ಆ್ಯಸಿಡ್‌ ಫ್ಯಾಷನ್‌!

ಸ್ವಲ್ಪ ತಿಳಿ, ಸ್ವಲ್ಪ ಗಾಢ ಇದುವೇ ಈಗಿನ ಸ್ಟೈಲು

Team Udayavani, Mar 11, 2020, 5:00 AM IST

Jeans-Fashion

ಜೀನ್ಸ್‌ ಪ್ಯಾಂಟ್‌ ಅಂದರೆ ನೀಲಿ, ಕಪ್ಪು ಬಣ್ಣದ್ದು ಅನ್ನುವ ಕಾಲ ಇದಲ್ಲ. ಅದರಲ್ಲೂ ನೂರಾರು ಬಗೆಗಳಿವೆ. ಹರಿದ ಜೀನ್ಸ್‌ ಮೇಲೆ, ಒಂಥರಾ ತಿಳಿ ಬಣ್ಣ ಚೆಲ್ಲಿದಂತೆ ಕಾಣುವ ಜೀನ್ಸ್‌ಗಳಿಗೇ ಈಗ ಹೆಚ್ಚು ಬೇಡಿಕೆ. ಅಂಥ ಜೀನ್ಸ್‌ಗಳಿಗೆ “ಆ್ಯಸಿಡ್‌ ವಾಶ್‌ ಜೀನ್ಸ್‌’ ಎನ್ನುತ್ತಾರೆ…

ಫ್ಯಾಷನ್‌ ಲೋಕದಲ್ಲಿ ಹಳೆಯ ಉಡುಪುಗಳು ಮತ್ತು ಸ್ಟೈಲ್‌ಗ‌ಳು ಕೆಲವು ವರ್ಷಗಳ ಬಳಿಕ ಮತ್ತೆ ಟ್ರೆಂಡ್‌ ಆಗುವುದು ಗೊತ್ತೇ ಇದೆ. ಅದಕ್ಕಾಗಿಯೇ ಹಲವರು ಅದೆಷ್ಟೋ ಉಡುಗೆಗಳನ್ನು ಬಿಸಾಡದೆ ಹಾಗೆಯೇ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಇದೀಗ ಅಂಥದ್ದೇ ಒಂದು ಹಳೆಯ ಉಡುಪು ಸುದ್ದಿಯಲ್ಲಿದೆ. ಅದು ಯಾವುದು ಅಂತ ತಿಳಿಸೋ ಮುನ್ನ ನಿಮ್ಮಲ್ಲಿ ಒಂದು ಪ್ರಶ್ನೆ- ಎಲ್ಲರೂ ಡೆನಿಮ್‌ ತೋಡುತ್ತೀರಾ, ಅಲ್ಲವೆ? ಹೌದು, ಅನ್ನುವವರೆಲ್ಲರ ವಾರ್ಡ್‌ರೋಬ್‌ನಲ್ಲಿ “ಬ್ಲೂ ಡೆನಿಮ್‌’ ಇದ್ದೇ ಇರುತ್ತದೆ.

ಈಗಂತೂ ಜೀನ್ಸ್‌ ನಲ್ಲೂ ಬಗೆ ಬಗೆಯ ವಿನ್ಯಾಸಗಳು, ಉಡುಪುಗಳು ಮತ್ತು ಬಣ್ಣಗಳಿವೆ. ಜೀನ್ಸ್‌ ಗೆ ಬಣ್ಣ (ಡೈ) ಹಾಕುವುದು ಅಥವಾ ತೆಗೆಯುವುದು ಕೂಡಾ ಒಂದು ಕಲೆ! ಇದೀಗ ಟ್ರೆಂಡ್‌ ಆಗುತ್ತಿರುವುದು ಅಂಥದ್ದೇ ಉಡುಗೆ. ಅದುವೇ “ಆ್ಯಸಿಡ್‌ ವಾಶ್‌ ಡೆನಿಮ…’ . ಆಶ್ಚರ್ಯವೆಂದರೆ, ಈ ಉಡುಪಿನ ಬಣ್ಣ ತೆಗೆಯಲು ಯಾವುದೇ ಆ್ಯಸಿಡ್‌ ಬಳಸುವುದಿಲ್ಲ. ಆದರೂ ಈ ವಿಧಾನಕ್ಕೆ ಆ್ಯಸಿಡ್‌ ವಾಶ್‌ ಎನ್ನಲಾಗುತ್ತದೆ.

ಡು ಆರ್‌ “ಡೈ’
1960ರಿಂದಲೇ “ಆ್ಯಸಿಡ್‌ ವಾಶ್‌’ ಎಂಬುದು ಜೀನ್ಸ್‌ ಪ್ರಿಯರ ಅಚ್ಚು ಮೆಚ್ಚಿನ ಡೈ ಪ್ರಕಾರ ಆಗಿದೆ. ಅಷ್ಟಕ್ಕೂ, ಈ ವಿಧಾನ ಫ್ಯಾಷನ್‌ ಆಗಲು ಕಾರಣ, ಸಮುದ್ರದ ನೀರು! ಉಪ್ಪು ನೀರಿನಿಂದಾಗಿ ಸಫ‌ìರ್‌ಗಳ (ಸಮುದ್ರದ ಸಾಹಸಗಳಲ್ಲಿ ತೊಡಗಿದವರು) ಧರಿಸಿದ ಜೀನ್ಸ್‌ ಬಣ್ಣ ಕಳೆದುಕೊಳ್ಳುತ್ತಿದ್ದವು. ಬಿಸಿಲಿನಲ್ಲಿ ಒಣಗಲು ಹಾಕಿದಾಗ, ಒಂದು ಬದಿಯ ಬಣ್ಣವಷ್ಟೇ ತಿಳಿಯಾಗುತ್ತಿತ್ತು. ಇದರಿಂದ ಬಟ್ಟೆಯ ಇನ್ನೊಂದು ಬದಿಯನ್ನೂ ಒಣಗಿಸಬೇಕಾಗುತ್ತಿತ್ತು. ಹಾಗಾಗಿ, ಬ್ಲೀಚ್‌ ಬೆರೆಸಿದ ನೀರಿನಲ್ಲಿ ಜೀನ್ಸ್‌ ಅನ್ನು ಒಗೆದು ಬಿಡುತ್ತಿದ್ದರು. ಆಗ ಜೀನ್ಸ್‌ ಸಂಪೂರ್ಣವಾಗಿ ತಿಳಿ ಬಣ್ಣದ್ದಾಗುತ್ತಿತ್ತು.

ಸ್ನೋ ವಾಶ್‌ ಅಂತಾರೆ
1980ರಲ್ಲಿ, ಹೆವಿ ಮೆಟಲ್‌ ಮತ್ತು ರಾಕ್‌ ಬ್ಯಾಂಡ್‌ಗಳ ಸಂಗೀತಗಾರರು ತಮ್ಮ ಜೀನ್ಸ್‌ ಮತ್ತು ಜಾಕೆಟ್‌ಗಳ ಮೇಲೆ ಬ್ಲೀಚ್‌ ಎರಚುತ್ತಿದ್ದರು. ಆಗ ಬಟ್ಟೆಗಳ ಮೇಲೆ ಕ್ಯಾಮಫ್ಲಾಜ್‌ ಎಂಬ ಹೊಸ ವಿನ್ಯಾಸ ಮೂಡಿಬರುತ್ತಿತ್ತು. ಇದು, ಅಭಿಮಾನಿಗಳಲ್ಲಿ ಹೊಸ ಕ್ರೇಜ್‌ ಹುಟ್ಟು ಹಾಕಿತು. ಜೀನ್ಸ್‌ ನ ಬಣ್ಣವನ್ನು ಸಂಪೂರ್ಣವಾಗಿ ತಿಳಿ ಮಾಡಿದರೆ, ಅದು ಬಹುತೇಕ ಬಿಳಿಯಂತೆ ಕಾಣುತ್ತದೆ. ಮಂಜಿನ ಬಣ್ಣಕ್ಕೆ ಹೋಲುವ ಕಾರಣದಿಂದ, ಈ ಬಣ್ಣದ ಜೀನ್ಸ್‌ ಅನ್ನು “ಸ್ನೋ ವಾಶ್‌ ಎಂದೂ ಕರೆಯಲಾಗುತ್ತದೆ.

ಭಾರೀ ಡಿಮ್ಯಾಂಡ್‌
ಜೀನ್ಸ್‌ ಮೇಲೆ ಬಗೆ ಬಗೆಯ ಆಕೃತಿ ಮೂಡಿಸಲು, ಕ್ಲೋರಿನ್‌ನಲ್ಲಿಟ್ಟಿದ್ದ ಕಲ್ಲುಗಳನ್ನು ಬೇಕಾದ ರೀತಿಯಲ್ಲಿ ಜೀನ್ಸ್‌ ಮೇಲೆ ಇಡಲಾಗುತ್ತದೆ. ಇದರಿಂದ ಬಟ್ಟೆಯ ಮೇಲೆ ಕಲ್ಲುಗಳಿಟ್ಟ ಜಾಗದಲ್ಲಿ ಬಣ್ಣ ತಿಳಿಯಾಗುತ್ತದೆ. ಮಿಕ್ಕ ಜಾಗದಲ್ಲಿ ಗಾಢ ಬಣ್ಣ ಹಾಗೇ ಉಳಿದುಕೊಳ್ಳುತ್ತದೆ. ಆ್ಯಸಿಡ್‌ ವಾಶ್‌ನಿಂದ ಬಣ್ಣ ತಿಳಿಯಾಗುವುದಷ್ಟೇ ಅಲ್ಲದೆ, ಬಟ್ಟೆ ಮೃದು ಕೂಡ ಆಗುತ್ತದೆ. ಹಾಗಾಗಿ, ಸಾಫ್ಟ್ ಜೀನ್ಸ್‌ ಧರಿಸಲು ಇಷ್ಟಪಡುವವರು, ಜೀನ್ಸ್‌ಗೆ ಆ್ಯಸಿಡ್‌ ವಾಶ್‌ ಮಾಡಿಸುತ್ತಾರೆ. ಅದಕ್ಕಾಗಿಯೇ, ಸಾಮಾನ್ಯ ಜೀನ್ಸ್‌ಗಳಿಗಿಂತ ಆ್ಯಸಿಡ್‌ ವಾಶ್‌ ಜೀನ್ಸ್‌ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ.

ಹರಿದಿದ್ದರೆ ಇನ್ನೂ ಒಳ್ಳೇದು
ಈ ಆ್ಯಸಿಡ್‌ ವಾಶ್‌ ಜೀನ್ಸ್‌ಗಳು ಹರಿದಿದ್ದರೆ, ಅಂದರೆ ಮೊಣಕಾಲಿನ ಹತ್ತಿರ ಹರಿದಿರುವ ರಿಫ್ಟ್ ಜೀನ್ಸ್‌ ಗಳನ್ನು ಇಂದಿನ ಯುವತಿಯರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಅಷ್ಟೇ ಅಲ್ಲ, ಸೆಲೆಬ್ರಿಟಿಗಳು ಕೂಡಾ ಇಂಥ ಆ್ಯಸಿಡ್‌ ವಾಶ್‌ ಡೆನಿಮ್‌ನಲ್ಲಿ ಕಾಣಿಸಿಕೊಂಡು, ಅಭಿಮಾನಿಗಳಲ್ಲಿ ಕ್ರೇಝ್ ಹೆಚ್ಚಿಸುತ್ತಿದ್ದಾರೆ. ಹಾಗಾಗಿ ಈ ಡೆನಿಮ್‌ಗಳಿಗೆ ಬೇಡಿಕೆಯೂ ಹೆಚ್ಚು, ಬೆಲೆಯೂ ಹೆಚ್ಚು.

“ಡೈ’ ಇಟ್‌ ಐ ಸೇ!
ಮನೆಯಲ್ಲಿಯೇ ಜೀನ್ಸ್‌ ಅನ್ನು ಆ್ಯಸಿಡ್‌ ವಾಶ್‌ ಮಾಡಬಹುದು. ಆದರೆ, ಹೊಸ ಜೀನ್ಸ್‌ ಮೇಲೆ ಈ ಪ್ರಯೋಗ ಮಾಡದಿರಿ! ಹಳೆಯ, ಹರಿದ ಜೀನ್ಸ್‌ ಮೇಲೆ ಪ್ರಯೋಗಿಸಿದರೆ ಒಳ್ಳೆಯದು. ವಾಶ್‌ ಮಾಡುವುದು ಹೇಗೆಂದು ಗೊತ್ತಾದ ಮೇಲೆ, ಹೊಸ ಬಟ್ಟೆಯನ್ನು ಬಳಸಬಹುದು. ಮಾರುಕಟ್ಟೆಯಲ್ಲಿ ಊಹಿಸಲು ಸಾಧ್ಯವಿಲ್ಲದಷ್ಟು ಬಗೆಯ ಆ್ಯಸಿಡ್‌ ವಾಶ್‌ ಉಡುಪುಗಳು ಲಭ್ಯವಿರುವ ಕಾರಣ, ಯಾರೂ ಮನೆಯಲ್ಲಿ ಇದನ್ನು ಪ್ರಯೋಗಿಸಲು ಹೋಗುವುದಿಲ್ಲ. ಪ್ರಯೋಗ ಮಾಡಲೇಬೇಕು ಅಂದುಕೊಂಡಿದ್ದವರು, ಯೂ ಟ್ಯೂಬ್‌ ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತಾಗಿರುವ ವಿಡಿಯೋ ನೋಡಿ, ಮಾಹಿತಿ ಪಡೆಯಬಹುದು.

-ಕಪ್ಪು ಬಣ್ಣದ ಸಿಂಪಲ್‌ ಟಿ-ಶರ್ಟ್‌ ಈ ಬಗೆಯ ಜೀನ್ಸ್‌ಗೆ ಚೆನ್ನಾಗಿ ಹೊಂದುತ್ತದೆ.
-ಬಿಳಿ ಬಣ್ಣದ ದೊಗಲೆ ಟಿ-ಶರ್ಟ್‌ ಕೂಡಾ ಇದಕ್ಕೆ ಚೆನ್ನ.
-ಈ ಜೀನ್ಸ್‌ಗಳ ಜೊತೆಗೆ ಕ್ಯಾಶುವಲ್‌ ಬ್ಲಾಕ್‌ ಶೂ ಧರಿಸಬಹುದು.
-ಕೇವಲ ಜೀನ್ಸ್‌ ಅಷ್ಟೇ ಅಲ್ಲ, ಆ್ಯಸಿಡ್‌ ವಾಶ್‌ ಜಾಕೆಟ್‌, ಜಂಪ್‌ಸೂಟ್‌, ಡೆನಿಮ್‌ ಸ್ಕರ್ಟ್‌ಗಳು ಕೂಡಾ ಟ್ರೆಂಡ್‌ನ‌ಲ್ಲಿವೆ.

– ಅದಿತಿಮಾನಸ ಟಿ.ಎಸ್‌

ಟಾಪ್ ನ್ಯೂಸ್

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.