ಆಕಳಿಸಿದಳೆಶೋದೆ!


Team Udayavani, Jan 4, 2017, 3:45 AM IST

LEAD.jpg

-ಜಗದೋದ್ಧಾರನ ಹೆರೋದು, ಹೊರೋದಕ್ಕೇ ಅವಳು ಜನ್ಮವೆತ್ತಿದ್ದಾಳಾ?ಮದುವೆಯಾಗಿ ಗೃಹಿಣಿಯಾದರೆ ಹಿರಿಮೆ, ಹಾರಿಕೊಂಡು ವಿದೇಶಕ್ಕೆ ಹೋದರೆ ಗರಿಮೆ, ಹೆತ್ತರೆ ನೆಮ್ಮದಿ, ಎತ್ಯಾಡಿಸಿದರೆ ಸುಖ. ಮಕ್ಕಳು ಮಾತ್ರ ಬೆಳೆಯುತ್ತಲೇ ಹೋಗುತ್ತವೆ, ಗಂಡನಿಗೆ ಇಂಕ್ರಿಮೆಂಟ್‌ ವೃದ್ಧಿಯಾಗುತ್ತದೆ, ದೊಡ್ಡ ದೊಡ್ಡ ಹುದ್ದೆಗೆ ಅವನು ಏರುತ್ತಾ ಹೋಗುತ್ತಾನೆ. ಅವಳು ಮಾತ್ರ ಅದೇ ಸಾರಿಗೆ ಅಷ್ಟೇ ಉಪ್ಪು ಹಾಕಿ, ಸೊಪ್ಪು ಸಾರು ಮಾಡಿ ಟ್ಯೂಶನ್ನಿನಿಂದ ಬರುವ ಮಗ/ಮಗಳು, ಗಂಡನನ್ನು ಕಾಯುತ್ತಾಳೆ. ಹೌಸ್‌ ವೈಫ್ ಅನ್ನೋದು ಸಿನ್ನಾ, ಮೆಡಿಸಿನ್ನಾ, ಹಳ್ಳಿ ಹುಡ್ಗಿàರ ಕಸಿನ್ನಾ?
ನೀವೇ ಕೇಳಿಕೊಳ್ಳಿ ಇನ್ನ, ಈ ಪ್ರಶ್ನೆಗಳನ್ನ!

ಬಹುಶಃ ಎÇÉಾ ತಾಯಂದಿರನ್ನು ಒಂದÇÉಾ ಒಂದು ದಿನ ಬಹುವಾಗಿ ಕಾಡಿದ ಪ್ರಶ್ನೆ ನಾನೂ ಒಬ್ಬ ದುಡಿಯುವ ಮಹಿಳೆಯಾಗಿದ್ದರೆ? ಏಕೆಂದರೆ ಮದುವೆಗೆ ಮೊದಲು ಆನಂತರ ಆರ್ಥಿಕವಾಗಿ ಸ್ವಾವಲಂಬಿಯಾದ  ಮಹಿಳೆ ಮಕ್ಕಳಿಗಾಗಿ ಉದ್ಯೋಗವನ್ನು ತ್ಯಾಗ ಮಾಡಬೇಕಾಗಿ ಬಂದಾಗ ಒಂದು ಕ್ಷಣ ಶೂನ್ಯ ಅನ್ನಿಸಬಹುದು.ನಾವು ಕೂಡಿಟ್ಟ ಹಣ ಅಲ್ಪ ಸ್ವಲ್ಪ ಇದ್ದರೂ ಅದನ್ನು ಭವಿಷ್ಯ ಕ್ಕಾಗಿ ಕಾಯ್ದಿರಿಸಿ ಪ್ರತಿಯೊಂದು ಅವಶ್ಯಕತೆಗಳಿಗೂ ಪತಿಯನ್ನು ಅವಲಂಬಿಸಬೇಕಾದಾಗ ಮನಸ್ಸು ಒÇÉೆ ಎನ್ನುವುದು ಸಹಜ .ಆದರೂ ಅನಿವಾರ್ಯ ..

ಈ ಪರಿಸ್ಥಿತಿಯನ್ನು ಒಪ್ಪಿಕೊಂಡು ಆ ಪುಟ್ಟ ಪ್ರಪಂಚದಲ್ಲಿಯೇ ನಮ್ಮ ನೆಮ್ಮದಿ ಸುಖ ಸಂತೋಷ ಕಂಡುಕೊಳ್ಳಬೇಕು. ಮೊದಲ ಮಗುವಿನ ನಂತರ ಈ ಪ್ರಶ್ನೆ ನನ್ನ ಕಾಡಿತ್ತಾದರೂ ಎರಡನೆ ಮಗುವಿನ ನಂತರ ನನಗಿದು ಎಂದೂ ಕಾಡದ ಪ್ರಶ್ನೆಯಾಗಿದೆ. ಮಗುವಿನ ಜನನದಿಂದ ಅವು ಬಾಲ್ಯಾವಸ್ಥೆ ದಾಟುವವರೆಗಿನ ಬೆಳವಣಿಗೆಯ ಪ್ರತಿಯೊಂದು ದಿನವನ್ನೂ ನಾವು ಅನುಭವಿಸಬೇಕು .  known to unknown ಎನ್ನುವ ಥಿಯರಿಯಂತೆ ಅವುಗಳ ಗ್ರಹಿಕೆಯನ್ನು ಗಮನಿಸುತ್ತಾ  ಬಂದರೆ ಅವುಗಳ ಪುಟ್ಟ ಪ್ರಪಂಚ ನಮ್ಮನ್ನು ಮಂತ್ರ ಮುಗ್ಧರನ್ನಾ ಗಿಸುತ್ತದೆ.ನಾಲ್ಕೈದು  ತಿಂಗಳ ಮಗು ಅಮ್ಮನನ್ನು ಗುರುತಿಸಲು ಕಲಿತು ಬೇರೆಯವರ ಹತ್ತಿರ ಹೋಗದಿರುವಾಗ ತಾಯಿಗೆ ಮನಸ್ಸಿನೊಳಗೇ ಆನಂದ.ತನ್ನ ಮಗುವಿಗೆ ಅಮ್ಮನ ಒಡನಾಟ ಸನಿಹ ಎಷ್ಟು ಮುಖ್ಯ ಎನ್ನುವ ಅರಿವಾಗುತ್ತದೆ.ಒಂದರಿಂದ ಐದು ವರ್ಷದ ಅವಧಿಯ ಬೆಳವಣಿಗೆ ಅವು ಗ್ರಹಿಸುವ ಪರಿ, ತಿಳಿದುಕೊಂಡ ಒಂದು ವಿಚಾರವನ್ನು ಇನ್ನೊಂದಕ್ಕೆ ಅಳವಡಿಸಿಕೊಳ್ಳುವ ರೀತಿ ಅದ್ಭುತ. ಮೊನ್ನೆ ನನ್ನ ಮಗನನ್ನು “ಕರಾಟೆ ಕ್ಲಾಸ್‌ ಗೆ ಸೇರ್ತೀಯ?’ ಎಂದು ಕೇಳಿದಾಗ, “ಯಾಕೆ ಹೊಡಿಯೋದು ಬಡಿಯೋದು ತಪ್ಪು ಅಂತ ಗೊತ್ತಿಲ್ವ ನಿಂಗೆ ಮತ್ತೆ ಯಾಕೆ ಕೇಳ್ತೀಯ?’ ಅಂದ. ಆಮೇಲೆ ಅವನ ಭಾಷೆಯÇÉೇ ಯಾರಾದ್ರು enemies attack ಮಾಡಿದಾಗ ಸ್ವ ರಕ್ಷಣೆಗೆ ಅಂದಾಗ,  “ಅವ್ರು ಯಾಕೆ ಹೊಡಿತಾರೆ? ಅವೆÅ ಆಮೇಲೆ ಜೈಲಿಗೆ  ಹೋಗ್ತಾರೆ’ ಅಂದಾಗ ನಾನೂ ಗಪ್‌ಚುಪ್‌ ..ಹೀಗೆ ಮಗುವಿನ ಶೈಶಾವಸ್ಥೆಯಿಂದ ಬಾಲ್ಯದ ಪ್ರತಿಯೊಂದು ದಿನವನ್ನೂ ಉತ್ಸಾಹ ಹೊಸತನದೊಂದಿಗೆ ಸ್ವೀಕರಿಸಿದರೆ ಅವರೇ ನಮ್ಮ ಗುರುಗಳಂತೆ ಭಾಸವಾಗುತ್ತಾರೆ.

ನನ್ನ ಸಂಪರ್ಕದಲ್ಲಿರುವ ಕೆಲ ಗೆಳತಿಯರು being just housewife is a sin ಅನ್ನುವ ನಿಲುವನ್ನು ತಾಳಿ¨ªಾರೆ. ಮಗುವಿನ ಲಾಲನೆ ಪಾಲನೆಯಲ್ಲಿ ತಮ್ಮ ತನವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂಬ ಚರ್ಚೆ ಆಗಾಗ ಬಿಸಿಯೇರಿರುತ್ತದೆ. ಹಾಗಿದ್ದರೆ  ಅಡಿಗೆ, ಮನೆಕೆಲಸ ಮಕ್ಕಳ ಲಾಲನೆ ಪಾಲನೆ ಈ ಏಕತಾನತೆಯಿಂದ ಹೊರತಾಗಿ ನಮ್ಮ ಮನಸ್ಸನ್ನು ಉತ್ಸಾಹದಿಂದ ಇಡಲು ಸಾಧ್ಯವೇ ಇಲ್ಲ ಎಂದೆನಿಸಬಹುದು.ಅದು ಅವರವರ  ಮನೋಭಾವನೆಗನುಗುಣವಾಗಿರುತ್ತದೆ .ನಾನು ಎಲ್ಲರಿಗಿಂತಲೂ ಭಿನ್ನವಾಗಿ ಬದುಕಬೇಕು ,ಆಗಲೇ ಸಮಾಜದಲ್ಲಿ ನನಗೊಂದು ಸ್ಥಾನಮಾನ ಸಿಗುವುದು ಎಂಬ ನಿಲುವಿಗೆ ಅಂಟಿಕೊಂಡು identity cricis ಗೆ ಒಳಗಾಗದೆ  ಸಾಮಾನ್ಯರಲ್ಲಿ ಸಾಮಾನ್ಯರಾಗಿ  ಬದುಕಿದರೂ ನಾವು ಸಂತೋಷದಿಂದ ಜೀವಿಸಬಹುದು  ಎಂದು ಕೊಂಡರೆ ಸುಖ ನಮ್ಮನ್ನೇ ಅರಸಿಕೊಂಡು ಬರುತ್ತದೆ . ಈ ನಿಲುವಿನಲ್ಲಿ ಕೆಲವೊಂದು  ತೀರಾ ಸುಲಭವಾಗಿ  ಅಳವಡಿಸಿಕೊಳ್ಳಬಹುದಾದ ಅಭ್ಯಾಸಗಳು ಇಲ್ಲಿವೆ .

– ಸರಳ ಹವ್ಯಾಸಗಳು ಮಗು ಮಲಗಿರುವಾಗ  ಅಥವಾ ಶಾಲೆಗೆ ಹೋಗಿರುವಾಗ ದಿನದ ಕೆಲಸ  ಮುಗಿಸಿ ಕೇವಲ  ಅರ್ಧ ಗಂಟೆ ನಮ್ಮ ಹವ್ಯಾ ಸಗಳಿಗಾಗಿ ಮೀಸಲಿಡುವುದು .ಅದು ನಿಮ್ಮ ಆರ್ಟಿಫಿಷಿಯಲ…  ಆಭರಣಗಳನ್ನು ನೀವೇ ತಯಾರಿಸಿಕೊಳ್ಳುವುದಿರಬಹುದು, ಚಿತ್ರಕಲೆ,ತೋಟಗಾರಿಕೆ, ಕಸೂತಿ, ಬರವಣಿಗೆ ಓದು ಇತ್ಯಾದಿ ..

– ಬಿಡುವಿಲ್ಲದ ಕೆಲಸದ ನಡುವೆಯೇ ನಾನು ಕಂಡುಕೊಂಡ ಜೀವನದ ಉತ್ಸಾ ಹದ ಮೂಲ ನೆರೆಹೊರೆಯೊಂದಿಗಿನ ಒಡನಾಟ.ನಾವು ಮನೆಯಿಂದ ಹೊರಗೆ ಹೋಗಿ ಬೀದಿಗಿಳಿದು ಸಮಾಜಸೇವೆ ಮಾಡದಿದ್ದರೂ ನೆರೆಹೊರೆಯ ವೃದ್ದರಿಗೆ ಮಾಡುವ  ಸಣ್ಣ ಪುಟ್ಟ  ಸಹಾಯ ಮನಸ್ಸಿಗೆ ತುಂಬಾ ಖುಷಿ ಕೊಡುತ್ತದೆ. ನಮ್ಮ positive energyಯನ್ನು ವೃದ್ದಿಸುತ್ತದೆ. ಹಿರಿಯರಿಗೆ ಮೊಬೈಲ… ನಲ್ಲಿ ಸಿಲಿಂಡರ್‌ ಬುಕ್‌ ಮಾಡಿಕೊಡ‌ುವುದೋ, whatsapp skype ನಲ್ಲಿ ವಿದೇಶದಲ್ಲಿರುವ ಅವರ ಮಕ್ಕಳ ಜೊತೆ ಮಾತನಾಡಲು ಅವಕಾಶ ಮಾಡಿಕೊಡುವುದೋ ಅಥವಾ  ಓಲಾ ಕ್ಯಾಬ… ಬುಕ್‌ ಮಾಡಿಕೊಡುವುದೋ  ಹೀಗೆ ಸಣ್ಣ ಪುಟ್ಟ ಸಹಾಯ ಮಾಡಿದಾಗ ನಮಗೆ ಅರಿವಿಲ್ಲದಂತೆಯೇ ನಮ್ಮ ಮನಸ್ಸು ಪ್ರಫ‌ುಲ್ಲವಾಗಿರುತ್ತದೆ. ನಮ್ಮಿಂದ ಒಂದು ಹಿರಿಯ ಜೀವದ ಮುಖದಲ್ಲಿ ಕೃತಜ್ಞತೆಯ ಮುಗುಳ್ನಗೆ ಕಂಡರೆ ದೂರದಲ್ಲಿರುವ ನಮ್ಮ ಅಪ್ಪ ಅಮ್ಮ ಹೀಗೆ ಯಾರಿಂದಲೋ ಸಹಾಯ ಪಡೆದಿರುತ್ತಾರೆ ಎಂಬ ಸಮಾಧಾನ. ನನ್ನಿಂದ  ನನ್ನ ಗಂಡ ಮಕ್ಕಳ ಹೊರತಾಗಿ ಸಹಾಯ ಪಡೆದವರು ನಮ್ಮನ್ನು ಹಾರೈಸಿದಾಗ ನಾನು ಜಸ್ಟ… housewife ಅನ್ನುವ ಭಾವನೆ ಹೊರಟುಹೋಗಿರುತ್ತದೆ.

– ಜೀವನವೆಂದರೆ  ತಿರುಗು, ತಿನ್ನು, ಫೇಸುºಕ್‌ ನಿಂದ ಪ್ರಪಂಚಕ್ಕೆÇÉಾ  ಗೊತ್ತುಮಾಡು ಎಂಬ ಭ್ರಮೆಯಿಂದ  ಹೊರಬರುವುದು .ಹೆಚ್ಚಿನ ಸಣ್ಣ ಮಕ್ಕಳ ತಾಯಂದಿರು ಕೊರಗುವುದು ಇದೇ ಭ್ರಮೆಗೊಳಗಾಗಿ. 

– ಸಮಾಜ ಬದಲಾದಂತೆ ಅವರೂ ಬದಲಾಗಿ¨ªಾರೆ .ಗಂಡಸರನ್ನು  ಯಾವಾಗಲೂ ದೂರುವ ಮೊದಲು ಒಮ್ಮೆ ಯೋಚಿಸಿನೋಡಿ .ಹಿಂದಿನ ಕಾಲಕ್ಕೆ ಹೋಲಿಸಿದಲ್ಲಿ ಈಗಿನ ಉದ್ಯೋಗಸ್ಥ ಗಂಡಸರೂ ಕೂಡ ಮಗುವಿನ ಲಾಲನೆ ಪಾಲನೆಯ ಭಾಗವಾಗಿರುವುದು .ಒಂದು ಕಾಲವಿತ್ತು ನಮ್ಮ ಅಮ್ಮಮ್ಮನ ಜಮಾನ ,ಗಂಡಸರು ಮಕ್ಕಳನ್ನು ಸ್ನಾನ ಮಾಡಿಸುವುದಾಗಲಿ ,ಮಲಗಿಸುವುದಾಗಲಿ  ಬಹುದೂರದ  ಮಾತಾಗಿತ್ತು .ಆದರೆ ಈಗಿನ ಗಂಡಸರು ಮಕ್ಕಳ ಡಯಾಪರ… ಬದಲಿಸುವುದರಲ್ಲೂ ,ಸ್ವತಂತ್ರ ವಾಗಿ ಸಣ್ಣ ಶಿಶುಗಳ  ಸ್ನಾನ ಮಾಡಿಸುವುದರಲ್ಲೂ ಪರಿಣಿತರಾಗಿ¨ªಾರೆ.ಇದೇ ಹದಿನೈದೋ ಇಪ್ಪತ್ತೋ ವರ್ಷದ ಹಿಂದಾಗಿದ್ದರೆ ನಾವು ಸೋಮಾರಿ ಹುಡುಗಿ ಪಟ್ಟ ಕಟ್ಟಿಕೊಳ್ಬೇಕಾಗಿತ್ತು .

ಅದ್ದರಿಂದ ಸ್ವಲ ಮಟ್ಟಿಗೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡರೆ ನಾನು  ಗೃಹಿಣಿ ನಾನು ಮನೆಯ ಒಳಗೆ ಮಾತ್ರ ದುಡಿಯುವವಳು ನನಗೆ ಅರ್ಥಿಕ ಸ್ವಾತಂತ್ರ್ಯ  ಇಲ್ಲ ಎನ್ನುವ ಅಭದ್ರತಾ ಭಾವ ದೂರವಾಗಬಹುದು.ಆಗಾಗ ,ನಾವು ನೋವು ತಿಂದು ಮಗುವಿಗೆ ಜನ್ಮ ಕೊಟ್ಟು ಮಗು ಅತ್ತು ನಾವು ನಕ್ಕ ಕ್ಷಣ ಮೆಲುಕು ಹಾಕುತ್ತಿದ್ದರೆ ,ಮಕ್ಕಳ ಬಾಲ್ಯದ ಫೋಟೋ ,ವಿಡಿಯೋ ನಮ್ಮ ಬಿಡುವಿನ ಸಮಯಕ್ಕೆ snacks ಆದರೆ ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬಹುದು.ಇಲ್ಲದಿದ್ದರೆ ಖನ್ನತೆಗೊಳಗಾಗಿ ಬುದ್ದಿ ಹೇಳಿಸಿಕೊಳ್ಳಲು ಚಿಕ್ಕಪ್ಪನೋ, ಸೋದರಮಾವನೋ, ಯಾರೋ ಆಪ್ತಸಲಹೆಗಾರರನ್ನೋ ಅವಲಂಬಿಸಬೇಕಾದೀತು!

-ವಿದ್ಯಾ ಹೊಸಕೊಪ್

ಟಾಪ್ ನ್ಯೂಸ್

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

14–dsadsa

ಬೆಳಗಿನ ವಾಕಿಂಗ್‌ಗೆ ಹೋದಾಗ ಇಹಲೋಕ ತ್ಯಜಿಸಿದ ದೇವಸ್ಥಾನದ ಆನೆ ಲಕ್ಷ್ಮಿ

1-saddasd

ಡಿ.5 ರಂದು ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿಕಸಿ: ತೇಜಸ್ವಿ

1-wqewqwqe

ಗೆಹ್ಲೋಟ್-ಪೈಲಟ್ ಏಕತೆಯ ಪ್ರದರ್ಶನ ಕೇವಲ ‘ರಾಜಕೀಯ ವಿರಾಮ’ ಎಂದ ಬಿಜೆಪಿ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

1–adasdasd

ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ರನ್ನು ಭೇಟಿಯಾದ ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

14–dsadsa

ಬೆಳಗಿನ ವಾಕಿಂಗ್‌ಗೆ ಹೋದಾಗ ಇಹಲೋಕ ತ್ಯಜಿಸಿದ ದೇವಸ್ಥಾನದ ಆನೆ ಲಕ್ಷ್ಮಿ

1-saddasd

ಡಿ.5 ರಂದು ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿಕಸಿ: ತೇಜಸ್ವಿ

1-wqewqwqe

ಗೆಹ್ಲೋಟ್-ಪೈಲಟ್ ಏಕತೆಯ ಪ್ರದರ್ಶನ ಕೇವಲ ‘ರಾಜಕೀಯ ವಿರಾಮ’ ಎಂದ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.