ಹರುಷವೊಂದೆ ಯಾರಿಗುಂಟು ಹೇಳು ಜಗದಲಿ?


Team Udayavani, Jan 1, 2017, 3:45 AM IST

Malathi-Holla11111.jpg

ಹೂವು- ಮುಳ್ಳು ಎರಡೂ ಉಂಟು ಬಾಳ ಲತೆಯಲಿ…

ಹರುಷವೊಂದೆ ಯಾರಿಗುಂಟು ಹೇಳು ಜಗದಲಿ? ಹೂವು ಮುಳ್ಳು ಎರಡೂ ಉಂಟು ಬಾಳ ಲತೆಯಲಿ… ಕನ್ನಡ ಜನಪ್ರಿಯ ಚಲನಚಿತ್ರ ಗೀತೆಯಾದ ಬಾನಿಗೊಂದು ಎಲ್ಲೆ ಎಲ್ಲಿದೆ… ಹಾಡಿನ ಈ ಸಾಲಿನಲ್ಲಿ ಬಹಳ ಅರ್ಥಗಳು ಹುದುಗಿಕೊಂಡಿವೆ. ನಾವು ಸದಾ ಸುಖವಾಗಿರಲು ಬಯಸುತ್ತೇವೆ. ಸುಖೀ ಬಾಳಿಗೋಸ್ಕರವೇ ನಮ್ಮ ಪ್ರಯತ್ನವಿದ್ದಿರುತ್ತದೆ. ಕಷ್ಟಗಳನ್ನು ಬಯಸುವವರು ಯಾರು ಹೇಳಿ? ಆದರೆ, ಬದುಕೆಂದರೆ ಸುಖ-ದುಃಖಗಳ ಸಮ್ಮಿಲನ. 

ಸಮಾಜದಲ್ಲಿ ಕೆಟ್ಟವರಿದ್ದರೆ, ಒಳ್ಳೆಯವರೂ ಇದ್ದೇ ಇರುತ್ತಾರೆ. ಆದರೆ, ಒಮ್ಮೊಮ್ಮೆ ನಾವು ಎದುರಾಗುವ ಕೇಡುಗಳ ಸರಮಾಲೆಯಿಂದ, ಸಂಕಷ್ಟಗಳ ಪ್ರಹಾರಗಳಿಂದ ಅದೆಷ್ಟು ಹೈರಾಣಾಗಿ ಬಿಡುತ್ತೇವೆ ಎಂದರೆ… ಈ ಜಗತ್ತಿನಲ್ಲಿ ಒಳ್ಳೆಯವರೇ ಇಲ್ಲ. ಸುಖವೆಂಬುದೇ ಮರೀಚಿಕೆ ಎಂದುಕೊಂಡು ಕಣ್ಮುಚ್ಚಿ ಕತ್ತಲನ್ನೇ ತುಂಬಿಕೊಂಡುಬಿಡುತ್ತೇವೆ. ನಾನೂ ಅದೆಷ್ಟೋ ಸಲ ಅಂದುಕೊಂಡಿದ್ದಿದೆ- ಅಂಗವಿಕಲರಿಗೆ ಈ ಸಮಾಜ, ಸರ್ಕಾರ ಎಲ್ಲವೂ ಅದೆಷ್ಟು ಹಕ್ಕುಗಳಿಂದ ದೂರವಿಟ್ಟಿದೆ ಎಂದು. ಆದರೆ ನನ್ನ ಈ ಆಲೋಚನೆಯನ್ನು ಬಹಳಷ್ಟು ತಿದ್ದಿ, ಅದಕ್ಕೊಂದು ಧನಾತ್ಮಕ ನಿಲುವನ್ನು ಕೊಟ್ಟವರು ಮತ್ತು ಸಮಾಜಕ್ಕೆ, ನನ್ನಂಥವರಿಗೆ, ಸರಕಾರಕ್ಕೆ ಎಲ್ಲರಿಗೂ ಮಾದರಿಯಾಗಿ ಬದುಕುತ್ತಿರುವವರು ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ – ಹೀಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ತಮ್ಮ ಕೀರ್ತಿಯ ಕಿರೀಟಕ್ಕೆ ಗರಿಗಳಾಗಿಸಿಕೊಂಡು ಅದಮ್ಯ ಉತ್ಸಾಹದಿಂದ ಮುನ್ನಡೆಯುತ್ತಿರುವವರು ಡಾ. ಮಾಲತಿ ಹೊಳ್ಳ.

ಬ್ಯಾಂಕ್‌ ಮ್ಯಾನೇಜರ್‌ ಆಗಿ, ಈಗ ವಿಆರ್‌ಎಸ್‌ ತೆಗೆದುಕೊಂಡಿರುವ ಮಾಲತಿಯಕ್ಕನನ್ನು ನಾನು ಮೊತ್ತಮೊದಲು ಭೇಟಿಯಾಗಿದ್ದು ಸುಮಾರು ಆರೇಳು ವರ್ಷಗಳ ಹಿಂದೆ. ಕಾರ್ಯಕ್ರಮವೊಂದರಲ್ಲಿ. ಅಂದು ನನ್ನೊಡನೆ ತುಂಬಾ ಸಹಜವಾಗಿ, ಹಲವು ವರುಷಗಳ ಪರಿಚಯವಿದ್ದಂತೇ ಓರ್ವ ಸ್ನೇಹಿತೆಯಂತೆ, ಹಿರಿಯಕ್ಕನಂತೆ ಹರಟಿದ ಅವರ ಸರಳತೆಗೆ, ವಿನಮ್ರತೆಗೆ ಮಾತ್ರ ನಾನು ಮಾರು ಹೋಗಿದ್ದೆ. ಅವರ ವ್ಯಕ್ತಿತ್ವವೇ ಅಂಥಾದ್ದು. ಒಮ್ಮೆ ಭೇಟಿಯಾದರೂ ಸಾಕು, ನಮ್ಮೊಳಗೆ ಹೊಸ ಸ್ಫೂರ್ತಿಯನ್ನು, ಉತ್ಸಾಹದ ಹೊಳೆಯನ್ನೇ ತುಂಬಿ ಬಿಡುತ್ತಾರೆ. 

ಪೋಲಿಯೋದಿಂದ ಬಾಲ್ಯದಿಂದಲೇ ಅಂಗವೈಕಲ್ಯ ಹೊಂದಿದ್ದರೂ, ಕ್ರೀಡೆಯಲ್ಲಿ, ಸಮಾಜ ಸೇವೆಯಲ್ಲಿ ಅವರು ಸಾಧಿಸಿರುವ ಔನ್ನತ್ಯ ಅನನ್ಯ, ಅಪೂರ್ವ !

ಅಂದು ಹೀಗೇ ಮಾತಿನ ನಡುವೆ ನಾನು ನನ್ನಳಲನ್ನು ಹೇಳುಕೊಳ್ಳುತ್ತ ಹೇಗೆ ನಾನು ಡಿಗ್ರಿಯಲ್ಲಿ ಅತ್ಯುತ್ತಮ ಅಂಕಗಳ ಗಳಿಸಿಯೂ, ಲಿಫ್ಟ್ ಅಥವಾ ರ್‍ಯಾಂಪ್‌ ಇಲ್ಲದ ಕಾರಣ ನನ್ನಿಷ್ಟದ ವಿಷಯವಾದ ಮೈಕ್ರೋಬಯೋಲಜಿಯಲ್ಲಿ ಉನ್ನತ ವ್ಯಾಸಂಗ ಮಾಡಲಾಗಲಿಲ್ಲ ಎಂಬುದನ್ನು ವಿವರಿಸಿ ನಮ್ಮ ಸರಕಾರ ಮತ್ತು ಸಮಾಜ ನಮ್ಮಂಥವರ ಮೂಲಭೂತ ಹಕ್ಕುಗಳ ಕಡೆ ಅದೆಷ್ಟು ನಿರ್ಲಕ್ಷ್ಯವಾಗಿದೆ ಎಂದು ನೋವಿನಿಂದ ನುಡಿದಿದ್ದೆ. ಆಗ ಅವರು, “”ಸರ್ಕಾರವನ್ನು ದೂರಿ ಪ್ರಯೋಜನವಿಲ್ಲಮ್ಮ. ಸಮಾಜ ಬದಲಾಗಬೇಕು. ಅದಕ್ಕೂ ಮೊದಲು ನಾವು ನಮ್ಮನ್ನು ಬದಲಾಯಿಸಿಕೊಂಡು ಮುನ್ನಡೆಯಬೇಕು. 

ಯಾರ ಸಹಾಯಕ್ಕೋ ನಾವು ಕಾಯುತ್ತಾ ಕುಳಿತರಾಗದು. ಸ್ವಯಂ ಇತರರಿಗೆ ಸಹಾಯವನ್ನು ನೀಡುವಂತೆ ನಮ್ಮ ಬದುಕನ್ನು ಆದಷ್ಟು ರೂಪಿಸಿಕೊಳ್ಳಬೇಕು” ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದ್ದರು. ಅಂದು ನಾನು ಸಮಾಜ ನಮಗೇನು ಮಾಡಿದೆ ಎಂಬುದಕ್ಕಿಂತ ನಾವೇನು ನೀಡಿದ್ದೇವೆ ಎಂಬುದು ಮುಖ್ಯ ಎಂಬುದನ್ನು ಅವರ “ಮಾತೃ ಫೌಂಡೇಶನ್‌’ನಿಂದ ಕಲಿತುಕೊಂಡೆ. 

ಮಾಲತಿ ಹೊಳ್ಳ ಅವರು ಸ್ಥಾಪಿಸಿರುವ ಮಾತೃ ಫೌಂಡೇಶನ್‌ಗೆ ನಾನು ಕೆಲವು ವರ್ಷಗಳ ಹಿಂದೆ ಪರಿವಾರದೊಂದಿಗೆ ಭೇಟಿಕೊಟ್ಟಿದ್ದೆ. ಆಗ ಅದು ಎಚ್‌ಎಎಲ್‌ನಲ್ಲಿ ಪುಟ್ಟದಾಗಿತ್ತು. ನಾವು ಭೇಟಿ ಕೊಟ್ಟಿದ್ದಾಗ ರಾಜ್ಯದ ವಿವಿಧೆಡೆಯಿಂದ ಬಂದ ಹದಿನೇಳು ಹುಡುಗರು ಅಲ್ಲಿದ್ದರು. ಈ ಹುಡುಗರ ಉತ್ಸಾಹ, ಧ್ಯೇಯೋದ್ದೇಶ, ಸ್ವಾವಲಂಬನೆ, ಆತ್ಮವಿಶ್ವಾಸ ಇವುಗಳನ್ನೆಲ್ಲಾ ಕಣ್ಣಾರೆ ಕಂಡೇ ಅನುಭೂತಿ ಪಡೆಯಬೇಕೇ ವಿನಃ ಕೇವಲ ಪದಗಳಲ್ಲಿ ಹಿಡಿಯಲಾಗದು! ಈಗ ಅದು ಸರ್ಜಾಪುರ ರೋಡ್‌ ಬಳಿಗೆ ಸ್ಥಳಾಂತರಗೊಂಡಿದ್ದು, ಸಹೃದಯರ ಸಹಕಾರದಿಂದ, ಮಾಲತಿಯಕ್ಕನ ಛಲದಿಂದ ಹೆಚ್ಚು ಸೌಲಭ್ಯಗಳನ್ನು ಹೊಂದಿದ ಸುಸಜ್ಜಿತ ಹಾಸ್ಟೆಲ್‌ ಆಗಿ ರೂಪುಗೊಂಡಿದೆ. ಸದ್ಯ ಇಲ್ಲಿ ವಿವಿಧ ವಯಸ್ಸಿನ ಹನ್ನೆರಡು ಮಕ್ಕಳು ವಾಸಿಸುತ್ತಿದ್ದಾರೆ.
 
ಮಾತೃಫೌಂಡೇಶನ್ನಿನ ಹೆಗ್ಗಳಿಗೆ, ವಿಶಿಷ್ಟತೆ ಏನು ಗೊತ್ತೆ? ಇಲ್ಲಿರುವ ಮಕ್ಕಳು ಅನಾಥರಲ್ಲ ! ಅಂಗವಿಕಲರ ಬದುಕು ಇತರರಂತೆ ಸರಳವಲ್ಲವೇ ಅಲ್ಲ. ಅದರ ಜೊತೆ ಬಡತನ ಸೇರಿ ಬಿಟ್ಟರೆ ಅವರ ಪಾಡು ಕೇಳುವುದೇ ಬೇಡ! ಹೀಗಿರುವಾಗ ಸಾಮಾನ್ಯರಂತೆ ಬದುಕುವುದು, ಶಿಕ್ಷಣ ಪಡೆಯುವುದು ಅವರಿಗೆ ಕನಸೇ ಆಗಿಬಿಡುತ್ತದೆ. ಮುಖ್ಯವಾಗಿ ಮನೆಯವರ ಸಹಕಾರ, ಬೆಂಬಲ, ಪ್ರೋತ್ಸಾಹ ಸಿಗದಿದ್ದರೆ ಅವರ ಅಳಿದುಳಿದ ಆತ್ಮವಿಶ್ವಾಸವೂ ಕಮರಿಹೋಗುತ್ತದೆ. ಅಂಥವರ ದೈನಂದಿನ ಕಾರ್ಯಗಳಿಗೆ, ಸ್ಕೂಲ್‌/ಕಾಲೇಜುಗಳಿಗೆ ಸುಗಮವಾಗಿ ಸಾಗಲು ವಾಹನ ಹಾಗೂ ಇನ್ನಿತರ ಅನಿವಾರ್ಯ ಸೌಕರ್ಯಗಳು ಬೇಕೇ ಬೇಕಾಗಿರುತ್ತದೆ. ಅದಕ್ಕೆ ಆರ್ಥಿಕ ಸಹಕಾರವೂ ಅತ್ಯಗತ್ಯ. ರಾಜ್ಯದಲ್ಲಿ ಅದೆಷ್ಟೋ ಅಂಗವಿಕಲರು ತಮ್ಮೊಳಗಿನ ಪ್ರತಿಭೆಗೆ ಸೂಕ್ತ ಸಹಕಾರ ಸಿಗದೇ ಕತ್ತಲ್ಲೇ
ಉಳಿದುಕೊಂಡಿದ್ದಾರೆ. 

ಅಂಥ ಬಡ ಅಂಗವಿಕಲ ಹುಡುಗರನ್ನು ಮಾತೃ ಫೌಂಡೇಶನ್ನಿಗೆ ಕರೆ ತಂದು, ಅವರಿಗೆ ಉಚಿತ ವಸತಿ, ಊಟ, ಬಟ್ಟೆಗಳನ್ನು ನೀಡುತ್ತಿರುವುದಲ್ಲದೆ, ಎಲ್ಲರಂತೆ ಬಾಳಿ ಬದುಕಲು ಬೇಕಾದ ಸ್ಥೈರ್ಯ, ಧೈರ್ಯವನ್ನು ತುಂಬುತ್ತ ಅವರಿಗೆಲ್ಲ ಸ್ವಾವಲಂಬನೆಯನ್ನು ಕಲಿಸಿಕೊಡುತ್ತಿದ್ದಾರೆ. ಬಹು ಮುಖ್ಯವಾಗಿ ಅವರನ್ನೆಲ್ಲಾ ಸಾಮಾನ್ಯರು ಕಲಿಯುವ ಶಾಲೆ/ಕಾಲೇಜುಗಳಿಗೆ ದಾಖಲಾತಿ ಮಾಡಿ, ಅವರ ಮೂಲಭೂತ ಹಕ್ಕಾದ ಶಿಕ್ಷಣವನ್ನೂ ಕೊಡಿಸುತ್ತಿದ್ದಾರೆ. ಇದನ್ನೆಲ್ಲ ಅವರು ಸಾಧಿಸುತ್ತಿರುವುದು ತಮ್ಮ ಸ್ವಂತ ಖರ್ಚಿನಿಂದ ಹಾಗೂ ಸಹೃದಯ ಸ್ನೇಹಿತರ ಸಹಕಾರದಿಂದ.

ಮೊದಲು ನಾನು ಅಂದುಕೊಳ್ಳುತ್ತಿದ್ದೆ- ನನ್ನಲ್ಲಿ ದೈಹಿಕ ಸಾಮರ್ಥ್ಯದ ಕೊರತೆಯಿದ್ದೂ ನಾನು ಮನೆಗೆಲಸವನ್ನು ಮಾಡುತ್ತ, ಹೊರಗಿನ ಕಾರ್ಯಗಳಿಗೂ ಪತಿಗೆ ಸಾಥ್‌ ನೀಡುತ್ತ, ಮಗಳನ್ನು ಕಷ್ಟಪಟ್ಟು ಸಾಕುತ್ತಿದ್ದೇನೆ- ಎಂದು. ನನ್ನೊಳಗೆ ಚಿಗುರೊಡೆದಿದ್ದ ಈ ಒಂದು ಸಣ್ಣ ಹೆಮ್ಮೆಯ/ಅಹಂಕಾರದ ಭಾವವನ್ನು ಸಂಪೂರ್ಣ ಒಡೆದು ಹಾಕಿದ್ದು ಮಾಲತಿ ಹೊಳ್ಳರ ನಿಸ್ವಾರ್ಥ ಸಮಾಜ ಸೇವೆ! ನಾವು ನಮ್ಮ ಮಕ್ಕಳನ್ನು ಅದೂ ಸರ್ವರೀತಿಯಲ್ಲೂ ಸಮರ್ಥರಾಗಿರುವವರನ್ನು ಸಾಕಲು ಪರದಾಡುತ್ತೇವೆ. “ಸಾಕಪ್ಪಾ, ಎಷ್ಟು ಕಷ್ಟ ಈ ಮಕ್ಕಳನ್ನು ಸುಧಾರಿಸುವುದು… ಹೈರಾಣಾದೆವು’ ಎಂದುಕೊಳ್ಳುತ್ತೇವೆ. ಆದರೆ, ಡಾ. ಮಾಲತಿಯವರು ಬದುಕು ತಮಗೆ ನೀಡಿದ ಬಹು ದೊಡ್ಡ ಸವಾಲನ್ನು ಎದುರಿಸುತ್ತಲೇ, ಅದರ ಜೊತೆ ಹೋರಾಡುತ್ತಲೇ, ನಮ್ಮಂಥವರ ಬದುಕನ್ನು ನಗುವಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ಈ ಸತ್ಕಾರ್ಯದಲ್ಲಿ ಮತ್ತಷ್ಟು ಸಜ್ಜನರು ಕೈಜೋಡಿಸಿದರೆ ಅವರ ಬಲ ನೂರ್ಮಡಿಸಿ, ಮಾತೃ ಫೌಂಡೇಶನ್ನಿನ ಮಕ್ಕಳ ಬದುಕು ಮತ್ತಷ್ಟು ಪ್ರಕಾಶಮಾನವಾಗಬಲ್ಲದು. ಬದುಕು ನನಗೆ ಕಲಿಸಿದ ಹಲವು ಪಾಠಗಳಲ್ಲಿ ಬಹು ಮುಖ್ಯವಾದದ್ದೇನೆಂದರೆ ಅನುಕಂಪದ ಭಾವನೆಯು ಕೀಳರಿಮೆಯನ್ನು ಉಂಟುಮಾಡಿದರೆ, ಸಮಾನತೆ/ಸಹಕಾರದ ಭಾವನೆಯು ಆತ್ಮವಿಶ್ವಾಸವನ್ನು ತುಂಬುತ್ತದೆ.

– ತೇಜಸ್ವಿನಿ ಹೆಗಡೆ

ಟಾಪ್ ನ್ಯೂಸ್

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ : ಜಿಲ್ಲಾಧಿಕಾರಿ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ :ಉಡುಪಿ ಜಿಲ್ಲಾಧಿಕಾರಿ

ಕುಣಿಗಲ್: ಕೋಡಿ ಹಳ್ಳದ ನೀರಿನಲ್ಲಿ ಆಟವಾಡುತ್ತಲೇ ಕೊಚ್ಚಿಹೋದ ನಾಲ್ವರು

ಕುಣಿಗಲ್: ಕೋಡಿ ಹಳ್ಳದ ನೀರಿನಲ್ಲಿ ಆಟವಾಡುತ್ತಲೇ ಕೊಚ್ಚಿಹೋದ ನಾಲ್ವರು

cm

ಯೋಜನಾಬದ್ಧವಾಗಿ ಬೆಂಗಳೂರಿನ ಅಭಿವೃದ್ಧಿಗೆ ಚಿಂತನೆ : ಮುಖ್ಯಮಂತ್ರಿ

ಗುಡಿಬಂಡೆ: ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

ಗುಡಿಬಂಡೆ: ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

rape

ಮೈಸೂರು ಗ್ಯಾಂಗ್ ರೇಪ್: 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸೇವಾ ಸಂಘ ಅಸ್ತಿತ್ವಕ್ಕೆ

ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸೇವಾ ಸಂಘ ಅಸ್ತಿತ್ವಕ್ಕೆ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ : ಜಿಲ್ಲಾಧಿಕಾರಿ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ :ಉಡುಪಿ ಜಿಲ್ಲಾಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.