ನಂಗಿದು ಸೂಟ್‌ ಆಗಬಹುದಾ?

ಫ್ಯಾಷನ್‌ ಹಿಂದೆ ಓಡುವ ಮುನ್ನ...

Team Udayavani, Nov 6, 2019, 4:07 AM IST

ಫ್ಯಾಷನ್‌ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್‌ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ ನಾವೂ ಬದಲಾಗುತ್ತಿರಬೇಕು. ಹೊಸತೊಂದು ಫ್ಯಾಷನ್‌ನ ಡ್ರೆಸ್‌ ಮಾರುಕಟ್ಟೆಗೆ ಬಂದಿದೆ ಅಂತಾದಾಗ, ಎಲ್ಲರೂ ಮುಗಿಬಿದ್ದು ಅದನ್ನು ಖರೀದಿಸುತ್ತಾರೆ. ಆದರೆ, ಆ ಸ್ಟೈಲ್‌ ತಮಗೆ ಸೂಟ್‌ ಆಗುತ್ತದೋ ಇಲ್ಲವೋ ಅಂತ ಯೋಚಿಸುವುದೇ ಇಲ್ಲ. ಅಂಥವರಿಗಾಗಿ ಇಲ್ಲಿ ಕೆಲವೊಂದಷ್ಟು ಟಿಪ್ಸ್‌ಗಳಿವೆ. ಹೊಸ ಡ್ರೆಸ್‌ ಖರೀದಿಸುವ ಮುನ್ನ ಇವುಗಳ ಕಡೆಗೆ ಗಮನ ಹರಿಸಿದರೆ ಒಳ್ಳೆಯದು.

ಬಾಡಿ ಶೇಪ್‌: ಮುಖವನ್ನು ಹೇಗೆ ದುಂಡುಮುಖ, ಚೌಕ ಮುಖ, ನೀಳಮುಖ ಅಂತ ಹೇಳುತ್ತೇವೆಯೋ ಹಾಗೆಯೇ, ದೇಹವನ್ನು ಕೂಡಾ ಆ್ಯಪಲ್‌ ಶೇಪ್‌, ಅವರ್‌ಗ್ಲಾಸ್‌ ಶೇಪ್‌, ರೌಂಡ್‌ ಶೇಪ್‌, ಪಿಯರ್‌ ಶೇಪ್‌ ಇತ್ಯಾದಿಯಾಗಿ ವಿಂಗಡಿಸಬಹುದು. ಹೊಸ ಫ್ಯಾಷನ್‌, ದೇಹದ ಆಕಾರಕ್ಕೆ ಹೊಂದುತ್ತದೆಯೇ ಅಂತ ಮೊದಲು ತಿಳಿದುಕೊಳ್ಳಬೇಕು.

ಬಣ್ಣ: ಫ್ಯಾಷನ್‌ಲೋಕದಲ್ಲಿ ಟ್ರೆಂಡಿಂಗ್‌ನಲ್ಲಿರುವ ಬಣ್ಣ ಯಾವುದೆಂದು ತಿಳಿದು, ಆ ಬಣ್ಣ ನಮ್ಮ ಮೈ ಬಣ್ಣಕ್ಕೆ ಒಪ್ಪುತ್ತದೆಯೋ ಅಂತ ಗುರುತಿಸಿಕೊಂಡು ಬಟ್ಟೆ ಖರೀದಿಸುವುದು ಉತ್ತಮ. ಉದಾಹರಣೆಗೆ, ಕಪ್ಪು ಬಣ್ಣದ ಬಟ್ಟೆಯಲ್ಲಿ ಯಾವುದೋ ಹೊಸ ಫ್ಯಾಷನ್‌ ಶುರುವಾಗಿದೆ ಅಂದುಕೊಳ್ಳಿ. ಆ ಬಣ್ಣವೇ ನಿಮಗೆ ಮ್ಯಾಚ್‌ ಆಗದಿದ್ದರೆ, ಅದು ಎಷ್ಟೇ ಗ್ರ್ಯಾಂಡ್‌ ಫ್ಯಾಷನ್‌ ಆಗಿದ್ದರೂ ಪ್ರಯೋಜನವಿಲ್ಲ. ಇದನ್ನು ಯೋಚಿಸದೆ ಬಟ್ಟೆ ಖರೀದಿಸಿದರೆ, ಫ್ಯಾಷನ್‌ ಹೋಗಿ ಅಭಾಸವಾಗಿ ಬಿಡಬಹುದು.

ಫ್ಯಾಬ್ರಿಕ್‌: ಶಿಫಾನ್‌, ಕಾಟನ್‌, ಸಿಲ್ಕ್, ಜಾರ್ಜೆಟ್‌… ಹೀಗೆ, ಹೊಸ ಸ್ಟೈಲ್‌ನ ಬಟ್ಟೆಯನ್ನು ಯಾವ ಫ್ಯಾಬ್ರಿಕ್‌ನಲ್ಲಿ ಧರಿಸಿದರೆ ಹೆಚ್ಚು ಆರಾಮದಾಯಕ ಅಂತ ಅರಿತುಕೊಳ್ಳಿ.

ಯಾವ ಸಂದರ್ಭ?: ಹೊಸ ಸ್ಟೈಲ್‌ನ ದಿರಿಸನ್ನು ಯಾವ ಸಂದರ್ಭದಲ್ಲಿ ಧರಿಸಬೇಕೆಂದು ಬಯಸಿದ್ದೀರಿ ಅನ್ನುವುದೂ ಕೂಡಾ ಮುಖ್ಯ. ಉದಾಹರಣೆಗೆ: ಹೊಸ ಬಟ್ಟೆಯನ್ನು ಆಫೀಸ್‌ಗೆ ಧರಿಸುವುದಾದರೆ ಕಾಟನ್‌, ಲಿನನ್‌, ಖಾದಿಯಂಥ ಫ್ಯಾಬ್ರಿಕ್‌ನಲ್ಲಿ ಕೊಳ್ಳುವುದೂ, ಕ್ಯಾಶುವಲ್‌ ಆಗಿ ಧರಿಸುವುದಾದರೆ ಶಿಫಾನ್‌, ಜಾರ್ಜೆಟ್‌ನಂಥ ಫ್ಯಾಬ್ರಿಕ್‌ನಲ್ಲಿ ಖರೀದಿಸುವುದು ಜಾಣತನ.

ಪ್ರಿಂಟ್‌, ಡಿಸೈನ್‌: ಬಟ್ಟೆಯ ಮೇಲಿನ ಪ್ರಿಂಟ್‌ ಮತ್ತು ಡಿಸೈನ್‌ ಅನ್ನು ಕೂಡಾ, ನೀವು ಯಾವ ಸಂದರ್ಭದಲ್ಲಿ ಧರಿಸುತ್ತೀರಿ ಎಂಬುದರ ಮೇಲೆ ಆಯ್ದುಕೊಳ್ಳಬೇಕಾಗುತ್ತದೆ. ಬೋಲ್ಡ್‌ ಅನ್ನಿಸುವ ಪ್ರಿಂಟ್‌, ಡಿಸೈನ್‌ಗಳನ್ನು ಆಫೀಸ್‌ಗೆ, ಸಾಂಪ್ರದಾಯಕ ಸಮಾರಂಭಗಳಿಗೆ ಧರಿಸಲಾಗುವುದಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಒಂದು ದಿನ ಮಗಳು, ಯಾರನ್ನೋ ತಮ್ಮ ಮುಂದೆ ತಂದು ನಿಲ್ಲಿಸಿ "ನಿಮ್ಮ ಅಳಿಯ' ಎಂದುಬಿಟ್ಟರೆ.. ಬರಿಯ ವಿಚಾರವೇ ಸಹ್ಯವಾಗುತ್ತಿಲ್ಲ. ಒಬ್ಬಳೇ ಮಗಳ ಮದುವೆ ಯನ್ನು ವಿಜೃಂಭಣೆಯಿಂದ...

  • ಎಲ್ಲರೂ ಧಾವಂತದ ಜೀವನ ನಡೆಸುತ್ತಿರುವಾಗ ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಒಂದು ಕಾರ್ಯಕ್ರಮಕ್ಕಾದರೂ ಕಡ್ಡಾಯ ಹಾಜರಿ ಹಾಕುವುದನ್ನು ಹೆಚ್ಚಿನವರು...

  • ಗಡಿಬಿಡಿಯಿಂದ ಒಳಗೆ ಹೋಗಿ ಲಗುಬಗೆಯಿಂದ ನೀಲಿಸೀರೆ ಉಟ್ಟು, ಅಳ್ಳಕವಾಗಿ ಜಡೆ ಹೆಣೆದು, ಹೂ ಮುಡಿದು ಮುಖಕ್ಕೆ ರೆಮಿ ಸ್ನೋ, ಲ್ಯಾಕ್ಟೋ ಕ್ಯಾಲಮೈನ್‌ ಲೇಪಿಸಿಕೊಂಡು...

  • ಹಿಂದಿನ ತಲೆಮಾರಿನ ಜನ, ಈಗಿನವರ ಥರ, "ಅಯ್ಯೋ ಬಿಸಿಲ್ಗೆ ಹೋದ್ರೆ ಸನ್‌ ಬರ್ನ್ ಆಗುತ್ತೆ. ಅದಿಕ್ಕೆ ಅಂಬ್ರೆಲಾ ತಗೊಂಡೇ ಹೋಗೋದು ನಾನು' ಅಂತಿದ್ದಿಲ್ಲ.ಸನ್‌ ಸ್ಕ್ರೀನ್‌...

  • ಲೇಡಿಸ್‌ ಕ್ಲಬ್‌ ಅಂದಾಕ್ಷಣ, ಹರಟೆ ಹೊಡೆಯಲು, ಮೋಜು ಮಸ್ತಿ ಮಾಡಲು ಮಹಿಳೆಯರು ಒಂದೆಡೆ ಸೇರುವ ತಾಣ ಎಂಬ ಕಲ್ಪನೆ ಕೆಲವರಿಗೆ ಇದೆ. ಅಂಥ ಕ್ಲಬ್‌ಗಳಿಂದ ಏನೂ ಪ್ರಯೋಜನವಿಲ್ಲ...

ಹೊಸ ಸೇರ್ಪಡೆ