ಶಿರವೇ ಕ್ಯಾನ್ವಾಸ್‌ ಅಯ್ಯ!


Team Udayavani, Aug 29, 2018, 6:00 AM IST

s-4.jpg

ಮ್ಯಾಚಿಂಗ್‌ ಎನ್ನುವ ಪರಿಕಲ್ಪನೆ ಹೊಸದಲ್ಲ. ಹೊಸ ಸೀರೆ ಕೊಂಡರೆ, ಅದಕ್ಕೆ ಮ್ಯಾಚ್‌ ಆಗುವಂಥ ಬ್ಲೌಸ್‌, ಬಳೆಗಳು, ಕಿವಿಯೋಲೆ, ಸರ ಎಲ್ಲವನ್ನೂ ಖರೀದಿಸಿ ಅಲಂಕಾರ ಮಾಡಿಕೊಂಡು ಹೊರಡುವುದೆಂದರೆ ಹೆಣ್ಣುಮಕ್ಕಳಿಗೆ ಹಬ್ಬ. ಉಂಗುರದಿಂದ ಹಿಡಿದು ಚಪ್ಪಲಿಯವರೆಗೂ ಒಂದಕ್ಕೊಂದು ಮ್ಯಾಚಿಂಗ್‌ ಇಲ್ಲದಿದ್ದರೆ ಸಮಾಧಾನವೇ ಇಲ್ಲ. ಈ ಮ್ಯಾಚಿಂಗ್‌ ಸರದಿಗೆ ಇದೀಗ ಹೊಸದಾಗಿ ಸೇರಿಕೊಂಡಿರುವುದೇ ಹೇರ್‌ ಕಲರ್‌. ಹೌದು, ಕೇಶಕ್ಕೆ ಬಣ್ಣ ಹಚ್ಚಿಕೊಳ್ಳುವುದು ಈಗಿನ ಹೊಸ ಟ್ರೆಂಡ್‌. ಕೂದಲಿಗೂ ಬಣ್ಣ ಬಣ್ಣದ ಚಿತ್ತಾರಗಳನ್ನು ಮೂಡಿಸಿ, ಆ ಮೂಲಕ ಆಕರ್ಷಕವಾಗಿ ಕಾಣಿಸಿಕೊಳ್ಳುವ ತವಕ ಹುಡುಗಿಯರದ್ದು. ಅಂದಹಾಗೆ, ತಮ್ಮ ಉಡುಗೆಗೆ ಅಥವಾ ಶರೀರದ ಬಣ್ಣಕ್ಕೆ ಹೊಂದಿಕೊಳ್ಳುವಂಥ ಬಣ್ಣಗಳನ್ನೇ ಕೇಶಕ್ಕೆ ಹಚ್ಚಿಕೊಂಡರೆ ಚಂದ. ಯಾವ ಬಣ್ಣದ ಚರ್ಮವುಳ್ಳವರಿಗೆ ಯಾವ ಹೇರ್‌ ಕಲರ್‌ ಒಪ್ಪುತ್ತದೆ ನೋಡೋಣ ಬನ್ನಿ.
 
ಶ್ವೇತವರ್ಣದವರಿಗೆ
ಶ್ವೇತವರ್ಣದವರು ಗಾಢವಾದ ಬಣ್ಣವನ್ನು ಕೇಶಕ್ಕೆ ಬಳಸುವ ಬದಲು, ಹೈಲೈಟ್ಸ್‌ನ(ಕೂದಲಿನ ಕೆಲವು ಭಾಗಕ್ಕಷ್ಟೇ ಬಣ್ಣ ಹಚ್ಚುವುದು) ಮೊರೆ ಹೋಗುವುದು ಉತ್ತಮ. ನೀವು ಬಿಳಿಚರ್ಮದವರಾಗಿದ್ದರೆ, ಕೆಂಪು, ತಿಳಿಕಂದು ಬಣ್ಣ ಅಥವಾ ಚಾಕ್ಲೆಟ್‌ ಕಲರ್‌ನ ಶೇಡ್‌ಗಳನ್ನು ಕೊಟ್ಟರೆ ಸರಿಯಾಗಿ ಒಪ್ಪುತ್ತದೆ.

ಮಧ್ಯಮವರ್ಣದವರಿಗೆ
ಚರ್ಮದ ಬಣ್ಣ ಅತ್ತ ಕಪ್ಪೂ ಅಲ್ಲ, ಇತ್ತ ಬಿಳಿಯೂ ಅಲ್ಲ ಎನ್ನುವಂಥವರು ಹೆಚ್ಚು ತಿಳಿಯಾದ ಬಣ್ಣವನ್ನು ಆಯ್ಕೆ ಮಾಡದಿರುವುದು ಒಳಿತು. ಗಾಢವಾದ ಪ್ಲಮ್‌ ಶೇಡ್‌ ಅಥವಾ ಕಂದು, ಚಾಕ್ಲೆಟ್‌ ಬ್ರೌನ್‌, ನೀಲಿ ಅಥವಾ ನೇರಳೆ ಬಣ್ಣ ಬಳಸಿದರೆ ಕೂದಲಿಗೆ ಹೊಸ ಕಳೆ ಬರುತ್ತದೆ. 

ಕೃಷ್ಣವರ್ಣದ ತ್ವಚೆಯುಳ್ಳವರಿಗೆ
ಇಂಥವರು ವಾರ್ಮ್ ಹೈಲೈಟ್ಸ್‌ ಇರುವಂತೆ ಗಾಢವಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಈಗಾಗಲೇ ನಿಮ್ಮ ಕೇಶದ ಬಣ್ಣ ಗಾಢವಾಗಿದ್ದು, ಬದಲಾವಣೆ ಬಯಸಿದ್ದರೆ, ಕೇಶದ ನೈಸರ್ಗಿಕ ಬಣ್ಣಕ್ಕೆ ಹತ್ತಿರವಾದ ಶೇಡ್‌ ಅನ್ನು ಬಳಸಿ. ಕಪ್ಪು ಬಣ್ಣದವರಿಗೆ ಮರೂನ್‌ ಅಥವಾ ಡಾರ್ಕ್‌ ಬ್ರೌನ್‌ ಚೆನ್ನಾಗಿ ಕಾಣುತ್ತದೆ.

ಎಣ್ಣೆ ಚರ್ಮದವರಿಗೆ
ಕಡು ಕಂದು ಅಥವಾ ತಿಳಿಕಂದು ಬಣ್ಣವನ್ನು ಕೇಶಕ್ಕೆ ಹಚ್ಚಿದರೆ ಎಣ್ಣೆ ಚರ್ಮದವರಿಗೆ ಹೊಸ ಲುಕ್‌ ಸಿಗುತ್ತದೆ. ಇವರು ಶೇಡ್‌ಗಳನ್ನು ಕೂಡ ಬಳಸಬಹುದು. ಎಣ್ಣೆ ಚರ್ಮವೆಂಬುದು ನ್ಯೂಟ್ರಲ್‌ ಸ್ಕಿನ್‌ ಟೋನ್‌ ಆಗಿರುವ ಕಾರಣ ಬೂದುಬಣ್ಣವೂ ಇವರಿಗೆ ಚೆನ್ನಾಗಿ ಒಪ್ಪುತ್ತದೆ.

ಗೋದಿ ಬಣ್ಣದವರಿಗೆ
ಡಾರ್ಕ್‌ ಬ್ರೌನ್‌ ಅಥವಾ ಕೂಲ್‌ ಲೈಟ್‌ ಬ್ರೌನ್‌ ಇವರಿಗೆ ಚೆನ್ನಾಗಿ ಒಪ್ಪುತ್ತದೆ. ಗೋದಿ ಬಣ್ಣದ ಚರ್ಮದವರು ಮಧ್ಯಮ- ಗಾಢ ಚರ್ಮದ ವಿಭಾಗದಲ್ಲಿ ಬರುವ ಕಾರಣ, ಕಡು ಕಂದು ಬಣ್ಣದ ಶೇಡ್‌ ಅವರ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

 ಬಟ್ಟೆ ನೋಡಿ ಬಣ್ಣ ಹಚ್ಚಿ
–      ವಾರ್ಡ್‌ರೋಬ್‌ನಲ್ಲಿರುವ ಬಟ್ಟೆಗಳನ್ನು ನೋಡಿಯೂ ಕೇಶದ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ಯಾವ ಬಣ್ಣದ ಬಟ್ಟೆ ನಿಮಗೆ ಚೆನ್ನಾಗಿ ಕಾಣುತ್ತದೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಕೆಂಪು, ಕೇಸರಿ, ಹಳದಿ, ಹಸಿರು, ಚಿನ್ನದ ಬಣ್ಣ ಒಪ್ಪುವುದಾದರೆ, ಗೋಲ್ಡನ್‌ ಬ್ಲಾಂಡ್‌, ಸ್ಟ್ರಾಬೆರಿ ಬ್ಲಾಂಡ್‌ ಬಣ್ಣಗಳೇ ಸೂಕ್ತ.

–      ಮರೂನ್‌, ರಾಯಲ್‌ ಬ್ಲೂ, ಕಪ್ಪು ಬಣ್ಣದ ಬಟ್ಟೆ ಯಾರಿಗೆ ಸುಂದರವಾಗಿ ಕಾಣುತ್ತದೋ, ಅವರು ಪ್ಲಾಟಿನಂ, ಆಶ್‌ ಬ್ಲಾಂಡ್‌, ಬರ್ಗುಂಡಿ, ಜೆಟ್‌ ಬ್ಲ್ಯಾಕ್‌ ಬಣ್ಣ ಬಳಸಬಹುದು.

–      ಕೆಂಪು, ಬೂದು ಬಣ್ಣ, ನೇರಳೆ ಬಣ್ಣದ ವಸ್ತ್ರಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದಾದರೆ, ಚಾಕ್ಲೆಟ್‌ ಬ್ರೌನ್‌, ಸ್ಯಾಂಡಿ ಬ್ಲಾಂಡ್‌, ಹೀಜ್‌ ಬ್ಲಾಂಡ್‌ನ‌ ಬಣ್ಣಗಳು ಸೂಕ್ತ.

ಹಲೀಮತ್‌ ಸ ಅದಿಯ

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.