Udayavni Special

ಒಗೆದು ಒಣಗಿಸುವ ಕೆಲಸದ ನಡುವೆ…

Team Udayavani, Feb 19, 2020, 5:54 AM IST

skin-13

ಸಂಜೆಯ ವೇಳೆ ಇದ್ದಕ್ಕಿದ್ದಂತೆ, ಮಳೆಹನಿಗಳು ಬೀಳತೊಡಗಿದರೆ, ಆ ಹೊತ್ತಿನಲ್ಲಿ ಮನೆಯಲ್ಲಿದ್ದವರು ತಮ್ಮದರ ಜೊತೆಗೆ ಉಳಿದವರ ಬಟ್ಟೆಗಳನ್ನೂ ತೆಗೆದು, ನಂತರ ಆಯಾ ಮನೆಯವರಿಗೆ ತಲುಪಿಸುತ್ತಿದ್ದರು. ಒಣಗಿದ ಬಟ್ಟೆಗಳನ್ನು ಮಳೆಯಿಂದ ಕಾಪಾಡಿ, ಜತನದಿಂದ ತಲುಪಿಸಿದವರಿಗೆ ತಮ್ಮಿಂದ ಇತರರಿಗೆ ಸಣ್ಣಉಪಕಾರವಾಯೆ¤ಂಬ ಧನ್ಯತಾಭಾವವಾದರೆ, ಉಪಕೃತರಾದವರ ಹೃದಯ ಕೃತಜ್ಞತೆಯಿಂದ ತುಂಬಿ ಭಾರ!

ಬಟ್ಟೆ ಒಗೆಯುವ ಯಂತ್ರಕ್ಕೆ ಸಾಬೂನಿನ ದ್ರವ ಸುರಿದು, ಗುಂಡಿಯನ್ನೊತ್ತಿದ ನಂತರ ಒಗೆಯುವ ಕಾರ್ಯಾಚರಣೆ ಶುರುವಾಗಿ ಅದು ಮುಗಿಯುವವರೆಗೂ ಕಾಯತೊಡಗಿದೆ. ಒಂದು ತಾಸಿನ ನಂತರ ಯಂತ್ರ ಒಗೆದಿಟ್ಟ ವಸ್ತ್ರಗಳನ್ನು ತೆಗೆದು, ಅವುಗಳನ್ನು ಒಣಗಿಸಲು ಡ್ರೈಯರ್‌ನಲ್ಲಿ ತುಂಬಿದೆ. ಅದರ ಕೆಲಸ ಮುಗಿಯಲು ಮತ್ತೆ ಇನ್ನೊಂದು ತಾಸು. ಈ ಒಗೆದು ಒಣಗಿಸುವ ಕಾಯಕದ ನಡುವೆ ಸುಮ್ಮನೆ ಕುಳಿತಾಗ ಮನಸ್ಸು, ಕಲ್ಲಿನ ಮೇಲೆ ಕುಕ್ಕಿ, ಕಸುಕಿ ಬಟ್ಟೆಗಳನ್ನು ಒಗೆದು, ತಂತಿಗಳ ಮೇಲೆ ಹರವಿ ಒಣಗಿಸುತ್ತಿದ್ದ ಆ ದಿನಗಳನ್ನು ಮೆಲುಕು ಹಾಕತೊಡಗಿತು.

ಈಗಿನಂತೆ, ಪ್ರತಿದಿನದ ಕೊಳೆ ಬಟ್ಟೆಯನ್ನೆಲ್ಲಾ ಒಂದು ದೊಡ್ಡ ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ಕೂಡಿಡುತ್ತಾ, ವಾರಕ್ಕೊಮ್ಮೆ ಅವುಗಳನ್ನು ಶುಚಿಗೊಳಿಸುವ ವಿಧಾನ ಆಗಿರಲಿಲ್ಲ. ಇದು ಈಗ ಅನಿವಾರ್ಯವಾಗಿ ರೂಢಿಸಿಕೊಂಡ ಪದ್ಧತಿ. ಅಮ್ಮ ಬದುಕಿದ್ದರೆ, ಇದನ್ನೆಲ್ಲ ನೋಡಿ ಅವಳಿಗೆ ಅದೆಷ್ಟು ಸಿಟ್ಟು ಬಂದಿರುತ್ತಿತ್ತೋ. ಅಮ್ಮನ ಪ್ರಕಾರ ಅದು ಮೈಲಿಗೆ ಬಟ್ಟೆ. ಅದನ್ನು ಆದಷ್ಟು ಬೇಗ ಶುಭ್ರಗೊಳಿಸತಕ್ಕದ್ದೇ ಹೊರತು ವಿಳಂಬ ಸಲ್ಲದು. ಇದೊಂದೇ ಅಲ್ಲ, ಸ್ವತ್ಛತೆಯ ವಿಷಯಗಳಲ್ಲಿ ಅಮ್ಮ ತನ್ನದೇ ಆದ ಕೆಲವು ಕಠಿಣ ನಿಯಮಗಳನ್ನು ಜಾರಿಯಲ್ಲಿಟ್ಟಿದ್ದಳು.

ಬೆಳಗ್ಗೆ ಎದ್ದೊಡನೆ, ಮೊತ್ತ ಮೊದಲ ಕೆಲಸವಾಗಿ ಮನೆಯ ಕಸವನ್ನು ಗುಡಿಸಿ ಹೊರಗೆಸೆಯದಿದ್ದರೆ ಅಮ್ಮ ಸಹಿಸುತ್ತಿರಲಿಲ್ಲ. ಮೊದಲ ಕಸಕ್ಕೆ ಅಮ್ಮ “ಶನಿಗಸ’ ಎನ್ನುತ್ತಿದ್ದಳು. ಆ ಕಸವನ್ನು ಬೇಗ ಗುಡಿಸಿ ತೆಗೆಯದಿದ್ದರೆ ಆ ಮನೆಗೆ ಶನಿ ಕಾಟ ಹಿಡಿಯುತ್ತದೆ ಎಂಬುದು ಅವಳ ನಂಬಿಕೆ. ಅದೇ ರೀತಿ ಕೊಳೆ ಬಟ್ಟೆ, ಮುಸುರೆ ಪಾತ್ರೆಗಳನ್ನು ತೊಳೆಯದೆ ಪೇರಿಸಿಡುವುದು ಕೂಡ ಮನೆಗೆ ಅನಿಷ್ಟವೆಂದೇ ಅಮ್ಮ ನಂಬಿದ್ದಳು. ನಮ್ಮಲ್ಲಿ ಯಾರಲ್ಲಾದರೂ ಆ ಪ್ರವೃತ್ತಿ ಇಣುಕಿದರೆ ಅದನ್ನು “ಶ³ಪಚತನ’ವೆಂದು ಅಮ್ಮ ಕಟುವಾದ ಮಾತಿನಲ್ಲಿ ಖಂಡಿಸುತ್ತಿದ್ದಳು. ಹಾಗೆಂದರೆ ಏನೆಂದು ಅರ್ಥವಾಗದಿದ್ದರೂ ಆ ಪದವನ್ನು ಅಮ್ಮ ಉಪಯೋಗಿಸುತ್ತಿದ್ದ ತೀಕ್ಷ್ಣತೆಗೆ ಅದೇನೋ ಬಹಳ ಕೆಟ್ಟ ಅವಸ್ಥೆಯೇ ಇರಬಹುದು ಎನ್ನಿಸಿಬಿಡುತ್ತಿತ್ತು.

ಸರಿ, ಎಲ್ಲೋ ಹೋದೆ. ಮತ್ತೆ ಬಟ್ಟೆ ಒಗೆಯುವ ಕಲ್ಲಿನತ್ತ ಬರುತ್ತೇನೆ. ಬಟ್ಟೆಗಳಿಗೆ ನೊರೆ ಬರುವ ಸೋಪಿನಿಂದ ಉಜ್ಜಿ, ಕಲ್ಲಿನ ಮೇಲೆ ಎತ್ತಿ ಒಗೆಯುವುದು ಶಾರೀರಿಕ ವ್ಯಾಯಾಮದ ಜೊತೆಗೆ ಮನಸ್ಸನ್ನೂ ಮುದಗೊಳಿಸುತ್ತಿದ್ದ ಕೆಲಸವಾಗಿತ್ತು. ಬಿಳಿಯ ಬಟ್ಟಿಗಳನ್ನು ಪ್ರತ್ಯೇಕಿಸಿ, ಬಕೆಟ್‌ನ ನೀರಿಗೆ ಸ್ವಲ್ಪವೇ ನೀಲಿ ಕದರಿ, ಬಿಸಿಲು ನೇರವಾಗಿ ಬೀಳುವ ತಂತಿಗಳ ಮೇಲೆ ಹರವಿದರೆ, ಅವುಗಳನ್ನು ಒಣಗಿಸಿ, ತನ್ನ ಕಿರಣಗಳಿಂದ ಮತ್ತಷ್ಟು ಬಿಳುಪಾಗಿಸುವ ಕೆಲಸ ಸೂರ್ಯದೇವನದು. ಈ ರೀತಿ ಗರಿಗರಿಯಾಗಿ ಒಣಗಿದ ಬಟ್ಟೆಗಳನ್ನು ಮೂಗಿನ ಬಳಿ ತಂದು ಮೂಸಿದರೆ ಅದೊಂದು ವಿಶಿಷ್ಟವಾದ ಘಮ!

ಆಗೆಲ್ಲಾ ಮನೆಯ ಮುಂದೆ, ಹಿಂದೆ, ಎರಡೂ ಬದಿಯ ಖಾಲಿ ಜಾಗಗಳಲ್ಲಿ ತಂತಿಗಳನ್ನು ಕಟ್ಟಿರುತ್ತಿದ್ದರು. ಮನೆಯ ಹೊರಗೆ ಮಾತ್ರವಲ್ಲದೆ ಒಳಗೂ ತಂತಿ, ಹಗ್ಗಗಳದ್ದೇ ಪಾರುಪತ್ಯ. ಮಡಿ ಬಟ್ಟೆಗಳನ್ನು ಒಣಗಿಸಲು ಅಡುಗೆಮನೆಯ ಸೂರಿನಲ್ಲಿ ಸಣ್ಣಗಿನ ಬಿದಿರು ಕೋಲು ನೇತಾಡಿಕೊಂಡಿರುತ್ತಿತ್ತು. ಬಟ್ಟೆಗಳನ್ನು ಅದರ ಮೇಲೆ ಎಸೆದು, ನಂತರ ಉದ್ದನೆಯ ಕೋಲಿನ ಸಹಾಯದಿಂದ ಅದನ್ನು ಹರವಲು ಸ್ವಲ್ಪ ಮಟ್ಟಿಗಿನ ನೈಪುಣ್ಯ ಬೇಕಾಗಿತ್ತು.

ಮನೆಯ ಕೋಣೆಗಳಲ್ಲಿ ಕಪಾಟುಗಳಿರುತ್ತಿದ್ದರೂ ದಿನನಿತ್ಯದ ಬಟ್ಟೆಬರೆಗಳಿಗೆ ತಂತಿಗಳೇ ಆಶ್ರಯಧಾಮ. ಈ ತಂತಿಗಳ ಮೇಲೆ ಬಟ್ಟೆಗಳನ್ನು ಅದೆಷ್ಟೇ ಓರಣವಾಗಿ ಜೋಡಿಸಿದ್ದರೂ, ಮನೆಯ ಎಲ್ಲ ಸದಸ್ಯರೂ ಅದೇ ಶಿಸ್ತನ್ನು ಅನುಸರಿಸದ ಕಾರಣ ಬಟ್ಟೆಗಳು ವಿಚಿತ್ರ ರೀತಿಯಲ್ಲಿ ಮೇಲಿನಿಂದ ಕೆಳಗೆ ನೇತುಬಿದ್ದಿರುತ್ತಿದ್ದವು. ನನಗೆ ಅಂಥ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಕಂಡರೆ ಅದೇನೋ ಕೆಟ್ಟ ಸಿಡುಕು. ಹುಚ್ಚಿಯಂತೆ ಅಲ್ಲಿರುವ ಬಟ್ಟೆಗಳನ್ನೆಲ್ಲಾ ನೆಲಕ್ಕೆ ಕೆಡವಿ, ಮತ್ತೆ ಜೋಡಿಸಿ ಹಾಕುವವರೆಗೂ ನೆಮ್ಮದಿ ಇರುತ್ತಿರಲಿಲ್ಲ. ಆದರೇನು? ಆ ವ್ಯವಸ್ಥೆ ತಾತ್ಕಾಲಿಕವಷ್ಟೆ. ಅವ್ಯವಸ್ಥೆಯೇ ಶಾಶ್ವತ! ಈ ರೀತಿ ಬಾವಲಿಗಳಂತೆ ನೇತಾಡುತ್ತಿದ್ದ ಬಟ್ಟೆಗಳಿಗೆ ಅಮ್ಮ “ಜೋಲಾಮಾಲೆ’ ಎನ್ನುತ್ತಿದ್ದಳು. ನಾವೂ ಅರ್ಥ ತಿಳಿಯದೆ ಅದನ್ನೇ ಉಪಯೋಗಿಸುತ್ತಿದ್ದೆವು. ಅದರ ಅರ್ಥ ತಿಳಿಯಲು ಹುಡುಕಿದಾಗ, “ಜೋಲಾಮಾಲೆ’ಯ ಮೂಲಪದ “ಜೋಮಾಲೆ’ ಇರಬಹುದೇ ಎಂಬ ಗೊಂದಲ ಕಾಡಿತು. ಬೇಂದ್ರೆಯವರ “ಕುರುಡು ಕಾಂಚಾಣ’ ಕವಿತೆಯಲ್ಲಿ “ಸಣ್ಣ ಕಂದಮ್ಮಗಳ ಕಣ್ಣೀನ ಕವಡೀಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ..’ ಎಂಬ ಸಾಲಿನಲ್ಲಿರುವಂತೆ ಜೋಮಾಲೆಯೆಂದರೆ ಉದ್ದನೆಯ ಹಾರ.

ಈ ಬಟ್ಟೆ ಒಣಗಿಸುವ ಕೆಲಸ ನೆರೆಹೊರೆಯವರಲ್ಲಿ ಆತ್ಮೀಯ ವಾತಾವರಣವನ್ನು ನಿರ್ಮಿಸುತ್ತಿತ್ತು. ವಠಾರದಲ್ಲಿ ಬದುಕು ಸಾಗಿಸಿದವರಿಗೆ ಈ ವಿಷಯ ಅನುಭವಕ್ಕೆ ಬಂದೇ ಇರುತ್ತದೆ. ಎಲ್ಲರ ಮನೆ ಬಟ್ಟೆಗಳನ್ನು ಒಣಗಿಸಲು ಮನೆಯ ಮೇಲಿರುವ ಟೆರೇಸಿನಲ್ಲಿ ತಂತಿಗಳನ್ನು ಒಟ್ಟಾಗಿ ಕಟ್ಟಿರುತ್ತಿದ್ದುದು ಸಾಮಾನ್ಯ. ಹೆಂಗಳೆಯರೆಲ್ಲ ಒಗೆದಿಟ್ಟ ಬಟ್ಟೆಗಳನ್ನು ಬಕೇಟುಗಳಲ್ಲಿ ತುಂಬಿಕೊಂಡು ಮಾಳಿಗೆ ಮೇಲೇರಿ ಬಟ್ಟೆಗಳನ್ನು ಹರವುತ್ತಾ, ಪರಸ್ಪರ ಹರಟುತ್ತಾ ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆಯ ವೇಳೆ ಇದ್ದಕ್ಕಿದ್ದಂತೆ, ಮಳೆಹನಿಗಳು ಬೀಳತೊಡಗಿದರೆ, ಆ ಹೊತ್ತಿನಲ್ಲಿ ಮನೆಯಲ್ಲಿದ್ದವರು ತಮ್ಮದರ ಜೊತೆಗೆ ಉಳಿದವರ ಬಟ್ಟೆಗಳನ್ನೂ ತೆಗೆದು, ನಂತರ ಆಯಾ ಮನೆಯವರಿಗೆ ತಲುಪಿಸುತ್ತಿದ್ದರು. ಒಣಗಿದ ಬಟ್ಟೆಗಳನ್ನು ಮಳೆಯಿಂದ ಕಾಪಾಡಿ, ಜತನದಿಂದ ತಲುಪಿಸಿದವರಿಗೆ ತಮ್ಮಿಂದ ಇತರರಿಗೆ ಸಣ್ಣಉಪಕಾರವಾಯೆ¤ಂಬ ಧನ್ಯತಾಭಾವವಾದರೆ, ಉಪಕೃತರಾದವರ ಹೃದಯ ಕೃತಜ್ಞತೆಯಿಂದ ತುಂಬಿ ಭಾರ! ಬಿಸಿಲು, ಮಳೆಗಾಳಿಗಳಿಗೆ ತಮ್ಮನ್ನು ಒಡ್ಡಿಕೊಂಡಿರುತ್ತಿದ್ದ ಈ ಜಡ ತಂತಿಗಳು ಕೂಡ ಇಂಥದ್ದೊಂದು ಸೌಹಾರ್ದವನ್ನು ಸದ್ದಿಲ್ಲದೆ ಪ್ರಹಹಿಸುವ ಸುವರ್ಣ ಸೇತುವೆಗಳಾಗಿದ್ದವೆಂದರೆ ಅತಿಶಯೋಕ್ತಿಯಲ್ಲ!

-ತ್ರಿವೇಣಿ ಶ್ರೀನಿವಾಸರಾವ್‌, ಶಿಕಾಗೊ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪನೀರ್‌ ಪರಿಮಳ

ಪನೀರ್‌ ಪರಿಮಳ

ಬಟ್ಟಲಿನಿಂದ ಹಾರಿದ ವಡೆ ನೆಲಕ್ಕೆ ಬಿತ್ತು…

ಬಟ್ಟಲಿನಿಂದ ಹಾರಿದ ವಡೆ ನೆಲಕ್ಕೆ ಬಿತ್ತು…

ಉಗುರಿನ ಮೇಲೆ ಚೆಲುವಿನ ಚಿತ್ತಾರ

ಉಗುರಿನ ಮೇಲೆ ಚೆಲುವಿನ ಚಿತ್ತಾರ

ಬೆಂಕಿಯಲ್ಲಿ ಅರಳಿದ ಹೂವು

ಬೆಂಕಿಯಲ್ಲಿ ಅರಳಿದ ಹೂವು

ಹಿತಭುಕ್‌ ಮಿತಭುಕ್‌ ಋತುಭುಕ್‌

ಹಿತಭುಕ್‌ ಮಿತಭುಕ್‌ ಋತುಭುಕ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ