರಿ, ಮಾತಿಗೆ ತಪ್ಪಿದವರಿಗೆ ಮರಣದಂಡನೆಯೇ ಶಿಕ್ಷೆ” ಎಂದನು ರಾಜ. “”ನಿಮ್ಮ ಮಗಳು ನನಗೆ ಮಾತು ಕೊಟ್ಟು ತಪ್ಪಿದ್ದಾಳೆ. ಅವಳು ನನ್ನ ಇಚ್ಛೆಯಂತೆ ನನ್ನನ್ನು ಮದುವೆಯಾಗಬೇಕು. ಇಲ್ಲವಾದರೆ ನೀವು ಅವಳಿಗೆ ದಂಡನೆ ವಿಧಿಸಬೇಕು” ಎಂದು ಕಪ್ಪೆ$ನಡೆದ ವಿಷಯ ಹೇಳಿತು.

ನ್ಯಾಯವನ್ನು ತಪ್ಪದ ರಾಜ ಮಗಳನ್ನು ಕರೆಸಿ ವಿಚಾರಣೆ ಮಾಡಿದ. ಕಪ್ಪೆಯನ್ನು ಮದುವೆಯಾಗಲು ಆಜಾnಪಿಸಿದ. ವಿಧಿಯಿಲ್ಲದೆ ರಾಜಕುಮಾರಿ ಕಪ್ಪೆಯನ್ನು ವರಿಸಬೇಕಾಯಿತು. ಅದನ್ನು ತನ್ನ ಅಂತಃಪುರಕ್ಕೂ ಕರೆದುಕೊಂಡು ಹೋದಳು. ಆದರೆ ಗಂಡನೆಂದು ಆದರಿಸಲಿಲ್ಲ. ಪ್ರೀತಿ ಮಾಡಲಿಲ್ಲ. ಆದರೂ ಕಪ್ಪೆ ಅವಳ ಜೊತೆಗೆ ಠೀವಿಯಿಂದ ಹೋಗುತ್ತ ಬರುತ್ತ ಇತ್ತು.

ಹೀಗಿರಲು ಒಬ್ಬ ಶತ್ರು ರಾಜ ಭಾರೀ ಸೈನ್ಯದೊಂದಿಗೆ ಬಂದು ಆ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಅವನು ವಯಸ್ಸಿನಲ್ಲಿ ವೃದ್ಧನಾಗಿದ್ದ. ಅವನಿಗೆ ಒಂದು ಕಣ್ಣು ಇರಲಿಲ್ಲ. “”ನನ್ನ ಜೊತೆಗೆ ಹೋರಾಡಿ ಗೆದ್ದುಕೊಳ್ಳಿ. ಆದರೆ ನನ್ನನ್ನು ಎದುರಿಸುವ ಶಕ್ತಿ ನಿಮ್ಮಲ್ಲಿಲ್ಲವಾದರೆ ನನಗೆ ನಿಮ್ಮ ರಾಜ್ಯ ಬೇಡ, ಬಂಗಾರ ಬೇಡ. ಸುಂದರಿಯಾದ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ” ಎಂದು ಶತ್ರು ರಾಜ ಕೇಳಿದ. ಈ ಮಾತು ಕೇಳಿ ರಾಜನಿಗೆ ಕೋಪ ಬಂತು. “”ಎಂತಹ ಹುಚ್ಚುತನವಿದು! ನನ್ನ ಮಗಳಿಗೆ ಈಗಾಗಲೇ ವಿವಾಹವಾಗಿದೆ. ಅವಳಿಗೆ ಗಂಡನಿದ್ದಾನೆ. ಪುನಃ ಅವಳನ್ನು ನಿಮಗೆ ಕೊಡುವುದಾದರೂ ಹೇಗೆ?” ಎಂದು ಕೇಳಿದ. ಶತ್ರುರಾಜ ನಕ್ಕುಬಿಟ್ಟ. “”ನನಗೆ ಈ ವಿಷಯ ಗೊತ್ತಿದೆ. ಒಂದು ಕಪ್ಪೆಯೊಂದಿಗೆ ಮನುಷ್ಯರ ಮದುವೆಯಾಗುವುದುಂಟೆ? ಅದು ಮದುವೆಯೇ ಅಲ್ಲ. ಅವಳನ್ನು ನನಗೇ ಕೊಟ್ಟುಬಿಡಿ” ಎಂದು ಹೇಳಿದ. ರಾಜನು ಈ ಮಾತಿಗೆ ಒಪ್ಪಲಿಲ್ಲ. ಶತ್ರುರಾಜ ಯುದ್ಧಕ್ಕೆ ನಿಂತ. ಅವನ ಸೇನೆಯನ್ನು ಗೆಲ್ಲಲು ರಾಜನಿಗೆ ಸಾಧ್ಯವೇ ಇರಲಿಲ್ಲ.

ಈ ವಿಷಯ ತಿಳಿದು ರಾಜಕುಮಾರಿ ಅಳತೊಡಗಿದಳು. ಶತ್ರುರಾಜ ಗೆಲ್ಲುತ್ತಾನೆ, ನಾನು ಅವನ ವಶವಾಗುವ ಬದಲು ಸಾಯುವುದೇ ಮೇಲು ಎಂದು ಹೇಳಿಕೊಂಡಳು. ಆಗ ಕಪ್ಪೆ, “”ರಾಜಕುಮಾರಿ, ಚಿಂತಿಸಬೇಡ, ಶತ್ರುವನ್ನು ನಾನು ಓಡಿಸುತ್ತೇನೆ. ನೋಡು ನನ್ನ ಪರಾಕ್ರಮ” ಎಂದು ಹೇಳಿತು. ಅಂದು ರಾತ್ರೆ ಸಾವಿರಾರು ಕಪ್ಪೆಗಳು ಒಂದೇ ಸವನೆ ಕೂಗಿ ಕೂಗಿ ಮಳೆಯನ್ನು ಕರೆದವು. ಅದರಿಂದಾಗಿ ಅನಿರೀಕ್ಷಿತವಾಗಿ ಭಾರೀ ಮಳೆ ಸುರಿಯಿತು. ಶತ್ರು ರಾಜನ ಶಸ್ತ್ರಾಸ್ತ್ರಗಳೆಲ್ಲವೂ ಪ್ರವಾಹದಲ್ಲಿ ಮುಳುಗಿಹೋದವು. ಯುದ್ಧ ಮಾಡಲಾಗದೆ ಅವನು ಪಲಾಯನ ಮಾಡಿದ. ರಾಜಕುಮಾರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. “”ನೀನು ನಿಜವಾದ ಗಂಡಸು ಕಣೋ” ಎಂದು ಕಪ್ಪೆಯನ್ನು ಎತ್ತಿ ಮುದ್ದಿಟ್ಟಳು.

ಮರುಕ್ಷಣವೇ ಕಪ್ಪೆ ಮಾಯವಾಗಿ ಅಲ್ಲೊಬ್ಬ ಸುಂದರನಾದ ರಾಜಕುಮಾರ ನಿಂತಿದ್ದ. “”ಮಂತ್ರಿಯ ಕುತಂತ್ರದಿಂದ ಮಾಟಗಾರರು ನನ್ನನ್ನು ಮತ್ತು ನನ್ನ ನಿಷ್ಠಾವಂತ ಪ್ರಜೆಗಳನ್ನು ಕಪ್ಪೆಗಳನ್ನಾಗಿ ಮಾಡಿದ್ದರು. ರಾಜಕುಮಾರಿಯೊಬ್ಬಳು ಪ್ರೀತಿಯಿಂದ ಮುತ್ತಿಟ್ಟಾಗ ನಮ್ಮ ಈ ಜನ್ಮ ತೊಲಗಿ ಮೊದಲಿನಂತಾಗುತ್ತೇವೆಂದು ಹೇಳಿದ್ದರು. ಈಗ ನಿನ್ನಿಂದಾಗಿ ನಾನು ಮರಳಿ ಮನುಷ್ಯನಾಗಿದ್ದೇನೆ. ಬಾ, ನನ್ನ ಅರಮನೆಗೆ ಹೋಗಿ ಅಲ್ಲಿ ಸುಖವಾಗಿರೋಣ” ಎಂದು ಅವನು ಹೇಳಿದ.

ಪರಾಶರ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.