ಉಕ್ರೇನಿಯನ್‌ ಕತೆ: ನರಿ ಮತ್ತು ತೋಳ


Team Udayavani, Jun 24, 2018, 6:00 AM IST

ss-4.jpg

ಒಂದು ಹಳ್ಳಿಯಲ್ಲಿ ಮೇಕೆಯೊಂದು ತನ್ನ ನಾಲ್ಕು ಮರಿಗಳೊಂದಿಗೆ ವಾಸವಾಗಿತ್ತು. ಮರಿಗಳ ಮೇಲೆ ಅದಕ್ಕೆ ತುಂಬ ಮಮತೆ ಇತ್ತು. ಒಂದು ಸಲ ಹಳ್ಳಿಯಲ್ಲಿ ಮಳೆ ಬರಲಿಲ್ಲ. ಸೂರ್ಯನ ಬಿಸಿಲಿನ ಕಾವಿಗೆ ಹಸಿರೆಲ್ಲವೂ ಸುಟ್ಟುಹೋಯಿತು. ಮರಿಗಳಿಗೆ ಹೊಟ್ಟೆ ತುಂಬ ಹಾಲೂಡಲು ಮೇಕೆಗೆ ಕಷ್ಟವಾಯಿತು. ಅದು ಮರಿಗಳೊಂದಿಗೆ, “ನಾಳೆಯಿಂದ ನಾನು ಮೇವು ಹುಡುಕಿಕೊಂಡು ತುಂಬ ದೂರ ಹೋಗಬೇಕಾಗಿದೆ. ನೀವು ಭದ್ರವಾಗಿ ಬಾಗಿಲು ಹಾಕಿಕೊಂಡು ಮನೆಯೊಳಗೆ ಕುಳಿತುಕೊಳ್ಳಬೇಕು. ಹೊರಗಿನಿಂದ ನಾನು ಬಂದು ಕರೆದರೆ ಮಾತ್ರ ಬಾಗಿಲು ತೆರೆಯಬೇಕು. ಇಲ್ಲವಾದರೆ ನಿಮಗೆ ಪ್ರಾಣಾಪಾಯ ಬರಬಹುದು’ ಎಂದು ಎಚ್ಚರಿಕೆ ಹೇಳಿತು. ಮಕ್ಕಳು, “ನೀನು ಹೇಳಿದ ಮಾತನ್ನು ಮರೆಯುವುದಿಲ್ಲ ಅಮ್ಮ. ಜಾಗರೂಕತೆಯಿಂದ ಇರುತ್ತೇವೆ’ ಎಂದು ಒಪ್ಪಿ$ಕೊಂಡವು.

    ಮೇಕೆ ಮೇವು ಹುಡುಕುತ್ತ ದೂರದ ಹುಲ್ಲುಗಾವಲಿಗೆ ಹೋಯಿತು. ಅಲ್ಲಿ ಒಂದು ತೋಳ ಅದನ್ನು ಕಂಡು ಬಾಯಲ್ಲಿ ನೀರೂರಿಸಿತು. “ಮೇಕೆಯಕ್ಕಾ ಹೇಗಿದ್ದೀಯೇ?’ ಎಂದು ಕೇಳಿತು. “ಹೇಗಪ್ಪ ಇರುವುದು, ಬರಗಾಲದಿಂದಾಗಿ ಹೊಟ್ಟೆಗೆ ಊಟ ಇಲ್ಲ. ನನ್ನ ಮರಿಗಳಿಗೆ ಹಾಲು ಕೊಡಬೇಕಲ್ಲವೆ, ಅದಕ್ಕಾಗಿ ಮೇವು ಹುಡುಕಿಕೊಂಡು ಹೊರಟಿದ್ದೇನೆ’ ಎಂದು ಹೇಳಿತು ಮೇಕೆ. “ಅಯ್ಯೋ ಪಾಪ, ಮರಿಗಳು ಉಪವಾಸವಿದ್ದಾವೆಯೆ? ಎಲ್ಲಮ್ಮ ನಿನ್ನ ಮನೆ? ನಾನೇ ಹೋಗಿ ಹಸಿದ ಮರಿಗಳಿಗೆ ತಾಜಾ ಹಾಲು ಕೊಟ್ಟು ಬರುತ್ತೇನೆ. ನನ್ನ ಒಡೆತನದಲ್ಲಿ ಯಾರೂ ಉಪವಾಸವಿರುವುದು ನನಗೆ ಇಷ್ಟವಿಲ್ಲ. ನೀನು ಒಳ್ಳೆಯ ಮೇವು ತಿಂದು ನಿಧಾನವಾಗಿ ಮನೆಗೆ ಹೋಗುವೆಯಂತೆ. ನಿನಗೆ ಮಕ್ಕಳ ಕುರಿತು ಒಂದಿಷ್ಟೂ ಕಳವಳ ಬೇಡ’ ಎಂದು ಸಿಹಿಸಿಹಿಯಾಗಿ ತೋಳ ಹೇಳಿತು.

    ಮೇಕೆ ತೋಳದ ಕಪಟತನವನ್ನು ಶಂಕಿಸದಂತೆ ನಟಿಸಿತು. ತನ್ನ ಮರಿಗಳಿರುವ ಮನೆ ಎಲ್ಲಿದೆ ಎಂಬುದನ್ನು ಹೇಳಿಯೇಬಿಟ್ಟಿತು. ತೋಳದ ಕೈಯಿಂದ ಪಾರಾಗಲು ಬೇರೆ ಏನೂ ದಾರಿಯಿರಲಿಲ್ಲ. ಮರಿಗಳು ಬೇರೆ ಯಾರಿಗೂ ಬಾಗಿಲು ತೆರೆಯುವುದಿಲ್ಲ ಎಂಬ ಭರವಸೆ ಮೇಕೆಗೆ ಇತ್ತು. ತೋಳ ಮೇಕೆಯ ಮನೆಗೆ ಹೋಯಿತು. ಹೊರಗೆ ನಿಂತು, “ಮಕ್ಕಳೇ, ನಾನು ನಿಮ್ಮ ಅಮ್ಮ ಬಂದಿದ್ದೇನೆ. ಬಾಗಿಲು ತೆರೆಯಿರಿ’ ಎಂದು ಕೂಗಿತು. ಮರಿಗಳು ಬಾಗಿಲು ತೆರೆಯಲಿಲ್ಲ. ಒಳಗಿನಿಂದಲೇ, “ನೀನು ನಮ್ಮ ಅಮ್ಮ ಆಗಿರಲಾರೆ. ಅಮ್ಮ ಯಾವತ್ತೂ ಬರಿಗೈಯಲ್ಲಿ ಬಂದಿಲ್ಲ. ಚೆಂಬು ತುಂಬ ಹಾಲು ತಂದಿಟ್ಟು ಕರೆಯುತ್ತಾಳೆ’ ಎಂದು ಹೇಳಿದವು.

    ತೋಳ ಸುಮ್ಮನಿರಲಿಲ್ಲ. ಹಳ್ಳಿಯತ್ತ ಓಡಿತು. ಅಲ್ಲೊಬ್ಬ ಕಮ್ಮಾರ ಕಬ್ಬಿಣ ಕಾಸುತ್ತ ಕುಳಿತಿದ್ದ. ಅವನ ಮುಂದೆ ಹೋಗಿ ಗಕ್ಕನೆ ಬಾಯೆ¤ರೆದು ನಿಂತಿತು. ಕಮ್ಮಾರ ಭಯದಿಂದ ನಡುಗಿಬಿಟ್ಟ. “ನನಗೇನೂ ತೊಂದರೆ ಮಾಡಬೇಡ’ ಎಂದು ಬೇಡಿಕೊಂಡ. “ನಿನಗೆ ಸುಮ್ಮನೆ ತೊಂದರೆ ಕೊಡುವ ಬಯಕೆ ನನಗಿಲ್ಲ ನನಗೀಗ ಒಂದು ಚೆಂಬು ತುಂಬ ಹಾಲು ಬೇಕು, ತಂದುಕೊಡು’ ಎಂದು ಕೇಳಿತು ತೋಳ. “ಹಾಗೆಯೇ ಆಗಲಿ’ ಎಂದು ಕಮ್ಮಾರ ಹಾಲು ತಂದುಕೊಟ್ಟ. ತೋಳ ಹಾಲಿನ ಚೆಂಬು ತಂದು ಮೇಕೆಯ ಮನೆ ಬಾಗಿಲಿನ ಬಳಿ ಇರಿಸಿ, “ಮಕ್ಕಳೇ, ಹಾಲು ತಂದಿದ್ದೇನೆ, ಕುಡಿಯಿರಿ’ ಎಂದು ಕೂಗಿತು.

    “ಆಗಲಮ್ಮ’ ಎನ್ನುತ್ತ ಮರಿಗಳು ಬಾಗಿಲನ್ನು ಸ್ವಲ್ಪ$ ಮಾತ್ರ ಸರಿಸಿ ಚೆಂಬನ್ನು ಒಳಗೆಳೆದುಕೊಂಡು ಮತ್ತೆ ಭದ್ರವಾಗಿ ಮುಚ್ಚಿಬಿಟ್ಟವು. ಹಾಲನ್ನು ಕುಡಿದು ಹಸಿವು ನೀಗಿಸಿಕೊಂಡವು. ಮರಿಗಳು ಬಾಗಿಲು ತೆರೆಯುತ್ತವೆ, ಒಳಗೆ ಹೋಗಿ ಮೃಷ್ಟಾನ್ನ ಮಾಡುತ್ತೇನೆಂದು ಭಾವಿಸಿ ತೋಳ ಕಾದು ಕುಳಿತು ನಿರಾಶೆಗೊಂಡಿತು. ಮತ್ತೆ, “ಮರಿಗಳೇ, ಏನು ಮಾಡುತ್ತಿದ್ದೀರಿ? ಬಾಗಿಲು ತೆರೆಯಿರಿ, ಇಲ್ಲಿ ತುಂಬ ಚಳಿಯಾಗುತ್ತಿದೆ. ತೋಳ ಗೀಳ ಬಂದರೆ ಅಂತ ಭಯವೂ ಆಗುತ್ತಿದೆ’ ಎಂದು ಕರೆಯಿತು. ಮರಿಗಳು ಬಾಗಿಲು ತೆರೆಯದೆ ಒಳಗಿನಿಂದಲೇ, “ಇದು ನಮ್ಮ ಅಮ್ಮನ ಧ್ವನಿಯ ಹಾಗೆ ಇಲ್ಲ. ಅಮ್ಮನ ಧ್ವನಿಯಲ್ಲಿ ಕರೆದರೆ ಮಾತ್ರ ಬಾಗಿಲು ತೆರೆದೇವು’ ಎಂದು ಹೇಳಿದವು.

    ಇದೊಳ್ಳೆಯ ಪೇಚಾಟವಾಯಿತಲ್ಲ ಎಂದು ತೋಳ ಚಿಂತೆ ಮಾಡಿತು. ಸನಿಹದಲ್ಲೇ ಜಾಣ ನರಿಯ ಮನೆ ಇತ್ತು. ಇಕ್ಕಟ್ಟಿನ ಸಮಯದಲ್ಲಿ ಅದು ಒಳ್ಳೆಯ ಸಲಹೆಗಳನ್ನು ಕೊಡುತ್ತದೆ ಎಂಬುದು ಅದಕ್ಕೆ ಗೊತ್ತಿತ್ತು. ನರಿಯ ಮನೆಗೆ ಹೋಗಿ ಕದ ತಟ್ಟಿತು. ಒಳಗಿದ್ದ ನರಿ, “ಯಾರದು ಕದ ಬಡಿಯುತ್ತಿರುವುದು? ಉಚಿತ ಸಲಹೆಗೆ ಬಂದವರಾದರೆ ಹಾಗೆಯೇ ಮುಂದೆ ಹೋಗಿ. ಒಂದು ಹೆಬ್ಟಾತನ್ನೋ ಹುಂಜವನ್ನೋ ನನ್ನ ಸಲಹೆಯ ಪ್ರತಿಫ‌ಲವೆಂದು ತಂದರೆ ಮಾತ್ರ ಮನೆಯೊಳಗೆ ಅಡಿಯಿಡಬಹುದು’ ಎಂದು ಸ್ಪ$ಷ್ಟವಾಗಿ ಹೇಳಿತು. ತೋಳ ಒಂದು ಕೆರೆಯ ಬಳಿಗೆ ಹೋಗಿ ಹೊಂಚು ಹಾಕಿತು. ಹೇಗೋ ಕಷ್ಟದಲ್ಲಿ ಒಂದು ಹೆಬ್ಟಾತನ್ನು ಹಿಡಿದುಕೊಂಡು ನರಿಯ ಮನೆಗೆ ತಲುಪಿತು. “ತಾತಯ್ಯ, ನಿನಗೆ ಇಷ್ಟವಾದ ಹೆಬ್ಟಾತನ್ನು ಹಿಡಿದು ತಂದಿದ್ದೇನೆ. ಬಾಗಿಲು ತೆರೆದು ನನ್ನನ್ನು ಒಳಗೆ ಕರೆಸಿಕೋ. ನನಗೆ ನಿನ್ನಿಂದ ಒಂದು ಸಲಹೆ ಬೇಕಾಗಿದೆ’ ಎಂದು ಕೂಗಿತು.

    ನರಿ ಬಾಗಿಲು ತೆರೆಯಿತು. ಹೆಬ್ಟಾತನ್ನು ಕಂಡು ಭರ್ಜರಿ ಊಟ ಎಂದುಕೊಂಡಿತು. ನಿಧಾನವಾಗಿ ಅದನ್ನು ತಿಂದು ಮುಗಿಸಿ, “ಈಗ ಹೇಳು, ನಿನಗೆ ಯಾವ ಸಲಹೆ ಬೇಕು?’ ಎಂದು ವಿಚಾರಿಸಿತು. ತೋಳ ಮೇಕೆಯ ಮರಿಗಳ ವಿಷಯ ತಿಳಿಸಿ, “ನನಗೀಗ ಮೇಕೆಯಂತೆ ಮಾತನಾಡುವ ಶಕ್ತಿ ಬರಬೇಕು. ಹೊರಗಿನಿಂದ ನಾನು ಕರೆದರೆ ತಾಯಿ ಬಂದಿದ್ದಾಳೆಂದು ಭಾವಿಸಿ ಮರಿಗಳು ಬಾಗಿಲು ತೆರೆದರೆ ಸಾಕು. ಇದಕ್ಕೇನಾದರೂ ಉಪಾಯವಿದ್ದರೆ ಹೇಳು ತಾತಾ’ ಎಂದು ಕೋರಿತು ತೋಳ.

    ಮೇಕೆಯ ಹಾಗೆ ಧ್ವನಿ ಬದಲಾಯಿಸುವ ದಾರಿ ಏನೆಂಬುದು ನರಿಗೆ ಗೊತ್ತಿರಲಿಲ್ಲ. ಆದರೆ ಹಾಗೆ ಹೇಳಿದರೆ ತೋಳಕ್ಕೆ ಹೆಬ್ಟಾತನ್ನು ಮರಳಿ ಕೊಡಬೇಕಾಗುತ್ತದೆ. ಇದನ್ನು ಹೇಗಾದರೂ ತೊಲಗಿಸಬೇಕೆಂದು ಒಂದು ಉಪಾಯ ಹುಡುಕಿತು. “ನನಗೂ ಒಮ್ಮೆ ಇಂತಹದೇ ಸಮಸ್ಯೆ ಎದುರಾಗಿತ್ತು. ಕೋಳಿಮರಿಗಳನ್ನು ಹಿಡಿಯಲು ಹೇಂಟೆಯ ಹಾಗೆ ಕೂಗಬೇಕಿತ್ತು. ಹಳ್ಳಿಯಲ್ಲಿರುವ ಕಮ್ಮಾರ ಯಾವ ರೀತಿಯ ಧ್ವನಿ ಬೇಕಿದ್ದರೂ ಬರುವ ಹಾಗೆ ಮಾಡುತ್ತಾನೆ. ಅವನೇ ಅದನ್ನು ಮಾಡಿಕೊಟ್ಟ. ಅಲ್ಲಿಗೆ ಹೋಗು’ ಎಂದಿತು ನರಿ.

    ತೋಳ ಕಮ್ಮಾರನ ಬಳಿಗೆ ಹೋಗಿ ತನ್ನ ಧ್ವನಿ ಬದಲಾಯಿಸಲು ಹೇಳಿತು. ತಪ್ಪಿ$ದರೆ ಕೊಂದು ಬಿಡುವುದಾಗಿ ಎಚ್ಚರಿಸಿತು. ಅವನು ಒಂದು ಕಬ್ಬಿಣದ ಗುಳವನ್ನು ಕಾಯಿಸಿ ಕೆಂಪು ಮಾಡಿ ಗುದ್ದಲು ಸಿದ್ಧನಾಗಿದ್ದ. “ಸರಿ, ಕಣ್ಮುಚ್ಚು, ಬಾಯಿ ತೆರೆ. ನಿನಗೆ ಮೇಕೆಯ ಧ್ವನಿ ಬರುವಂತೆ ಮಾಡುತ್ತೇನೆ’ ಎಂದು ಹೇಳಿದ. ತೋಳ ಬಾಯೆ¤ರೆದು ಕುಳಿತ ಕೂಡಲೇ ಕಾದ ಗುಳವನ್ನು ಅದರ ಬಾಯೊಳಗೆ ತೂರಿಸಿಬಿಟ್ಟ. ಉರಿ ತಾಳಲಾಗದೆ ವಿಕಾರ ಧ್ವನಿಯಿಂದ ಕೂಗುತ್ತ ತೋಳವು ಊರು ಬಿಟ್ಟು ಓಡಿತು.

    ಹೊಟ್ಟೆ ತುಂಬ ಮೇದು ಮೇಕೆ ಮನೆಗೆ ಮರಳಿತು. ಮಕ್ಕಳನ್ನು ಕೂಗಿ ಕರೆಯಿತು. ಮರಿಗಳು ಬಾಗಿಲು ತೆರೆದವು. ಒಳಗೆ ಬಂದ ತಾಯಿಯೊಂದಿಗೆ ತೋಳವು ಬಂದು ಕರೆದ ಕತೆಯನ್ನು ಹೇಳಿದವು. ಮೇಕೆ ತುಂಬ ಸಂತಸಪಟ್ಟಿತು. “ಮಕ್ಕಳೇ, ಈಗ ನಾನು ಬಂದು ಕರೆದ ಕೂಡಲೇ ನೀವು ಬಾಗಿಲು ತೆರೆದಿರಲ್ಲವೆ? ನಿಮಗೆ ನಾನೇ ಬಂದಿರುವುದು ಹೇಗೆ ಅರಿವಾಯಿತು?’ ಎಂದು ಕೇಳಿತು. ಮಕ್ಕಳು ಪ್ರೀತಿಯಿಂದ ಅಮ್ಮನನ್ನು ತಬ್ಬಿಕೊಂಡವು. “ಅಮ್ಮಾ, ನಿನ್ನ ದನಿಯಲ್ಲಿರುವ ಪ್ರೀತಿಯ ಸಿಹಿ, ನಿನ್ನ ಮೈಯಲ್ಲಿರುವ ಪರಿಮಳ ಇದೆಲ್ಲವೂ ನಮ್ಮ ಕರುಳಿಗೆ ಅರ್ಥವಾಗುತ್ತದೆ. ಇದನ್ನು ಅನುಕರಣೆ ಮಾಡಿ ಮೋಸ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಮ್ಮ ಎಂದರೆ ಅಮ್ಮನೇ’ ಎಂದವು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.