Udayavni Special

ಅಪ್ಪ ಅಮ್ಮ ನನ್ನನ್ನು ದುಡ್ಡು ಕೊಟ್ಟು ತಂದರೇ?


Team Udayavani, Oct 17, 2018, 6:00 AM IST

2.jpg

ಕಿಶೋರಿಗೆ ಅವಳ ತಂದೆ- ತಾಯಿ ತನ್ನನ್ನು ದತ್ತು ತೆಗೆದುಕೊಂಡಿರುವ ವಿಷಯ ತಿಳಿದಾಗ, ಮನಸ್ಸು ಒಡೆದುಹೋಯಿತು. ಅಪ್ಪ- ಅಮ್ಮನನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದಳು. 

ಹದಿನೈದು ವರ್ಷದ ಕಿಶೋರಿಗೆ ತಲೆಸುತ್ತು ಮತ್ತು ಪ್ರಜ್ಞೆ ತಪ್ಪಿ ಬೀಳುವ ರೋಗವಿತ್ತು. ನರರೋಗ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ನಿಗದಿತವಾಗಿ ತೆಗೆದುಕೊಂಡಿದ್ದರೂ ಖಾಯಿಲೆಯ ಸ್ವರೂಪ ಕಡಿಮೆಯಾಗಿರಲಿಲ್ಲ. ಅವಳ ಎಂ.ಆರ್‌.ಐ ಸ್ಕ್ಯಾನ್‌ ಮತ್ತು ಇ.ಇ.ಜಿ. ರಿಪೋರ್ಟ್‌ನಲ್ಲಿ ಮಿದುಳಿನ ಚಟುವಟಿಕೆಯಲ್ಲಿ ಅಸಮತೋಲನ ಕಂಡು ಬಂದಿರಲಿಲ್ಲ.  ಹೀಗಾಗಿ, ನನ್ನ ಬಳಿ ಚಿಕಿತ್ಸಾತ್ಮಕ ಸಂದರ್ಶನಕ್ಕಾಗಿ ಬಂದಿದ್ದಳು.

ಅವಳದ್ದು ಗೌರವರ್ಣ, ಗುಂಗುರು ಕೂದಲು ಮತ್ತು ದಪ್ಪ ತುಟಿ. ಅವಳಿಗೆ ತಾನು cute ಅಲ್ಲ ಎನಿಸುತ್ತಿತ್ತಂತೆ. ಪರೀಕ್ಷೆಯಲ್ಲಿ ಅಂಕಗಳು ಅಷ್ಟಕಷ್ಟೇ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಅಷ್ಟಾಗಿ ಆಸಕ್ತಿ ಇರಲಿಲ್ಲ. ಹೀಗಾಗಿ ಅವಳಿಗೆ ತನ್ನ ಬಗ್ಗೆ ತಿರಸ್ಕಾರ ಮತ್ತು ಕೀಳರಿಮೆ ಇತ್ತು. ತನ್ನಲ್ಲಿ ಐಬು ಇರಬೇಕು ಎಂದೇ ನಂಬಿದ್ದಳು. ಈ ನಂಬಿಕೆಗೆ ಸರಿಯಾಗಿ, ಅವಳ ಅತ್ತೆಯ ಮಗ, ಕಿಶೋರಿಯನ್ನು ಅವಳ ತಂದೆ- ತಾಯಿ ದತ್ತು ತೆಗೆದುಕೊಂಡಿರುವುದಾಗಿ ಹೇಳಿದಾಗ ಮನಸ್ಸು ಒಡೆದುಹೋಯಿತು. ಅಪ್ಪ- ಅಮ್ಮನನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದಳು. 

ಯಾರಾದರೂ ಚಿಕ್ಕದಾಗಿ ಗದರಿದರೆ ಇವಳಿಗೆ ಜೋರಾಗಿ ಬಯ್ದಂತೆ ಅನ್ನಿಸುತ್ತಿತ್ತು. ಪಾಕೆಟ್‌ ಮನಿ ಕೇಳುವಾಗಲೆಲ್ಲಾ ಬಹಳ ಸಂಕೋಚವಾಗುತಿತ್ತು. ಮನೆಕೆಲಸಕ್ಕೆ ಕರೆದರೆ, ಆಳಿನಂತೆ ನೋಡುತ್ತಾರೆ ಎಂದು ಖನ್ನತೆ. ಮಾಲ್ಗೆ ಶಾಪಿಂಗ್‌ ಹೋದರೆ ತನಗಿಷ್ಟವಾದ ಐಟಂಗಳ ಬೆಲೆ ನೋಡುವಳು. ತೆಗೆಸಿಕೊಡಿ ಎಂದು ಕೇಳಲು ಭಯ.  ಹೀಗೆ, ಒಳಗೊಳಗೇ ಕುದ್ದುಬಿಟ್ಟಿದ್ದಾಳೆ ಕಿಶೋರಿ. ಒಮ್ಮೊಮ್ಮೆ ತನ್ನ ನಿಜವಾದ (biological parents) ತಂದೆ-ತಾಯಿ ಯಾರಿರಬಹುದು ಎಂದು ಯೋಚಿಸುತ್ತಿದ್ದಳು. ತನ್ನನ್ನು ಇವರೇಕೆ ದತ್ತು ತೆಗೆದುಕೊಂಡರು? ಎಂದು ಕೇಳಲು ಸಂಕೋಚ ಮತ್ತು ತವಕ! ಹುಟ್ಟಿದ ದಿನವೇ ದತ್ತು ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು? ಹಾಗಾದರೆ ಇವರಿಗೆ ನಿಜವಾದ ತಂದೆತಾಯಿಯ ಪರಿಚಯವಿತ್ತೇ? ದುಡ್ಡು ಕೊಟ್ಟು ಕೊಂಡುಕೊಂಡರೇ? ನಾನು ಯಾರಿಗೂ ಬೇಡವಾದ ಮಗುವೇ? 

ಈ ರೀತಿಯ ಚಿಂತೆ ಮತ್ತು ಭಾವನಾತ್ಮಕ ಸಂಕೀರ್ಣತೆಯಿಂದಾಗಿ ತಲೆಸುತ್ತು ಮತ್ತು ಪ್ರಜ್ಞೆ ತಪ್ಪಿ ಬೀಳುವ ರೋಗ ಶುರುವಾಗಿರುವುದು ಸ್ಪಷ್ಟವಾಗಿತ್ತು. ಮಕ್ಕಳಿರದ ದಂಪತಿಗಳ ನೋವನ್ನು ಅವಳಿಗೆ ವಿವರಿಸಿ ಹೇಳಿದೆ. ದತ್ತು ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆಯನ್ನು ವಿವರಿಸಿದೆ. ದತ್ತು ಕೊಟ್ಟ ತಂದೆ- ತಾಯಿಯರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಹಲವಾರು ಕಾರಣಗಳಿರುತ್ತವೆ. ಆ ಕಾರಣಗಳನ್ನು ನಾವು ಯಾಕೆ ಕೆದಕಬಾರದೆಂದು ಕಿಶೋರಿಗೆ ಅರ್ಥವಾಯಿತು.

ಕಿಶೋರಿಯ ತಂದೆ- ತಾಯಿ ದತ್ತು ತೆಗೆದುಕೊಂಡ ವಿಚಾರವನ್ನು ಅವರೇ ತಿಳಿಸಲು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಬೇರೆ ಯಾರದ್ದೋ ಮುಖಾಂತರೆ ಅಚಾನಕ್‌ ತಿಳಿದಾಗ ಆಘಾತವಾಗಿರಬಹುದು. ಈ ತಂದೆ- ತಾಯಿ ಅಪ್ಪಿಕೊಂಡಿದ್ದಾರೆಂಬ ಕೃತಜ್ಞತೆಗಿಂತ ಜನ್ಮ ಕೊಟ್ಟ ತಂದೆ ತಾಯಿ ನನ್ನನ್ನು ಯಾಕೆ ತಿರಸ್ಕರಿಸಿದರು ಎಂಬ ನೋವು ಜಾಸ್ತಿಯಾಗುತ್ತದೆ. ಜೀವನದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಪ್ರಶ್ನೆಗಳನ್ನು ಬದಲಿಸಿಕೊಳ್ಳಬೇಕು. ಬದುಕು ಎಂದರೆ ರಾಜಿಗಳ ನಿರಂತರ ಮೆರವಣಿಗೆ. ಸ್ವೀಕರಿಸಿ. ಆನಂದಿಸಿ!

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

ಸ್ವತಂತ್ರ ಭಾರತದ ಮೊದಲ ಇ-ಅಧಿವೇಶನಕ್ಕೆ ವೇದಿಕೆ ಸಿದ್ಧ

ಸ್ವತಂತ್ರ ಭಾರತದ ಮೊದಲ ಇ-ಅಧಿವೇಶನಕ್ಕೆ ವೇದಿಕೆ ಸಿದ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pathagalu

ಕೋವಿಡ್‌ 19 ಕಲಿಸಿದ ಪಾಠಗಳು

ammana-dasa

ಅಮ್ಮನ‌ ದಶಾವತಾರ!

agbekku

ಐ ಲವ್‌ ಬೆಂಗಳೂರು

ashcgartya

ಇಂಥದ್ದೆಲ್ಲ ನಡೆಯುತ್ತೆ ಅಂದುಕೊಂಡಿರಲಿಲ್ಲ!

navella pg

ನಾನು ಆಮ್‌ ಆದ್ಮಿ ಪಾರ್ಟಿ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಕೊಲೆಯತ್ನ ಆರೋಪಿಗಳಿಗೆ ಜಾಮೀನು: ಬಿಡುಗಡೆ

ಕೊಲೆಯತ್ನ ಆರೋಪಿಗಳಿಗೆ ಜಾಮೀನು: ಬಿಡುಗಡೆ

ಕಾರ್ಯಕ್ರಮ ಮುಖ್ಯಸ್ಥರಾಗಿ ಡಾ| ಬಸು ಅಧಿಕಾರ ಸ್ವೀಕಾರ

ಕಾರ್ಯಕ್ರಮ ಮುಖ್ಯಸ್ಥರಾಗಿ ಡಾ| ಬಸು ಅಧಿಕಾರ ಸ್ವೀಕಾರ

ದಿಲ್ಲಿಯಲ್ಲಿ ಚಿಕಿತ್ಸೆಗೆ ರೈಲ್ವೇ ವಾರ್ಡ್‌

ದಿಲ್ಲಿಯಲ್ಲಿ ಚಿಕಿತ್ಸೆಗೆ ರೈಲ್ವೇ ವಾರ್ಡ್‌

ಮಹಾರಾಷ್ಟ್ರ, ದಿಲ್ಲಿಯಲ್ಲಿ ಸೋಂಕು ಭಾರೀ ಏರಿಕೆ

ಮಹಾರಾಷ್ಟ್ರ, ದಿಲ್ಲಿಯಲ್ಲಿ ಸೋಂಕು ಭಾರೀ ಏರಿಕೆ

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.