ಫ್ಯಾಷನ್‌ ಪರಿಮಳ : ಸೀರೆಗೂ ಬೆಲ್ಟಾ!


Team Udayavani, Sep 30, 2020, 8:15 PM IST

avalu-tdy-4

ಸೀರೆಗೂ, ಬೆಲ್ಟ್ ಗೂ ಏನು ಸಂಬಂಧ ಎಂದುಯೋಚಿಸುತ್ತಿದ್ದೀರಾ? ಸೀರೆ ಜೊತೆ ಬೆಲ್ಟ… ತೊಡುವುದೇ ಈಗಿನ ಟ್ರೆಂಡ್‌! ಮದುಮಗಳು ಸೀರೆಯ ಮೇಲೆ ತೊಡುವ ಚಿನ್ನದ ಸೊಂಟಪಟ್ಟಿ ಇದೀಗ ಮೇಕ್‌ ಓವರ್‌ ಪಡೆದು ಬೆಲ್ಟ್ ಆಗಿದೆ! ಆ ನೆಪದಲ್ಲಿ ಹೊಸದೊಂದು ಫ್ಯಾಷನ್‌ ಟ್ರೆಂಡ್‌ ಶುರುವಾಗಿದೆ…

ಕೋವಿಡ್ ವೈರಸ್‌ ಯಾವಾಗ, ಯಾರಿಗೆ, ಹೇಗೆ ತಗುಲುತ್ತದೋ ಹೇಳಲು ಸಾಧ್ಯವಿಲ್ಲ. ಅದೊಂದು ಭಯ ಕ್ಷಣಕ್ಷಣವೂ ಇದ್ದರೂ, ಜನ ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದಾರೆ. ಹೆಚ್ಚಿನವರು ಮುಂಜಾಗರೂಕತಾಕ್ರಮಗಳನ್ನು ಪಾಲಿಸುತ್ತಾ ಹಬ್ಬ, ಸಮಾರಂಭ, ಮತ್ತಿತರ ಕಾರ್ಯಕ್ರಮ ಗಳನ್ನೂ ಮಾಡುತ್ತಿದ್ದಾರೆ. ನಿಧಾನಕ್ಕೆ, ಗೂಡಿನಿಂದ ಹೊರಬರುತ್ತಿರುವ ಮಹಿಳೆಯರು ಮತ್ತೆ ರೆಕ್ಕೆ ಬಿಚ್ಚಿ ಹಾರಲು ರೆಡಿ ಆಗಿದ್ದಾರೆ.ಕಪಾಟಿನಲ್ಲಿರುವ ಸೀರೆಗಳನ್ನು ಉಟ್ಟು ಓಡಾಡಲು ಮುಂದಾಗಿದ್ದಾರೆ. ಯಾವ ಸೀರೆ ಉಟ್ಟರೂ ಸರಿ; ಬೆಲ್ಟ್ ಮಾತ್ರ ವಿಶಿಷ್ಟವಾಗಿರಬೇಕು ಎಂಬುದರ ಬಗ್ಗೆ ವಿಶೇಷಗಮನ ವಹಿಸುತ್ತಿದ್ದಾರೆ. ಸೀರೆಗೂ, ಬೆಲ್ಟ್ ಗೂ ಏನು ಸಂಬಂಧ  ಎಂದು ಯೋಚಿಸುತ್ತಿದ್ದೀರಾ? ಸೀರೆ ಜೊತೆ ಬೆಲ್ಟ್ ತೊಡುವುದೇ ಈಗಿನ ಟ್ರೆಂಡ್‌! ಮದುಮಗಳು ಸೀರೆಯ ಮೇಲೆ ತೊಡುವ ಚಿನ್ನದ ಸೊಂಟಪಟ್ಟಿ ಇದೀಗ ಮೇಕ್‌ ಓವರ್‌ ಪಡೆದಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಲಂಗ, ಪ್ಯಾಂಟ್, ಶಾಟ್ಸ್ ಮತ್ತಿತರ ಉಡುಪು ಜಾರದಂತಿರಲು ಬಳಸಲಾಗುತ್ತಿದ್ದ ಸೊಂಟ ಪಟ್ಟಿ (ಬೆಲ್ಟ್) ಇದೀಗ ಆರಾಮ ನೀಡುವ ಆಕ್ಸೆಸರಿಗಿಂತ ಸ್ಟೈಲ್‌ಗೆಂದು ಬಳಸೋ ಆಕ್ಸೆಸರಿ ಆಗಿಬಿಟ್ಟಿದೆ. ಅಲ್ಲದೆ, ಸೀರೆಯ ಮೇಲೂ ಕಾಣಿಸಿಕೊಳ್ಳುತ್ತಿದೆ!

ಬಟ್ಟೆಯಿಂದ ಮಾಡಲಾದ ಸೊಂಟ ಪಟ್ಟಿ, ಮುತ್ತಿನ ಹಾರದಿಂದ ಮಾಡಲಾದ ಸೊಂಟ ಪಟ್ಟಿ, ಬಣ್ಣದಕಲ್ಲುಗಳಿಂದ ಮತ್ತು ಇತರ ಅಲಂಕಾರಿಕ ವಸ್ತುಗಳಿಂದ ತಯಾರಿಸಲಾದ ಸೊಂಟ ಪಟ್ಟಿಗಳನ್ನು ಚಿತ್ರ ನಟಿಯರು ಸೀರೆಯ ಮೇಲೆ ಹಾಕಿಕೊಳ್ಳುತ್ತಿರುವಕಾರಣ, ಇಂಥ ಸ್ಟೆçಲಿಶ್‌ ಸೀರೆ ಬೆಲ್ಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸೆಲೆಬ್ರೆಟಿಗಳು, ವಿಭಿನ್ನ ಆಕಾರದ, ವಿಶಿಷ್ಟ ಶೈಲಿಯ ಬೆಲ್ಟ್ ಗಳನ್ನು ಉಟ್ಟು ಟ್ರೆಂಡ್‌ ಸೆಟ್‌ ಮಾಡುತ್ತಿದ್ದಾರೆ.ಅದನ್ನು ನೋಡಿದ ಸಾಮಾನ್ಯ ಜನರು, ತಾವೂ ಅವರಂತೆಯೇ ಕಾಣಬೇಕೆಂಬ ಆಸೆಯಿಂದ ಸೀರೆ ಮೇಲೆ ಬೆಲ್ಟ್ ತೊಡಲು ಮುಂದಾಗಿದ್ದಾರೆ. ಸಣ್ಣ ಸೊಂಟ ಇದ್ದವರಿಗಂತೂ ಈ ಟ್ರೆಂಡ್‌ ಹೇಳಿ ಮಾಡಿಸಿದ ಹಾಗಿದೆ! ಸೀರೆಗೆ ಬೆಲ್ಟ್ ಹಾಕಿಕೊಳ್ಳುವುದರಿಂದ ನೆರಿಗೆ ಮತ್ತು ಸೆರಗು ಅಚ್ಚುಕಟ್ಟಾಗಿ ನಿಲ್ಲುತ್ತವೆ.

ಅಲ್ಲದೆ,ಕಿವಿಗೆ,ಕತ್ತಿಗೆ,ಕೈಗೆ ಸಾಧಾರಣವಾಗಿರೋ ಆಭರಣಗಳು ಅಥವಾ ಆಕ್ಸೆಸರೀಸ್‌ ಇದ್ದರೂ, ಎಲ್ಲರಕಣ್ಣು ತನ್ನ ಮೇಲೆ ಬೀಳುವಂತೆ ಮಾಡುವ ಶಕ್ತಿ ಈ ಸೀರೆಯ ಬೆಲ್ಟ್ ಗಿದೆ! ಸೀರೆಯ ಬಾರ್ಡರ್‌ಗೆ ಹೋಲುವ ಜರಿಯ ಹಾಗೆ ಇರುವಂಥ ಬೆಲ್ಟ್ ಗಳುಕೂಡ ಮಾರುಕಟೆ rಯಲ್ಲಿ ಲಭ್ಯ ಇವೆ. ಆನ್‌ಲೈನ್‌ನಲ್ಲಿಊಹಿಸಲೂ ಸಾಧ್ಯವಿಲ್ಲದಷ್ಟು ಆಯ್ಕೆಗಳಿವೆ. ಇಂಥ ಸೀರೆ- ಬೆಲ್ಟ್ ಗಳನ್ನು ತೊಡಲು ಯಾವುದೇ ಸಭೆ- ಸಮಾರಂಭಗಳಿಗೆಕಾಯಬೇಕಾಗಿಲ್ಲ. ಸೀರೆ- ಬೆಲ್ಟ್  ಧರಿಸಿ ಆಫೀಸ್‌ಗೂ ಹೋಗಬಹುದು. ನಿಮಗೊಪ್ಪುವ ಬಣ್ಣ, ವಿನ್ಯಾಸ ಮತ್ತು ಶೈಲಿಯ ಸೀರೆ ಹಾಗು ಬೆಲ್ಟ್  ಕಾಂಬಿನೇಶನ್‌ ಉಟ್ಟು ಸ್ಟೈಲ್‌ ಸ್ಟೇಟ್‌ಮೆಂಟ್‌ ನೀಡಿ!

ಬೆಲ್ಟ್‌ಗಳಲ್ಲೂ ಬಹುಬಗೆ : ಹೆವಿ ಎಂಬ್ರಾಯ್ಡರಿ ಇರುವ ಸೀರೆಗಳ ಮೇಲೆ ಪ್ಲೇನ್‌ ಬೆಲ್ಟ್  ಮತ್ತು ಪ್ಲೇನ್‌ ಸೀರೆಗಳ ಮೇಲೆ ಗ್ರ್ಯಾಂಡ್‌ ಬೆಲ್ಟ್ ತೊಡುವುದೇ ಈ ಟ್ರೆಂಡ್‌ನ‌ ವೈಶಿಷ್ಟ್ಯ ಚೈನಾ ಸಿಲ್ಕ ಸೀರೆ ಉಟ್ಟರೆ, ಅದರ ಮೇಲೆ ಮುತ್ತಿನ ಹಾರದಂತಿರುವ ಬೆಲ್ಟ್, ಬೆಳ್ಳಿಯ ಪ್ಲೇನ್‌ಕಾಲ್ಗೆಜ್ಜೆಗೆ ಹೋಲುವ ಬೆಲ್ಟ್ ಅಥವಾ ಸಿಂಪಲ್‌ ಆದ ಚಿನ್ನದ(ಅಥವಾ ಚಿನ್ನಕ್ಕೆ ಹೋಲುವಂಥ) ಸರದಂತಿರುವ ಬೆಲ್ಟ್ ತೊಡಬಹುದು. ಉಟ್ಟ ಸೀರೆ ಬಹಳ ಗ್ರ್ಯಾಂಡ್‌ ಆಗಿದ್ದರೆ, ಸರಳವಾದ ಪಾರದರ್ಶಕ ಪ್ಲಾಸ್ಟಿಕ್‌ ಬೆಲ್ಟ್ ,ಚರ್ಮದ ಬೆಲ್ಟ್, ಬಣ್ಣದ ದಾರಗಳಿಂದ ಮಾಡಿದ ಬೆಲ್ಟ್ ಮೆಟಲ್‌ ಬೆಲ್ಟ್ ಗೋಲ್ಟ್ ಬೆಲ್ಟ್ ಚೈನ್‌ ಬೆಲ್ಟ್, ಸೇರಿದಂತೆ ಟಾಸ್ಸೆಲ್‌ ಬೆಲ್ಟ್, ಲೇಸ್‌ ವರ್ಕ್‌ ಉಳ್ಳ ಬೆಲ್ಟ್, ಜಡೆಯಂತೆ ಹೆಣೆದ ಬೆಲ್ಟ್, ಮುಂತಾದ ಬಗೆಯ ಬೆಲ್ಟ್ ಗಳನ್ನು ತೊಡಬಹುದು. ಎಲಾಸ್ಟಿಕ್‌ ಬೆಲ್ಟ್  ಗಳಲ್ಲೂ ಲೋಹದ ಬಕಲ್‌ಗ‌ಳಿದ್ದು, ಇವು ತೊಡಲು ಸರಳ ಹಾಗು ಸುಲಭವಾಗಿರುತ್ತವೆ. ಪದೇಪದೆ ಸಡಿಲ ಅಥವಾ ಬಿಗಿ ಮಾಡಿಕೊಳ್ಳಬೇಕಿಲ್ಲ.

 

-ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

8protest

ಪಹಣಿ ದೋಷ ಪ್ರಕರಣ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಗಾಡಿ ಮೆರವಣಿಗೆ ನಡೆಸಿ ಪ್ರತಿಭಟನೆ

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಗಿ ಬಸವಾದಿತ್ಯ ಶ್ರೀ ಆಯ್ಕೆ

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ನಡೆಸಿದ ಎಂಇಎಸ್ ಪುಂಡರು

ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ನಡೆಸಿದ ಎಂಇಎಸ್ ಪುಂಡರು

Bidisha De Majumdar

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ 21 ವರ್ಷದ ಬೆಂಗಾಲಿ ನಟಿ

5theft

ಸ್ತ್ರೀಯರ ವೇಷದಲ್ಲಿ ಫೈನಾನ್ಸ್‌ನಲ್ಲಿ ಕಳವಿಗೆ ಯತ್ನ: ಸೈರನ್‌ ಶಬ್ದ ಕೇಳಿ ಆರೋಪಿಗಳು ಪರಾರಿ  

wheelchair romeo

ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

8protest

ಪಹಣಿ ದೋಷ ಪ್ರಕರಣ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಗಾಡಿ ಮೆರವಣಿಗೆ ನಡೆಸಿ ಪ್ರತಿಭಟನೆ

11

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಿ-ಬೆಳೆಸಿ

ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T

ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T

10

ಗಮನ ಸೆಳೆದ ಮಾವು ಪ್ರದರ್ಶನ-ಮಾರಾಟ ಮೇಳ

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.