Udayavni Special

ನನಗೇ ಮೋಸ ಮಾಡ್ತೀಯಾ…?


Team Udayavani, Jul 24, 2019, 5:00 AM IST

x-10

ನಾಳೆ ಬೆಳಿಗ್ಗೆ ಮದುವೆ. ಎಲ್ಲ ತಯಾರಿಯೂ ನಡೆದಿದೆ. ಹುಡುಗಿ, ತನ್ನ ಬದುಕಿನ ಅತ್ಯಂತ ಖುಷಿಯ ಕ್ಷಣಕ್ಕೆ ಅಣಿಯಾಗುತ್ತಿದ್ದಾಳೆ. ಆಗ ವಿಷಯ ತಿಳಿಯುತ್ತದೆ; ಮದುವೆಯಾಗಲಿರುವ ಹುಡುಗ ಒಳ್ಳೆಯವನಲ್ಲ, ಇನ್ನೊಬ್ಬ ಹುಡುಗಿಯೊಂದಿಗೆ ಆತನಿಗೆ ಸಂಬಂಧವಿದೆ ಅಂತ! ಆ ಕ್ಷಣದಲ್ಲಿ ಮದುಮಗಳ ಪ್ರತಿಕ್ರಿಯೆ ಹೇಗಿರಬಹುದು? ಆಕೆ ಸೀದಾ ಹುಡುಗನ ಬಳಿ ಹೋಗಿ, ಅವನ ಕೆನ್ನೆಗೆ ಬಾರಿಸಬಹುದು ಅಥವಾ ದೊಡ್ಡದಾಗಿ ಗಲಾಟೆ ಮಾಡಿ ತಕ್ಷಣವೇ ಮದುವೆ ನಿಲ್ಲಿಸಬಹುದು. ಯಾರೇ ಆದರೂ ಹೀಗೆಯೇ ಮಾಡುತ್ತಾರೆ. ಆದರೆ, ಇಲ್ಲೊಬ್ಬಳು ಯುವತಿ ಮೋಸ ಮಾಡಿದ ಹುಡುಗನ ವಿರುದ್ಧ ಹ್ಯಾಗೆ ಪ್ರತೀಕಾರ ತೀರಿಸಿಕೊಂಡಿದ್ದಾಳೆ ಗೊತ್ತಾ?

ಆಸ್ಟ್ರೇಲಿಯಾದ ಕೇಸಿಯ ಮೊಬೈಲ್‌ಗೆ, ಮದುವೆಯ ಹಿಂದಿನ ರಾತ್ರಿ, ಅಪರಿಚಿತರಿಂದ ಮೆಸೇಜ್‌ ಬರುತ್ತದೆ. ಅದರಲ್ಲಿ, “ನೀನು ಮದುವೆಯಾಗುವ ಹುಡುಗ ಅಲೆಕ್ಸ್‌ ಸರಿಯಿಲ್ಲ. ಬೇರೆ ಹುಡುಗಿಯ ಜೊತೆಗೆ ಸಂಬಂಧದಲ್ಲಿದ್ದಾನೆ’ ಅಂತ ಬರೆದಿರುತ್ತದೆ. ಜೊತೆಗೆ, ಬೇರೊಬ್ಬ ಹುಡುಗಿಗೆ ಅಲೆಕ್ಸ್‌ ಕಳಿಸಿರುವ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ ಕೂಡಾ ಇರುತ್ತದೆ. ಅದನ್ನು ಓದಿದ ಕೇಸಿಗೆ ಆಘಾತವಾಗುತ್ತದೆ. ತಕ್ಷಣವೇ, ಎಲ್ಲರಿಗೂ ಹೇಳಿ ಮದುವೆ ನಿಲ್ಲಿಸಬೇಕು ಅಂತ ಅನ್ನಿಸಿದರೂ, ಅವಳು ತಾಳ್ಮೆ ವಹಿಸುತ್ತಾಳೆ.

ರಾತ್ರಿಯಿಡೀ ಯೋಚಿಸಿ, ಪ್ರತೀಕಾರಕ್ಕೆ ಸಿದ್ಧಳಾದ ಕೇಸಿ, ಮಾರನೆದಿನ ಬೆಳಗ್ಗೆ ಶೃಂಗರಿಸಿಕೊಂಡು, ನಾಚುತ್ತಾ ಮದುವೆ ಹಾಲ್‌ಗೆ ಬರುತ್ತಾಳೆ. ಅಲ್ಲಿ ಎಲ್ಲರೂ ಅವಳಿಗಾಗಿ ಕಾದಿರುತ್ತಾರೆ. ಅವರ ಸಂಪ್ರದಾಯದ ಪ್ರಕಾರ, ವಧು-ವರರಿಬ್ಬರೂ ಪ್ರತಿಜ್ಞೆಗಳನ್ನು (vows) ಓದಿ ಅಂತ ಹೇಳಿದಾಗ, ಕೇಸಿ ಓದಿದ್ದು ಅಲೆಕ್ಸ್‌, ಬೇರೊಂದು ಹುಡುಗಿಗೆ ಕಳಿಸಿದ ಮೆಸೇಜ್‌ಗಳನ್ನು! ನೆರೆದಿದ್ದವರೆಲ್ಲರಿಗೂ ದಿಗ್ಭ್ರಮೆ. ಸುಳ್ಳು ಹೇಳಿ, ಸಮಜಾಯಿಷಿ ನೀಡಿ ನಂಬಿಸುವ ಅವಕಾಶವೇ ಅಲೆಕ್ಸ್‌ಗೆ ಸಿಗಲಿಲ್ಲ!

ಅವನ ಮುಖವಾಡವನ್ನು ಎಲ್ಲರೆದುರು ಬಯಲು ಮಾಡಲೆಂದೇ ಹೀಗೆ ಮಾಡಿದೆ ಅಂದಿರುವ ಕೇಸಿ, ಗೆಳತಿಯರ ಜೊತೆಗೆ ಖುಷಿಯಿಂದಲೇ ರಿಸೆಪ್ಷನ್‌ ಆಚರಿಸಿದ್ದಾರಂತೆ!

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

“ಜಂಗಲ್‌ರಾಜ್‌ ಯುವರಾಜ’

“ಜಂಗಲ್‌ರಾಜ್‌ ಯುವರಾಜ’; ಮಹಾಘಟಬಂಧನ್‌ ಸಿಎಂ ಅಭ್ಯರ್ಥಿ ತೇಜಸ್ವಿ ವಿರುದ್ಧ ಮೋದಿ ವಾಗ್ಬಾಣ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

avalu-tdy-4

ಕೊರಗುವುದೇ ಬದುಕಾಗಬಾರದು…

ಕಹಿಯೇ ಜೀವನ ಲೆಕ್ಕಾಚಾರ!

ಕಹಿಯೇ ಜೀವನ ಲೆಕ್ಕಾಚಾರ!

avalu-tdy-2

ಕರೆಂಟ್‌ ಇಲ್ಲದಿದ್ದರೆ..

avalu-tdy-1

ಗೃಹಿಣಿಯೇ ಸಾಧಕಿ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಅರ್ಹ ಸಾಧಕರಿಗೆ ಗೌರವ

ಅರ್ಹ ಸಾಧಕರಿಗೆ ಗೌರವ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.