ಮಗಳು ಗೂಢಚಾರಿಯೇ?

Team Udayavani, Mar 20, 2019, 12:30 AM IST

ಹತ್ತು ವರ್ಷದ ಸ್ವಾತಿಯನ್ನು ಶಾಲೆಯಿಂದ ಟಿಸಿ ಕೊಟ್ಟು ಕಳಿಸಬೇಕೆಂದು ನಿರ್ಧಾರವಾಗಿದೆ. ಸ್ವಾತಿಯ ವಿಚಿತ್ರ ವರ್ತನೆಯನ್ನು ಶಾಲೆಯವರಿಗೆ ನಿಯಂತ್ರಣದಲ್ಲಿಡಲು ಸಾಧ್ಯವಾಗಿಲ್ಲ. ತರಗತಿಯಲ್ಲಿ ಚೂಪಾದ ಪೆನ್ಸಿಲನ್ನು, ಅವಳ ಕುತ್ತಿಗೆಗೆ ಹಿಡಿದು, ನಾನು ಸಾಯಬೇಕು ಅನ್ನುತ್ತಾಳೆ. ಇಲ್ಲವೇ ಅನ್ಯಮನಸ್ಕಳಾಗಿ, ಲ್ಲೋ ನೋಡುತ್ತಾ ಕುಳಿತಿರುತ್ತಾಳೆ. ಯಾವ ಪುಸ್ತಕ ಕೇಳಿದರೂ ಕಳೆದುಹೋಗಿದೆ ಎಂಬ ಒಂದೇ ಉತ್ತರ. ಟೀಚರ್‌ ಬಯ್ದಾಗ ದುರುಗುಟ್ಟಿ ನೋಡುವುದು ಅಥವಾ ಬೇರೆ ಮಕ್ಕಳಿಗೆ ಬಯ್ಯುವುದು, ಚುಚ್ಚಿ ಮಾತನಾಡೋದು ಅಥವಾ ಮತ್ತು ಕೆಟ್ಟ ಪದಗಳ ಬಳಕೆಯಿಂದ, ಬೇರೆ ಪೋಷಕರು ಇವಳ ಬಗ್ಗೆ ದೂರು ಕೊಟ್ಟಿದ್ದಾರೆ. ಸ್ವಾತಿಯ ತಂದೆ ಶಾಲೆಯಲ್ಲಿ ಪ್ರಾಂಶುಪಾಲರನ್ನು ಭೇಟಿ ಮಾಡಿ, ಕ್ಷಮಾಪಣೆ ಕೇಳಿಕೊಂಡರೂ ಶಾಲೆಯವರು ತಮ್ಮ ನಿರ್ಧಾರ ಬದಲಾಯಿಸಲಿಲ್ಲ.   

ಸ್ವಾತಿಯ ತಾಯಿ ಬೇರೆ ಮನೆ. ತಂದೆ ಬೇರೆ ಮನೆಯಲ್ಲಿದ್ದಾರೆ. ಮಗು ವಾರಕ್ಕೆ ಮೂರು- ಮೂರು ದಿನವನ್ನು ತಂದೆ- ತಾಯಿಯ ನಡುವೆ ಹಂಚಿಕೊಳ್ಳಬೇಕು. ಈ ವಿಚಾರ ಶಾಲೆಯವರಿಗೆ ತಿಳಿದಿಲ್ಲ.  ವೈಮನಸ್ಯವಿಲ್ಲದಿದ್ದರೂ ತಾಯಿಗೆ ಗಂಡನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎನಿಸಿದೆ. ತಂದೆ- ತಾಯಿ ವಿಚ್ಚೇದನವನ್ನು ಪಡೆದಿಲ್ಲ ಅಥವಾ ಪಡೆಯುವ ಸಂದರ್ಭವೂ ಇಲ್ಲ. 

ಗಿರಿಜಾಗೆ ಔದ್ಯೋಗಿಕವಾಗಿ ಮುಂದೆ ಬರಬೇಕೆಂಬ ಕನಸು. ಗಿರೀಶ್‌ ಮಹತ್ವಾಕಾಂಕ್ಷಿಯಲ್ಲ. ಸೋಮಾರಿ ಮತ್ತು ಉಡಾಫೆ ಮನುಷ್ಯ. ಮನೆಗೆಲಸದಲ್ಲೂ ಸಹಾಯ ಮಾಡಲಾರ, ಅತ್ತ ತನ್ನ ವೃತ್ತಿಯಲ್ಲೂ ಮುಂದೆ ಬರಲಾರ. ಸದಾ ಟೀವಿ ವೀಕ್ಷಿಸುವುದೇ ಅವನ ಪ್ರಿಯವಾದ ಟೈಂಪಾಸ್‌. ಮನೆ- ಮಗು- ವೃತ್ತಿ ಮೂರನ್ನೂ ಏಕಕಾಲಕ್ಕೆ ನಿಭಾಯಿಸಲಾಗದೆ, ಗಂಡನಿಂದಲೂ ಸಹಾಯ ಸಿಗದೇ ಹತಾಶಳಾಗಿ ಇನ್ನೊಂದು ಮನೆ ಮಾಡಿದರೆ, ಗಂಡ ದಾರಿಗೆ ಬರಬಹುದೆಂದು ಮನೆ ಬಿಟ್ಟು ಹೊರಟುಹೋದಳು. ಈಗ, ಅತ್ತೆ ಗಿರೀಶ್‌ ಮನೆಯ ಬೇಕುಬೇಡಗಳನ್ನು ನೋಡಿಕೊಳ್ಳುತ್ತಾರೆ. ಗಿರೀಶ್‌ ಬದಲಾಗಲೇ ಇಲ್ಲ. ಸೊಸೆ ಇದ್ದಾಗ ಸಹಾಯ ಮಾಡದ ಅತ್ತೆ, ಸೊಸೆ ಮನೆ ಬಿಟ್ಟು ಹೋದ ಮೇಲೆ ಮಗನ ಮನೆಗೆ ಬಂದಿ¨ªಾರೆ.

ಮಕ್ಕಳ ಸಮಸ್ಯೆಯನ್ನು ಬಿಡಿಸಲು ಕೌಟುಂಬಿಕ ಸಾಮರಸ್ಯದ ಕಡೆಗೆ ಗಮನ ಹರಿಸಬೇಕು. ಮಗುವಿಗೆ ಸಮಾಧಾನ- ಸಲಹೆ ಮಾಡುವುದಲ್ಲ. ಈ ಮನೆಯಿಂದ ಆ ಮನೆಗೆ ಮಗು ಸ್ವಾತಿ ಗೂಢಚಾರಿಯಾಗಿದ್ದಳು. ಒತ್ತಡವಾಗಿ, ಮಗುವಿಗೆ ಸಿಟ್ಟು ಜಾಸ್ತಿಯಾಗಿತ್ತು. ತನ್ನ ಪ್ರತಿಯೊಂದು ಸಾಮಾನು- ಬಟ್ಟೆಯನ್ನು ಇಲ್ಲಿಂದಲ್ಲಿಗೆ ತೆಗೆದುಕೊಂದು ಹೋಗುವುದು ಸ್ವಾತಿಗೆ ಕಷ್ಟವಾಗುತಿತ್ತು.  ಕೆಲವು ಪುಸ್ತಕಗಳು ಕಳೆದುಹೋಗುತ್ತಿದ್ದವು. ಗಿರಿಜಾ ಬೇರೆ ಮನೆ ಮಾಡಿದ್ದರೂ ಈಗ ನೆಮ್ಮದಿಯಿಲ್ಲದಂತಾಗಿತ್ತು. ಗಿರೀಶ್‌ ತಮ್ಮ ತಪ್ಪನ್ನು ಅರ್ಥಮಾಡಿಕೊಂಡರು. ಗಿರೀಶ್‌ ತಾಯಿ ಕೂಡಾ ಟೀಂ ವರ್ಕ್‌ ಬಗ್ಗೆ ತಿಳಿದುಕೊಂಡರು. ಸೊಸೆಯೊಬ್ಬಳೇ ಮನೆ ನಿಭಾಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಕುಟುಂಬದವರ ಸಹಾಯ ಬೇಕೇ ಬೇಕು. ಇಲ್ಲಿ ಗಂಡಸರು ಸೋಮಾರಿಯಾಗಿ ಕುಳಿತರೆ ಪ್ರಯೋಜನವಾಗುವುದಿಲ್ಲ. ಮನೆ ಕೆಲಸ ರೇಜಿಗೆಯಾದದ್ದು. ಎಲ್ಲರೂ ಕೂಡಿ ಮಾಡಿದರೆ ಸ್ವರ್ಗ ಸುಖ.

ಶುಭಾ ಮಧುಸೂದನ್‌, ಮನೋರೋಗ ವಿಜ್ಞಾನಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ