ಅಜ್ಞಾತ ಅಮೆರಿಕದ ಆಮಿಷ್‌ ಲೋಕ


Team Udayavani, Jan 28, 2018, 2:18 PM IST

Amish-cancer-healthy.jpg

ನಮ್ಮ ಮಗನ ಒತ್ತಾಯದಿಂದ ನಾವು ಮೊದಲನೆಯ ಬಾರಿ ಅಮೆರಿಕಕ್ಕೆ ಹೋದಾಗ ಆತ ಆ ವಿಶಾಲವಾದ ದೇಶದಲ್ಲಿ ನಮ್ಮನ್ನು ಸಾಕಷ್ಟು ಸುತ್ತಾಡಿಸಿದ. ತನ್ನ ಪಾಲಕರು ಮೊದಲನೆಯ ಸಲ ಬರುತ್ತಿರುವ ನಿರೀಕ್ಷೆಯಿಂದ ಆತ ತನ್ನ ಅಧಿಕಾಧಿಕ ರಜಾದಿನಗಳನ್ನೂ ಮೀಸಲಾಗಿರಿಸಿದ್ದ. 

“ಅವರ್‌ ನ್ಯೂ ವರ್ಲ್ಡ್’ ಎಂದು ಧಿಮಾಕಿನಿಂದ ಕರೆದುಕೊಳ್ಳುವ ಅಮೆರಿಕನ್ನರ ಪಾರಿವಾರಿಕ ಬದುಕಿನ ರೀತಿ-ರಿವಾಜುಗಳನ್ನು ತಿಳಿಯುವುದು ನಾವು ಅಲ್ಲಿರುವಷ್ಟು ಅವಧಿಯಲ್ಲಿ ದುಸ್ಸಾಧ್ಯವೆನಿಸಿದರೂ ಅವರ ಬಾಹ್ಯಾಡಂಬರವನ್ನು ನೋಡಿ ಅನುಭವಿಸಬಹುದಾಗಿತ್ತು. ಸಮಯಾಭಾವದ ಕಾರಣ, ಬಹಳಷ್ಟು ಸ್ಥಳಗಳಿಗೆ ನಾವು ವಿಮಾನದಲ್ಲಿಯೇ
ಸಂಚರಿಸುವುದು ಅನಿವಾರ್ಯವಾಗಿತ್ತು. ಯಾವುದೊಂದು ವಿಮಾನನಿಲ್ದಾಣದಲ್ಲಿಳಿದು ಹೊರ ಗೇಟು ತಲುಪಿದೊಡನೆ ಐದು ನಿಮಿಷಗಳಲ್ಲಿ ಬಾಡಿಗೆ ಕಾರು ದೊರೆಯುವ ವ್ಯವಸ್ಥೆ ಅಲ್ಲಿಯದು.

ಸಾಧ್ಯವಾದಷ್ಟು ಕಾರಿನಲ್ಲಿಯೇ ಸುತ್ತಾಡಿದರೆ, ಆ ದೇಶದ ನೆಲ-ಜಲಗಳ, ಸ್ವಲ್ಪ ಮಟ್ಟಿಗೆ ಜನಜೀವನದ ಪರಿಚಯ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ನಮ್ಮದು. ಹೀಗೆ ಕಾರಿನಲ್ಲಿ ಸುತ್ತಾಡುವಾಗ ನಾನೊಮ್ಮೆ ನಮ್ಮ ಮಗನಿಗೆ ಹೇಳಿದೆ: “ಒಮ್ಮೆಯಾದರೂ ನಮ್ಮ ದೇಶದಲ್ಲಿಯಂತೆ ಧೂಳೆಬ್ಬಿಸುವ ರಸ್ತೆಯನ್ನು ತೋರಿಸಪ್ಪ’. ಅದು ಸಾಧ್ಯವೇ ಆಗಲಿಲ್ಲ. ಅಲ್ಲಿ ವಿಶಾಲವಾದ ಹೊಲ-ಗದ್ದೆಗಳ ನಡುವೆಯೂ ಪಕ್ಕಾ ರಸ್ತೆ! ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುವ ಹಾಯ್‌ವೇ ನೋಡಿದರೆ, ನಮ್ಮ ಶಾಲಾಬಾಲಕರು ಫ‌ೂಟ್‌ ಪಟ್ಟಿಯಿಟ್ಟು ಗೆರೆಯೆಳೆದಷ್ಟು ನೇರ ಮತ್ತು
ನಯವಾದದ್ದು. ಆಯಾ ಭಾಗಕ್ಕೆ ನಿಗದಿಗೊಳಿಸಿದ ವೇಗದ ಮಿತಿಯ ಬಟನ್‌ ಒತ್ತಿ ಕಾರುಚಾಲಕ ಕಣ್ಣು ಮುಚ್ಚಿ ನಿದ್ದೆ ಮಾಡಬಹುದು. ಕಾರಿನಲ್ಲಿ ಜಿಪಿಓ ವ್ಯವಸ್ಥೆಯಿದ್ದರಂತೂ ಚಾಲಕರ ಮೆದುಳಿಗೆ ಕೆಲಸವೇ ಇಲ್ಲ. ಅಮೆರಿಕದಲ್ಲಿ ರಸ್ತೆ-ರೋಡುಗಳ ವೈಭವ ಹೇಳತೀರದ್ದು. ನಾನು ಅಮೆರಿಕದಿಂದ ಮರಳಿ ಬಂದು ಹಲವಾರು ಕವಿತೆಗಳನ್ನು ಬರೆದದ್ದುಂಟು.

ಉದಾ: ಇದು ಅಮೆರಿಕಾ ಇಕಾ ಇಕಾ ಇದು ಅಮೆರಿಕಾ ಎಲ್ಲಿ ನೋಡಿದರೂ ರಸ್ತೆ ರಸ್ತೆಯಲ್ಲಿ ಇರುವೆಯ ಸಾಲು
ನಿಲುಗಡೆಯರಿಯದೆ ಧಾವಿಸುವಂತೆ ನಿಮಿಷಕೆ ನೂರು ಕಾರೇ ಕಾರು! ಈ ಚಕ್ರಲೋಕದಲಿ ಕಾಲ್ನಡಿಗೆಯವನೇ ಕಾಡು ಮಿಕಾ! ಕಾರಿಲ್ಲದ ಜನ ಮನೆಯಲ್ಲಿರುವುದೆ ಪರಮ ಸುಖಾ ಇಕಾ ಇಕಾ ಇದು ಅಮೆರಿಕಾ! ಬೆಳಗಿನಿಂದಲೂ ಸಂಜೆಯವರೆಗೆ ಓಗೊಡುವಂತೆ ದೂರದ ಕರೆಗೆ ಬಿಟ್ಟು ಬಿಡದೆ ಹಪಹಪಿಸುತ್ತ ಕಾಣದ ಗುರಿಗೆ ಧಾವಿಸುತಿರುವುದೆ ಇಲ್ಲಿಯ ಕರ್ಮ ವೇಗಾವೇಗದ ತೀರದ ತುಡಿತವೆ ಇಲ್ಲಿಯ ಸದ್ಧರ್ಮ! ಇಂಥ ಅನೇಕ ಪದ್ಯಗಳಲ್ಲಿ ನಾನು ಕಣ್ಣಾರೆ ಕಂಡ ಅಮೆರಿಕದ ಅನುಭವಗಳನ್ನು ದಾಖಲಿಸಿದ್ದೇನೆ. ಮಗನ ಮಾರ್ಗದರ್ಶನದಲ್ಲಿ ನಾವು ಕಂಡಷ್ಟು ಅಥವಾ ನಮಗಿಂತ ಹೆಚ್ಚಿಗೇ ಕಂಡು ತಮ್ಮ ತಮ್ಮ ಅನುಭವಗಳನ್ನು ಹಲವು ಹಿರಿಯರು ಪುಸ್ತಕರೂಪದಲ್ಲಿಯೂ ದಾಖಲಿಸಿದ್ದುಂಟು.

ಪ್ರಾಯಶಃ ನಮ್ಮ ಭಾಷೆಯಲ್ಲಿ ಅಮೆರಿಕದ ಕುರಿತಾಗಿ ಬಂದಷ್ಟು ಪುಸ್ತಕಗಳು ಬೇರಾವ ಹೊರದೇಶದ ಬಗೆಗೂ ಬಂದಿಲ್ಲವೆಂದೇ ಹೇಳಬಹುದು. ಹಲವರು ತಮ್ಮ ತಮ್ಮ ದೃಷ್ಟಿಯಿಂದ ನೋಡಿದ್ದೇ ನೋಡಿದ್ದು; ಹಾಡಿದ್ದೇ ಹಾಡಿದ್ದು. ಅಜ್ಞಾತ ಅಮೆರಿಕ ನನಗೇನೋ ಈವರೆಗೆ ಯಾರೂ ನೋಡಿರದ ಅಜ್ಞಾತ ಅಮೆರಿಕೆಯನ್ನು ನೋಡಬೇಕೆಂಬ
ಹುಚ್ಚು ಆಶೆ! ಹಾಗೆಂದು ನಮ್ಮ ಮಗನಿಗೆ ಸೂಚಿಸಿದೆ. ಆತ ಅಮೆರಿಕೆಯ ನಕಾಶೆಯುಳ್ಳ ಪ್ರವಾಸೀ ಮಾರ್ಗದರ್ಶಿಕೆಗಳನ್ನೆಲ್ಲ ಜಾಲಾಡಿಸಿ ನೋಡಿದ್ದಾಯ್ತು. ತನ್ನ ಸಂಚಾರೀ ಯೋಜನೆಯಂತೆ, ನಮ್ಮನ್ನು ಪೆನ್ಸಿಲಿನ್ವಿಯಾ ರಾಜ್ಯದ ಪ್ರಮುಖ ನಗರ ಲಾಡೆಲ್ಫಿಯಾಕ್ಕೆ ಕರೆದುಕೊಂಡು ಹೋಗಿ ಆ ನಗರದ ಐತಿಹಾಸಿಕ ಮಹತ್ವವೇನೆಂದು ಮನದಟ್ಟಾಗುವಂತೆ ವಿವರಿಸಿದ. ಮೊದಲು ಹದಿಮೂರೇ ರಾಜ್ಯಗಳನ್ನು ಹೊಂದಿದ್ದ ಅಮೆರಿಕ ನಿರ್ಮಾಣಗೊಂಡಾಗ, ಅದರ ಭವಿಷ್ಯದ ರೂಪರೇಷೆ ಸಿದ್ಧಗೊಳಿಸಿದ್ದು ಈ ನಗರವೇ! ಅಮೆರಿಕ ಎಂಬ ಹೊಸ ವಿಶ್ವ ಬ್ರಿಟಿಶರ ಹಿಡಿತದಿಂದ
ಸ್ವತಂತ್ರವಾದ ಸಂಭ್ರಮದಲ್ಲಿ ಬಾರಿಸಿದ ಬಿಡುಗಡೆಯ ಗಂಟೆಯಿರುವುದು ಈ ನಗರದಲ್ಲೇ. ಅದಕ್ಕೆ “ಲಿಬರ್ಟಿ
ಬೆಲ್‌’ ಎಂದು ಅವರಿಟ್ಟ ಹೆಸರು. 

ಲಡೆಲ್ಫಿಯಾ ನಿವಾಸಿಯಾಗಿದ್ದ ಅಮೆರಿಕೆಯ ಮೂರನೆಯ ಅಧ್ಯಕ್ಷ ಝೆಫ‌ರ್ಸನ್‌ ಅವರು ಅಮೆರಿಕೆಯ ಬೆಳವಣಿಗೆಯ ದೊಡ್ಡ ದೊಡ್ಡ ಕನಸುಗಳನ್ನು ಕಂಡವರು. ಅವರ ವಶದಲ್ಲಿ ಸಾವಿರಾರು ಎಕರೆ ಜಮೀನು ಇತ್ತು. ಅದರ ಸಾಗುವಳಿ ಮಾಡಲಿಕ್ಕೆ ಸಾಕಷ್ಟು ಜನರಿರಲಿಲ್ಲ. ಆಗ ಇಟೆಲಿ ಮತ್ತು ಜರ್ಮನಿಗಳಲ್ಲಿ ಕ್ರಿಶ್ಚನ್‌ ಮಿಶನರಿಗಳಲ್ಲಿ ಭಿನ್ನಾಭಿಪ್ರಾಯವುಂಟಾಗಿ ಅವರಲ್ಲಿಯೇ ಒಂದು ಜನವಿಭಾಗಕ್ಕೆ ಅಲ್ಲಿ ವಾಸಿಸುವುದೇ ಬೇಡವೆನಿಸಿತ್ತು. ಈ ಜನವಿಭಾಗವೇ ಆಮಿಷ್‌ ಸಮುದಾಯವಾಗಿ ಝೆಫ‌ರ್ಸನ್‌ ಅವರ ಕರೆಗೆ ಓಗೊಟ್ಟು ಅಮೆರಿಕೆಯ ಹೊಸ್ತಿಲು ತುಳಿದು ಒಳಸೇರಿದರು. ಅವರೆಲ್ಲ ಲಾಡೆಲ್ಫಿಯಾ ನಗರದಿಂದ ಸುಮಾರು 80 ಮೈಲಿ ಅಂತರದ ಮೇಲಿರುವ ಲ್ಯಾಂಕೆಸ್ಟರ್‌ ಕೌಂಟಿಯಲ್ಲಿ ನೆಲೆಯೂರಿದರು. ನಮ್ಮ ಮಗ ನಮ್ಮನ್ನು ಈ ಜನವಿಭಾಗದ ಬದುಕು ಅಮೆರಿಕನ್ನರಿಗಿಂತ ಹೇಗೆ ಮತ್ತು ಎಷ್ಟರ ಮಟ್ಟಿಗೆ ಭಿನ್ನವಾಗಿದೆಯೆಂಬುದನ್ನು ತೋರಿಸಲು ಕರೆದುಕೊಂಡು ಹೋದ. ಅಲ್ಲಿ ನಾವೊಂದು ಪೂರ್ತಿ ದಿನವನ್ನು ಕಳೆದು, ಒಂದು ಅಜ್ಞಾತ ಅಮೆರಿಕವನ್ನೇ ನೋಡಿದ ಅನುಭವ ಪಡೆದಂತಾಯಿತು.

ಆಮಿಷ್‌ ಸಮುದಾಯದ ಲೋಕವೇ ಬೇರೆ ಎನ್ನುವಷ್ಟು ಅವರು ವಿಭಿನ್ನರಾಗಿದ್ದವರು, ವೈಶಿಷ್ಟéವುಳ್ಳವರು. ಅವರ ಬದುಕಿನ ಪ್ರತಿಯೊಂದು ಕೆಲಸಕಾರ್ಯಕ್ಕೆ, ಅಂದರೆ ಹುಟ್ಟಿನಿಂದ ಸಾಯುವವರೆಗೂ- ಕುದುರೆ ಗಾಡಿಯೊಂದೇ ಸಾಧನ! ಅವರು ನಿಗದಿತ ವೇಷಭೂಷಣದಲ್ಲಿಯೇ ಇರುವ ಪಣ ತೊಟ್ಟವರು. ರಾತ್ರಿಯ ಹೊತ್ತು ವಿದ್ಯುತ್‌ಶಕ್ತಿಯನ್ನು ಬಳಸದೇ,
ಕಂದೀಲು ಉರಿಸುವರು. ಅವರ ಮಕ್ಕಳು ಬಹಳವಾದರೆ 8ನೆಯ ವರ್ಗದವರೆಗೆ ಓದಿ, ಹೊಲಮನೆಯ ಕೆಲಸಗಳಲ್ಲಿಯೇ ತೊಡಗಬೇಕೆಂಬ ಧೋರಣೆಯುಳ್ಳವರು. ಅವರ ಹೆಣ್ಣು ಮಕ್ಕಳು ಮತ್ತು ಸಣ್ಣ ಮಕ್ಕಳು ನಗರ
ಪ್ರದೇಶಗಳತ್ತ ಮೊಗದಿರುಹಿ ನೋಡಲೂ ಬಾರದೆಂಬ ಆಣತಿಯುಳ್ಳವರು. ಮದುವೆಯಾದರೂ ತಮ್ಮ ಸಮುದಾಯದಲ್ಲಿಯೇ ಆಗಬೇಕೆಂಬ ಸಾಮಾಜಿಕ ಚೌಕಟ್ಟಿನಲ್ಲಿಯೇ ಬದುಕು ಕಟ್ಟಿಕೊಂಡವರು. ಅವರು ನಲ್ಲಿಯ ನೀರು ಕುಡಿಯದೆ, ಚಕ್ರಾಕಾರದ ಗಡಗಡೆಯ ಬಾವಿಯಿಂದಲೇ ನೀರು ಸೇದಿಕೊಳ್ಳುವರು. ಯಾವ ಸಂದರ್ಭದಲ್ಲೂ ಫೋಟೋ ತೆಗೆಸಿಕೊಳ್ಳುವುದು ನಿಷಿದ್ಧ. ಅವರಲ್ಲಿ ಒಬ್ಬ ಯುವಕನನ್ನು ಮಾತಾಡಿಸುತ್ತ ತನ್ನ ಫೋಟೊ ಕ್ಲಿಕ್ಕಿಸಿಕೊಂಡ ನನ್ನ ಶ್ರೀಮತಿ ಖಡಕ್‌ ನಿಯಮಗಳ ಕೋಟೆಗೆ ಲಗ್ಗೆ ಹಾಕಿದ ಮೊದಲ ಪ್ರವಾಸಿ ಮಹಿಳೆಯೇ ಅನ್ನಬಹುದೇನೋ ! ಅಂತೂ ಈ ಅಜ್ಞಾತ ಅಮೆರಿಕೆಯ ಚಿತ್ರಾವಳಿ ಇಂದಿಗೂ ನಮ್ಮ ಕಣ್ಮುಂದೆ ಸಾಲು ಸಾಲಾಗಿ ಹಾಯ್ದು ಹೋಗುತ್ತಲೇ ಇರುತ್ತದೆ- ಸುಗ್ಗಿಯ ಕಾಲಕ್ಕೆ ಸಾಲು ಸಾಲಾಗಿ ಹೊರಟ ಆಮಿಷರ ಕುದುರೆ-ಗಾಡಿಗಳಂತೆ.

ಬಿ. ಎ. ಸನದಿ

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.