ಸಿಟಿ ಹೆಂಡ್ತಿಯ ಸಂಕಟ


Team Udayavani, Mar 20, 2019, 12:30 AM IST

e-2.jpg

ನಗರಗಳಲ್ಲಿ ನೌಕರಿ ಮಾಡುವ ಹುಡುಗನನ್ನು ಮದುವೆಯಾದರೆ, ಸದಾ ಶಾಪಿಂಗ್‌, ಸಿನಿಮಾ ಎಂದೆಲ್ಲಾ ಸುತ್ತಾಡಬಹುದು ಎಂಬ ಊಹೆ ಸಲ್ಲದು. ಹಳ್ಳಿಯಲ್ಲಿ ಇರುವಂತೆಯೇ ಸಿಟಿಯಲ್ಲೂ ಹಲವು ಸಮಸ್ಯೆಗಳಿರುತ್ತವೆ ಎಂದು ಅರ್ಥ ಮಾಡಿಕೊಳ್ಳಬೇಕು. 

“ಅಮ್ಮಾ, ಯಾಕೋ ಅಳಬೇಕು ಅನ್ನಿಸ್ತಾ ಇದೆ. ನಾಲ್ಕು ಗೋಡೆಯ ಮಧ್ಯೆ ಏನು ಮಾಡಲಿ? ಇವರೋ ಬೆಳಗ್ಗೆ ಆಫೀಸ್‌ಗೆ ಹೋದವರು ಬರೋದು ಸಂಜೆಯೇ. ಅಲ್ಲಿವರೆಗೂ ಒಬ್ಬಳೇ ಇರಬೇಕು…’ ಅಳುವ ದನಿಯಲ್ಲಿ ಮಗಳು ಹೇಳುತ್ತಿದ್ದರೆ ಇತ್ತ ಊರಲ್ಲಿರುವ ಅಮ್ಮನಿಗೆ ಕರುಳು ಹಿಂಡಿದಂಥ ಅನುಭವ. 

ಮದುವೆಯಾದ ಹೊಸತು. ಲವಲವಿಕೆಯಿಂದ ಇರಬೇಕಾದ ಮಗಳು ಅಳುತ್ತಾ ಕುಳಿತರೆ ಹೆತ್ತ ಕರುಳು ಚುರ್‌ ಅನ್ನದಿದ್ದೀತೆ? ಅಳಿಯ ತುಂಬಾ ಒಳ್ಳೆಯವನು. ಅವನ ಬಗ್ಗೆ ಎರಡು ಮಾತಿಲ್ಲ. ಮಗಳನ್ನು ತುಂಬಾ ಪ್ರೀತಿಸುತ್ತಾನೆ. ಆದರೂ ಮಗಳಿಗೇಕೋ ಒಂಟಿತನ ಕಾಡುತ್ತದಂತೆ. ಛೇ, ಯಾಕೆ ಹೀಗಾಯ್ತು ? ಮಗಳೊಡನೆ ನಾಲ್ಕು ದಿನ ಇದ್ದು ಬರೋಣ ಅಂದರೆ ಮನೆ, ತೋಟದ ಕೆಲಸ. ದಿನಾ ಗಂಟೆಗಟ್ಟಲೆ ಫೋನ್‌ನಲ್ಲಿ ಹರಟುತ್ತಾ ಸಮಾಧಾನ ಪಡಿಸೋ ಪ್ರಯತ್ನಅಮ್ಮನದ್ದು…

ಒಂದೆಡೆ ನಗರ ಜೀವನವೆಂಬ ಜಗಮಗಿಸುವ ಲೋಕದ ಸೆಳೆತ. ಇನ್ನೊಂದೆಡೆ, ಗಂಡ ಒಳ್ಳೆಯ ಹುದ್ದೆಯಲ್ಲಿದ್ದರೆ ಕೈತುಂಬಾ ಸಂಬಳ ಬರುತ್ತದೆ. ಸಿಟಿಯಲ್ಲಿ ಆರಾಮಾಗಿ ಜೀವನ ನಡೆಸಬಹುದೆಂಬ ಭ್ರಮೆ. ಹಳ್ಳಿ ಹುಡುಗಿಯರೂ ಈಗ ಸಿಟಿಯಲ್ಲಿ ಕೆಲಸ ಮಾಡೋ ಹುಡುಗನೇ ಬೇಕು ಎನ್ನುತ್ತಿದ್ದಾರೆ. ಪಿತ್ರಾರ್ಜಿತವಾಗಿ ಬಂದ ತೋಟ ನೋಡಿಕೊಳ್ಳುತ್ತಾ ಅಥವಾ ತನ್ನ ಊರಲ್ಲೇ ನೌಕರಿ ಮಾಡಿಕೊಂಡು ಹಾಯಾಗಿರೋಣ ಎನ್ನುವ ಯುವಕರನ್ನು ಹುಡುಗಿಯರು ಒಪ್ಪಿಕೊಳ್ಳುವುದಿಲ್ಲ. ಬೆಂಗಳೂರಿನಲ್ಲೊಂದು ಕೆಲಸವಿದ್ದರೆ ಮಾತ್ರ, ಹುಡುಗಿಯರು ಮದುವೆಗೆ ಓಕೆ ಅನ್ನುತ್ತಾರೆ. ಮಗಳಿಗೆ ಸಿಟಿಯಲ್ಲಿ ಕೈತುಂಬಾ ಸಂಪಾದಿಸುವ ಹುಡುಗನ ಸಂಬಂಧ ಬಂದರೆ ಕೇಳಬೇಕೇ, ಸ್ವರ್ಗವೇ ಕೈಗೆ ಸಿಕ್ಕಂತೆ ಖುಷಿಪಡುವ ಹೆಣ್ಣು ಹೆತ್ತವರು, ತಮ್ಮ ಮಗಳು ಅಲ್ಲಿನ ಜೀವನಕ್ಕೆ ಹೊಂದಿಕೊಂಡು ಹೋಗುತ್ತಾಳ್ಳೋ, ಇಲ್ಲವೋ ಎಂದು ಯೋಚಿಸುವುದೂ ಇಲ್ಲ. 

ಮದುವೆಗೆ ಮುಂಚೆ ಹುಡುಗನ ಜೊತೆ ಸುತ್ತಾಡೋದು, ಚಾಟಿಂಗ್‌, ಗಂಟೆಗಟ್ಟಲೆ ಫೋನ್‌ನಲ್ಲಿ ಹರಟೆ… ವಾಹ್‌, ಲೈಫ‌ು ಎಷ್ಟು ಮಜವಾಗಿದೆ ಅಂದುಕೊಳ್ಳುವ ಹುಡುಗಿಯರಿಗೆ ವಾಸ್ತವ ಜೀವನದ ಅರಿವಾಗುವುದು ಮದುವೆಯ ನಂತರವೇ. ಹೊಸತರಲ್ಲಿ ಸುತ್ತಾಟ, ಸಿನಿಮಾ, ಹೋಟೆಲ್‌, ಮನಕ್ಕೆ ಮುದ ನೀಡುವ ಮಾತುಗಳು… ಯಾವಾಗ ಗಂಡ ರಜೆ ಮುಗಿಸಿ ಆಫೀಸ್‌ ಕಡೆ ಹೆಜ್ಜೆ ಹಾಕುತ್ತಾನೋ; ಆಗ ಹೆಂಡತಿಗೆ ಲೈಫ್ ಬೋರ್‌ ಅನ್ನಿಸುತ್ತದೆ. ದಿನವಿಡೀ ಮನೆಯಲ್ಲಿ ಒಬ್ಬಳೇ ಇದ್ದು ಒಂಟಿತನ ಕಾಡುತ್ತದೆ.

ಹಳ್ಳಿ ಪರಿಸರದಲ್ಲಿ ಬೆಳೆದ ಹೆಚ್ಚಿನ ಹೆಣ್ಣುಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆ ಇದು. ಸಿಟಿ ಜೀವನದಿಂದ ಬೇಸತ್ತು ತವರಿಗೆ ಬಂದರೆ, ಅಲ್ಲಿಯೂ ಅದೇ ಪ್ರಶ್ನೆ: “ಮದುವೆಯಾದ್ಮೇಲೆ ಲೈಫ್ ಹೇಗಿದೆ? ಮನೆಯಲ್ಲಿ ಕೂತು ಬೇಜಾರಾಗಲ್ವ?’ ಇಲ್ಲ ಅನ್ನಲೂ, ಹೌದೆಂದು ಒಪ್ಪಿಕೊಳ್ಳಲೂ ಆಗದ ಸ್ಥಿತಿ ಆಕೆಯದ್ದು. ಹೆಚ್ಚೆಂದರೆ ಹದಿನೈದು ದಿನ ತವರಿನಲ್ಲಿರಬಹುದು. ಮರಳಿ ಗೂಡಿಗೆ ಸೇರಲೇಬೇಕಲ್ಲವೆ? ಸಿಟಿ ಸೇರಿದ ಮೇಲೆ ಮತ್ತದೇ ಬೇಸರ, ಅದೆ ಸಂಜೆ, ಅದೇ ಏಕಾಂತ. 

ಮದುವೆಯಾದ ಹೊಸತರಲ್ಲಿ ಎಲ್ಲ ಹುಡುಗಿಯರನ್ನೂ ಕಾಡುವ ಸಮಸ್ಯೆಯಿದು. ಆ ಸಮಯದಲ್ಲಿ ಗಂಡನಾದವನು, ಅವಳಿಗೆ ಜೊತೆಯಾದರೆ, ಅವಳ ಭಾವನೆಗಳನ್ನು ಅರ್ಥ ಮಾಡಿಕೊಂಡರೆ, ಆಕೆಯೂ ಸಿಟಿ ಜೀವನಕ್ಕೆ ಹೊಂದಿಕೊಳ್ಳುತ್ತಾಳೆ.  

 ಗಂಡನೇ ಬೆಸ್ಟ್‌ ಫ್ರೆಂಡ್‌
ಮದುವೆಯ ನಂತರ ಗಂಡನೇ ಆಕೆಯ ಬೆಸ್ಟ್‌ಫ್ರೆಂಡ್‌. ಗಂಡನೆನ್ನುವ ಅಧಿಕಾರದಿಂದ ಮಾತನಾಡುವ ಬದಲು ಸಲುಗೆಯಿಂದ ಗೆಳೆಯನಂತೆ ವರ್ತಿಸಿದರೆ, ಸತಿ-ಪತಿಯ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ. 

ಒಂದು ಮಿಸ್‌ಕಾಲ್‌
ಆಫೀಸ್‌ಗೆ ಹೋದ ನಂತರ ಕೆಲಸದಲ್ಲಿ ಮುಳುಗುವ ಮುನ್ನ, ನಿನ್ನ ಬಗ್ಗೆಯೂ ಯೋಚಿಸುತ್ತೇನೆ ಎಂಬುದನ್ನು ಪರೋಕ್ಷವಾಗಿ ಹೇಳಲು ಅವಳಿಗೊಂದು ಕಾಲ್‌ ಮಾಡಿ. ಗಂಟೆಗಟ್ಟಲೆ ಹರಟೆ ಹೊಡೆಯಬೇಕಾಗಿಲ್ಲ. “ಏನು ಮಾಡ್ತಾ ಇದ್ದೀಯ?’ ಅನ್ನೋ ಒಂದು ಮಾತು ಸಾಕು ಆಕೆಯನ್ನು ಖುಷಿಪಡಿಸಲು. 

ಸಂಜೆಯ ವಾಕಿಂಗ್‌
ಸಂಜೆ ಆಫೀಸಿನಿಂದ ಬಂದ ನಂತರವೂ ಕೆಲಸ, ಮೊಬೈಲ್‌, ಟಿವಿಯಲ್ಲಿ ಮುಳುಗಿ ಬಿಡಬೇಡಿ. ಹೆಂಡತಿಯ ಜೊತೆಗೆ ವಾಕಿಂಗ್‌ ಹೋಗಿ. ಬೆಳಗಿನಿಂದ ಸಂಜೆಯವರೆಗೆ ಮನೆಯಲ್ಲೇ ಇರುವ ಪತ್ನಿಯ ಎಲ್ಲ ಬೇಸರವೂ ಅದರಿಂದ ದೂರಾಗುತ್ತದೆ. 

ಸಪ್ಪೆಯಾಗಿರಬೇಡಿ
ಹೆಂಡತಿ ಸಂತೋಷವಾಗಿ ಇರುವಂತೆ ನೋಡಿಕೊಳ್ಳುವುದು ಗಂಡನ ಕರ್ತವ್ಯ ಇರಬಹುದು. ಆದರೆ, ಹೊಸ ಬದುಕಿಗೆ ಹೊಂದಿಕೊಳ್ಳುವುದು ಹೆಂಡತಿಯ ಕೈಯಲ್ಲೇ ಇದೆ. ಪತಿ ಮನೆಗೆ ಬಂದಾಗ ಸಪ್ಪೆ ಮುಖದಿಂದ ಬಾಗಿಲು ತೆಗೆಯಬೇಡಿ. ಮಾತುಮಾತಿಗೆ, “ಬೋರ್‌ ಆಗ್ತಾ ಇದೆ. ತವರು ಮನೆಯೇ ಚಂದ ಇತ್ತು’ ಎಂದು ಕೊರಗುತ್ತಾ ಇರಬೇಡಿ. ನಕಾರಾತ್ಮಕ ಯೋಚನೆಗಳನ್ನು ದೂರವಿಟ್ಟು, ಖುಷಿಯಾಗಿರಿ. 

ಹವ್ಯಾಸ ಬೆಳೆಸಿಕೊಳ್ಳಿ
ಮನೆಯಲ್ಲೇ ಕುಳಿತು ಬೋರ್‌ ಅನ್ನುವುದಕ್ಕಿಂತ, ಹೊಸ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಓದು, ಬರಹ, ಸಂಗೀತ, ನೃತ್ಯ, ಚಿತ್ರಕಲೆ, ಅಡುಗೆ, ಹೊಲಿಗೆ…ಸೃಜನಾತ್ಮಕವಾಗಿ ನಿಮ್ಮನ್ನು ತೊಡಗಿಸಿಕೊಳ್ಳಲು ಹತ್ತಾರು ಮಾರ್ಗಗಳಿವೆ. 

ನಿಮ್ಮ ಸಂತೋಷ ನಿಮ್ಮ ಕೈಯಲ್ಲಿ!
ಸಂತೋಷದ ರಿಮೋಟನ್ನು ಯಾರದೋ ಕೈಗೆ ಕೊಡಬೇಡಿ. ಗಂಡ, ಹೆತ್ತವರು, ಅತ್ತೆ-ಮಾವ ನಿಮಗೆ ಸಾಂತ್ವನ ಹೇಳಬಹುದೇ ಹೊರತು, ಅವರಿಂದಲೇ ಎಲ್ಲವನ್ನೂ ಬಯಸುವುದು ಸರಿಯಲ್ಲ. ನಿಮ್ಮ ಸಂತೋಷ, ನೆಮ್ಮದಿ, ಸಮಾಧಾನಕ್ಕೆ ನೀವೇ ವಾರಸುದಾರರಾಗಿ. 

ವಂದನಾ ರವಿ ಕೆ.ವೈ., ವೇಣೂರು

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.