ಪೋರ ಚಿತ್ರ ಚೋರ


Team Udayavani, Dec 19, 2018, 6:00 AM IST

5.jpg

ಮಕ್ಕಳು ಅತ್ತರೂ ಚಂದ, ನಕ್ಕರೂ ಚಂದ, ನಲಿದರೆ ಇನ್ನೂ ಚಂದ ಎಂದು, ಮಕ್ಕಳ ಹಿಂದಿದೆ ಕ್ಯಾಮೆರಾ ಹಿಡಿದು ಸುತ್ತಿ, ತೆಗೆದ ಫೋಟೊ, ವಿಡಿಯೋಗಳನ್ನು ಜಗತ್ತಿಗೆಲ್ಲಾ ತೋರಿಸುವುದೇ ಒಂದು ಟ್ರೆಂಡ್‌. ಅದಕ್ಕಾಗಿ ಮಕ್ಕಳ ಹೆಸರಿನಲ್ಲಿ ಅಪ್ಪ- ಅಮ್ಮನೇ ಫೇಸ್‌ಬುಕ್‌, ಇನ್‌ಸ್ಟಗ್ರಾಂ ಖಾತೆ ತೆರೆಯುತ್ತಾರೆ. ಇದರಿಂದ ಆಗುವ ಅಪಾಯಗಳು ನಿಮಗೆ ಗೊತ್ತೇ?

ಮಗು ಹುಟ್ಟಿದ ಘಳಿಗೆಯಿಂದ ಹಿಡಿದು, ಅದರ ಮೊದಲ ಶ್ವಾಸ, ಹೆಜ್ಜೆ, ಊಟ, ನಿದ್ದೆ, ಮಾತು… ಹೀಗೆ ಎಲ್ಲವನ್ನೂ ದಾಖಲಿಸುವ, ಹಂಚಿಕೊಳ್ಳುವ ಇಂಗಿತ ಈಗಿನವರದ್ದು. ಮಕ್ಕಳು ಅತ್ತರೂ ಚಂದ, ನಕ್ಕರೂ ಚಂದ, ನಲಿದರೆ ಇನ್ನೂ ಚಂದ ಎಂದು, ಮಕ್ಕಳ ಹಿಂದಿದೆ ಕ್ಯಾಮೆರಾ ಹಿಡಿದು ಸುತ್ತಿ, ತೆಗೆದ ಫೋಟೊ, ವಿಡಿಯೋಗಳನ್ನು ಜಗತ್ತಿಗೆಲ್ಲಾ ತೋರಿಸುವುದೇ ಒಂದು ಟ್ರೆಂಡ್‌. ಅದಕ್ಕಾಗಿ ಮಕ್ಕಳ ಹೆಸರಿನಲ್ಲಿ ಅಪ್ಪ- ಅಮ್ಮನೇ ಫೇಸ್‌ಬುಕ್‌, ಇನ್‌ಸ್ಟಗ್ರಾಂ ಖಾತೆ ತೆರೆಯುತ್ತಾರೆ! ಹೀಗೆ, ಬುದ್ಧಿ ಬರುವ ಮುನ್ನವೇ ಮಗುವೊಂದು, ಸಾಮಾಜಿಕ ಜಾಲತಾಣದೊಳಗೆ ಪ್ರವೇಶ ಪಡೆದಿರುತ್ತದೆ.

ಕೆಲ ದಿನಗಳ ಹಿಂದೆ ಮಿತ್ರರೊಬ್ಬರು ತಮ್ಮ ಮಗುವಿನ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ತೆರೆದರು. ನಿತ್ಯವೂ ಅದರ ತುಂಟಾಟದ ಒಂದೊಂದು ಫೋಟೋ “ಗೋಡೆ’ಗೆ ಅಂಟಿಕೊಳ್ಳುತ್ತಿತ್ತು. ನೂರಾರು ಲೈಕ್ಸ್‌, ಕಾಮೆಂಟ್ಸು, ಬಿದ್ದಿದ್ದರಿಂದ ಆ ಮೆಚ್ಚುಗೆಯ ಮಾತುಗಳನ್ನು ಕೇಳುತ್ತಾ, ಅವರು ತಮ್ಮೊಳಗೇ ಹಿಗ್ಗುತ್ತಿದ್ದರು. ಮಗುವಿಗಿಂತ ತಮಗೇ ಹೆಚ್ಚು ಪ್ರಚಾರ ಸಿಕ್ಕಿತೆಂದು ಭ್ರಮಿಸಿದರೋ ಏನೋ, ಅದು ಅವರಿಗೆ ನಿತ್ಯದ ಗೀಳೇ ಆಗಿಹೋಯಿತು. ಆದರೆ, ಪುಟಾಣಿಗಳ ಮೂಡ್‌ ಎಲ್ಲ ಕಾಲದಲ್ಲೂ ಒಂದೇ ರೀತಿ ಇರುವುದಿಲ್ಲವಲ್ಲ. 

ಒಮ್ಮೆ ಆ ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಬಂತು. ವಾರವಿಡೀ ಅದು ಸಪ್ಪೆ ಮೋರೆ ಹಾಕಿಕೊಂಡು, ತುಂಟಾಟ ನಿಲ್ಲಿಸಿಬಿಟ್ಟಿತು. ಅಪ್ಪನಿಗೆ ಅದರ ವರ್ತನೆ ಸರಿಕಾಣಲಿಲ್ಲ. ಆ ವಾರ ಪೂರಾ ತನ್ನ ಫೇಸ್‌ಬುಕ್‌ನಲ್ಲಿ ತನ್ನ ಪಾಪ್ಯುಲಾರಿಟಿ ಕುಗ್ಗಿದಂತೆ ಅನ್ನಿಸಿ, ಸಿಟ್ಟೂ ಬಂತು. ಈ ಅಪ್ಪ, ತುಂಟಾಟದ ವಿಡಿಯೋಕ್ಕೆ ಮಗುವನ್ನು ಪ್ರೇರೇಪಿಸಿದ. ಅದು ನಿರಾಕರಿಸಿದಾಗ, ಒಂದು ಪೆಟ್ಟನ್ನೂ ಕೊಟ್ಟುಬಿಟ್ಟ!

ಮತ್ತೂಬ್ಬರು ಮಹಾಶಯರು ಪೋಸ್ಟ್‌ ಮಾಡಿದ ತಮ್ಮ ಮಗುವಿನ ಫೋಟೋವೊಂದು, ಬಾಯ್ಸ ಹಾಸ್ಟೆಲ್‌ನ ಗೋಡೆ ಮೇಲೆ ಇತ್ತಂತೆ. “ಇಲ್ಲಿ ಯಾರೂ ಮಕ್ಕಳಂತೆ ವರ್ತಿಸುವ ಹಾಗಿಲ್ಲ’ ಎನ್ನುವ ಶೀರ್ಷಿಕೆ ಅವರಿಗೇ ನಗುವನ್ನೂ, ಸಿಟ್ಟನ್ನೂ ಒಟ್ಟೊಟ್ಟಿಗೆ ತರಿಸಿತ್ತಂತೆ.

ಖಾತೆ ತೆರೆಯುವಾಗ, ಫೇಸ್‌ಬುಕ್‌ನ ಆರಂಭದಲ್ಲಿಯೇ ಒಂದು ಸೂಚನೆ ಇರುತ್ತೆ: “ಇಲ್ಲಿ ಹಾಕಲ್ಪಡುವ ಪೋಸ್ಟ್‌ಗಳಿಗೆ ನಿಮ್ಮ ಹಕ್ಕು ಇರುವುದಿಲ್ಲ’ ಎನ್ನುವ ಪುಟ್ಟ ಸಾಲನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಮುಂದೆ ಆ ಫೋಟೋ, ವಿಡಿಯೋಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದೆಂಬ ಸಣ್ಣ ಮುನ್ನೆಚ್ಚರಿಕೆ ಆ ಹೊತ್ತಿಗೆ ಅರ್ಥವೇ ಆಗುವುದಿಲ್ಲ.

ನಿಜ, ಇಂದು ನಮ್ಮೆಲ್ಲರಿಗೂ ಎರಡೆರಡು ಲೋಕ. ಇನ್ನಾವುದೋ ಗ್ರಹಕ್ಕೆ ಹಾರಿಬಿಡುವ ಕನಸು ಕಾಣುತ್ತಿರುವಾಗಲೇ, ಫೇಸ್‌ಬುಕ್‌ನಂಥ ಲೋಕಕ್ಕೆ ಸದ್ದಿಲ್ಲದೇ ಪಯಣಿಸಿದ್ದೇವೆ. ಈ ಕಲ್ಪಿತ ಲೋಕದಲ್ಲಿ ರಂಜನೆಯೇ ಹೆಚ್ಚು. ಆದರೆ, ಪುಟ್ಟ ಕಂದಮ್ಮಗಳಿಗೆ ಈ ಲೋಕವಿರಲಿ, ಅದಕ್ಕೆ ತಾನಿರುವ ಲೋಕದ ಪರಿಚಯವೂ ಇರುವುದಿಲ್ಲ. ತನಗೆ ಅನಿಸಿದಂತೆ ಅದು ವರ್ತಿಸುತ್ತಿರುತ್ತಷ್ಟೇ. ಮಗುವಿನ ಮುಗ್ಧತೆಯನ್ನು ಅದಕ್ಕೆ ಗೊತ್ತಿಲ್ಲದೇ ಅಪಹರಿಸಿ, ಇನ್ನಾéರಿಗೋ ಖುಷಿ ನೀಡುವ ಭರದಲ್ಲಿ, ಹೆತ್ತ ಕಂದಮ್ಮಗಳ ಹಿತವನ್ನು ನಾವು ಲೆಕ್ಕಿಸುವುದೇ ಇಲ್ಲ.

ಅದು ಡಿಜಿಟಲ್‌ ಕಿಡ್ನಾಪಿಂಗ್‌!
ಮಗುವಿನ ಫೋಟೋ “ಡಿಜಿಟಲ್‌ ಕಿಡ್ನಾಪಿಂಗ್‌’ಗೆ ಒಳಗಾಗುವ ಅಪಾಯವಿರುತ್ತದೆ. ಅಂದರೆ, ಆ ಫೋಟೋವನ್ನು ಇಂಟರ್ನೆಟ್‌ನಿಂದ ಕದ್ದು, ತಮಗೆ ಬೇಕಾದಂತೆ ಬಳಸಿಕೊಳ್ಳುವ, ಜಾಹೀರಾತು ಕಂಪನಿಗಳಿಗೆ ಮಾರುವವರ ಜಾಲವೇ ಇದೆ. ಫೇಸ್‌ಬುಕ್‌ನಂಥ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮಾಹಿತಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಬಳಕೆಯೋ, ದುರ್ಬಳಕೆಯೋ… ಆ ಫೋಟೋ, ಪೋಸ್ಟ್‌ದಾರರ ನಿಯಂತ್ರಣದಲ್ಲೇ ಇರುವುದಿಲ್ಲ. ಎಳೆ ಮಗುವಿನ ಫೋಟೊಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸುವುದಮ ಮುಖ್ಯ.

ಇಂಥ ಫೋಟೋಗಳಿಂದ ಆಗುವ ಅಪಾಯವೇನು? 
1. ಮಗುವಿನ ವಯಸ್ಸು ಯಾವುದೇ ಇರಲಿ, ಫೋಟೋ ಎನ್ನುವುದು ಖಾಸಗಿ ವಿಚಾರ. ಅದನ್ನು ಬಹಿರಂಗಪಡಿಸುವಾಗ ವಿವೇಚನೆ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಫೋಟೊ ಅಪ್‌ಲೋಡ್‌ ಆಗಿಬಿಟ್ಟರೆ, ಕ್ಷಣಾರ್ಧದಲ್ಲಿ ಅದು ಲಕ್ಷಾಂತರ ಜನರನ್ನು ತಲುಪುತ್ತದೆ. ನೀವು ಆ ಫೋಟೊವನ್ನು ಅಳಿಸಿದರೂ, ಅದಕ್ಕೂ ಮುನ್ನವೇ ಅದನ್ನು ಸೇವ್‌ ಮಾಡಿಕೊಳ್ಳುವವರಿದ್ದಾರೆ. ಆ ಫೋಟೋ ದುರ್ಬಳಕೆ ಆಗಿಬಿಟ್ಟರೆ, ಮಗುವಿನ ಬದುಕಿಗೊಂದು ಕಪ್ಪುಚುಕ್ಕೆ.

2. ಮಗುವಿನ ಬೆತ್ತಲೆ, ಅರೆಬೆತ್ತಲೆ ಫೋಟೋಗಳು ಸಾರ್ವಜನಿಕವಲ್ಲ. ಅದು ಅಪ್ಪ- ಅಮ್ಮನ ಎದುರು ತೆರೆದುಕೊಳ್ಳುವ ಸುಂದರ ಕ್ಷಣವಷ್ಟೇ. ಆ ಚಿತ್ರವನ್ನು ಸೆರೆಹಿಡಿದು, ಅಪ್‌ಲೋಡ್‌ ಮಾಡುವ, ಮುದ್ದು ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳುವವರೂ ಇರುತ್ತಾರೆ. ಮುಂದೆ ಅದೇ ಬ್ಲ್ಯಾಕ್‌ವೆುàಲ್‌ಗೆ ವಸ್ತುವಾದರೂ ಅಚ್ಚರಿಯಿಲ್ಲ.

3. ನೀವು ಹಂಚಿಕೊಳ್ಳುವ ಮಾಹಿತಿಗಳನ್ನು ಜಾಹೀರಾತು ಕಂಪನಿಗಳು ಖರೀದಿಸಿ, ಆ ಮಾಹಿತಿಗಳ ಆಧಾರದ ಮೇಲೆ ನಿಮ್ಮನ್ನು “ಟಾರ್ಗೆಟೆಡ್‌ ಕಸ್ಟಮರ್’ನಂತೆ ಪರಿಣಿಸುವ ಅಪಾಯವೂ ಇರುತ್ತದೆ.

4. ಫೋಟೋ ಮೂಲಕ ಮಗುವಿನ ವಿಳಾಸವನ್ನು ಅಪರಿಚಿತರಿಗೆ ಬಿಟ್ಟುಕೊಟ್ಟಂತಾಗುತ್ತದೆ. ಎಲ್ಲ ಮೊಬೈಲುಗಳಲ್ಲಿ ಜಿಪಿಎಸ್‌ ಇರುವುದರಿಂದ ಶಾಲೆಯ, ಮನೆಯ ವಿಳಾಸಗಳೂ ಫೋಟೋದ ಜೊತೆಗೆ ಆಗಂತುಕರ ಕೈ ಸೇರಲೂಬಹುದು.

5. ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡಾಗ, ಜ್ವರದಿಂದ ಬಳಲುತ್ತಿರುವಾಗ ಫೋಟೊ ತೆಗೆಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆ ಫೋಟೊವನ್ನು ಮುಂದೆ ಇನ್ಯಾರೋ, ಅಸಾಂದರ್ಭಿಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತೆ. ಖಾಸಗಿ ಸಂತಸಕ್ಕೆ ಪುಳಕಗೊಳ್ಳುವ ಸ್ವಭಾವ ಎಲ್ಲರಲ್ಲೂ ಸಹಜ. ಅದು ಮನೆಯ ಆಲ್ಬಮ್ಮಿನಲ್ಲೋ, ಕಂಪ್ಯೂಟರಿನ ಡ್ರೈವ್‌ಗಳಲ್ಲೋ ಇದ್ದರೆ, ಅದಕ್ಕೆ ಮೌಲ್ಯ ಹೆಚ್ಚು. ಪ್ರಚಾರಕ್ಕೆ ಸರಕಾದಾಗ, ಅದು ಹಗುರ ಎನಿಸಿಕೊಳ್ಳುತ್ತದೆ.

ಅಪ್‌ಲೋಡ್‌ ಮಾಡುವ ಮುನ್ನ…
– ಮುದ್ದು ಮಗುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳಿಗೆ, ಕೆಟ್ಟ ಕಮೆಂಟುಗಳಿಗೆ ಬಲಿಯಾದರೆ, ಅದನ್ನು ತಡೆದುಕೊಳ್ಳುವ ಶಕ್ತಿ ಇದೆಯೇ? ಈ ಪ್ರಶ್ನೆಯನ್ನು ಮೊದಲು ನಿಮಗೆ ನೀವೇ ಕೇಳಿಕೊಳ್ಳಿ.
– ನಿಮ್ಮ ಮಗುವನ್ನು ಬೇರೆ ಮಕ್ಕಳೊಂದಿಗೆ ಹೋಲಿಸುವ, ಯಾರಧ್ದೋ ಮಕ್ಕಳೊಂದಿಗೆ ಸ್ಪರ್ಧೆಗೆ ಇಳಿಸುವ ಮನೋಭಾವ ಬೇಡ.
– ಇತರರ ಮಕ್ಕಳ ಫೋಟೊ ಅಥವಾ ನಿಮ್ಮ ಮಗುವಿನ ಶಾಲೆಯ ಗ್ರೂಪ್‌ ಫೋಟೊವನ್ನು ಹಂಚಿಕೊಳ್ಳುವ ಮುನ್ನ, ಇತರೆ ಪೋಷಕರ ಅನುಮತಿ ಪಡೆಯಬೇಕಾಗುತ್ತೆ. ನೀವೇನೋ ಮಕ್ಕಳ ಫೋಟೊವನ್ನು ಅಪ್‌ಲೋಡ್‌ ಮಾಡಿ ಆನಂದಿಸಬಹುದು. ಆದರೆ, ಎಲ್ಲ ಪೋಷಕರೂ ಅದನ್ನು ಇಷ್ಟಪಡುವುದಿಲ್ಲ.
– ನೀವು ಹಂಚಿಕೊಳ್ಳುವ ಫೋಟೊ, ಮುಂದೊಂದು ದಿನ ನಿಮ್ಮ ಮಗುವಿಗೆ ಮುಜುಗರ ಉಂಟು ಮಾಡಬಹುದೇ ಎಂಬುದನ್ನು ಯೋಚಿಸಿ.
– ಸಾಮಾಜಿಕ ಜಾಲತಾಣ ನಿಮ್ಮ ಫೋಟೊ ಆಲ್ಬಮ್‌ ಅಲ್ಲ ಎಂಬುದು ನೆನಪಿರಲಿ. ಪ್ರತಿಯೊಂದು ಸಣ್ಣ ವಿಷಯವನ್ನೂ ಹಂಚಿಕೊಳ್ಳುವ ಅಗತ್ಯವಿಲ್ಲ.
– ಸಾಮಾಜಿಕ ಜಾಲತಾಣಗಳಿಗೆ ಅವುಗಳದ್ದೇ ಆದ ಕೆಲವು ನೀತಿ- ನಿಯಮಗಳು ಇರುತ್ತವೆ ಮತ್ತು ಅವು ಆಗಾಗ ಬದಲಾಗುತ್ತಿರುತ್ತವೆ. ಆ ಬಗ್ಗೆ ನಿಮಗೆ ಮಾಹಿತಿ ಇರಬೇಕು. 

– ಜೆ. ಪುಷ್ಪಲತಾ

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.