ಚಟ್ನಿ ಚಮತ್ಕಾರ

Team Udayavani, Jan 3, 2018, 3:02 PM IST

03-39.jpg

ಬೆಳಗ್ಗಿನ ಅಥವಾ ಸಂಜೆಯ ವೇಳೆ ತಯಾರಿಸುವ ಬಹುತೇಕ ಖಾದ್ಯಗಳು ಚಟ್ನಿ ಇಲ್ಲದೆ ಅಪೂರ್ಣ. ನಾಲಗೆಗೆ ಚುರುಕು ಮುಟ್ಟಿಸುವಂಥ ಥರಹೇವಾರಿ ಚಟ್ನಿಗಳ ಪರಿಚಯ ಇಲ್ಲಿದೆ. 

ಮೂಲಂಗಿ ಚಟ್ನಿ 
ಬೇಕಾದ ಸಾಮಗ್ರಿ: 

ಮೂಲಂಗಿ ತುರಿ-1 ಕಪ್‌, ಒಣಮೆಣಸಿನಕಾಯಿ-5-6, ತೆಂಗಿನಕಾಯಿ ತುರಿ-1/2 ಕಪ್‌, ಉಪ್ಪು-ರುಚಿಗೆ ತಕ್ಕಷ್ಟು, ಕರಿಬೇವಿನ ಎಲೆಗಳು- 8-10,  ಹುಣಸೆ ಹಣ್ಣು- 1 ಇಂಚಿನಷ್ಟು, ಬೆಲ್ಲದ ತುರಿ- 1 ಚಮಚ, ಎಣ್ಣೆ-4 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ 

ಮಾಡುವ ವಿಧಾನ- ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಹುಣಸೆ ಹಣ್ಣುಗಳನ್ನು ಬೇರೆಬೇರೆಯಾಗಿ ಎಣ್ಣೆಯಲ್ಲಿ ಹುರಿದುಕೊಳ್ಳಿ. ಹುರಿದ ಮಿಶ್ರಣಕ್ಕೆ, ಮೂಲಂಗಿ ತುರಿ, ತೆಂಗಿನಕಾಯಿ ತುರಿ, ಬೆಲ್ಲ, ಉಪ್ಪು ಹಾಕಿ ತರಿತರಿಯಾಗಿ ಅರೆದು, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ರುಚಿಯಾದ ಮೂಲಂಗಿ ಚಟ್ನಿ ತಯಾರು.  

ಕ್ಯಾರೆಟ್‌ ಚಟ್ನಿ 
ಬೇಕಾಗುವ ಸಾಮಗ್ರಿ:
ಕ್ಯಾರೆಟ್‌ ಹೋಳು- 2 ಕಪ್‌, ತೆಂಗಿನಕಾಯಿ ತುರಿ-1 ಕಪ್‌, ಒಣಮೆಣಸಿನಕಾಯಿ- 4-5, ಹುಣಸೆ ಹಣ್ಣು- 1 ಇಂಚಿನಷ್ಟು,  ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವಿನ ಸೊಪ್ಪು- 7-8 ಎಲೆಗಳು, ಎಣ್ಣೆ- 3 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ

ಮಾಡುವ ವಿಧಾನ: ಒಣಮೆಣಸಿನಕಾಯಿ ಹಾಗೂ ಕರಿಬೇವಿನ ಸೊಪ್ಪುಗಳನ್ನು ಸೇರಿಸಿ ಎಣ್ಣೆಯಲ್ಲಿ ಹುರಿದಿರಿಸಿ. ಕ್ಯಾರೆಟ್‌ ಹೋಳುಗಳು, ತೆಂಗಿನಕಾಯಿ ತುರಿ, ಹುರಿದ ಸಾಮಗ್ರಿಗಳು, ಹುಣಸೆಹಣ್ಣು, ಉಪ್ಪು ಸೇರಿಸಿ ನುಣ್ಣಗೆ ಅರೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಅರೆದಿರಿಸಿದ ಚಟ್ನಿ ಮಿಶ್ರಣಕ್ಕೆ, ತಯಾರಿಸಿರಿಸಿದ ಒಗ್ಗರಣೆ ಸೇರಿಸಿದರೆ ರುಚಿಕರ ಕ್ಯಾರೆಟ್‌ ಚಟ್ನಿ ರೆಡಿ. ಚಪಾತಿಯೊಂದಿಗೆ ಇಲ್ಲವೇ ಅನ್ನದೊಂದಿಗೆ ವ್ಯಂಜನವಾಗಿ ತಿನ್ನಲು ಬಲು ರುಚಿ. 

ಕರಿಬೇವು ಸೊಪ್ಪಿನ ಚಟ್ನಿ 
ಬೇಕಾದ ಸಾಮಗ್ರಿ: ಕರಿಬೇವಿನ ಎಲೆಗಳು-1 ಕಪ್‌, ಜೀರಿಗೆ-3 ಚಮಚ, ಹಸಿಮೆಣಸಿನಕಾಯಿ- 5-6, ಹುಣಸೆ ಹಣ್ಣು- 2 ಇಂಚಿನಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ತೊಗರಿಬೇಳೆ- 4 ಚಮಚ, ತೆಂಗಿನಕಾಯಿ ತುರಿ- 1 ಕಪ್‌, ಎಣ್ಣೆ- 1/4 ಕಪ್‌, ಸಾಸಿವೆ- 1 ಚಮಚ, ಇಂಗು- 1/4 ಚಮಚ 

ಮಾಡುವ ವಿಧಾನ- ತೊಗರಿಬೇಳೆ, ಹುಣಸೆಹಣ್ಣು, ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಎಣ್ಣೆಯಲ್ಲಿ ಹುರಿದಿರಿಸಿ. ಹುರಿದ ಸಾಮಗ್ರಿಗಳಿಗೆ, ತೆಂಗಿನಕಾಯಿ ತುರಿ, ಜೀರಿಗೆ, ಉಪ್ಪು ಸೇರಿಸಿ ಚಟ್ನಿಯ ಹದಕ್ಕೆ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ಕರಿಬೇವಿನ ಸೊಪ್ಪಿನ ಚಟ್ನಿ ರೆಡಿ. 

 ಆಮಸೋಲ್‌(ಕೋಕಮ್‌ ಚಟ್ನಿ) 
ಬೇಕಾದ ಸಾಮಗ್ರಿ: ಆಮಸೋಲ್‌- 5-6, ಬೆಲ್ಲ- 1/2 ಕಪ್‌, ಉಪ್ಪು- ರುಚಿಗೆ ತಕ್ಕಷ್ಟು, ಲವಂಗ- 3-4, ಏಲಕ್ಕಿ ಪುಡಿ- 1/4 ಚಮಚ

ಮಾಡುವ ವಿಧಾನ: ಆಮಸೋಲ್‌ಗ‌ಳನ್ನು ಎರಡು ಗಂಟೆ ಸಮಯ ನೀರಿನಲ್ಲಿ ನೆನೆಸಿ ಬಸಿದಿಡಿ. ಬಸಿದ ಆಮಸೋಲ್‌ಗ‌ಳಿಗೆ, ಬೆಲ್ಲ, ಏಲಕ್ಕಿ ಪುಡಿ, ಲವಂಗದ ಪುಡಿ, ಉಪ್ಪು ಸೇರಿಸಿ. ತರಿತರಿಯಾಗಿ ಅರೆದರೆ, ಸಿಹಿ- ಹುಳಿ ಮಿಶ್ರಿತ ಆಮಸೋಲ್‌ ಚಟ್ನಿ ತಯಾರು. 

ನೆಲ್ಲಿಕಾಯಿ ಚಟ್ನಿ 
ಬೇಕಾದ ಸಾಮಗ್ರಿ: ಬೀಜ ತೆಗೆದು ಕತ್ತರಿಸಿದ ನೆಲ್ಲಿಕಾಯಿ ಹೋಳುಗಳು-1 ಕಪ್‌, ಒಣಕೊಬ್ಬರಿ ತುರಿ- 1 ಕಪ್‌, ಉಪ್ಪು- ರುಚಿಗೆ ತಕ್ಕಷ್ಟು, ಒಣಮೆಣಸಿನಕಾಯಿ- 7-8, ಜೀರಿಗೆ- 2 ಚಮಚ, ಕರಿಬೇವಿನ ಎಲೆಗಳು- 8-10, ಬೆಲ್ಲದ ತುರಿ- 1/4 ಕಪ್‌, ಎಣ್ಣೆ- 1/4 ಕಪ್‌, ಸಾಸಿವೆ- 1 ಚಮಚ, ಇಂಗು- 1/4 ಚಮಚ

ಮಾಡುವ ವಿಧಾನ: ನೆಲ್ಲಿಕಾಯಿ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಒಣಕೊಬ್ಬರಿ ತುರಿಗಳನ್ನು ಬೇರೆಬೇರೆಯಾಗಿ ಹುರಿದಿಡಿ. ನೆಲ್ಲಿಕಾಯಿ ಹೋಳುಗಳಿಗೆ, ಹುರಿದ ಸಾಮಗ್ರಿಗಳು, ಜೀರಿಗೆ, ಉಪ್ಪು, ಬೆಲ್ಲದ ತುರಿ ಹಾಕಿ ನುಣ್ಣಗೆ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ರುಚಿಯಾದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ. 

ಜಯಶ್ರೀ ಕಾಲ್ಕುಂದ್ರಿ

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.