ವಾಸ್ತು ಮತ್ತು ವಾಸ್ತವ


Team Udayavani, Jul 28, 2019, 5:00 AM IST

q-12

ವಾಸ್ತು ನಿಜವೋ ಸುಳ್ಳೋ ಎಂಬ ಚರ್ಚೆ ಯಾವತ್ತೂ ಇದ್ದೇ ಇದೆ. ನಿಜವಾದರೆ ಯಾಕೆ ನಿಜ, ಸುಳ್ಳಾದರೆ ಯಾಕೆ ಸುಳ್ಳು ಎಂಬ ಬಗ್ಗೆ ಯಾರೂ ವಿಶ್ಲೇಷಣೆ ನಡೆಸುವುದಿಲ್ಲ. ಮುಖ್ಯವಾಗಿ ಮನುಷ್ಯ ಬದುಕಿಗೆ ಒಂದು ರೀತಿಯ ಶಿಸ್ತನ್ನು ನೀಡುವುದು ವಾಸ್ತು ಶಾಸ್ತ್ರದ ಉದ್ದೇಶ. ಜೀವನ ಶಿಸ್ತು ಎಂದರೆ, ಯಾರಿಗೂ ತೊಂದರೆಯಾಗದಂತೆ ಬದುಕುವುದು. ಮುಖ್ಯವಾಗಿ ಪ್ರಕೃತಿಯನ್ನೂ ಗೌರವಿಸಿ ಬಾಳುವುದು !

ಒಂದೊಂದು ವಸ್ತುವೂ ಒಂದು ಪ್ರಾಮುಖ್ಯವನ್ನು ಪಡೆದಿರುತ್ತದೆ. ವಸ್ತುವೊಂದರ ಪ್ರಾಮುಖ್ಯವನ್ನು ಸೂಕ್ತವಾಗಿ ತಿಳಿಯಬೇಕಾದದ್ದು ಹೀಗಾಗಿ ಯಾವಾಗಲೂ ಮುಖ್ಯ. ಭಾರತೀಯ ಪರಂಪರೆಯಲ್ಲಿನ ವಾಸ್ತು ಪ್ರಾಮುಖ್ಯಗಳ ಬಗ್ಗೆ ಸುಮಾರು ಕಳೆದ ಮೂರೂವರೆ ದಶಕದಿಂದ ನಾವು ಬಹಳ ಪ್ರಾಮುಖ್ಯವನ್ನು ಕೊಡಲು ಪ್ರಾರಂಭಿಸಿದೆವು. ದೇವಮೂಲೆ, ನಂದಿಬಾಗಿಲು, ಮುಳುಗು ದಿಕ್ಕು , ದಕ್ಷಿಣ ಕಕ್ಷೆ, ಜಲಭಾರ, ಕಂಭ ಭಾರ, ಛಾವಣಿಯ ತೊಲೆಗಳ ವಾಮ ಕ್ಷತ ಇತ್ಯಾದಿ, ಇತ್ಯಾದಿ ವಿಚಾರಗಳು ತುಂಬಾ ರೀತಿಯಲ್ಲಿ ದೊಡ್ಡ ದೊಡ್ಡ ಸದ್ದನ್ನೇ ಮಾಡಿದವು. ಈಗಲೂ ನಮ್ಮ ತೊಂದರೆಗಳಿಗೆ ವಾಸವಿರುವ ನಮ್ಮ ಮನೆಗಳೇ ಕಾರಣವಾಗುತ್ತ ವಿಷದ ಹೆಡೆ ಎತ್ತಿ ವ್ಯಗ್ರಗೊಂಡಿವೆಯೆ ಎಂದು ಭೀತರಾಗುತ್ತೇವೆ. ಹೊಸ ಚುನಾವಣೆಯನ್ನು ಗೆದ್ದು ಆಡಳಿತದ ಹೊಣೆಯನ್ನು ಸುಸೂತ್ರವಾಗಿ ನಿಭಾಯಿಸಲು ಇಂಥದೊಂದು ಕಟ್ಟಡದ ಸಂಕೀರ್ಣವನ್ನು ಹೀಗೆ, ಈ ರೀತಿಯಲ್ಲಿ, ಇದೇ ಸಮಯಕ್ಕೆ ಉದ್ಘಾಟನೆಗೊಳಿಸಬೇಕು ಎಂದು ಖ್ಯಾತ ಜ್ಯೋತಿಷಿಗಳೊಬ್ಬರು ಜನನಾಯಕರಿಗೆ (ಭವ್ಯವಾಗಿದೆ ಎಂದೆನ್ನಲಾದ ಕಟ್ಟಡದ ಸೂಕ್ತ ಸ್ಥಳದಲ್ಲಿ ಇದೇ ಸಮಯದಲ್ಲಿ ಆಸೀನರಾಗಿ ಎಂದು ನಿಖರವಾದ ವೇಳೆಯನ್ನೂ ಒದಗಿಸಿದರು). ಮಾರ್ಗದರ್ಶನ ಮಾಡಿದ್ದರು. ಅವಧಿಗೂ ಮುನ್ನ ಚುನಾವಣೆಯನ್ನೂ ಘೋಷಣೆ ಮಾಡಿಸಿಯಾಗಿತ್ತು ವಿಧ್ಯುಕ್ತವಾಗಿ. ಆದರೆ, ಜನನಾಯಕರು ಯಶಸ್ಸನ್ನು ಗಳಿಸಲಿಲ್ಲ. ಚುನಾವಣೆಯ ಪರಿಣಾಮವು ಅವರು ನಿರೀಕ್ಷಿಸಿದ ರೀತಿಯಲ್ಲಿ ಬರಲಿಲ್ಲ. ನಮ್ಮ ದೇಶದ ಪ್ರಧಾನ ಆಕರ್ಷಣೆಯಾದ, ಏಳುಬೀಳುಗಳನ್ನೆಲ್ಲ ದೇಶದ ವಿಷಯದಲ್ಲೇ ನಿಕಷಕ್ಕೊಡ್ಡುವ, ನಿರ್ಧರಿಸಿ ಜಾರಿಗೆ ತರುವ ಪಾರ್ಲಿಮೆಂಟ್‌ ಕಟ್ಟಡದಲ್ಲಿ ವಾಸ್ತು ದೋಷವಿದೆ ಎಂದು ಅಭಿಪ್ರಾಯವಿದೆ. ವಿಧಾನಸೌಧ, ವಿಕಾಸ ಸೌಧಗಳಲ್ಲಿ ವಾಸ್ತು ದೋಷಗಳಿವೆ ಎಂದು ಅಭಿಪ್ರಾಯ ವ್ಯಕ್ತಗೊಳ್ಳುತ್ತಿರುವುದರ ಬಗ್ಗೆ ನಾವು ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಒಂದು ಕೈಗಾರಿಕಾ ಸಂಸ್ಥೆಯ ಕಟ್ಟಡ, ಕಾರ್ಖಾನೆಯ ಕಟ್ಟಡದ ವಿಷಯ ವಾಸ್ತುವಿಚಾರವಾಗಿ ಕೇಳಿಸಿಕೊಳ್ಳುತ್ತೇವೆ. ಹೆಸರಿಸುವುದು ಬೇಡ. ಆದರೆ ತೀರಿಸಲಾಗದಷ್ಟು ಸಾಲ ಮಾಡಿ, ಒಳಿತನ್ನೇ ಸೃಷ್ಟಿಸುವ ಎಲ್ಲಾ ಯೋಜನೆಗಳನ್ನು ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಹಾಕಿಕೊಂಡು ವಿಫ‌ಲವಾಗಿ ಸೋತು ಸುಣ್ಣವಾದವರ ಬಗ್ಗೆ ತಿಳಿದಿದ್ದೇವೆ. ಸಾಲದ ಉರುಳು ಕುತ್ತಿಗೆಗೇ ಸುತ್ತಿಕೊಂಡಾಗ ಇನ್ನು ಎದುರಿಸಬೇಕಾದ ಕಾಯ್ದೆ-ಕಾನೂನುಗಳಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಿದವರ ಬಗ್ಗೆ ತಿಳಿದಿದ್ದೇವೆ. ಅಮೆರಿಕದಲ್ಲಿ ಆ ದೇಶದ ಕೋಡುಗಳಾಗಿದ್ದ ವರ್ಲ್ಡ್ ಟ್ರೇಡ್‌ ಸೆಂಟರ್‌ ಕಟ್ಟಡಗಳು ಉಗ್ರರ ಅಟ್ಟಹಾಸಕ್ಕೆ (09/11 ಘಟನೆ 2001ರಲ್ಲಿ ) ಕುಸಿದು ಉರಿದವು. ಇಲ್ಲಿನ ವಾಸ್ತುದೋಷದ ಬಗ್ಗೆ ವಿಸ್ತೃತವಾಗಿ ಚರ್ಚೆಯಾಯ್ತು. ಪ್ರಮುಖ ಕಟ್ಟಡಗಳಲ್ಲಿ ಅತೃಪ್ತ ಆತ್ಮಗಳ ಓಡಾಟ, ನರಳಾಟಗಳ ಬಗ್ಗೆ ಕೇಳಿಸಿಕೊಳ್ಳುತ್ತ ಇರುತ್ತೇವೆ.

ಭಾರತೀಯ ವಾಸ್ತುಶಾಸ್ತ್ರ ಕೇವಲ ಗೊಡ್ಡು ನಂಬಿಕೆಯೆ?
ಖಂಡಿತವಾಗಿ ವಾಸ್ತು ವಾಸ್ತವ. ಗೊಡ್ಡು ನಂಬಿಕೆಯಲ್ಲ. ಆದರೆ, ಜನಮಾನಸದಲ್ಲಿನ ಭೀತ ಸ್ಥಿತಿ ವಿಶ್ಲೇಷಣೆಗೆ ಅರ್ಹವಾಗಿದೆ. ಕಟ್ಟಕಡೆಗೆ ಭಾರತೀಯ ಆಷೇìಯ ಪರಂಪರೆ ಪ್ರತಿಪಾದಿಸುವ ಧರ್ಮ, ಅರ್ಥ, ಕಾಮ, ಮೋಕ್ಷಗಳ ವಿಚಾರವನ್ನು ಹೆಚ್ಚಿನ ಬೆಳಕಿನಲ್ಲಿ ವ್ಯಾಖ್ಯಾನಿಸಬೇಕಾಗಿದೆ. ಧರ್ಮ ಮತ್ತು ಮೋಕ್ಷದ ಬಗೆಗಾಗಿನ ವಿಚಾರವು ತಾವೇ ತಾವಾಗಿ ಬದುಕನ್ನು ಅರ್ಥಪೂರ್ಣವಾಗಿಸಲಾರವು. ಅರ್ಥ ಮತ್ತು ಕಾಮಗಳು ಬದುಕನ್ನು ಆಕೃತಿಯಿಂದ ವಿಕೃತಿಗೆ ತಳ್ಳಬಲ್ಲವು. ಜಗತ್ತು ಯಾಕೆ, ಹೇಗೆ, ಯಾವಾಗ ಹುಟ್ಟಿತೋ, ಅದಕ್ಕೆ ಬೇಕಾದ ಖಾಲಿಯಾದ ಜಾಗ ಹೇಗೆ ದಕ್ಕಿತೋ, ಖಾಲೀ ಜಾಗ (sಟಚcಛಿ), ಕಾಲ (ಠಿಜಿಞಛಿ) ದ ಬಗೆಗೆ ಹೇಗೆ ವ್ಯಾಖ್ಯಾನಿಸುವುದೋ ಕಷ್ಟದ ಕೆಲಸ. ಗುರುತ್ವಾಕರ್ಷಣ ಶಕ್ತಿ, ವೇಗದಿಂದ ಆಕಾಶಕಾಯಗಳಲ್ಲಿ ಒಂದಾದ ಭೂಮಿ ತನ್ನ ಅಕ್ಷದ ಸುತ್ತ ತಿರುಗುತ್ತ, ಸೂರ್ಯನ ಸುತ್ತ ತಿರುಗುವ ಕಾಯಕ ಇತ್ಯಾದಿಗಳ ಆದಿಯ ಬಗೆಗೆ ವಿಸ್ತರಿಸಿ ಹೇಳಲು ಸಾಮಗ್ರಿಗಳಿಲ್ಲ. ಇವನ್ನೆಲ್ಲ ವಿಸ್ತರಿಸಿ ಹೇಳಿದ,

ಹಲವು ಹದಿನೆಂಟಲ್ಲ ಸಾವಿರಾರು ವಿಚಾರಗಳನ್ನು ಪ್ರತಿಪಾದಿಸಿದ ವೇದಗಳು ಹೀಗಾಗಿಯೇ ಅಪೌರುಷೇಯಗಳಾಗಿವೆ. ಇಂದಿನ ವಿಜ್ಞಾನವೇ ಬೆರಗಾಗುವಷ್ಟು ಮಾಹಿತಿಗಳನ್ನು ವೇದಗಳು ಬಹು ಪೂರ್ವದಲ್ಲೇ ವಿವರಿಸಿವೆ. ಮನಸ್ಸು , ಆತ್ಮ, ಅನ್ನ, ಕೋಶ, ರುಧಿರ (ರಕ್ತ), ಮಾಂಸ, ಮಜ್ಜನ, ಮನೋಸ್ಥಿತಿ ಇತ್ಯಾದಿಗಳೆಲ್ಲದರ ಬಗೆಗೂ ಹೇಳುತ್ತ ಪಂಚಭೂತಗಳನ್ನು, ಪಂಚೇಂದ್ರಿಯಗಳನ್ನು , ಅರಿಷಡ್ವರ್ಗಗಳನ್ನು ವಿಂಗಡಿಸಿ ಹೇಳಿದೆ. ಮಾನವನ ಮಾನಸಿಕ ಆರೋಗ್ಯ, ದೈಹಿಕ ದಾಡ್ಯìತೆ, ಸ್ವಭಾವ, ದೌರ್ಬಲ್ಯಗಳಲ್ಲೆಲ್ಲ ಈ ಪಂಚಭೂತಗಳು (ಮಣ್ಣು, ಗಾಳಿ, ಬೆಳಕು, ನೀರು, ಊಹಿಸಲು ಸಾಧ್ಯವಾಗದ space ಮತ್ತು time ಸೂತ್ರಕ್ಕೆ ಬಂಧಿತಗೊಂಡ ಅಥವಾ ಬಂಧಿತಗೊಂಡಿರದ ಆಕಾಶ ನಿರ್ವಹಿಸುವ ಪಾತ್ರ, ತಂತಮ್ಮ ದೂರದ ಪರಿಣಾಮದಿಂದಾಗಿ ಭೂಮಿಯ ಮೇಲೆ ವಿಶಿಷ್ಟವಾಗಿ ಅವು ಬೀರುವ ಪರಿಣಾಮಗಳಿಂದಾಗಿ ನಿಗೂಢ ಮತ್ತು ಅನನ್ಯ. ಹೀಗಾಗಿ ಪ್ರಮುಖವಾಗಿ ವಾಸ್ತು ವಾಸ್ತವಗಳು ನಮ್ಮ ಪಾಲಿಗೆ ಸಿಗಬೇಕಾದ ಸೂಕ್ತ ಮಣ್ಣು , ಗಾಳಿ, ಬೆಳಕು, ನೀರು ಹಾಗೂ ಆಕಾಶ ನೀಲದ ಅಚ್ಯುತ (ಚ್ಯುತಿ ಇರದ) ಅವಸ್ಥೆಗಳಾದ ಕಿಂಕತ್ಸ , ಶಾಂಘ, ಇಕ್ಷಾಕು ಪದರುಗಳ ನೆಲೆಯ ಮೇಲಿಂದಲೇ ದಕ್ಕಬೇಕು ಎಂಬುದನ್ನು ನಾವು ಪರಿಗಣಿಸಬೇಕು.

ಹೀಗಾಗಿ, ವಾಸ್ತು ವಾಸ್ತವವನ್ನು ಬಳಸಿಕೊಂಡೇ ಕಟ್ಟಿದ ಎಷ್ಟೊಂದು ಮನೆಗಳು, ಸಂಕೀರ್ಣಗಳು, ದೇವಾಲಯಗಳು ಹಲವು ಭಿನ್ನ ಸನ್ನಿವೇಶಗಳಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಕೊಡುತ್ತಿರುತ್ತವೆ ಯಾಕೆ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ. ಒಂದು ಊರು ಅಂದರೆ ಅದು ಈ ಎತ್ತರದಲ್ಲಿದ್ದರೆ, ಈ ಮಟ್ಟದಲ್ಲಿ (ಸಮುದ್ರದ ಮಟ್ಟದಿಂದ) ಇದ್ದರೆ, ಈ ನೆಲೆಯಲ್ಲಿ ಉದ್ಭವಿಸಿ ಇದ್ದಿದ್ದರೆ ಇಂತಿಂಥದೇ ಜಾಗದಲ್ಲಿ ವಸತಿಯ ಸ್ಥಳಗಳು, ವ್ಯಾಪಾರದ ಸ್ಥಳಗಳು, ದೇವಾಲಯಗಳು, ತ್ಯಾಜ್ಯಗಳ ನಿರ್ಮೂಲನಕ್ಕಾಗಿನ ಸ್ಥಳದ ಸ್ಥಿತಿಗತಿಗಳು, ಸ್ಮಶಾನಗಳು, ಮಳೆಯ ನೀರು ಹರಿದು ಸೇರಬೇಕಾದ ಹಳ್ಳ , ನದಿ, ಸಮುದ್ರಗಳಿಗೆ ಸೇರಿಕೊಳ್ಳುವುದೆಲ್ಲ ಒಂದು ನಿರ್ದಿಷ್ಟ ರೀತಿಯಲ್ಲಿ ರೂಪುಗೊಂಡಿರುತ್ತಿತ್ತು. ಈಗ ಊರುಗಳು ಬೆಳೆಯುತ್ತವೆ. ತ್ಯಾಜ್ಯಗಳ ದಾರಿ, ಹಳ್ಳದ ವ್ಯಾಪ್ತಿ, ಸ್ಮಶಾನಗಳ ಅಂಚು, ಯಾವುದೋ ಜಾಗೆಗಳಲ್ಲಿ ನಡೆಸಿದ ಅತಿಕ್ರಮಣ ಇತ್ಯಾದಿ, ಇತ್ಯಾದಿಗಳು ಆವಶ್ಯಕವಾದ ಸಮತೋಲನವನ್ನು ಹಾಳುಗೆಡವುತ್ತಿದೆ. ದೇವಾಲಯದ ವಾಸ್ತುಗಳು, ಜೀವ ಪ್ರತಿಷ್ಠಾನ, ಅಷ್ಟಬಂಧ, ಬಿಂಬ ಸಕ್ರಮ ವಿಧಿವಿಧಾನಗಳು ಸಂವಿಧಾನ ಬದ್ಧವಾಗಿರದೆ, ಊರ ನಟ್ಟನಡುವಿನ ರಸ್ತೆಯಲ್ಲೇ ಗುಡಿಗಳು, ಗರ್ಭಗುಡಿಗಳು, ತಲೆಎತ್ತಿ ನಿಲ್ಲುವಂತಾಗಿವೆ.

ಬೆಂಗಳೂರಿನ ಅತ್ಯಂತ ಶ್ರೇಷ್ಠ , ಶ್ರೀಮಂತ ವಸತಿ ನಿವೇಶನಗಳು ಯಾವೆಲ್ಲ ಸ್ಥಿತಿಯ ವ್ಯಾಪ್ತಿಯಲ್ಲಿದ್ದವು? ಅವು ಈಗ ಪ್ರತಿಷ್ಠಿತ ಕಾಲೊನಿಗಳು ಎಂದ ಮಾತ್ರಕ್ಕೆ ಇರಬೇಕಾದ ವಾಸ್ತು ವಾಸ್ತವವನ್ನು ಪಡೆದು ಬಿಡುತ್ತವೆಯೆ? “ಬೆಂಗಳೂರು’ ಎಂದು ಸಾಂಕೇತಿಕವಾಗಿ ಉಲ್ಲೇಖೀಸಿದ್ದೇನೆ. ಪ್ರತಿಷ್ಠಿತ ಕಾಲೊನಿಯೊಂದರಲ್ಲಿ ಈಗ ಮೂರು ವರ್ಷಗಳ ಹಿಂದೆ ಶ್ರೀಮಂತವಾಗಿ, ವಾಸ್ತು ಪರಿಕಲ್ಪನೆಯ ಎಲ್ಲಾ ರೀತಿ, ರಿವಾಜು, ನಿಯಮಗಳನ್ನು ಬಳಸಿಕೊಂಡೇ ಕಟ್ಟಿದ್ದೆವು ಎನ್ನಲಾದ ಕಡೆ (ಬೆಂಗಳೂರಿನ ಉದಾಹರಣೆಯನ್ನೇ ಬಳಸಿಕೊಂಡು ಹೇಳುತ್ತಿದ್ದೇನೆ) ನೂರಾರು ಮನೆಗಳು ರಾತ್ರಿಯಿಂದ ಹಗಲಿನ ತನಕ ಬಿದ್ದ ಮಳೆಗೆ ತತ್ತರಿಸಿ ಹೋದವು. ನೂರಾರು ಆಡಿ, ಬೆಂಝ್ ಮಾದರಿಯ ದುಬಾರಿ ಕಾರುಗಳು ನೀರಿನಲ್ಲಿ ಮುಳುಗಿದವು. ಹಾಗಾದರೆ ವಾಸ್ತುವನ್ನು ನಿಯಮಗಳ ನೆಲೆಯಲ್ಲಿ ಕರಾರುವಕ್ಕಾಗಿ ಪಾಲಿಸಿದ ಸಂದರ್ಭ ಇದ್ದಾಗಲೂ ತೊಂದರೆಗಳು ಏಕೆ ಸಂಭವಿಸಿದವು? ಇದು ಬಹುದೊಡ್ಡ ಪ್ರಶ್ನೆ.

ಉಳಿದುಕೊಳ್ಳುವ ಪ್ರಶ್ನೆಗಳು
ಹಾಗಾದರೆ, ವಾಸ್ತು ಅರ್ಥವಿಲ್ಲದ ವಿಚಾರವೆ? ಖಂಡಿತವಾಗಿ ಈ ನಿರ್ಣಯಕ್ಕೆ ಬರಬಾರದು. ಆದರೆ ಭೂಮಿಯ ಮಣ್ಣು , ಅದರ ಗುಣಧರ್ಮ, ಯಾವ ಪರಿಸರದಲ್ಲಿ ಮನೆ ಕಟ್ಟುವುದು, ಮನೆಯ ಅಭ್ಯುತ್ಥಾನದ ಸಂಬಂಧವಾದ ವಾಸ್ತುಶಿಸ್ತಿನ ಅನಿವಾರ್ಯತೆಗಳು (ಇವು ಕಾರ್ಖಾನೆ, ವಸತಿ ಸಮುಚ್ಚಯ, ಬಡಾವಣೆ, ದೇವಾಲಯಗಳ ವಿಚಾರವಾಗಿಯೂ ಮುಖ್ಯವಾಗಿವೆ)- ಗಾಳಿ, ಬೆಳಕು, ಮಣ್ಣು , ನೀರು, ಚ್ಯುತಿ ಇರದ ಅಚ್ಯುತತ್ವದ ಆಕಾಶ (ದೈವದ ವಿಚಾರ) ತತ್ವದ ಸಂಬಂಧವಾಗಿ ಸಮತೋಲನ ಹೊಂದಬೇಕು. ಇಂದು ಮನೆಯಲ್ಲಿ ಪ್ರಧಾನವಾದ ದೇವರ ಮನೆ ಹೊಸ್ತಿಲು (ಸೊಸೆಯಾಗಿ ಬರುವ ಹೆಣ್ಣು ಮಗಳು ತನ್ನ ಪಾದದ ಮೂಲಕ ತಳ್ಳಿದ ಧಾನ್ಯ ಚೆಲ್ಲಲು ಅವಶ್ಯವಾದ) ಮಾಯವಾಗಿರುವ ಕಾಲದಲ್ಲಿ , ಸ್ಮಶಾನ, ಕೆರೆ, ಹಳ್ಳಗಳ ಜಾಗೆ, ಕಾಲುವೆಗಳಲ್ಲೂ ಮನೆಗಳು (ಶ್ರೀಮಂತ posh colonyಗಳು ಏಳುತ್ತಿರುವ ವರ್ತಮಾನದಲ್ಲಿ, ಮನೆಯ ಕಕ್ಕಸನ್ನು ಸೂರು ಗಜ ದೂರದಲ್ಲಿ ಕಟ್ಟಲಾಗದ ಸ್ಥಿತಿಗತಿಯಲ್ಲಿ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ದೇವಾಲಯಗಳು ಮೈದಳೆಯುವ ಸನ್ನಿವೇಶಗಳಿರುವ ಈ ಸಂದರ್ಭದಲ್ಲಿ ವಾಸ್ತುವಿನ ಕಲ್ಪನೆ ಹಾಸ್ಯಾಸ್ಪದವಾಗುತ್ತಿದೆ.

ಮಹಾಬಲಮೂರ್ತಿ ಕೊಡ್ಲಕೆರೆ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.